ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೨೧

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ

ಪೂರ್ಣ ಸರಣಿ

<< ಹಿಂದಿನ ಲೇಖನವನ್ನು

ತಿರುಮಲೈ ಆಳ್ವಾರ್ ಮತ್ತು ವಿಲಾಂಜೋಲೈ ಪಿಳ್ಳೈ

ತಿರುಮಲೈ ಆಳ್ವಾರರು ತಾವು ತಿರುವನಂತಪುರಕ್ಕೆ ಹೋಗಬೇಕು, ವಿಲಾಂಜೋಲೈ ಪಿಳ್ಳೈ ಅವರಿಗೆ ನಮಸ್ಕಾರಗಳನ್ನು ಸಲ್ಲಿಸಬೇಕು ಮತ್ತು ಅವರಿಂದ ಸಂಪ್ರದಾಯದ ಎಲ್ಲಾ ನಿಗೂಢ ಅರ್ಥಗಳನ್ನು ಕಲಿಯಬೇಕೆಂದು ತಮ್ಮ ಮನಸ್ಸಿನಲ್ಲಿ ನಿರ್ಧರಿಸಿದರು. ಆಳ್ವಾರರ ಪ್ರಧಾನ ಶಿಷ್ಯರಲ್ಲಿ ಒಬ್ಬರು ಎಂಬ ಹೆಮ್ಮೆಯನ್ನು ವ್ಯಕ್ತಪಡಿಸುತ್ತಾ, ಅವರು ದೇವಾಲಯದ ಒಳಗೆ ಹೋದರು, ತಿರುವನಂತಾಳ್ವಾನ್ (ಆಧಿಶೇಷನ) ಹಾಸಿಗೆಯ ಮೇಲೆ ಮಲಗಿದ್ದ ಎಂಪೆರುಮಾನ್ ಅವರ ದಿವ್ಯ ಪಾದಗಳನ್ನು ನಮಸ್ಕರಿಸಿದರು. ನಂತರ ಅವರು ವಿಲಾಂಜೋಲೈ ಪಿಳ್ಳೈ ಅವರ ದೈವಿಕ ಪಾದಗಳನ್ನು ಪೂಜಿಸಲು ಹೊರಟರು. “ನಾರಾಯಣನ್ [ವಿಲಾಂಜೋಲೈ ಪಿಳ್ಳೈ ಅವರ ಇನ್ನೊಂದು ಹೆಸರು] ಕೃಷ್ಣನ ಎರಡು ಅತಿ ಸುಂದರವಾದ ಪಾದಗಳನ್ನು ತೋರಿಸಿದ ಉಲಗಾರಿಯನ್ (ಪಿಳ್ಳೈ ಲೋಕಾಚಾರ್ಯರು) ಅವರ ದಿವ್ಯ ಪಾದಗಳ ಅಡಿಯಲ್ಲಿ ಆಶ್ರಯ ಪಡೆದವರು. ಅವರು ವಿಲಾಂಜೋಲೈ ಪಿಳ್ಳೈ ವಾಸವಾಗಿದ್ದ ಹಣ್ಣಿನ ತೋಟವನ್ನು ಪ್ರವೇಶಿಸಿದರು.
“ಗುರುಪಾದಾಂಬುಜಂ ಧ್ಯಾಯೇತ್ ಗುರೋರ್ ನಾಮಸದಾಜಪೇತ್” ಎಂದು ಹೇಳಿರುವಂತೆಯೇ (ಒಬ್ಬನು ನಿರಂತರವಾಗಿ ತನ್ನ ಆಚಾರ್ಯನ ದಿವ್ಯ ಪಾದಗಳನ್ನು ಧ್ಯಾನಿಸಬೇಕು ಮತ್ತು ನಿರಂತರವಾಗಿ ಆಚಾರ್ಯನ ದಿವ್ಯನಾಮವನ್ನು ಪಠಿಸಬೇಕು) ಮತ್ತು

ಶ್ರೀಲೋಕಾರ್ಯ ಮುಖಾರವಿಂದಂ ಅಖಿಲ ಶ್ರುತ್ಯರ್ಥ ಕೋಸಂ ಸದಾಂ
ತದ್ ಗೋಷ್ಟೀನ್ಚ ತದೇಕಾಲೀನ ಮನಸಾ ಸಂಚಿಂತಯಂತಂ ಸದಾ

(ವಿಲಾಂಜೋಲೈ ಪಿಳ್ಳೈ ಅವರು ಪಿಳ್ಳೈ ಲೋಕಾಚಾರ್ಯರ ದಿವ್ಯ ಮುಖವನ್ನು ನಿರಂತರವಾಗಿ ಧ್ಯಾನಿಸುತ್ತಿದ್ದರು, ಅವರು ಎಲ್ಲಾ ವೇದಗಳ ಅರ್ಥಗಳ ಸಂಪತ್ತಿನ ಭಂಡಾರವೆಂದು ಪರಿಗಣಿಸಲ್ಪಟ್ಟಿದ್ದಾರೆ ಮತ್ತು ಸತ್ಪುರುಷರು (ಕೇವಲ ಉತ್ತಮ ಗುಣಗಳನ್ನು ಹೊಂದಿರುವ ಜನರು ) ವಾಸಸ್ಥಾನವೆಂದು ಪರಿಗಣಿಸಲ್ಪಟ್ಟ ಅವರ ಗೋಷ್ಟಿ (ಸಭೆ) ), ತಿರುಮಲೈ ಆಳ್ವಾರರು ವಿಲಾಂಜೋಲೈ ಪಿಳ್ಳೈ ಅವರ ದರ್ಶನವನ್ನು ಪಡೆದರು, ಜೇಡಗಳು ತಮ್ಮ ಸುತ್ತಲೂ ಬಲೆಗಳನ್ನು ಸುತ್ತಿಕೊಂಡಿವೆ ಎಂಬ ಅರಿವಿಲ್ಲದೆ ಪಿಳ್ಳೈ ಲೋಕಾಚಾರ್ಯರ ದೈವಿಕ ಮಂಗಳಕರ ರೂಪವನ್ನು ನಿರಂತರವಾಗಿ ಧ್ಯಾನಿಸುತ್ತಿದ್ದರು. ತಿರುವಾಯ್ಮೊಳಿ ಪಿಳ್ಳೈ ಅವರ ಮುಂದೆ ಸಾಷ್ಟಾಂಗ ನಮಸ್ಕಾರ ಮಾಡಿದರು ಮತ್ತು ಅಂಜಲಿ ಪ್ರಣಾಮಗಳನ್ನು ಅರ್ಪಿಸಿದರು (ಅಂಗೈಗಳನ್ನು ಒಟ್ಟಿಗೆ ಸೇರಿಸಿ ನಮಸ್ಕಾರ ಮಾಡಿದರು).ವಿಲಾಂಜೋಲೈ ಪಿಳ್ಳೈ ಅವರು ತಮ್ಮ ದಿವ್ಯ ಕಣ್ಣುಗಳನ್ನು ತೆರೆದು ಕೇಳಿದರು “ನೀವು ಯಾರು? ನೀನು ಇಲ್ಲಿಗೆ ಯಾಕೆ ಬಂದೆ?” ತಿರುಮಲೈ ಆಳ್ವಾರರು ಅಲ್ಲಿಯವರೆಗೆ ನಡೆದಿದ್ದನ್ನೆಲ್ಲಾ ಸಂಕ್ಷಿಪ್ತವಾಗಿ ವಿವರಸಿದರು . ವಿಲಾಂಜೋಲೈ ಪಿಳ್ಳೈ ಅವರು ಸಂತೋಷಪಟ್ಟರು ಮತ್ತು ಶ್ರೀವಚನ ಭೂಷಣದ ಆಳವಾದ ಮತ್ತು ಅಗತ್ಯ ಅರ್ಥಗಳನ್ನು ಕರುಣೆಯಿಂದ ಅವರಿಗೆ ಕಲಿಸಿದರು.ಶ್ರೀವಚನ ಭೂಷಣದ ಹೊರತಾಗಿ, ವಿಲಾಂಜೋಲೈ ಪಿಳ್ಳೈ ಅವರು ತಿರುಮಲೈ ಆಳ್ವಾರರಿಗೆ ಏಳು ಪಾಸುರಗಳಲ್ಲಿ ಶ್ರೀವಚನ ಭೂಷಣದ ಸಾರವಾದ ಸಪ್ತ ಕಾದೈ (ಅವರು ರಚಿಸಿದ ಪ್ರಬಂಧ) ಅರ್ಥಗಳನ್ನು ಸಹ ಕಲಿಸಿದರು. ತಿರುಮಲೈ ಆಳ್ವಾರರು, ಶುದ್ಧ ಬಂಗಾರದಂತಿರುವ ವಿಲಾಂಜೋಲೈಪ್ಪಿಳ್ಳೈ ಅವರೊಂದಿಗಿನ ಈ ಸಂಬಂಧದಿಂದಾಗಿ, ಈ ಜನ್ಮದಲ್ಲಿನ ಎಲ್ಲಾ ಪಾಪಗಳು ಹಾಗು ದೋಷ ಗಳಿಂದ ಮುಕ್ತರಾದರು. ವಿಲಾಂಜೋಲೈ ಪಿಳ್ಳೈ ಅವರಿಂದ ಎಲ್ಲಾ ನಿಗೂಢ ಅರ್ಥಗಳನ್ನು ಕಲಿತ ನಂತರ, ತಿರುಮಲೈ ಆಳ್ವಾರರು ಆಳ್ವಾರ್ ತಿರುನಗರಿಗೆ ಮರಳಿದರು. ವಿಲಾಂಜೋಲೈ ಪಿಳ್ಳೈ, ತಮ್ಮ ಆಚಾರ್ಯರಿಂದ (ಪಿಳ್ಳೈ ಲೋಕಾಚಾರ್ಯರು) ಜ್ಯೋತಿಷ್ಕುಡಿಯಲ್ಲಿ ತನಗೆ ನಿಯೋಜಿಸಲಾದ ಕಾರ್ಯವನ್ನು ಪೂರ್ಣಗೊಳಿಸಿದ ನಂತರ, ನಿತ್ಯಸೂರಿಗಳು ಮತ್ತು ಮುಕ್ತಾತ್ಮಾಗಳೊಂದಿಗೆ ಮತ್ತು “ಸೇರಿಪ್ಪೊಳಿಲ್ ಅನಂತಪುರತ್ತು ಅನ್ನಲರ್ ಕಮಲಪಾದಮ್ ಅಣುಗುವಾರ್ ಅಮರರಾವಾರ್ ” ಎಂಬ ಮಾತಿಗೆ ಅನುಗುಣವಾಗಿ ಎಂಪೆರುಮಾನ್‌ಗೆ ಕೈಂಕರ್ಯಗಳನ್ನು ಕೈಗೊಳ್ಳಲು ಬಯಸಿದರು .(ಸಮೃದ್ಧ ತೋಟಗಳಿಂದ ಸುತ್ತುವರಿದಿರುವ ತಿರುವನಂತಪುರಂನ ನಾಯಕನ ದಿವ್ಯ ಪಾದಕಮಲಗಳನ್ನು ಸಮೀಪಿಸಿ ಶ್ರೀವೈಕುಂಠಂನ ದಿವ್ಯ ನಿವಾಸಕ್ಕೆ ಹೊರಟರು.)

ಆ ಸಮಯದಲ್ಲಿ, ತಿರುವನಂತಪುರಂ ದೇವಸ್ಥಾನದಲ್ಲಿ ನಂಬೂದಿರಿಗಳು (ದೇವಾಲಯದ ಅರ್ಚಕರು) ಅನಂತಪದ್ಮನಾಭನಿಗೆ ತಿರುವಾರಾಧನೆ (ದೈವಿಕ ಪೂಜೆ) ನಡೆಸುತ್ತಿದ್ದರು.ವಿಲಾಂಜೋಲೈ ಪಿಳ್ಳೈ ಅನಂತಪದ್ಮನಾಭನ ಗರ್ಭಗೃಹವನ್ನು ಪ್ರವೇಶಿಸಿ ದೇವರ ಪಾದಗಳನ್ನು ಪೂಜಿಸುವುದನ್ನು ಅವರು ನೋಡಿದರು.ಕೆಳಜಾತಿಯ ವ್ಯಕ್ತಿ ಪ್ರವೇಶಿಸಿದ ಸ್ಥಳದಲ್ಲಿ ತಂಗಲು ಸಾಧ್ಯವಿಲ್ಲ ಎಂದು ನಿರ್ಧರಿಸಿ, ದೇವರಿಗೆ ದೈವಿಕ ರಕ್ಷಣೆಯನ್ನು ಅನ್ವಯಿಸಿದ ನಂತರ ಅವರು ಗರ್ಭಗೃಹವನ್ನು ತೊರೆದು ದೇವಾಲಯದಿಂದ ಹೊರಬಂದರು.ಅದೇ ಸಮಯದಲ್ಲಿ ವಿಲಾಂಜೋಲೈ ಪಿಳ್ಳೈ ಅವರ ಶಿಷ್ಯರು ರಾಮಾನುಜ ನೂಟ್ರಂದಾದಿಯನ್ನು ಪಠಿಸುತ್ತಾ ಬಂದು , ಅವರ ಆಚಾರ್ಯರಾದ ವಿಲಾಂಜೋಲೈ ಪಿಳ್ಳೈ , ಪಿಳೈ ಲೋಕಾಚಾರ್ಯರ ತಿರುವಡಿಯನ್ನು ಪಡೆದರೆಂದು ಹೇಳಿದರು . ಆಚಾರ್ಯರ ತಿರುಮೇನಿಯನ್ನು ಅಲಂಕರಿಸಲು ಅವರಿಗೆ ದಿವ್ಯವಾದ ಪರಿವಟ್ಟಂ (ವಸ್ತ್ರ ) ಮತ್ತು ದಿವ್ಯವಾದ ಹಾರಗಳು ಬೇಕೆಂದು ಕೇಳಿದರು . ಇದನ್ನು ನೋಡಿದ ನಂಬೂದಿರಿಗಳು ದೇವಾಲಯದೊಳಗೆ ತಮಗಾದ ಅದ್ಭುತ ಅನುಭವವನ್ನು ಹಂಚಿಕೊಂಡರು. ತಿರುಮಲೈ ಆಳ್ವಾರರ ಆಶ್ರಯ ಪಡೆದ ಆಚಾರ್ಯರುಗಳು ಈ ಘಟನೆಯನ್ನು ಕೇಳಿ ಹೇಳಿದರು :


ಗತ್ವಾನಂತಪುರಂ ಜಗದ್ಗುರು ಪದಧ್ಯಾನೇರತಮ್ ಕುತ್ರಚಿತ್ ತಂ
ನಾರಾಯಣದಾಸಮೇತ್ಯವಿಮಲಂ ಗತ್ವಾ ತಧ೦ಗ್ರಿಮ್ ಮುದಾ
ತಸ್ಮಾದಾರ್ಯಜನೋಕ್ತಿಮೌಕ್ತಿಕಕೃತಂ ವೇದಾಂತ ವಾಗ್ಭೂಷಣಂ
ಶ್ರೀವಾಗ್ಭೂಷಣಮಭ್ಯವಾಪ್ಸಗುರುಮ್ ಶ್ರೀಶೈಲನಾಥೋಭವತ್

(ತಿರುಮಲೈ ಆಳ್ವಾರರು ತಿರುವನಂತಪುರವನ್ನು ತಲುಪಿದರು, ಪಟ್ಟಣದ ಹೊರಗಿರುವ ಪಿಳ್ಳೈ ಲೋಕಾಚಾರ್ಯರ ದಿವ್ಯ ಪಾದಗಳನ್ನು ಧ್ಯಾನಿಸಲು ಬಯಸಿದ ಆ ನಾರಾಯಣದಾಸರ (ವಿಲಾಂಜೋಲೈ ಪಿಳ್ಳೈ) ದಿವ್ಯ ಪಾದಗಳಿಗೆ ಸಂತೋಷದಿಂದ ನಮಸ್ಕರಿಸಿದರು . ಪೂರ್ವಾಚಾರ್ಯರ ವೇದಾಂತ (ಉಪನಿಷತ್) ಶ್ಲೋಕಗಳ ಮಾಲೆಯಾದ ಶ್ರೀವಚನ ಭೂಷಣವನ್ನು ಸ್ವೀಕರಿಸಿ ಶ್ರೇಷ್ಠವಾದ ಆಚಾರ್ಯರಾದರು).ವಿಲಾಂಜೋಲೈ ಪಿಳ್ಳೈ ಶ್ರೀವೈಕುಂಠ ವಾಸಿಯಾದ ಸುದ್ದಿಯನ್ನು ಕೇಳಿದ ತಿರುಮಲೈ ಆಳ್ವಾರ್ , ಆಚಾರ್ಯರ ಶಿಷ್ಯರು ಅಥವಾ ಪುತ್ರರು ಹೇಗೆ ಅಂತಿಮ ಸಂಸ್ಕಾರಗಳನ್ನು ನಡೆಸುತ್ತಾರೋ ಹಾಗೆ ಎಲ್ಲಾ ವಿಧಿವಿಧಾನಗಳನ್ನು ನೆರವೇರಿಸಿದರು.

ಪಿಳ್ಳೈ ಲೋಕಾಚಾರ್ಯರ ಶಿಷ್ಯರಲ್ಲಿ ಒಬ್ಬರಾದ ಕೊಟ್ಟೂರ್ ಅಳಗಿಯ ಮಣವಾಳಪೆರುಮಾಳ್ ಪಿಳ್ಳೈ ಅವರು ತಮ್ಮ ಆಚಾರ್ಯರ ನಿರ್ಗಮನದ ನಂತರ ತಿರುಪ್ಪುಲ್ಲಾನಣಿಗೆ ಸಮೀಪವಿರುವ ಸಿಕ್ಕಲ್ ಕಿಡಾರಂಗೆ ತಲುಪಿದರು ಮತ್ತು ಸ್ವಲ್ಪ ಕಾಲ ಅಲ್ಲಿಯೇ ಇದ್ದರು. ನಂತರ, ತಿಗಳಕ್ಕಿಡಂದಾನ್ ತಿರುನಾವಿರುಡಯ ಪಿರಾನ್ ತಾದರಣ್ಣನರೈಯರ್ ಅವರನ್ನು ಸಂಪರ್ಕಿಸಿ, ಅವರ ಮಗಳು ಶ್ರೀ ರಂಗನಾಚ್ಚಿಯಾರ್ ಅವರನ್ನು ವಿವಾಹವಾದರು ಮತ್ತು ಅವರ ಮನೆಯಲ್ಲಿಯೇ ಇದ್ದರು.ಪಿಳ್ಳೈ ಲೋಕಾಚಾರ್ಯರಿಂದ ಕಲಿಯಲು ವಂಚಿತರಾದ ಎಲ್ಲವನ್ನೂ ಅವರು ತಮ್ಮ ಮಾವನಿಂದ ಕಲಿತರು, ಅವರನ್ನು ಪಿಳ್ಳೈ ಲೋಕಾಚಾರ್ಯರೆಂದು ಪರಿಗಣಿಸಿದರು. ಅವರಿಂದ ಎಲ್ಲಾ ನಿಗೂಢ ಅರ್ಥಗಳನ್ನು ಕಲಿತ ನಂತರ, ಅಳಗಿಯ ಮನವಾಳ ಪೆರುಮಾಳ್ ಪಿಳ್ಳೈ ದೈವಿಕ ನಿವಾಸಕ್ಕೆ (ಶ್ರೀ ವೈಕುಂಠಂ) ಹೊರಟರು.

ಅನುವಾದ – ಅಡಿಯೇನ್ ಸುಭದ್ರಾ ರಾಮಾನುಜ ದಾಸಿ
ಪುರಾವೆ ಓದುವಿಕೆ -ಅಡಿಯೇನ್ ಕೊದೈ ರಾಮಾನುಜ ದಾಸಿ

ಮೂಲ : https://granthams.koyil.org/2021/08/05/yathindhra-pravana-prabhavam-21-english/

ಆರ್ಕೈವ್ ಮಾಡಲಾಗಿದೆ – https://granthams.koyil.org

ಪ್ರಮೇಯಮ್ (ಗುರಿ) – https://koyil.org
ಪ್ರಮಾಣಮ್ (ಗ್ರಂಥಗಳು) – https://granthams.koyil.org
ಪ್ರಮಾತಾ (ಬೋಧಕರು) – https://acharyas.koyil.org
ಶ್ರೀವೈಷ್ಣವ ಎಜುಕೇಶನ್ / ಮಕ್ಕಳ ಸಾಹಿತ್ಯ – https://pillai.koyil.org

Leave a Comment