ಯತೀಂದ್ರ ಪ್ರವಣ ಪ್ರಭಾವಂ – ಭಾಗ ೮

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ

ಪೂರ್ಣ ಸರಣಿ

<< ಹಿಂದಿನ ಲೇಖನವನ್ನು

ನಂಪಿಳ್ಳೈ ಮತ್ತು ಅವರ ಶಿಷ್ಯರು ಶ್ರೀರಂಗಂನಲ್ಲಿ ಶ್ರೀವೈಷ್ಣವ ದರ್ಶನವನ್ನು (ಶ್ರೀವೈಷ್ಣವದ ತತ್ತ್ವಶಾಸ್ತ್ರ) ನೋಡಿಕೊಳ್ಳುತ್ತಿದ್ದ ಸಮಯದಲ್ಲಿ, ಅವರ ಮನೆಯ ಪಕ್ಕದಲ್ಲಿ ಒಬ್ಬ ಮಹಿಳೆ ವಾಸಿಸುತ್ತಿದ್ದಳು. ಒಂದು ದಿನ, ನಂಪಿಳ್ಳೈಯವರು ತಮ್ಮ ಶಿಷ್ಯರಿಗೆ ತರಗತಿಯನ್ನು ನಡೆಸುತ್ತಿದ್ದಾಗ, ಅವರ ಶಿಷ್ಯರೊಬ್ಬರು ತಮ್ಮ ಎಲ್ಲಾ ಶಿಷ್ಯರಿಗೆ ವಸತಿ ಮಾಡಲು ನಂಪಿಳ್ಳೈ ಅವರ ನಿವಾಸವು ಸ್ವಲ್ಪ ಚಿಕ್ಕದಾಗಿರುವುದರಿಂದ ಅವರ ನಿವಾಸವನ್ನು ಬಿಟ್ಟುಕೊಡುವಂತೆ ಆ ಮಹಿಳೆಯನ್ನು ಕೇಳಿದರು. ಅವಳು ಅವರಿಗೆ “ದೇವಸ್ಥಾನದಲ್ಲಿ ಯಾರಿಗಾದರೂ ತುಂಡು ಭೂಮಿ ಸಿಗುತ್ತದೆಯೇ? ನಾನು ಬದುಕಿರುವವರೆಗೂ ನನ್ನ ನೆಲೆಯನ್ನು ಬಿಟ್ಟುಕೊಡುವುದಿಲ್ಲ” ಎಂದು ಹೇಳಿದಳು . ಅವರು ತಮ್ಮ ಸಂಭಾಷಣೆಯನ್ನು ನಂಪಿಳ್ಳೈ ಅವರಿಗೆ ಶಿಷ್ಯ ಹೇಳಿದರು. ನಂಪಿಳ್ಳೈ ಅವಳನ್ನು ಕರೆದು ಅವಳಿಗೆ ಹೇಳಿದರು “ನಿನ್ನ ದೇಹಕ್ಕೆ ವಿಶ್ರಾಂತಿ ಪಡೆಯಲು ಸಾಕಷ್ಟು ಭೂಮಿ ಇದ್ದರೆ ಸಾಕಾಗುವುದಿಲ್ಲವೇ?
ಅವರ ಸ್ಥಳ [ಅವರ ನಿವಾಸ] ತುಂಬಾ ಇಕ್ಕಟ್ಟಾಗಿದೆ ಮತ್ತು ಅನೇಕ ಶಿಷ್ಯರು ವಾಸಿಸುತ್ತಿದ್ದಾರೆ. ಆದ್ದರಿಂದ, ನೀವು ನಿಮ್ಮ ನಿವಾಸವನ್ನು ನೀಡಬೇಕು. ಆ ಹೆಂಗಸು “ನೀವು ಹೇಳಿದಂತೆಯೇ ನಾನು ಮಾಡುತ್ತೇನೆ; ಆದರೆ , ಇದಕ್ಕೆ ಬದಲಾಗಿ ನೀವು ನನಗೆ ಪರಮಪದದಲ್ಲಿ (ಶ್ರೀವೈಕುಂಠಂ) ಸ್ಥಾನವನ್ನು ನೀಡಬೇಕು”. ನಂಪಿಳ್ಳೈ ಆಕೆಗೆ “ಅದನ್ನು ಕೊಡಲು ಪರಮಪದನಾಥನಿಗೆ ಮಾತ್ರ ಅಧಿಕಾರವಿಲ್ಲವೇ? ನಾನು ಅವರಿಗೆ ಅಲ್ಲಿ ಸ್ಥಳವನ್ನು ನೀಡಲು ಮನವಿ ಮಾಡುತ್ತೇನೆ. ಅವಳು ಹೇಳಿದಳು “ಸ್ವಾಮಿ! ನಾನು ಏನೂ ತಿಳಿಯದ ಅಜ್ಞಾನಿ ಮಹಿಳೆ. ‘ನನಗೆ ಪರಮಪದವನ್ನು ಕೊಡಿ ಎಂದು ಕೇಳುತ್ತೇನೆ’, ಎಂದು ಹೇಳಿದರೆ ಸಾಲದು. ನೀನು ಅವನಿಗೆ ಒಂದು ಚೀಟಿ ಬರೆದು ಸಹಿ ಮಾಡಿ ಕೊಡಬೇಕು”. ನಂಪಿಳ್ಳೈ ಅವರು ತಾಳೆ ಎಲೆಯ ಮೇಲೆ ಬರೆದರು “ಇಂತಹ ದಿನ, ತಿಂಗಳು ಮತ್ತು ವರ್ಷದಲ್ಲಿ, ನಾನು, ತಿರುಕ್ಕಲಿಕನ್ರಿಧಾಸನ್ (ನಂಪಿಳ್ಳೈ ಅವರ ಇನ್ನೊಂದು ಹೆಸರು), ಈ ಮಹಿಳೆಗೆ ಪರಮಪದದಲ್ಲಿ ಒಂದು ತುಂಡು ಭೂಮಿಯನ್ನು ನೀಡುವಂತೆ ಲಿಖಿತವಾಗಿ ನೀಡಿದ್ದೇನೆ. ನನ್ನಗೆ ಅಧಿಪತಿ ಆಗಿರುವ ಮತ್ತು ಎಲ್ಲಾ ಲೋಕಗಳ ಒಡೆಯನಿಗೆ , ಅವಳಿಗೆ ಪರಮಪದವನ್ನು ದಯಪಾಲಿಸುವಂತೆ ನಾನು ವಿನಂತಿಸುತ್ತೇನೆ”; ಆ ಎಲೆಗೆ ಸಹಿ ಮಾಡಿ ಅವಳಿಗೆ ಕೊಟ್ಟರು . ಆ ಹೆಂಗಸು ತುಂಬಿ ತುಳುಕುತ್ತಾ ಅದನ್ನು ತಲೆಯ ಮೇಲೆ ಇಟ್ಟುಕೊಂಡು, ನಂಪಿಳ್ಳೈ ಅವರಿಂದ ಪ್ರಸಾದವನ್ನು ಪಡೆದು, ಆ ದಿನವೂ ಮರುದಿನವೂ ನಂಪಿಳ್ಳೈಯವರನ್ನು ಮುಂದೆ ಸಾಷ್ಟಾಂಗ ನಮಸ್ಕಾರ ಮಾಡಿ, ಮೂರನೆಯ ದಿನವೂ ದೇಹವನ್ನು ತ್ಯಜಿಸಿ ಪರಮಪದಕ್ಕೆ ಹೊರಟಳು.

ನಾವು ನಂಪಿಳ್ಳೈ ಅವರ ತನಿಯಂಗಳ್ಳನ್ನು (ಅವರ ಶ್ರೇಷ್ಠತೆಯನ್ನು ಒಳಗೊಂಡ ವಿಶೇಷ ಸ್ಲೋಕಗಳು) ನೋಡೋಣ :

ವೇದಾಂತ ವೇದ್ಯಅಮೃತ ವಾರೀ ರಾಸೆ : ವೇದಾರ್ಥ ಸಾರಾಮೃತಃ ಪುರಾಮರ್ಗ್ಯಂ l
ಆಧಾಯವರ್ಷಂತಮ್ ಅಹಮ್ ಪ್ರಪಧ್ಯೇ ಕಾರುಣ್ಯ ಪೂರ್ಣಂ ಕಲಿವೈರಿಧಾಸಂ ll

(ನಂಜೀಯರ್ ಅವರ ಅಮೃತಸಾಗರದಿಂದ ತೆಗೆದ ವೇದಾಂತ (ಉಪನಿಷತ್) ಅರ್ಥಗಳ ಸಾರದ ಅಮೃತ ಪ್ರವಾಹವನ್ನು ಕರುಣಿಸುವ ಮತ್ತು ಕಾರುಣ್ಯದಿಂದ ತುಂಬಿರುವ ತಿರುಕ್ಕಲಿಕನ್ರಿಧಾಸನ್ ಅವರ ಅಡಿಯಲ್ಲಿ ನಾನು ಆಶ್ರಯ ಪಡೆಯುತ್ತೇನೆ)

ನಮಾಮಿ ತಂ ಮಾಧವಶಿಷ್ಯ ಪಧೌ ಯತ್ಸನ್ನಿತಂ ಸೂಕ್ತಿಮಯಂ ಪ್ರವಿಷ್ಟಾ: l
ತಥ್ರೈವ ನಿತ್ಯಸ್ಥಿ ಮಾತ್ರಿಯಂತೇ ವೈಕುಂಟ ಸಂಸಾರ ವಿಮುಕ್ತ ಚಿತ್ತಾ: ll

(ನಾನು ಮಾಧವರ (ನಂಜೀಯರ್ ) ಅವರ ಶಿಷ್ಯರಾದ ನಂಪಿಳ್ಳೈ ಅವರ ದಿವ್ಯ ಪಾದಗಳಿಗೆ ನಮಸ್ಕರಿಸುತ್ತೇನೆ.ನಂಪಿಳ್ಳೈ ಅವರ ಶಿಷ್ಯರು ನಂಪಿಳ್ಳೈ ಸನ್ನಿಧಿಯಲ್ಲಿ ಇರುವುದನ್ನು ಪ್ರೀತಿಸುತ್ತಾರೆ, ಅಲ್ಲಿ ಆಳ್ವಾರರು ಮತ್ತು ಆಚಾರ್ಯರ ದೈವಿಕ ಸ್ತೋತ್ರಗಳನ್ನು ನಿರಂತರವಾಗಿ ಪಠಿಸಲಾಗುತ್ತದೆ ಮತ್ತು ಅವರ ಮನಸ್ಸು ಶ್ರೀವೈಕುಂಠಂ ಅಥವಾ ಸಂಸಾರವನ್ನು ಬಯಸುವುದಿಲ್ಲ)

ವಾರ್ಥೋಂಚ ವೃತ್ಯಾಪಿ ಯಧಿಯಾಗೋಷ್ಟ್ಯಂ ಗೋಷ್ಟ್ಯಂತರಾಣಾಂ ಪ್ರಥಮಾಭವಂತಿ
ಶ್ರೀಮದ್ಕಲಿಧ್ವಂಸನ ದಾಸನಾಮ್ನೇ ತಸ್ಮೈನಾಮಸ್ಸುಕ್ತಿ ಮಹಾರ್ನವಯಾ

(ನಾನು ಶ್ರೀಸುಕ್ತಿಮಹಾರ್ನವಂ (ಆಳ್ವಾರ್ ಅವರ ದೈವಿಕ ಸ್ತೋತ್ರಗಳ ಒಂದು ದೊಡ್ಡ ಸಾಗರ) ಆಗಿರುವ ಆ ತಿರುಕ್ಕಲಿಕನ್ರಿಧಾಸನ್ ಅವರಿಗೆ ನಮಸ್ಕರಿಸುತ್ತೇನೆ. ನಂಪಿಳ್ಳೈ ಅಂತಹ [ಶ್ರೀವೈಷ್ಣವ] ಸಭೆಯಲ್ಲಿ , ಅವರ ಪ್ರವಚನಗಳಿಂದ ಕೆಲವು ಪದಗಳನ್ನು ಎತ್ತಿಕೊಳ್ಳುವವರು ಇತರ [ಶ್ರೀವೈಷ್ಣವ] ಸಭೆಗಳಲ್ಲಿ ಮುಖ್ಯಸ್ಥರಾಗುತ್ತಾರೆ.

ನೆಂಜಂತ್ತಿರುಂದು ನಿರಂಧರಮಾಗ ನಿರಯತ್ತುಯ್ಕ್೦
ವನಜಕ್ಕುರುಂಬಿನ್ ವಗೈ ಅರುತ್ತೇನ್ ಮಾಯವಾಧಿಯಾರ್ ಥಾಮ್
ಅಂಜಪ್ಪಿರಂಧ ಸೀಮಾಧವನ್ ಅಡಿಕ್ಕು ಅನ್ಬುಸೆಯ್ಯುಂ
ತಂಜತ್ತೋರುವನ್ ಚರಣಾಮ್ ಬುಯಂ ಎನ್ ತಲೈಕ್ಕನಿಂದೆ

(ನಂಪಿಳ್ಳೈಯ ದಿವ್ಯವಾದ ಕಮಲದಂತಹ ಪಾದಗಳನ್ನು ನಾನು ನನ್ನ ತಲೆಯ ಮೇಲೆ ಆಭರಣವಾಗಿ ಧರಿಸುತ್ತೇನೆ. ನಂಪಿಳ್ಳೈ ಅಂತಹ ಮಹಾನ್ ಆಚಾರ್ಯರನ್ನು ನಿರಂತರವಾಗಿ ಯೋಚಿಸಿದರೆ, ನನ್ನನ್ನು ನರಕಕ್ಕೆ ಕರೆದೊಯ್ಯುವ ಎಲ್ಲಾ ದುಷ್ಕೃತ್ಯಗಳು ತುಂಡಾಗುತ್ತವೆ. ಪರ್ಯಾಯವಾಗಿ, ಸುಶಿಕ್ಷಿತರು, ಶ್ರೀಮಂತರು ಮತ್ತು ಶ್ರೇಷ್ಠ ಕುಲದಲ್ಲಿ ಇರುವ ಮೂರು ಅಹಂಕಾರದ ಬೇರುಗಳು ನಂಪಿಳ್ಳೈ ಬಗ್ಗೆ ನಿರಂತರವಾಗಿ ಯೋಚಿಸುವುದರಿಂದ ನಿರ್ಮೂಲನೆಯಾಗುತ್ತದೆ. ಅವರು ಶ್ರೀಮಾಧವನ (ನಂಜೀಯರ್) ಅವರ ಪಾದಕಮಲಗಳನ್ನು ಸೇವಿಸುವ ವ್ಯಕ್ತಿಯಾಗಿದ್ದು, ಮಾಯಾವಾದಿಗಳು (ವೇದಗಳಿಗೆ ತಪ್ಪು ವ್ಯಾಖ್ಯಾನವನ್ನು ನೀಡುವವರು) ಭಯದಿಂದ ನಡುಗುತ್ತಾರೆ.ಅವನೇ ಎಲ್ಲರಿಗೂ ಆಶ್ರಯ)

ಅನುವಾದ – ಅಡಿಯೇನ್ ಸುಭದ್ರಾ ರಾಮಾನುಜ ದಾಸಿ
ಪುರಾವೆ ಓದುವಿಕೆ -ಅಡಿಯೇನ್ ಕೊದೈ ರಾಮಾನುಜ ದಾಸಿ

ಮೂಲ : https://granthams.koyil.org/2021/07/23/yathindhra-pravana-prabhavam-8-english/

ಆರ್ಕೈವ್ ಮಾಡಲಾಗಿದೆ – https://granthams.koyil.org

ಪ್ರಮೇಯಮ್ (ಗುರಿ) – https://koyil.org
ಪ್ರಮಾಣಮ್ (ಗ್ರಂಥಗಳು) – https://granthams.koyil.org
ಪ್ರಮಾತಾ (ಬೋಧಕರು) – https://acharyas.koyil.org
ಶ್ರೀವೈಷ್ಣವ ಎಜುಕೇಶನ್ / ಮಕ್ಕಳ ಸಾಹಿತ್ಯ – https://pillai.koyil.org

1 thought on “ಯತೀಂದ್ರ ಪ್ರವಣ ಪ್ರಭಾವಂ – ಭಾಗ ೮”

Leave a Comment