ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೫೨

ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ

ಪೂರ್ಣ ಸರಣಿ

<< ಹಿಂದಿನ ಲೇಖನವನ್ನು

ಎರುಮ್ಬಿಯಪ್ಪ ಅವರ ತಿರುವಾರಾಧನ ಪ್ಪೆರುಮಾಳ್ ಚಕ್ರವರ್ತಿ ತಿರುಮಗನ್ ಅವರಿಗೆ ಅವರ ಕನಸಿನಲ್ಲಿ ಆದೇಶಿಸಿದರು “ನೀವು ಆದಿಶೇಷನ ಪುನರ್ಜನ್ಮವಾದ ಮನವಾಳ ಮಾಮುನಿಗಳ ಮೇಲೆ ಅಪರಾಧ ಮಾಡಿದ್ದೀರಿ.ಶ್ರೀ ನಾರದ ಭಗವಾನ್ ಅವರ ಮೂಲ ‘ಭಗವಧ್ ಭಕ್ತ ಸಂಭುಕ್ತ ಪಾತ್ರ ಶಿಷ್ಟೋಧನಾರಾಥ್ ಕೋಪೀಡಾಸಿ ಸುಥೋಪ್ಯಾಸಿ ಸಮೃಥೋ ವೈ ನಾರದೋಭವತ್ (ದೇವರ ಭಕ್ತಾದಿಗಳ ಆಹಾರವನ್ನು ಪ್ರೀತಿಯಿಂದ ಸೇವಿಸುವ ಮೂಲಕ) ಕುರಿತು ನೀವು ಕೇಳಿಲ್ಲವೇ? ಭಗವಾನ್, ವೇಶಿಯ (ಸೌಜನ್ಯ) ಮಗ, ಅವನ ಮರಣದ ನಂತರ, ನಾರದ ಭಗವಾನ್ ಆದರು?’ ನೀವು ಜೀಯರ್ ಅವರ ದಿವ್ಯ ಪಾದಗಳನ್ನು ಆಶ್ರಯಿಸಿ ಅವರಿಗೆ ಕ್ಷಮೆಯಾಚಿಸದಿದ್ದರೆ, ನಾವು ನಿಮ್ಮಿಂದ ತಿರುವಾರಾಧನೆಯನ್ನು ಸ್ವೀಕರಿಸುವುದಿಲ್ಲ. ತಕ್ಷಣ ಹೋಗಿ”. ಅಪ್ಪ ನಿದ್ರೆಯಿಂದ ಎಚ್ಚರಗೊಂಡು ತನಗೆ ಬಿದ್ದ ಕನಸಿನ ಬಗ್ಗೆ ಯೋಚಿಸುತ್ತಲೇ ಇದ್ದನು. ಅವನು ಶ್ಲೋಕವನ್ನು ಪಠಿಸುತ್ತಾ ತಕ್ಷಣವೇ ಕೊಯಿಲ್ (ಶ್ರೀರಂಗ)ಕ್ಕೆ ಹೊರಟರು .

ಅಂಗೇಕವೇರಾ ಕನ್ಯಾಯಾಸ್ ತು೦ಗೆ ಭುವನ ಮಂಗಳೆ
ರಂಗೇ ಧಾಮನಿ ಸುಖಾಸೀನಮ್ ವಂದೇ ವರವರಂ ಮುನಿಮ್

(ಕಾವೇರಿ ನದಿಯ ಮಧ್ಯದಲ್ಲಿರುವ, ಎಲ್ಲಾ ಲೋಕಗಳಿಗೂ ಮಂಗಳಕರವಾದ ಸ್ಥಳದಂತೆ ಕಾಣುವ ಶ್ರೀ ರಂಗದ ದಿವ್ಯ ನಿವಾಸದಲ್ಲಿ ದಯೆಯಿಂದ ನೆಲೆಸಿರುವ ಮಣವಾಳ ಮಾಮುನಿಗಳ ದಿವ್ಯ ಪಾದಗಳ ಕೆಳಗೆ ನಾನು ಆಶ್ರಯ ಪಡೆಯುತ್ತೇನೆ). ಆ ಸಮಯದಲ್ಲಿ, ಜೀಯರ್ ಪೆರುಮಾಳರನ್ನು ಪೂಜಿಸಲು ದಯೆಯಿಂದ ಬರುತ್ತಿದ್ದರು. ಅಪ್ಪ ಜೀಯರ್ ಅವರನ್ನು ನೋಡಿದ ತಕ್ಷಣ, “ಧ೦ಡವತ್ ಪ್ರಾಣಮೇತ್ ಭೂಮಾವುಪೇಧ್ಯ ಗುರುಂ ಅನ್ವಹಂ” (ಕೋಲು ಬಿಟ್ಟರೆ ಬೀಳುವಂತೆ ಪ್ರತಿದಿನ ಆಚಾರ್ಯರ ಬಳಿಗೆ ಹೋಗಿ ಅವರ ಮುಂದೆ ನಮಸ್ಕರಿಸಬೇಕು) ಎಂದು ಹೇಳಿದಂತೆ ಅವರು ಜೀಯರ್ ಅವರ ದಿವ್ಯ ಪಾದಗಳಿಗೆ ನಮಸ್ಕರಿಸಿದರು. “ಲೋಚನಾಭ್ಯಂ ಪಿಪನ್ನಿವ” (ಕಣ್ಣುಗಳಿಂದ ಅವನನ್ನು ಹೀರಿಕೊಳ್ಳುವುದು) ಎಂದು ಹೇಳಿದಂತೆ ಜೀಯರ್ ಕೂಡ ಅವರನ್ನು ಕರುಣೆಯಿಂದ ನೋಡಿದರು . ಅಪ್ಪಾ, ಜೀಯರ್ ಅವರ ದೈವಿಕ, ಮಂಗಳಕರ ರೂಪದ ಸೌಂದರ್ಯದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡು, ಮಯಿಪ್ರವಿಶತಿ ಶ್ರೀಮಾನ್‌ನಿಂದ ಪ್ರಾರಂಭಿಸಿ ಮಾಯಿ ಪ್ರಸಾಧಪ್ರವಣಂನೊಂದಿಗೆ ಕೊನೆಗೊಳ್ಳುವ ಪೂರ್ವಾದಿನಚರ್ಯವನ್ನು ಪಠಿಸಲು ಪ್ರಾರಂಭಿಸಿದರು.

ಜೀಯರ್, ಎರುಂಬಿಯಪ್ಪರನ್ನು ಉದ್ಧಾರ ಮಾಡುವಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡು, ಆತ್ಮಲಾಭಕ್ಕಿಂತ (ಆತ್ಮವನ್ನು ಸರಿಪಡಿಸುವ ಪ್ರಯೋಜನ) ಹೆಚ್ಚಿನ ಪ್ರಯೋಜನವಿಲ್ಲ ಎಂದು ಭಾವಿಸಿ ತಮ್ಮ ಮಠಕ್ಕೆ ಹಿಂತಿರುಗಿದರು ಮತ್ತು ಅಪ್ಪರನ್ನು ಸ್ವೀಕರಿಸುವ ಬಯಕೆಯಿಂದ, ತಮ್ಮ ಅನುಯಾಯಿಗಳಿಗೆ “ದೇವಾಲಯಕ್ಕೆ ಹೋಗಿ, ಪೆರುಮಾಳನನ್ನು ಪೂಜಿಸಿ ಮತ್ತು ಹಿಂತಿರುಗಿ” ಎಂದು ಹೇಳಿದರು. ಅವರು ಪೆರುಮಾಳನನ್ನು ಪೂಜಿಸಿದ ನಂತರ ಹಿಂತಿರುಗಿದಾಗ, ಪೆರುಮಾಳರು ಇಂತಿಂತಹ ಅಲಂಕಾರವನ್ನು ಧರಿಸುತ್ತಿದ್ದಾರೆ, ಅವರು ಇಂತಿಂತಹ ಆಹಾರವನ್ನು ಸೇವಿಸುತ್ತಿದ್ದಾರೆ ಎಂದು ಹೇಳಿದರು. ದೇವಾಲಯದಲ್ಲಿ ತಾವು ಕಂಡದ್ದೆಲ್ಲವೂ ಜೀಯರ್ ವಿವರಿಸಿದಂತೆಯೇ ಇರುವುದನ್ನು ನೋಡಿ ಅವರು ಅವರ ಸರ್ವಜ್ಞತೆಯನ್ನು ಕಂಡು ಆಶ್ಚರ್ಯಚಕಿತರಾದರು. ಶ್ರೀರಂಗಕ್ಕೆ ಹೋಗುವ ದಾರಿಯಲ್ಲಿ ತನಗಿದ್ದ ಹಂಬಲವನ್ನು ಹೋಗಲಾಡಿಸಲು ದೂರದಿಂದ ಬಂದ ಅಪ್ಪಾ, ಹಸಿದ ಮನುಷ್ಯನು ಆಹಾರವನ್ನು ನೋಡುವಂತೆ ಮಾಮುನಿಗಳನ್ನು ನೋಡುತ್ತಲೇ ಇದ್ದರು . ದಿನಚರ್ಯದಲ್ಲಿ “ಭವಂತಮೇವ ನಿರಂತ್ರಂ ಪಶ್ಯನ್ವಸ್ಯೇನ ಚೇತಸಾ ” (ಆದಿಯೇನ್ ನಿಮ್ಮ ಶ್ರೇಷ್ಠತೆಯನ್ನು ನೋಡುತ್ತಲೇ ಇರುತ್ತಿದ್ದರು, ನಿಮ್ಮ ಶ್ರೇಷ್ಠತೆಯ ಮಂತ್ರಕ್ಕೆ ಒಳಗಾಗುತ್ತಿದ್ದರು) ಎಂದು ಹೇಳಿರುವಂತೆ, ಜೀಯರ್ ಅವರ ದಿವ್ಯ ಶುಭ ರೂಪವನ್ನು ಅವರ ಧಾರಕ (ಆಹಾರ), ಪೋಷಕ ಮತ್ತು ಭೋಗ್ಯ (ಆನಂದ) ವಾಗಿ ಆನಂದಿಸುತ್ತಿದ್ದರು.

ಮರುದಿನ ಬೆಳಗಿನ ಜಾವದಲ್ಲಿ , ಅಣ್ಣನ್ ಮತ್ತು ಇತರರು ದಯೆಯಿಂದ ಜೀಯರ್ ಅವರ ವಿಶ್ರಾಂತಿ ಕೋಣೆಯ ಪ್ರವೇಶದ್ವಾರಕ್ಕೆ ಬಂದು, ಅವರನ್ನು ನಿದ್ರೆಯಿಂದ ಎಬ್ಬಿಸಲು ಈ ಕೆಳಗಿನ ಶ್ಲೋಕವನ್ನು ಪಠಿಸಿದರು.

ರವಿರುಧಯತ್ಯಥಾಪಿ ನವಿನಶ್ಯತಿಮೆಥಿಮಿರಂ
ವಿಕಸತಿ ಪಂಕಜಂ ಹೃಧಯಪಂಕಜಮೇವ ನಮ
ವರವರ ಯೋಗಿವರ್ಯ ! ವರ್ಣೀಯ ಗುಣೈಕನಿಧೇ !
ಜಯಜಯದೇವ ! ಜಾಗ್ರಹಿ ಜನೇಷು ನಿಧೇಹಿ ಧೃಶಮ್

(ಸೂರ್ಯ ಉದಯಿಸಿದರೂ, ಅಡಿಯೇನ್ ಮನಸ್ಸಿನಲ್ಲಿರುವ ಕತ್ತಲೆ ಇನ್ನೂ ದೂರವಾಗಿಲ್ಲ. ಕೊಳಗಳಲ್ಲಿ ಕಮಲದ ಹೂವುಗಳು ಅರಳಿವೆ, ಆದರೆ ಅಡಿಯೇನ್ ಮನಸ್ಸಿನಲ್ಲಿ ಕಮಲ ಅರಳಿಲ್ಲ. ಓ ದೇವರೇ, ಅಪೇಕ್ಷಣೀಯ ಶುಭ ಗುಣಗಳ ನಿಧಿಯೇ! ಓ ದೇವರೇ! ಓ ಮಣವಾಳ ಮಾಮುನಿ! ದೇವರ್ಯರು ವಿಜಯಶಾಲಿಯಾಗಿ ಎಚ್ಚರಗೊಳ್ಳಬೇಕು. ದೇವರ್ಯರು ದಿವ್ಯ ಕಣ್ಣುಗಳನ್ನು ತೆರೆಯಬೇಕು. ದೇವರೀರ್ ಅಡಿಯಲ್ಲಿ ಆಶ್ರಯ ಪಡೆದವರ ಮೇಲೆ ದೇವರೀರ ಕರುಣೆಯನ್ನು ಧಾರೆಯೆರೆಯಬೇಕು). ಮಾಮುನಿಗಳ್ ಎದ್ದು, ಗುರುಪರಂಪರ (ಆಚಾರ್ಯರ ವಂಶ) ದಿಂದ ಪ್ರಾರಂಭವಾಗುವ ರಹಸ್ಯತ್ರಯಮ್ (ತಿರುಮಂತ್ರಂ, ಧ್ವಯಂ ಮತ್ತು ಚರಮ ಸ್ಲೋಕಂ) ಪಠಿಸಿದರು.
ಇವುಗಳಲ್ಲಿ, ಅವರು ಎಂಪೆರುಮಾನ್‌’ನ ಪರ, ವ್ಯೂಹ ಮತ್ತು ಅಂತರ್ಯಾಮಿ ಗುಣಗಳನ್ನು ತಿರುಮಂತ್ರದ ಮೂಲಕ, ವಿಭವ ಗುಣಗಳನ್ನು ಚರಮ ಶ್ಲೋಕದ ಮೂಲಕ ಮತ್ತು ಆರ್ಚ (ವಿಗ್ರಹ ರೂಪ) ಗುಣಗಳಲ್ಲಿನ ಸಂಪೂರ್ಣತೆಯನ್ನು ಧ್ವಯಂ ಮೂಲಕ ಕರುಣೆಯಿಂದ ಹೇಳುತ್ತಿದ್ದರು.

ಮೂಲ : https://granthams.koyil.org/2021/08/16/yathindhra-pravana-prabhavam-52-english/

ಅನುವಾದ – ಅಡಿಯೇನ್ ಸುಭದ್ರಾ ರಾಮಾನುಜ ದಾಸಿ
ಪುರಾವೆ ಓದುವಿಕೆ -ಅಡಿಯೇನ್ ಕೊದೈ ರಾಮಾನುಜ ದಾಸಿ

ಆರ್ಕೈವ್ ಮಾಡಲಾಗಿದೆ – https://granthams.koyil.org

ಪ್ರಮೇಯಮ್ (ಗುರಿ) – https://koyil.org
ಪ್ರಮಾಣಮ್ (ಗ್ರಂಥಗಳು) – https://granthams.koyil.org
ಪ್ರಮಾತಾ (ಬೋಧಕರು) – https://acharyas.koyil.org
ಶ್ರೀವೈಷ್ಣವ ಎಜುಕೇಶನ್ / ಮಕ್ಕಳ ಸಾಹಿತ್ಯ – https://pillai.koyil.org

Leave a Comment