ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ
ನಂಪೆರುಮಾಳ್ ಪೆರಿಯ ಜೀಯರ್ ಅವರಿಗೆ ಭಗವತ್ ವಿಷಯದ ಕುರಿತು ಕಾಲಾಕ್ಷೇಪಂ ನಡೆಸಲು ಆದೇಶಿಸುತ್ತಾರೆ
ಶ್ಲೋಕಗಳಿಗೆ ಅನುಗುಣವಾಗಿ
ತಾತ: ಕಧಾಚಿತ್ ಆಹೂಯ ತಮೇನಂ ಮುನಿಪುಂಗವಂ!
ಸತ್ಕ್ರುತಮ್ ಸಾಧುಸತ್ಕ್ರುತ್ಯ ಚರಣಾಬ್ಜ ಸಮರ್ಪಣಾತ್
ಸನ್ನಿತೌ ಮೇನಿಷೀತೀತಿ ಶಶಸಮುರಾಶಸನಃ
ಮಹಾನ್ಪ್ರಸಾಧ ಇತ್ಯಸ್ಯ ಶಾಸನಂ ಶಿರಸಾವಹನ್
ತದೈವತ್ರ ವ್ಯಾಖ್ಯಾತುಂ ತತ್ಕ್ಷಣಾತ್ ಉಪಚಕ್ರಮೇ
ಶ್ರೀಮತಿ ಶ್ರೀಪತಿಸ್ಸ್ವಾಮಿ ಮಂಟಪೇ ಮಹತಿಸ್ವಯಂ
ತದ್ವಂಥಸ್ಯ ಪ್ರಬಂಧಸ್ಯ ವ್ಯಕ್ತಹಂತೇನೈವ ಧರ್ಶಿನಂ
ಶಟವೈರಿಮುಖೈ: ಶ್ರುಣ್ವನ್ ದೇಸಿಕೈರ್ಧಿವ್ಯಾಧರ್ಶನೈ:
ಅತ ಧಿವ್ಯಮುನೆಸ್ತಸ್ಯ ಮಹಿಮಾನಂ ಅಮಾನುಷಮ್
ಅನುಭುಯೇಮಮಾಪಾಲ ಗೋಪಾಲಂ ಅಖಿಲೋ ಜನ:
ಅಮನ್ಯಥಾ ಪರಂಧಾನ್ಯಮ್ ಆತ್ಮಾನಂ ತತ್ರ ನಿಕ್ಷಿಪನ್
(ಸ್ವಲ್ಪ ಸಮಯದ ನಂತರ, ನಿತ್ಯಸೂರಿಗಳ ನಿಯಂತ್ರಕರಾದ ಪೆರುಮಾಳರು, ಮಣವಾಲ ಮಾಮುನಿಗಳು ಎಂದು ಕರೆದರು, ಅವರು ಒಬ್ಬ ಮುನಿವರ್ ಪೆರುಮಾನ್ (ತಪಸ್ವಿಗಳ ನಾಯಕ), ಅವರಿಗೆ ತಮ್ಮ ಶ್ರೀಶಟಕೋಪ (ಅವರ ದಿವ್ಯ ಪಾದಗಳನ್ನು ಪ್ರತಿನಿಧಿಸುವ) ನೀಡಿ ಗೌರವಿಸಿದರು ಮತ್ತು “ನಮ್ಮ ಸನ್ನಿಧಿಯಲ್ಲಿ ತಿರುವಾಯ್ಮೋಳಿ ಎಂಬ ಅರ್ಥಗಳನ್ನು ತಿಳಿಯಲು ಕಷ್ಟಕರವಾದ ಉಪನ್ಯಾಸವನ್ನು (ಬೋಧನೆ) ಪ್ರಾರಂಭಿಸಿ” ಎಂದು ಆದೇಶಿಸಿದರು. ಮಾಮುನಿಗಳು ಆ ಆದೇಶವನ್ನು ಒಂದು ಮಹಾನ್ ಅನುಗ್ರಹವೆಂದು (ಅನುಗ್ರಹ) ಪರಿಗಣಿಸಿ ಅದನ್ನು ತಮ್ಮ ತಲೆಯ ಮೇಲೆ ಹೊತ್ತುಕೊಂಡರು. ಆ ಕ್ಷಣದಲ್ಲೇ ಅವರು ಉಪನ್ಯಾಸವನ್ನು ನೀಡಲು ಪ್ರಾರಂಭಿಸಿದರು. ಶ್ರೀ:ಪತಿ (ಶ್ರೀ ಮಹಾಲಕ್ಷ್ಮಿಯ ದೈವಿಕ ಪತ್ನಿ) ಆಗಿರುವ ಶ್ರೀ ರಂಗನಾಥರು ಸುಂದರವಾದ ಪೆರಿಯ ತಿರುಮಂಟಪಂ (ದೈವಿಕ, ದೊಡ್ಡ ಸಭಾಂಗಣ) ದಲ್ಲಿ ದಯೆಯಿಂದ ಕುಳಿತು, ನಮ್ಮಾಳ್ವಾರ್ ಮುಂತಾದ ಆಚಾರ್ಯರೊಂದಿಗೆ ದೈವಿಕ ಜ್ಞಾನದಿಂದ ಆಶೀರ್ವದಿಸಲ್ಪಟ್ಟರು ಮತ್ತು ಮಣವಾಲ ಮಾಮುನಿ ನೀಡಿದ ಆ ತಿರುವಾಯ್ಮೋಳಿಯ ಸತ್ಯವಾದ ಅರ್ಥಗಳನ್ನು ಸಂತೋಷದಿಂದ ಆಲಿಸಿದರು. ತರುವಾಯ, ಮಕ್ಕಳು, ಮಂದೆಗಳು-ಜನರು ಮುಂತಾದ ಸಾಮಾನ್ಯ ಜನರು ಆ ಮಣವಾಳ ಮಾಮುನಿಯ ಆ ಅತಿಮಾನುಷ ಮಹಿಮೆಯನ್ನು ಕೇಳಿ ಆನಂದಿಸಿದರು ಮತ್ತು ತಮ್ಮನ್ನು ತಾವು ಅವನಿಗೆ ಸಲ್ಲಿಸಿಕೊಂಡರು. (ಸಂಸ್ಕೃತ) ಸಂವತ್ಸರದ ಪರಿತಾಪಿಯಲ್ಲಿ ತಿರುಪ್ಪವಿತ್ರಂ (ಪವಿತ್ರೋತ್ಸವ, ಶುದ್ಧೀಕರಣ ವಿಧಿಗಳನ್ನು ನಡೆಸುವ ಪವಿತ್ರ ದಿನ) ಶ್ಲೋಕಕ್ಕೆ ಅನುಗುಣವಾಗಿ ಅವರು ತಮ್ಮನ್ನು ತಾವು ಪರಮ ಅದೃಷ್ಟಶಾಲಿಗಳೆಂದು ಪರಿಗಣಿಸಿದರು.
ಕೃಪಯಾ ಪರಯಾ ಸರಂಗರಾತ್ ಮಹಿಮಾನಂ ಮಹತಾಂ ಪ್ರಕಾಶಯನ್
ಗುರುಚೇಸ್ವಯಮೇವ ಚೇತಸಾ ವರಯೋಗಿ ಪ್ರವರಸಸ್ಯ ಶಿಷ್ಯತಾಂ
(ತಪಸ್ವಿಗಳಲ್ಲಿ ಶ್ರೇಷ್ಠರಾದ ಆ ಮಣವಾಳ ಮಾಮುನಿಗಳ ಶ್ರೇಷ್ಠತೆಯನ್ನು ಪ್ರದರ್ಶಿಸಲು, ಆ ಶ್ರೀರಂಗರಾಜರು ತಮ್ಮ ಶ್ರೇಷ್ಠ ಕರುಣೆಯಿಂದ ತಮ್ಮ ದಿವ್ಯ ಮನಸ್ಸಿನಿಂದ ತಮ್ಮ [ಮಾಮುನಿಗಳ] ಶಿಷ್ಯರಾಗಲು ಬಯಸಿದ್ದರು). ಶ್ರೀರಂಗದ ಅಧಿಪತಿಯಾದ ಪೆರುಮಾಳರು, ತಮ್ಮ ಪರಮ ಕರುಣೆಯಿಂದ, ಶ್ರೇಷ್ಠ ಜನರಿಗೆ ಜೀಯರ್ನ ಶ್ರೇಷ್ಠತೆಯನ್ನು ಬೆಳಗಿಸಲು, ಆ ಶ್ರೇಷ್ಠ ಜೀಯರ್ನ ಶಿಷ್ಯರಾಗಲು ಬಯಸಿದರು. ಇದು ಪೆರುಮಾಳ್ ಬಯಸಿದಂತೆಯೇ, [ಅವರು ಶ್ರೀರಾಮನಾಗಿ ಅವತರಿಸಿದಾಗ] “ಪಿತರಂ ರೋಚಯಾಮಾಸ ತಾತ ಧಾಶರಥಂ ನೃಪಂ” ನಲ್ಲಿ ಹೇಳಿರುವಂತೆ (ಧಶರತ) ಚಕ್ರವರ್ತಿಯು ತನ್ನ ತಂದೆಯಾಗಬೇಕು. ಈ ಕೆಳಗಿನ ಶ್ಲೋಕದಲ್ಲಿ ಉಲ್ಲೇಖಿಸಿರುವಂತೆ, ನಂಪೆರುಮಾಳರು ದಯೆಯಿಂದ ಎಲ್ಲಾ ಜನರೊಂದಿಗೆ ಗರುಡ ಮಂಟಪಕ್ಕೆ ಹೋದರು.
ಶ್ರೋತುಂ ದ್ರಾವಿಡವೇಧಪೂರಿ ವಿವೃತಂ ಸೌಂಯೋಪೆಯಂತೃಮೂನೆ
ರುಥ್ಕಟಂತಸ್ಥಿಮಮೈನ ಮಾನಯಥಾಧಸ್ತಾರ್ಕ್ಷ್ಯಾಶ್ರಯಂ ಮಂಟಪಂ
ಆವಿ ರ್ಯಾಚಕಮುಚಿ ವಾಣಿಧಿಮುಥಾ ನಿಶ್ವೋಶಲೋಕಾನ್ವಿತೋ
ರಂಗೀವತ್ಸರಮೇಕಮೇವಂ ಅಶ್ರುಣೋತ್ ವ್ಯಕ್ತಮ್ ಯಥೋಕ್ತಮ್ ಕ್ರಮಾತ್
(ಶ್ರೀ ರಂಗನಾಥನು ದಯಾಳುವಾಗಿ ಅರ್ಚಕರ ಮೂಲಕ ‘ನಾನು ಮಣವಾಳ ಮಾಮುನಿಗಳ ಮೂಲಕ ತಿರುವಾಯ್ಮೋಳಿ, ದ್ರಾವಿಡ ವೇದದ ವ್ಯಾಖ್ಯಾನವಾದ ಈಡುವನ್ನು ಕೇಳಲು ಬಯಸುತ್ತೇನೆ. ಅವರನ್ನು ಗರುಡ ಮಂಟಪಕ್ಕೆ ಕರೆದುಕೊಂಡು ಬನ್ನಿ’ ಎಂದು ಆಜ್ಞಾಪಿಸಿದರು .) ನಂತರ, ಆ ಎಂಪೆರುಮಾನ್, ಇತರರ ಜೊತೆ ಸೇರಿ, ಒಂದು ವರ್ಷ ಆ ಮುನಿವರ್ ನೀಡಿದ ಆ ಉಪನ್ಯಾಸವನ್ನು ಸ್ಪಷ್ಟವಾಗಿ ಆಲಿಸಿದರು) ಮತ್ತು ಜೀಯರ್ ದಯೆಯಿಂದ ಉಪನ್ಯಾಸ ನೀಡಿದ ಕ್ರಮದಲ್ಲಿ ದಯೆಯಿಂದ ಆಲಿಸಿದರು. ಉಪನ್ಯಾಸ ಹೇಗೆ ನೀಡಲಾಯಿತು?
ಮಂಗಳಾಯತಾನೇರಂಗೆ ರಮ್ಯಜಾಮಾತೃಯೋಗಿರಾತ್
ಯುಗಪದ್ದ್ರಾವಿಡಾಮ್ನಾಯ ಸರ್ವ ವ್ಯಾಖ್ಯಾನ ಕೌತುಕೀ
(ಸಕಲ ಶುಭಗಳ ಭಂಡಾರವಾದ ಶ್ರೀರಂಗದಲ್ಲಿ, ಮಣವಾಳ ಮಾಮುನಿಗಳು ಎಲ್ಲಾ ವ್ಯಾಖ್ಯಾನಗಳಿಂದ ಏಕಕಾಲದಲ್ಲಿ ತಿರುವಾಯ್ಮೋಳಿಗಾಗಿ ಉಪನ್ಯಾಸವನ್ನು ತಲುಪಿಸಲು ಬಯಸಿದ್ದರು).
ದೇಶಾಂತರಗತೋವಾಪಿ ಧ್ವೀಪಾಂತರಗತೋಪಿವಾ
ಶ್ರೀರಂಗಾಪೀಮುಖೋಭುತ್ವಾ ಪ್ರಣಿಪತ್ಯ ನಸೀಧಾತಿ
(ಒಬ್ಬ ವ್ಯಕ್ತಿಯು ಬೇರೆ ದೇಶದಲ್ಲಿರಲಿ ಅಥವಾ ದ್ವೀಪದಲ್ಲಿರಲಿ, ಶ್ರೀರಂಗದ ದಿಕ್ಕಿನಲ್ಲಿ ನಮಸ್ಕರಿಸಿದರೆ, ಅವನಿಗೆ ಯಾವುದೇ ದುಃಖವಾಗುವುದಿಲ್ಲ).
ಉಲ್ಲೇಖಿಸಿದ ಶ್ಲೋಕಗಳಲ್ಲಿ ಹೇಳಿರುವಂತೆ, ಅಳಗಿಯ ಮಣವಾಳ ಮಾಮುನಿಗಳು ತಿರುವಾಯ್ಮೋಳಿಗೆ ಉಪನ್ಯಾಸವನ್ನು ನೀಡಲು ಸಿದ್ಧರಾಗಿದ್ದರು, ಇದನ್ನು ದ್ರಾವಿಡ ವೇದಂ ಎಂದು ಪರಿಗಣಿಸಲಾಗಿದೆ, ಇದನ್ನು ಆರಾಯಿರಪ್ಪಡಿ, ಓನ್ಬದಿನಿಯಾರಪ್ಪಡಿ , ಪನ್ನಿರಾಯಿರಪ್ಪಡಿ , ಇರುಬತ್ತುನಾಲಾಯಿರಪ್ಪಡಿ ಮತ್ತು ಮುಪ್ಪತ್ತಾರಾಯಿರ ಪ್ಪಡಿ (ಈ ಐದು ವ್ಯಾಖ್ಯಾನಗಳನ್ನು ಬರೆದವರು -ತಿರುಕ್ಕುರುಗೈಪ್ಪಿರನ್ ಪಿಳ್ಳನ್, ನಂಜಿಯರ್, ಅಳಗಿಯ ಮಣವಾಳಾಚ್ಚಿಯಾರ್ (ಪೆರಿಯವಾಚ್ಚನ್ ಪಿಳ್ಳೈ ಅವರ ಶಿಷ್ಯ), ಪೆರಿಯವಾಚ್ಚನ್ ಪಿಳ್ಳೈ ಮತ್ತು ನಂಪಿಳ್ಳೈ( ವಡಕ್ಕು ತಿರುವೀಧಿ ಪಿಳ್ಳೈ ) ಅವರೊಂದಿಗೆ ಕ್ರಮವಾಗಿ ಜೊತೆಗೆ ಬರೆದ ಅಂಗಂಗಳು (ಅನುಬಂಧಗಳು) ಮತ್ತು ಉಪ ಅಂಗಗಳು (ಉಪ-ಅನುಬಂಧಗಳು) ಇತರ ಅರುಳಿಚ್ಚೆಯಲ್ಗಳು ವ್ಯಖ್ಯಾನಗಳು. ಪೆರುಮಾಳರು ದಯಾಳುಗಳಾಗಿ ಸಿದ್ಧರಾಗಿದ್ದರು, ತಿರುಪ್ಪವಿತ್ರೋತ್ಸವವನ್ನು (ದೇವಾಲಯ ಮತ್ತು ಅದರ ಆವರಣವನ್ನು ಶುದ್ಧೀಕರಿಸಲು ಪ್ರತಿ ವರ್ಷಕ್ಕೊಮ್ಮೆ ನಡೆಯುವ ಹಬ್ಬ) ನೆಪವಾಗಿ ಇಟ್ಟುಕೊಂಡಿದ್ದರು. ಪೆರುಮಾಳರು ದಯೆಯಿಂದ ತಿರುಪ್ಪವಿತ್ರೋತ್ಸವ ಮಂಟಪವನ್ನು ಪ್ರವೇಶಿಸಿದರು ಮತ್ತು ಅನಿಯರಂಗನ್ ತಿರುಮುಟ್ರತ್ತಡಿಯಾರ್ (ಅಲಂಕಾರಿಕ ಶ್ರೀರಂಗನಾಥನ ದೈವಿಕ ಅಂಗಳದ ಅನುಯಾಯಿಗಳು) – ಆಚಾರ್ಯ ಪುರುಷರು, ಜೀಯರ್ಗಳು, ಶ್ರೀವೈಷ್ಣವರು, ಎಲ್ಲಾ ಹತ್ತು ವಿಭಾಗಗಳ ನೌಕರರು (ದೇವಾಲಯವನ್ನು ಅದರ ಎಲ್ಲಾ ವೈಭವದಿಂದ ನೋಡಿಕೊಳ್ಳಲು ನಿಯೋಜಿಸಲಾಗಿದೆ) – ಮಹಾ ಸಭೆಯ ನಡುವೆ ಇದ್ದರು. ಜೀಯರ್ (ಮಣವಾಳ ಮಾಮುನಿಗಳು), ತಮ್ಮ ಶಿಷ್ಯರೊಂದಿಗೆ, ಪೆರುಮಾಳರಿಗೆ ಭಕ್ತಿಯಿಂದ ಮಂಗಳಾಶಾಸನವನ್ನು ಮಾಡಿದರು. ಪೆರುಮಾಳರು ವಿಶಿಷ್ಟ ರೀತಿಯಲ್ಲಿ ಜೀಯರ್ ಅವರಿಗೆ ಶ್ರೀ ಶಟಕೋಪನ್ (ಅವರ ದೈವಿಕ ಪಾದಗಳನ್ನು ಪ್ರತಿನಿಧಿಸುವ) ಅರ್ಪಿಸುವ ಮೂಲಕ ತಮ್ಮ ಗೌರವವನ್ನು ಸಲ್ಲಿಸಿದರು ಮತ್ತು “ನಾಳೆಯಿಂದ, ನಮ್ಮ ಪೆರಿಯವನ್ಕೂರ್ ನಂಬಿ (ಉದಾತ್ತ ಕುರುಗೂರ್ನಿಂದ ಬಂದ ಸಂಪೂರ್ಣ ಅಸ್ತಿತ್ವ, ನಮ್ಮಾಳ್ವಾರ್) ರಚಿಸಿದ ತಿರುವಾಯ್ಮೋಳಿ ಎಂಬ ಪದದ ಅರ್ಥವನ್ನು ನಮ್ಮ ಪೆರಿಯ ತಿರುಮಂಟಪದಲ್ಲಿ ಈಡು ಮುಪತ್ತಾರಾಯಿರಪಡ್ಡಿ ಮೂಲಕ ತಿಳಿಸಿ” ಎಂದು ಹೇಳಿದರು. ಮಣವಾಳ ಮಾಮುನಿಗಳು ಸಂತೋಷಗೊಂಡು, “ಇದು ಎಂತಹ ಕೃಪೆ!” ಎಂದು ಹೇಳಿದರು. ಅವರು ಪಾಸುರವನ್ನು ರಚಿಸಿದರು.
ನಾಮಾರ್ ? ಪೆರಿಯಂತಿರುಮಂಡಪಮಾರ್? ನಂಪೆರುಮಾಳ್
ತಾಮಾಗ ನಮೈತ್ತನಿತ್ತழைತ್ತು – ನೀ ಮಾರನ್
ಸೆನ್ತಮಿழ் ವೇಧತ್ತೀನ್ ಸೆழுಮ್ ಪೋರುಲೈ ನಾಳುಮ್ ಇಂಗೇ
ವಂದುರೈ ಎನ್ರೇವುವದೇ ವಾಯ್ನ್ದು
(ನಾವು ಯಾರು? ತಿರುಮಂಟಪಂ ಎಂದರೇನು? ನಂಪೆರುಮಾಳ್ ಸ್ವತಃ ನಮ್ಮನ್ನು ಪ್ರತ್ಯೇಕವಾಗಿ ಕರೆದು “ಪ್ರತಿದಿನ, ನೀವು ಮಾರನ್ (ನಮ್ಮಾಳ್ವಾರ್) ರಚಿಸಿದ ಶುದ್ಧ ತಮಿಳು ವೇದದ ಅರ್ಥಗಳನ್ನು ತಿಳಿಸುತ್ತೀರಿ” ಎಂದು ಆದೇಶಿಸಿದ್ದಾರೆ. ಇದು ಎಷ್ಟು ಅದ್ಭುತವಾಗಿದೆ!
ಮರುದಿನವೇ, ಶ್ರೀರಾಮನು ಎಲ್ಲಾ ರಾಜರು ಮತ್ತು ಕವಿಗಳನ್ನು ಶ್ರೀರಾಮಾಯಣವನ್ನು ಕೇಳಲು ತನ್ನ ಆಸ್ಥಾನಕ್ಕೆ ಬರುವಂತೆ ಮಾಡಿದಂತೆ, ಸಂಗೀತ ತಂಡವು ಸಂಗೀತವನ್ನು ಕೇಳಲು ಪೋಷಿಸಲ್ಪಟ್ಟಂತೆ, ನಂಪೆರುಮಾಳರು ತಮ್ಮ ನಾಚ್ಚಿಮಾರ್ಗಳೊಂದಿಗೆ (ಶ್ರೀದೇವಿ ಮತ್ತು ಭೂದೇವಿ) ತಮ್ಮ ದಿವ್ಯಸಿಂಹಾಸನದಲ್ಲಿ (ದೈವಿಕ ಸಿಂಹಾಸನ) ಸಿದ್ಧರಾಗಿದ್ದರು. ಅವರ ಸಭೆಯಲ್ಲಿ ದಿವ್ಯಸೂರಿಗಳಾದ ತಿರುವನಂತಾಳ್ವಾನ್ (ಆಧಿಶೇಷನ್), ಪೆರಿಯ ತಿರುವಡಿ (ಗರುಡ), ಸೇನಪತಿಯಾಳ್ವಾನ್ (ವಿಶ್ವಕ್ಸೇನರ್ ) ಮತ್ತು ಇತರರು, ನಮ್ಮಾಳ್ವಾರರಿಂದ ಆರಂಭವಾದ ಆಳ್ವಾರರು, ನಾಥಮುನಿ, ಆಚಾರ್ಯರು ಮುಂತಾದವರು ಇದ್ದರು. ರಂಗನಾರಾಯಣ ಜೀಯರ್, ತಿರುಮಾಲೈ ತಾಂಡ ಭಟ್ಟರು ಮತ್ತು ಇತರರು (ಸ್ಥಳಪುರುಷರು), ಅನಿಯರಂಗನ್ ತಿರುಮುಟ್ರ೦ (ಸುಂದರವಾದ ಶ್ರೀರಂಗದ ದಿವ್ಯ ಪ್ರಾಂಗಣ) ಭಕ್ತರ ಮಹಾ ಸಭೆ ಮಣವಾಳ ಮಾಮುನಿಗಳು ವ್ಯಾಖ್ಯನಗಳನ್ನು ಪ್ರಾರಂಭಿಸಿದರು, ಈಡು ವಿನಿಂದ ಪ್ರಾರಂಭಿಸಿ, ವಿವಿಧ ಸ್ಥಳಗಳಲ್ಲಿ ಉಲ್ಲೇಖಿಸಿ, ಶ್ರುತಿ ಪ್ರಕ್ರಿಯಾ (ವೇದದಲ್ಲಿ ಬರೆದಂತೆ / ನೋಡಿದಂತೆ), ಶ್ರೀಭಾಷ್ಯ ಪ್ರಕ್ರಿಯಾ (ರಾಮಾನೂಜರು ರಚಿಸಿದ ಶ್ರೀಭಾಷ್ಯದಲ್ಲಿ ಬರೆದಂತೆ), ಶ್ರುತಪ್ರಕಾಶಿಕಪ್ರಕ್ರಿಯಾ (ಶ್ರುತಪ್ರಕಾಶಿಕಾದಲ್ಲಿ ನೋಡಿದಂತೆ, ದಿವ್ಯಸೂರಿ ಭಟ್ಟರು ಶ್ರೀಭಾಷ್ಯಮ್ಗೆ ಬರೆದ ವ್ಯಾಖ್ಯಾನ), ಗೀತಾಭಾಷ್ಯ ಪ್ರಕ್ರಿಯಾ (ಭಗವತ್ಗೀತೆಗೆ ವ್ಯಾಖ್ಯಾನವಾಗಿ ರಾಮಾನುಜರಿಂದ ಬರೆಯಲ್ಪಟ್ಟಿದೆ), ಶ್ರೀ ಪಾಂಚರಾತ್ರ ಪ್ರಕ್ರಿಯಾ , ಶ್ರೀ ರಾಮಾಯಣ ಪ್ರಕ್ರಿಯಾ , ಮಹಾಭಾರತ ಪ್ರಕ್ರಿಯಾ , ಶ್ರೀ ವಿಷ್ಣು ಪುರಾಣಂ , ಮಹಾಭಗವತ ಪ್ರಕ್ರಿಯಾ; ಅವರು ಇದು ಪದಪದಾರ್ಥ (ಪ್ರತಿಯೊಂದು ಪದ/ಶ್ಲೋಕದ ಅರ್ಥ), ಇದು ವಾಕ್ಯಾರ್ಥ (ವಾಕ್ಯದ ಅರ್ಥ), ಇದು ಮಹಾವಾಕ್ಯಾರ್ಥ (ವಾಕ್ಯಗಳ ಗುಂಪಿನ ಅರ್ಥ) ಎಂದು ಹೇಳುತ್ತಿದ್ದರು. ಇದು ಸಮಭಿವ್ಯಾಹಾರಾರ್ಥಂ (ಇತರ ಅರ್ಥಗಳೊಂದಿಗೆ ಸಂಯೋಜಿಸುವುದು), ಇದು ಧ್ವನಿಯಾರ್ಥಂ (ಒಂದು ನಿರ್ದಿಷ್ಟ ಶಬ್ದದ ಅರ್ಥ), ಇದು ವ್ಯಂಗ್ಯಾರ್ಥಂ (ಸೂಚ್ಯ ಅರ್ಥ), ಇದು ಶಬ್ದರಸಂ (ಶ್ಲೋಕದಲ್ಲಿ ಬಳಸಲಾದ ಶಬ್ದದ ಆಕರ್ಷಣೆ), ಇದು ಅರ್ಥರಸಂ (ಅರ್ಥದಲ್ಲಿನ ಆಕರ್ಷಣೆ), ಇದು ಭಾವರಸಂ (ಶ್ಲೋಕದ ಹಿಂದಿನ ಭಾವನೆಯಲ್ಲಿ ಆಕರ್ಷಣೆ), ಇದು ಒನ್ ಪೋರುಲ್ (ಅರ್ಥದ ಶ್ರೇಷ್ಠತೆ), ಇದು ಉಟ್ಪೋರುಲ್ (ಆಂತರಿಕ ಅರ್ಥ) ಇತ್ಯಾದಿ. ಶ್ರೀ ರಂಗನಾಥನು ಈ ರೀತಿ ಒಂದು ವರ್ಷದ ಕಾಲ ಮಣವಾಳ ಮಾಮುನಿಗಳ ಸ್ಪಷ್ಟ ನಿರೂಪಣೆಯನ್ನು ಕೇಳಿದನು. ಕೊನೆಗೆ, ಉಪನ್ಯಾಸವು ಅದರ ಸಾಟ್ರುಮುರೈ (ಅಂತ್ಯ)ವನ್ನು ತಲುಪಿತು.
ಮೂಲ : https://granthams.koyil.org/2021/09/30/yathindhra-pravana-prabhavam-74-english/
ಅನುವಾದ – ಅಡಿಯೇನ್ ಸುಭದ್ರಾ ರಾಮಾನುಜ ದಾಸಿ
ಆರ್ಕೈವ್ ಮಾಡಲಾಗಿದೆ – https://granthams.koyil.org
ಪ್ರಮೇಯಂ (ಗುರಿ) – https://koyil.org
ಪ್ರಮಾಣ೦ (ಗ್ರಂಥಗಳು) – https://granthams.koyil.org
ಪ್ರಮಾತಾ (ಬೋಧಕರು) – https://acharyas.koyil.org
ಶ್ರೀವೈಷ್ಣವ ಎಜುಕೇಶನ್ / ಮಕ್ಕಳ ಸಾಹಿತ್ಯ – https://pillai.koyil.org