ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೫೩

ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ

ಪೂರ್ಣ ಸರಣಿ

<< ಹಿಂದಿನ ಲೇಖನವನ್ನು

ತರುವಾಯ, ಶ್ಲೋಕದಲ್ಲಿ ಹೇಳಿದಂತೆ

ಅಯಂಪುನ ಸ್ವಯಂವ್ಯಕ್ತ ಅನವತಾರಾನ್ ಅನುತ್ತಮಾನ್
ನಿಧಾಯ ಹೃಧಿನೀರಂತರಂ ನಿಧ್ಯಾಯನ್ ಪ್ರತಭುದ್ಯತ
ವಿಶೇಷೇನೇ ಶೀಶೇವೆಚ ಶೇಷಭೋಗ ವಿಭೂಷಣಂ
ಅಮೇಯಮಾತ್ ಇಮಮ್ದಾಮಮ್ ರಮೇಶಂ ರಂಗಶಾಯಿನಮ್
ಧ್ಯಾಯಂ ಧ್ಯಾಯಂ ವಪುಸ್ಥಸ್ಯ ಪಾಯಂ ಪಾಯಂ ಧಾಯೋಧತಿಮ್
ಕಾಯಂ ಕಾಯಂ ಗುನಉಚ್ಚೈಸ್ ಸೋಯಮ್ ಥಧ್ಭೂಯಸಾನ್ವಭೂತ್

(ಮಣವಾಳ ಮಾಮುನಿಗಳು ತಮ್ಮ ದಿವ್ಯ ಕಣ್ಣುಗಳನ್ನು ತೆರೆದು, ಯಾವುದೇ ಅಡೆ ತಡೆಗಳು ಇಲ್ಲದೆ ಸ್ವಯಂವ್ಯಕ್ತ ರೂಪಗಳಾದ (ಸ್ವತಃ ಕಾಣಿಸಿಕೊಂಡ) ಅರ್ಚಾವತಾರಗಳನ್ನು (ವಿಗ್ರಹ ರೂಪದಲ್ಲಿ ಸರ್ವೇಶ್ವರರು) ಧ್ಯಾನಿಸಿದರು. ಅವರು ಶ್ರೀರಂಗದಲ್ಲಿ ಒರಗಿಕೊಂಡಿರುವ ಮತ್ತು ಆದಿಶೇಷನ ದಿವ್ಯ ರೂಪಕ್ಕೆ ಅಲಂಕಾರವಾಗಿರುವ ಶ್ರೀಯ:ಪತಿ (ಶ್ರೀ ಮಹಾಲಕ್ಷ್ಮಿಯ ಪತ್ನಿ) ಎಂದು ಕರೆಯಲ್ಪಡುವ ಪರಮ ತೇಜಸ್ಸನ್ನು ಸಂಪೂರ್ಣವಾಗಿ ಧ್ಯಾನಿಸಿದರು. ಆ ಶ್ರೀರಂಗನಾಥನ ದಿವ್ಯ ರೂಪವನ್ನು ಧ್ಯಾನಿಸುತ್ತಾ, ಸಾಗರದಂತಹ ಅವನ ಕರುಣೆಯನ್ನು ಕುಡಿದು ಮತ್ತು ಅವನ ಶುಭ ಗುಣಗಳನ್ನು ಸ್ತುತಿಸುತ್ತಾ, ಈ ಮಾಮುನಿಗಳು ಹಿಂದೆ ಹೇಳಿದ ಶ್ರೀರಂಗನಾಥನ ತೇಜಸ್ವಿ ರೂಪವನ್ನು ಪದೇ ಪದೇ ಆನಂದಿಸುತ್ತಿದ್ದರು, ಎಲ್ಲಾ ಅರ್ಚಾಗಳಿಗೆ ಮೂಲವಾದ ಪೆರಿಯ ಪೆರುಮಾಳರ ವಿಗ್ರಹದ ಶುಭ ಗುಣಗಳನ್ನು ಕರುಣಾಮಯವಾಗಿ ಧ್ಯಾನಿಸಿದರು.ನಂತರ ಅವರು ಯತೀ೦ದ್ರ (ರಾಮಾನುಜರ) ದಿವ್ಯ ಪಾದಗಳ ಮೇಲಿನ ಸಂಪೂರ್ಣ ಪ್ರೀತಿಯಿಂದ ಸ್ನಾನ ಮಾಡಿದರು. ಯತೀ೦ದ್ರ ಮೇಲಿನ ಪ್ರೀತಿಯು ಸರ್ವೇಶ್ವರನ ಮೇಲಿನ ಪ್ರೀತಿಗೆ ಹೊರಗಿನ ಮಿತಿಯಾಗಿದೆ ಎಂದು ಹೇಳಲಾಗುತ್ತದೆ. ಸ್ನಾನದ ನಂತರ, ಅವರು ತಮ್ಮ ನಿತ್ಯಾನುಷ್ಠಾನಗಳನ್ನು (ದೈನಂದಿನ ಚಟುವಟಿಕೆಗಳನ್ನು) ಕೈಗೊಂಡರು, ಊರ್ಧ್ವಪುಂಡ್ರಗಳನ್ನು ಅನ್ವಯಿಸಿದರು, ತಮ್ಮ ಪಾರತಂತ್ರ್ಯಕ್ಕೆ (ಸರ್ವೇಶ್ವರನ ಮೇಲೆ ಅವಲಂಬನೆ) ಅನುಗುಣವಾಗಿ ತಮ್ಮ ತಿರುವಾರಾಧನ ಪೆರುಮಾಳ್ (ದೈನಂದಿನ ಪೂಜೆಗೆ ವಿಗ್ರಹ) ಶ್ರೀ ರಂಗನಾಥರ ಮುಂದೆ ನಮಸ್ಕರಿಸಿದರು. ಶ್ರೀ ರಂಗನಾಥರು, ಅವರ ಪಾರತಂತ್ರ್ಯ (ಸರ್ವೇಶ್ವರನ ಮೇಲಿನ ಅವಲಂಬನೆ) ಕ್ಕೆ ಅನುಗುಣವಾಗಿ,

ಆತ್ಮಸ್ವರೂಪ ಯಾಥಾತ್ಮ್ಯಮ್ ಆಚಾರ್ಯಧೀನ ದೈವಯತ್
ಆಮ್ನಾಯಾಣಾಮ್ ರಹಸ್ಯನಂಥ ತಾಕಿಲೇಭ್ಯ: ಪ್ರಕಾಶಯನ್
ಸರ್ವಂ ಯತಿಪಧೇರೇವ ಕುರ್ವನ್ನಾದೇಶ ಪೂರ್ವಕಂ
ಕೃಥ್ಯಾಕೃತ್ಯೇಷು ಕರ್ತೃತ್ವಮ್ ಕೃತೀಕಿಮಪಿ ನಾಸ್ಪೃಶನ್
ತದ್ಹಸ್ಥಸ್ಯ ಮುಖೋಲ್ಲಾಸಂ ಚಿಕೀರ್ಷಾನ್ನೇವ ಕೇವಲಂ

(ಮಣವಾಳ ಮಾಮುನಿಗಳು ತಮ್ಮ ಮುಖದಲ್ಲಿ ಯತೀ೦ದ್ರ (ರಾಮನುಜರ) ಸಂತೋಷದ ಅಭಿವ್ಯಕ್ತಿಯನ್ನು ನಿರೀಕ್ಷಿಸುತ್ತಾ ತಮ್ಮ ಚಟುವಟಿಕೆಗಳನ್ನು ನಡೆಸುತ್ತಿದ್ದರು, ತಾನು ಆ ಚಟುವಟಿಕೆಯನ್ನು ನಡೆಸುತ್ತಿದ್ದೇನೆ ಎಂಬ ಯಾವುದೇ ಆಲೋಚನೆಯಿಲ್ಲದೆ [ಬೇರೆ ರೀತಿಯಲ್ಲಿ ಹೇಳುವುದಾದರೆ, ಚಟುವಟಿಕೆಗಳ ಮೇಲೆ ಹಿಡಿತದ ಚಿಂತನೆಯಿಲ್ಲದೆ]; ಇದು ಅವರ ಆಚಾರ್ಯ ಪಾರತಂತ್ರ್ಯ (ಆಚಾರ್ಯರ ಮೇಲೆ ಸಂಪೂರ್ಣವಾಗಿ ಅವಲಂಬಿತರಾಗಿರುವುದು) ಎಂಬ ಗುಣವನ್ನು ವ್ಯಕ್ತಪಡಿಸಿತು, ಇದನ್ನು ವೇದಗಳಲ್ಲಿ ಸೂಚ್ಯವಾಗಿ ಹೇಳಲಾಗಿದೆ,ಮತ್ತು ಅದು ಆತ್ಮಸ್ವರೂಪದ (ಆತ್ಮದ ಮೂಲ ಸ್ವಭಾವ) ನಿಜವಾದ ಲಕ್ಷಣವಾಗಿದೆ.

ತರುವಾಯ ಅವರು ಸನ್ನಿಧಿಸ್ತಮ್ಬಂಮೂಲಭೂಷಣದಲ್ಲಿ ಹೇಳಿರುವಂತೆ (ಸನ್ನಿಧಿಯಲ್ಲಿ ಕಂಬದ ಹತ್ತಿರ ಕುಳಿತು ಸ್ಥಳವನ್ನು ಅಲಂಕರಿಸಿ) ತಿರುಮಲೈಆಳ್ವಾರ್ [ಪ್ರವಚನ ಮಂಟಪ] ಪ್ರವೇಶಿಸಿದರು.

ಎರುಂಬಿಯಪ್ಪಾ , ಕಂದಾಡೈ ಅಣ್ಣನ್ ಜೊತೆ ಪುರುಷಕಾರಮನಾಗಿ (ಶಿಫಾರಸು ಪಾತ್ರದಲ್ಲಿ), ಮಾಮುನಿಗಳ್ ತನ್ನ ಇಚ್ಛೆಯನ್ನು ವ್ಯಕ್ತಪಡಿಸಿದರು. “ದಯವಿಟ್ಟು ಅಡಿಯೇನ್ ಅವರನ್ನು ದೇವರೀರ್ ಅವರ ದೈವಿಕ ಪಾದಗಳ ಕೆಳಗೆ ಆಶ್ರಯದಲ್ಲಿ ತೆಗೆದುಕೊಳ್ಳಿ”. ಮಾಮುನಿಗಳು ಅವರ ಆಸೆಯನ್ನು ಒಪ್ಪಿಕೊಂಡರು, ಅಪ್ಪನಿಗಾಗಿ ಪಂಚಸಂಸ್ಕಾರ ಮಾಡಿದರು, ಅವರ ಮೇಲೆ ತಮ್ಮ ವಿಶಿಷ್ಟ ಕರುಣೆಯನ್ನು ತೋರಿಸಿದರು ಮತ್ತು ತಂದೆಯ ದಿವ್ಯ ಶಿರಸ್ಸನ್ನು ತಮ್ಮ ದಿವ್ಯ ಪಾದಗಳಿಂದ ಅಲಂಕರಿಸಿದರು.
ನಂತರ, ಅಪ್ಪನಿಗೆ ಮಂಗಳಾಸನ ಎಂದು ತನ್ನ ದಿವ್ಯ ಮನಸ್ಸಿನಲ್ಲಿ ನಿರ್ಧರಿಸಿ, ಅವನಿಗೆ ಮಂತ್ರರತ್ನ (ದ್ವಯಂ)ವನ್ನು ವಿವರಿಸಿ, ಅವನನ್ನು ತನ್ನ ಆಪ್ತನನ್ನಾಗಿ ಮಾಡಿಕೊಂಡು, ಪೆರುಮಾಳರಿಗೆ ಮಂಗಳಾಸನವನ್ನು ಮಾಡಲು ಅವನೊಂದಿಗೆ ದೇವಸ್ಥಾನಕ್ಕೆ ಹೋದರು. ಅವರು ನಾನ್ಮುಗನ್ ತಿರುಗೋಪುರದ ಮುಂದೆ ನಮಸ್ಕರಿಸಿ ದೇವಾಲಯವನ್ನು ಪ್ರವೇಶಿಸಿ, ಶ್ಲೋಕದಲ್ಲಿ ಉಲ್ಲೇಖಿಸಲಾದ ಕ್ರಮದಲ್ಲಿ ಸನ್ನಿಧಿಗಳನ್ನು ಪೂಜಿಸಿದರು.

ದೇವಿ ಗೋದಾ ಯತಿಪತಿ ಸಟದ್ವೇಶಿಣೌ ರಂಗಶೃಂಗಂ
ಸೇನಾನಾಥೋ ವಿಹಗ ವೃಷಭಸ್ ಶ್ರೀನಿಧಿಸ್ ಸಿಂಧು ಕನ್ಯಾ:
ಭೂಮಾ ನೀಲಾ ಗುರುಜನ ವೃಥಾ: ಪುರುಷಸ್ ಚೇತ್ಯ ಮೀಷಾಮ್
ಅಗ್ರೇನಿತ್ಯಂ ವರವರಮುನೇ ರಂಗ್ರಿಯುಗ್ಮಮ್ ಪ್ರಪಧ್ಯೇ

(ಪರಮಪದ ನಾಥನ ಸುತ್ತಲೂ ಇರುವ ಆಂಡಾಳ್, ಎಂಪೆರುಮಾನಾರ್, ನಮ್ಮಾಳ್ವಾರ್, ಶ್ರೀರಂಗ ವಿಮಾನ (ದೇವಾಲಯದ ಗೋಪುರ), ಸೇನೈ ಮುದಲಿಯಾರ್ (ವಿಶ್ವಕ್ಸೇನರ್ ) , ಪಕ್ಷಿರಾಜ (ಗರುಡ), ಶ್ರೀರಂಗನಾಥ, ಶ್ರೀರಂಗ ನಾಚ್ಚಿಯಾರ್,ಭೂಮಿದೇವಿ , ನೀಲಾದೇವಿ ಮತ್ತು ಆಳ್ವಾರರನ್ನು ಪ್ರತಿ ಸನ್ನಿಧಿಗೆ ಸೂಕ್ತವಾದ ಮಂಗಳಾಸನವನ್ನು ಹಾಗು ಮಂಗಳಾರತಿಯನ್ನು ಶ್ರದ್ದೇಯಿಂದ ಮಾಡುವ ಮನವಾಳ ಮಾಮುನಿಗಳ ದಿವ್ಯ ಪಾದಗಳನ್ನು ಅಡಿಯೆನ್ ಪ್ರತಿದಿನ ಪೂಜಿಸುತ್ತೇನೆ).ನಂತರ ಅವರು ಪೆರಿಯ ಪೆರುಮಾಳ್ ಮತ್ತು ನಂಪೆರುಮಾಳ್ ಅವರ ದಿವ್ಯ ಪಾದಗಳನ್ನು ಪೂಜಿಸಿದರು. ತರುವಾಯ, ಕೆಳಗಿನ ಶ್ಲೋಕದಲ್ಲಿ ಹೇಳಿರುವಂತೆ:

ಉಪೇತ್ಯ ಪುನರಪ್ಯೇಷ ನಿಜಮೇವ ನಿವೇಶನಂ
ನಿವೇದ್ಯ ನಿಖಿಲಂ ತತ್ರ ಯತೀ೦ದ್ರಾಯ ನಮಸ್ಯಯಾ

ಮಣವಾಳ ಮಾಮುನಿಗಳು ತಮ್ಮ ಮಠಕ್ಕೆ ಹಿಂತಿರುಗಿ ಅಲ್ಲಿ ಯತಿರಾಜರಿಗೆ (ರಾಮಾನುಜರಿಗೆ) ಎಲ್ಲಾ ಘಟನೆಗಳನ್ನು ತಿಳಿಸಿದರು, ಅವರು ಅಲ್ಲಿ ಕೃಪೆಯಿಂದ ನೆಲೆಸಿದ್ದರು ), ಅವರು ತಮ್ಮ ದಿವ್ಯ ನಿವಾಸಕ್ಕೆ ಹಿಂತಿರುಗಿ ರಾಮಾನುಜರಿಗೆ ಆ ದಿನ ನಡೆದ ಎಲ್ಲಾ ಘಟನೆಗಳನ್ನು ತಿಳಿಸಿದರು. ನಂತರ ಅವರು ರಾಮಾನುಜರ ದಿವ್ಯ ಪಾದಗಳ ದಿವ್ಯ ನೆರಳಿನಂತೆ ತಿರುಮಲೈಆಳ್ವಾರ್ (ಪ್ರವಚನಗಳನ್ನು ನಡೆಸಲು ಅವರು ನಿರ್ಮಿಸಿದ ಸಭಾಂಗಣ) ಪ್ರವೇಶಿಸಿ ಎರುಂಬಿಯಪ್ಪನಿಗೆ ಶ್ರೀಪಾದತೀರ್ಥ (ಅವರ ದಿವ್ಯ ಪಾದಗಳಿಗೆ ಮಾಡಿದ ಬಂದ ದೈವಿಕ ನೀರು) ಅರ್ಪಿಸಿದರು, ಇದು ಅಪ್ಪನಿಗೆ ಸಂಸಾರದಿಂದ (ಭೌತಿಕ ಲೋಕ) ಮುಕ್ತಿ ಪಡೆಯಲು ಅನುವು ಮಾಡಿಕೊಡುತ್ತದೆ ಏಕೆಂದರೆ ಅದು ಅವರ ದಿವ್ಯ, ಕಮಲದಂತಹ ಪಾದಗಳೊಂದಿಗೆ ಸಂಪರ್ಕದಲ್ಲಿರುವ ಪರಿಮಳಯುಕ್ತ ನೀರು.

ಪೆರುಮಾಳ್ ಅವರು ಅರ್ಪಿಸಿದ ನೈವೇದ್ಯವನ್ನು ಸೇವಿಸಿದ ನಂತರ, ಶ್ಲೋಕದಲ್ಲಿ ಉಲ್ಲೇಖಿಸಿದಂತೆ ಮಾಮುನಿಗಳು ಸಹ

ಅಥ ಮಾಧ್ಯಾಹ್ನಿಕಂ ಕೃತ್ಯಂ ಕೃಥವಾ ಸರ್ವೋತತರಂ ಮುನಿ:
ಆರಾಧ್ಯ ವಿಧಿವತ್ ದೇವಮಾನವಭೂತ್ ರಂಗಭೂಷಣಂ
ತತಸ್ಸಾಮ್ ಮುಖಸಂಸ್ಪರ್ಶರಸೇನ ಸುಗಂಧಿನಾ
ಸೂಚೀನಾ ಸುಕುಮಾರೇಣ ಸತ್ವಸಂ ಶುದ್ಧೀ ಹೇತುನಾ
ಭಕ್ತಿ ಭೂತಂ ಪ್ರಭೂತೇನ ಭೋಜ್ಯೇನ ಭಗವತ್ಪ್ರಿಯಾನ್
ಥತ್ ಪರಸ್ ತರ್ಪಯಾಮಾಸ ತದೀಯ ಪ್ರೇಮ ವೃತ್ಥಯೇ
ಆತ್ಮಾನಮ್ ಆತ್ಮಾನಾಪಶ್ಯನ್ ಭೋಕ್ತಾರಮ್ ಪುರುಶಂಬರಂ
ಅನುಯಾಗಂ ಯಥಾಯೋಗಮ್ ನಿಸ್ಸಂಗೋ ನೀರಾವರ್ತಯನ್

(ನಂತರ, ರಜೋ ಮತ್ತು ತಮೋ ಗುಣಗಳಿಲ್ಲದ (ಸಂಪೂರ್ಣವಾಗಿ ಒಳ್ಳೆಯ ಗುಣಗಳನ್ನು ಹೊಂದಿರುವ) ಮಹಾನ್ ಸಾತ್ವಿಕರಾದ ಮಣವಾಳ ಮಾಮುನಿಗಳು ತಮ್ಮ ಮಾಧ್ಯಾಹ್ನಿಕ ಅನುಷ್ಟಾನಗಳನ್ನು (ಮಧ್ಯಾಹ್ನದಲ್ಲಿ ಮಾಡಬೇಕಾದ ಚಟುವಟಿಕೆಗಳು) ಮತ್ತು ಶ್ರೀ ಅರಂಗನಗರಪ್ಪನಿಗೆ (ಅವರ ತಿರುವಾರಾಧನ ಪ್ಪೆರುಮಾಳ್) ಸರಿಯಾದ ರೀತಿಯಲ್ಲಿ ತಿರುವಾರಾಧನವನ್ನು (ದೈವಿಕ ಪೂಜೆ) ಮಾಡಿದರು. ಅವರು ಪೆರುಮಾಳರ ಗುಣಗಳನ್ನು ಧ್ಯಾನಿಸಿದರು. ನಂತರ, ಆ ಎಂಪೆರುಮಾನನ ದಿವ್ಯ ತುಟಿಗಳ ಸಂಪರ್ಕಕ್ಕೆ ಬಂದ ಆಹಾರದಿಂದ, ಅಮೃತದಂತಹ, ಪರಿಮಳಯುಕ್ತ, ಪವಿತ್ರ, ಮೃದು ಮತ್ತು ಸತ್ವ ಗುಣಗಳು ಮತ್ತು ಮನಸ್ಸಿನ ಶುದ್ಧತೆಗೆ ಕಾರಣವಾದ, ಹೇರಳವಾಗಿದ್ದ ಆ ಭಗವದ್ಪ್ರಸಾದವನ್ನು ಪೆರುಮಾಳ ಅನುಯಾಯಿಗಳಿಗೆ ಅರ್ಪಿಸಿದರು, ಇದರಿಂದ ಅವರು ಭಕ್ತಿ ಬೆಳೆಸಿಕೊಂಡು ಪೆರುಮಾಳರ ಸೇವಕರಾಗುತ್ತಾರೆ. ಅವರೂ ಸಹ ಆ ಪ್ರಸಾದವನ್ನು ಕರುಣಾಮಯವಾಗಿ ಸೇವಿಸುತ್ತಿದ್ದರಿಂದ, ಅವರ ಮೂಲಕ ತನ್ನ ಅಂತರ್ಯಾಮಿ (ಆತ್ಮ) ಆಗಿರುವ ಎಂಪೆರುಮಾನನ್ನು, ತನ್ನ ತಿರುವಾರಾಧನ ಪೆರುಮಾಳರು ಪ್ರಸಾದವನ್ನು ಸೇವಿಸಿದ ನಂತರ ಭೋಕ್ತ (ಆಹಾರವನ್ನು ಆನಂದಿಸುವವನು) ಸೇವಿಸಿದಂತೆ ನಡೆಸಿಕೊಂಡರು . ತೋಂಡರಡಿಪ್ಪೋಡಿ ಆಳ್ವಾರರ ಪಾಶುರವು “ಪೋನಗಂ ಸೆಯ್ದ ಸೇದಂ ತರುವೇಲ್ ಪುನಿಧಮನ್ರೇ” (ಭಾಗವತರಿಗೆ ಅರ್ಪಿಸಿದ ಪ್ರಸಾದದ ಅವಶೇಷಗಳನ್ನು ನೀಡಿದರೆ ಅದು ಪವಿತ್ರವಾಗುತ್ತದೆ) ಎಂದು ಹೇಳುವಂತೆ, ಅಪ್ಪ ಪೆರುಮಾಳರಿಗೆ ಅರ್ಪಿಸಿದ ದೈವಿಕ ಆಹಾರವನ್ನು ಸೇವಿಸಿ ತೃಪ್ತರಾದರು.

ಮೂಲ : https://granthams.koyil.org/2021/08/16/yathindhra-pravana-prabhavam-53-english/

ಅನುವಾದ – ಅಡಿಯೇನ್ ಸುಭದ್ರಾ ರಾಮಾನುಜ ದಾಸಿ

ಆರ್ಕೈವ್ ಮಾಡಲಾಗಿದೆ – https://granthams.koyil.org

ಪ್ರಮೇಯಮ್ (ಗುರಿ) – https://koyil.org
ಪ್ರಮಾಣಮ್ (ಗ್ರಂಥಗಳು) – https://granthams.koyil.org
ಪ್ರಮಾತಾ (ಬೋಧಕರು) – https://acharyas.koyil.org
ಶ್ರೀವೈಷ್ಣವ ಎಜುಕೇಶನ್ / ಮಕ್ಕಳ ಸಾಹಿತ್ಯ – https://pillai.koyil.org

Leave a Comment