ಯತೀಂದ್ರ ಪ್ರವಣ ಪ್ರಭಾವಂ

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ

srisailesa-thanian

ಪೆರಿಯ ಪೆರುಮಾಳ್‌ನಿಂದ ಪ್ರಾರಂಭವಾಗುವ ಆಚಾರ್ಯರ ವಂಶದಲ್ಲಿ ಮನವಾಳ ಮಾಮುನಿಗಳನ್ನು ಕೊನೆಯ ಆಚಾರ್ಯರೆಂದು ಪರಿಗಣಿಸಲಾಗಿದೆ. ಅವರ ಆಚಾರ್ಯರಾದ ತಿರುವಾಯ್ಮೊಳಿ ಪಿಳ್ಳೈ ಬಯಸಿದಂತೆ , ಅವರಿಂದ ಶಾಸ್ತ್ರಗಳನ್ನು ಮತ್ತು ಪ್ರಬಂಧಗಳನ್ನು ಕಲಿಯುತ್ತಾ ಶ್ರೀರಂಗದಲ್ಲಿ ನೆಲೆಸಿದ್ದರು. ಪೆರಿಯ ಪೆರುಮಾಳ್ ಅವರು ತಮ್ಮ ಮೂಲಕ ಈಡು ಕಾಲಕ್ಷೇಪಂ ( ನಂಪಿಳ್ಳೈ ಅವರ ಪ್ರವಚನಗಳನ್ನು ಆಧರಿಸಿ ವಡಕ್ಕು ತಿರುವೀದಿ ಪಿಳ್ಳೈ ಅವರಿಂದ ಸಂಕಲಿಸಲಾದ ತಿರುವಾಯ್ಮೊಳಿ ಪ್ರವಚನ) ಕೇಳಲು ಬಯಸಿದರು ಮತ್ತು ಅವರ ಬಯಕೆಯನ್ನು ಈಡೇರಿಸಿಕೊಳ್ಳಲು ಶ್ರೀರಂಗದಲ್ಲಿ ಒಂದು ವರ್ಷ ಎಲ್ಲಾ ಉತ್ಸವಗಳನ್ನು ನಡೆಸಿದರು. ಕಾಲಕ್ಷೇಪದ ಕೊನೆಯಲ್ಲಿ, ಅವರು ದೇವಸ್ಥಾನದ ಭಟ್ಟರ ಮಗನ ರೂಪವನ್ನು ಧರಿಸಿ, ಮಾಮುನಿಗಳನ್ನು ತಮ್ಮ ಆಚಾರ್ಯರೆಂದು ಗುರುತಿಸಿ, ಮನವಾಳ ಮಾಮುನಿಗಳ ಗೌರವಾರ್ಥವಾಗಿ ಒಂದು ತಣಿಯನ್ (ವಿಶೇಷ ಸ್ತೋತ್ರ) ಪಠಿಸಿದರು. ಮನವಾಳ ಮಾಮುನಿಗಳ ಮಹಿಮೆಯನ್ನು ಪಿಳ್ಳೈ ಲೋಕಂ ಜೀಯರ್ ಅವರು 16 ನೇ ಶತಮಾನದ ನಂತರದ ಭಾಗದಲ್ಲಿ ಯತೀಂದ್ರ ಪ್ರಣವ ಪ್ರಭಾವಂ ಎಂಬ ಶೀರ್ಷಿಕೆಯೊಂದಿಗೆ ಬರೆದಿದ್ದಾರೆ. ಯತೀಂದ್ರ ಎಂಬ ಪದವು ಭಗವದ್ ರಾಮಾನುಜರನ್ನು ಸೂಚಿಸುತ್ತದೆ, ಇವರನ್ನು ತಪಸ್ವಿಗಳ ನಾಯಕ ಎಂದು ಪರಿಗಣಿಸಲಾಗಿದೆ. ಭಗವದ್ ರಾಮಾನುಜರ ಪುನರ್ಜನ್ಮವೆಂದು ಪರಿಗಣಿಸಲ್ಪಟ್ಟ ಮನವಾಳ ಮಾಮುನಿಗಳು ರಾಮಾನುಜರ ಬಗ್ಗೆ ಆಳವಾದ ಪ್ರೀತಿಯನ್ನು ಹೊಂದಿದ್ದರು. ಪಿಳ್ಳೈ ಲೋಕಂ ಜೀಯರ್ ಅವರು ತಮ್ಮ ಕೃತಿಯಲ್ಲಿ ಅಂತಹ ಮನವಾಳ ಮಾಮುನಿಗಳ ಮಹಿಮೆಗಳ ಬಗ್ಗೆ ಬರೆದಿದ್ದಾರೆ. ಮುಂದಿನ ದಿನಗಳಲ್ಲಿ ಅವರ ಬರವಣಿಗೆಯ ಅಮೃತ ಗುಣವನ್ನು ಮತ್ತು ಆ ಮೂಲಕ ಪೊಯಿಲ್ಲಾದ (ಸುಳ್ಳು ಹೇಳಿಕೆಯನ್ನು ನೀಡದ) ಮನವಾಳ ಮಾಮುನಿಗಳ ಮಹಿಮೆಯನ್ನು ಅನುಭವಿಸಲಿದ್ದೇವೆ.

ಅಡಿಯೇನ್ ಸುಭದ್ರಾ ರಾಮಾನುಜ ದಾಸಿ

ಮೂಲ : https://granthams.koyil.org/yathindhra-pravana-prabhavam-english/

ಆರ್ಕೈವ್ ಮಾಡಲಾಗಿದೆ – https://granthams.koyil.org

ಪ್ರಮೇಯಮ್ (ಗುರಿ) – https://koyil.org
ಪ್ರಮಾಣಮ್ (ಗ್ರಂಥಗಳು) – https://granthams.koyil.org
ಪ್ರಮಾತಾ (ಬೋಧಕರು) – https://acharyas.koyil.org
ಶ್ರೀವೈಷ್ಣವ ಎಜುಕೇಶನ್ / ಮಕ್ಕಳ ಸಾಹಿತ್ಯ – https://pillai.koyil.org

Leave a Comment