ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ
ಏತನ್ಮಧ್ಯೆ, ಎರುಂಬಿಯಪ್ಪಾ , ಅವರು ಅಲ್ಲಿದ್ದ ಸಮಯದಲ್ಲಿ, ಕೆಳಗಿನ ಶ್ಲೋಕಗೆ ಅನುಗುಣವಾಗಿ
ಇತ್ತಂ ದಿನೇ ದಿನೇ ಕುರ್ವನ್ವೃತ್ತಿಮ್ ಪದ್ಯು: ಪ್ರಸಾಧಿನೀಮ್
ಕ್ರುತೀರ್ ಕದಾಪಧಂ ಚಕ್ರೇ ಪ್ರಾಕ್ತನೀಮ್ ತತ್ರ ವರ್ತನೀಮ್
ಇತ್ತಂ ದಿನೇ ದಿನೇ ಕುರ್ವನ್ವೃತ್ತಂ ಭರ್ತು: ಪ್ರಸಾಧಿನೀಮ್
ಕೃತಿ ಕಂಠಾ ಪಧನ್ಜ್ ಚಕ್ರೇ ಪ್ರಾಕ್ತನೀಮ್ ತತ್ರ ವರ್ತನೀಮ್
(ಹೀಗೆ, ತನ್ನ ಸ್ವಾಮಿಯಾದ ಮಣವಾಳ ಮಾಮುನಿಯ ದಿವ್ಯ ಮನಸ್ಸಿಗೆ ಇಷ್ಟವಾಗುವ ಕೈಂಕರ್ಯಗಳನ್ನು ಪ್ರತಿದಿನ ಮಾಡುತ್ತಾ, ಅವರು ದಯಾಪರನಾಗಿ ದಿನಚರ್ಯಯೈ (ಮಣವಾಳ ಮಾಮುನಿಗಳ ದೈನಂದಿನ ಚಟುವಟಿಕೆಗಳನ್ನು ವಿವರಿಸುವ) ವನ್ನು ರಚಿಸಿದರು ಮತ್ತು ಅದರ ಮೂಲಕ ಅಲ್ಲಿರುವ ಪ್ರತಿಯೊಬ್ಬರೂ ಅದನ್ನು ಪ್ರತಿದಿನ ಪಠಿಸುವಂತೆ ಮಾಡಿದರು ಮತ್ತು ರಾಜರು ಪ್ರಯಾಣಿಸುವ ದೊಡ್ಡ ರಸ್ತೆಯಂತೆ ಅದನ್ನು ಪ್ರಸ್ಸಿದ್ದಗೊಳಿಸಿದರು ), ಸನ್ನಿಧಿಯಲ್ಲಿ [ತಿರುಮಲೈಆಳ್ವಾರ್] ಕೈಂಕರ್ಯವನ್ನು ಮಾಡಿದರು. ನಂತರ ಜೀಯರ್, ಅವರನ್ನು ಸಂತೋಷಪಡಿಸಲು ಕೆಳಗಿನ ಶ್ಲೋಕದಲ್ಲಿ ಹೇಳಿದಂತೆ.
ವರವರಮುನೀರ್ ಪಾದಯುಗ್ಮಂ ವರಧಗುರೋ: ಕರಪಲ್ಲವ ಧ್ವಯನೇ
ರಹಸಿ ಸೀರೆಸೀಮೆ ನಿಧೀಯಮಾಣಂ ಮನಸಿನಿಧಾಮ್ಯ ನಿಧಾನವಾನ್ ಭಾವಾಮಿ
(ನಾವು ಒಬ್ಬಂಟಿಯಾಗಿದ್ದಾಗ, ಕಂದಾಡೈ ಅಣ್ಣನ ಕ್ರಿಯೆಯನ್ನು ನೆನಪಿಸಿಕೊಳ್ಳುವ ಮೂಲಕ ನಾನು ನನ್ನ ಪೋಷಣೆಯನ್ನು ಪಡೆಯುತ್ತೇನೆ, ತನ್ನ ಎರಡು ಕೋಮಲ ಕೈಗಳಿಂದ, ಮಣವಾಳ ಮಾಮುನಿಗಳ ದಿವ್ಯ, ಕಮಲದಂತಹ ಪಾದಗಳನ್ನು ನನ್ನ ತಲೆಯ ಮೇಲೆ ಇಟ್ಟುಕೊಂಡು), ಅಣ್ಣನಿಗೆ ತನ್ನ ದಿವ್ಯ ಪಾದಗಳನ್ನು ಅರ್ಪಿಸಿ, “ದಯವಿಟ್ಟು ನಿಮ್ಮ ಸ್ಥಳಕ್ಕೆ ಹೋಗಿ ” ಎಂದು ಹೇಳಿದರು . ಅಪ್ಪ, ತುಂಬಾ ದುಃಖದಿಂದ, ದಯೆಯಿಂದ ಎರುಂಬಿಗೆ ಹೊರಟುಹೋದರು.)
ನಾಯನಾರ್ ಏಳು ಗೋತ್ರಗಳನ್ನು ನಿಯಂತ್ರಿಸುತ್ತಾರೆ
ಅಪ್ಪಾ ಎರುಂಬಿ’ಗೆ ಹೊರಡುವ ಮೊದಲು, ಶ್ರೀರಂಗಂನಲ್ಲಿ ಒಂದು ಘಟನೆ ಸಂಭವಿಸಿದೆ. ಅಪ್ಪಾಗೆ ಸಂಬಂಧಿಸಿರುವ ಮತ್ತು ಕಂದಾಡೈ ಆಂಡಾನ್ ‘ ರ ಸಂಬಂಧಿ ( ಬೀಗರು ) ಕೆಲವು ಜನರು, ಕಂದಾಡೈ ನಾಯನ್ ‘ ಹೆಂಡತಿಯನ್ನು ಆಕೆಯ ಜನ್ಮಸ್ಥಳದಿಂದ ಕಂದಾಡೈ ಆಂಡಾನ್ ಮನೆಗೆ ಕರೆತಂದರು. ಅವರು ಆಕೆಯನ್ನು ಸೂಕ್ತವಲ್ಲದ ವಾಹನದಲ್ಲಿ ಕರೆತಂದಿದ್ದರು. ಅದನ್ನು ನೋಡಿ ಅಪ್ಪ ದುಃಖಿತರಾಗಿ ಜೀಯರ್‌ಗೆ ಮನವಿ ಮಾಡಿಕೊಂಡರು . ಜೀಯರ್ ಕೂಡ ದುಃಖಿತರಾದರು . ಅವನು ಕಂದಾಡೈ ಅಣ್ಣನಿಗೆ ಕರೆ ಮಾಡಿ “ಇದು ಸರಿಯಲ್ಲ.ಅವುಗಳನ್ನು ತ್ಯಜಿಸುವುದು ಸೂಕ್ತ”. ಜೀಯರ್ ಅವರನ್ನು ಕೇಳಿದರು “ನಾವು ಅವರಿಗೆ ಅವರ ಸ್ವರೂಪದ ಬಗ್ಗೆ ಕಲಿಸಲು ಸಾಧ್ಯವಿಲ್ಲವೇ?” ಅಣ್ಣನ್ ಹೇಳಿದರು “ಅವರು ಎಂಬಾರರ ಹತ್ತಿರದ ಸಂಬಂಧಿಗಳು ಮತ್ತು ಗರ್ವಿಷ್ಟ ಜನರು” ನಂತರ ಜೀಯರ್ ಹೇಳಿದರು “ಹಾಗಾದರೆ, ನಾವು ತಲೆಕೆಡಿಸಿಕೊಳ್ಳುವುದಿಲ್ಲ”. ನಂತರ ಜೀಯರ್ ಕಂದಾಡೈ ಆಂಡಾನ್ ಮತ್ತು ಅವರ ಸಂಬಂಧಿಕರನ್ನು ಕರೆದು, ಅವರೆಲ್ಲರೂ ಮುದಲಿಯಾಂಡಾನ ವಂಶಸ್ಥರು, ಇದರ ಬಗ್ಗೆ ವಿಚಾರಿಸಿದರು, ಅವರ ಮೇಲೆ ಕರುಣೆಯನ್ನು ತೋರಿಸಿ ಅವರಿಗೆ ಒಳ್ಳೆಯ ಉದ್ದೇಶದ ಸೂಚನೆಗಳನ್ನು ನೀಡಿದರು. ನಂತರ ಅವರು ಒಂದು ವ್ಯವಸ್ಥೆಯ ಬಗ್ಗೆ ತಿಳಿಸಿದರು. ವಾಧುಳ ಗೋತ್ರ (ಮೂದಲಿ ಆಂಡಾನ್ ಸೇರಿದ ಗೋತ್ರ), ಹಾರೀತ ಗೋತ್ರ (ರಾಮಾನುಜರು ಸೇರಿದ್ದ ಗೋತ್ರ) ಮತ್ತು ಅವರ ವಂಶಸ್ಥರು 7 ಗೋತ್ರಗಳ ಒಳಗೆ ಮಾತ್ರ ಮದುವೆಯಾಗಬೇಕು (ವಾಧುಳ , ಶ್ರೀವತ್ಸ, ಕೌಂಡಿನ್ಯ , ಹಾರೀತ , ಆತ್ರೆಯ, ಕೌಶಿಕ ಮತ್ತು ಭಾರದ್ವಾಜ ). ಅವರು ತಮ್ಮ ನಿಯಮಗಳ ಹಸ್ತಪ್ರತಿಗಳನ್ನು ಮಾಡಿದರು, ತಿರುಮಂಗೈ ಮನ್ನನ್ ತಿರುಮಾಳಿಗೈ (ತಿರುಮಂಗೈ ಆಳ್ವಾರ್ ವಾಸಿಸುತ್ತಿದ್ದ ದೈವಿಕ ನಿವಾಸ) ದಲ್ಲಿ ಒಂದು ಲೋಹದಲ್ಲಿ ಕೇತನೇ ಮಾಡಿದರು ಮತ್ತು ಈ ಗೋತ್ರಗಳಿಗೆ ಸೇರಿದ ಜನರು ವಾಸಿಸುತ್ತಿದ್ದ ಎಲ್ಲಾ ಸ್ಥಳಗಳಿಗೆ ಸಂದೇಶವನ್ನು ಕಳುಹಿಸಿದರು.ಅವರ ಈ ಕಾರ್ಯದಿಂದ ಎರುಂಬಿಯಪ್ಪನನ್ನು ಸಂತೋಷಪಡಿಸಿದರು . ಈ ಸಮಯದಲ್ಲಿ, ಅವರ ದಿವ್ಯ ಪಾದಗಳಿಗೆ ಪ್ರತಿಕೂಲವಾಗಿದ್ದವರು ಮಾತ್ರವಲ್ಲದೆ, ಅವರ ಬಗ್ಗೆ ಕೆಟ್ಟದಾಗಿ ಮಾತನಾಡಿದವರು ದುರದೃಷ್ಟಕ್ಕೆ ಸಿಲುಕಿದರು, ಬಡತನದಲ್ಲಿ ಬಳಲುತ್ತಿದ್ದರು ಮತ್ತು ತಮ್ಮ ಜೀವನವನ್ನು ವ್ಯರ್ಥ ಮಾಡಿಕೊಂಡರು.
ನಂತರ, ಒಂದು ದಿನ, ಜೀಯರ್ ಮತ್ತು ಅವರ ಶಿಷ್ಯರು “ಆಲಿನ್ಮೇಲ್ ಅಮರನ್ಧಾನ್ ಡಿ ಅಡಿಯಿನೈಗಳೇ ” ಎಂಬ ಪಾಶುರವನ್ನು ಚರ್ಚಿಸುತ್ತಿದ್ದರು; “ಆಲ್” ಎಂಬ ಪದವು ಎರಡು ಸ್ಥಳಗಳಲ್ಲಿ ಕಂಡುಬರುತ್ತದೆ. ಒಂದು ಪದವು ಆಲದ ಮರವನ್ನು ಸೂಚಿಸುತ್ತದೆ ಮತ್ತು ಇನ್ನೊಂದು ಪದವು ಕೋಮಲವಾದ ಆಲದ ಎಲೆಯನ್ನು ಸೂಚಿಸುತ್ತದೆ ಎಂದು ಅವರು ಚರ್ಚಿಸುತ್ತಿದ್ದರು. ಜೀಯರ್ ದಯೆಯಿಂದ ಆಲ್ ಎಲೆಯನ್ನು ಉಲ್ಲೇಖಿಸುವುದಿಲ್ಲ ಎಂದು ಹೇಳಿದರು. ಆಗ, ತನ್ನ ಜೀವನದ ತಮಾಷೆಯ ಹಂತದಲ್ಲಿದ್ದ ಮತ್ತು ಮಗುವಿನಂತೆ ಕಾಣುತ್ತಿದ್ದ ಕಂಡಾಡೈ ನಾಯನನು “ಓ ಜೀಯರ್! ಅದು ಆಲಂಗಟ್ಟಿ (ಆಲಿಕಲ್ಲು ಮಳೆ)ಯನ್ನು ಸೂಚಿಸುತ್ತಿಲ್ಲವೇ?” ಎಂದು ಹೇಳಿದರು . ತಕ್ಷಣ, ಜೀಯರ್ ಅವರನ್ನು ಕರೆದು, ತನ್ನ ತೊಡೆಯ ಮೇಲೆ ಹೊತ್ತುಕೊಂಡು, “ನೀವು ಪೂಜಿಸಲ್ಪಡುವ ಕುಲಕ್ಕೆ ಸೇರಿದವನಲ್ಲವೇ?” ಎಂದು ಉದ್ಗರಿಸಿದರು ಮತ್ತು ಅವರನ್ನು ದರ್ಶನ ಪ್ರವರ್ತಕ (ರಾಮಾನುಜರ ತತ್ವಶಾಸ್ತ್ರವನ್ನು ಮುನ್ನಡೆಸುವಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡ) ಆಗುವಂತೆ ಆಶೀರ್ವದಿಸಿದರು .
ಮೂಲ : https://granthams.koyil.org/2021/08/16/yathindhra-pravana-prabhavam-55-english/
ಅನುವಾದ – ಅಡಿಯೇನ್ ಸುಭದ್ರಾ ರಾಮಾನುಜ ದಾಸಿ
ಆರ್ಕೈವ್ ಮಾಡಲಾಗಿದೆ – https://granthams.koyil.org
ಪ್ರಮೇಯಮ್ (ಗುರಿ) – https://koyil.org
ಪ್ರಮಾಣಮ್ (ಗ್ರಂಥಗಳು) – https://granthams.koyil.org
ಪ್ರಮಾತಾ (ಬೋಧಕರು) – https://acharyas.koyil.org
ಶ್ರೀವೈಷ್ಣವ ಎಜುಕೇಶನ್ / ಮಕ್ಕಳ ಸಾಹಿತ್ಯ – https://pillai.koyil.org