ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ
ತಿರುಮಲೈ ಆಳ್ವಾರ್ ಅಡಿಯಲ್ಲಿ ಅಳಗಿಯ ಮಣವಾಳ ಪೆರುಮಾಳ್ ಆಶ್ರಯ ಪಡೆದರು
ತಿಗಳಕ್ಕಿಡಂದಾನ್ ತಿರುನಾವೀರುಡೈಯ ಪಿರಾನ್ ತಾದರಣ್ಣರರೈಯರ್ ಅವರು ಆ ಸಮಯದಲ್ಲಿ ಅವರ ದೈವಿಕ ಮಗನಾದ ಅಳಗಿಯ ಮಣವಾಳ ಪೆರುಮಾಳ್ ನಾಯಣಾರ್ ಅವರಿಗೆ ವಿವಾಹ ಮಾಡಿದರು . ನಂತರ ಅವರು ಅವರಿಗೆ ಅರುಳಿಚ್ಛೆಯಲ್ಗಳ (ನಾಲಾಯಿರ ದಿವ್ಯ ಪ್ರಬಂಧಂ), ರಹಸ್ಯಗಳನ್ನು (ಗುಪ್ತ ವಿಷಯಗಳು) ಇತ್ಯಾದಿಗಳನ್ನು ಕಲಿಸಿದರು. ನಾಯಣಾರ್ ಕೂಡ ತಮ್ಮ ತಂದೆಯ ಜೊತೆ ತೊಡಗಿಸಿ ಕೊಂಡರು. ಅವರ ಮೇಲೆ ಒಂದು ತನಿಯನನ್ನು ರಚಿಸಿದರು .
ಶ್ರೀ ಜಿಹ್ವಾವದಧೀಶದಾಸಮಮಲಂ ಅಶೇಷ ಶಾಸ್ತ್ರವಿದಂ
ಸುಂದರವರಗುರು ಕರುಣಾ ಕಂದಳಿತ ಜ್ಞಾನಮಂದಿರ೦ ಕಲಯೇ
( ಶ್ರೀ ಜಿಹ್ವಾರ್ಕ್ಯಾಧಿಸಮ್ ಆವೃತ್ತಿಯನ್ನು ಮೊದಲ ಪದಕ್ಕೆ ಸಹ ಸ್ವೀಕರಿಸಲಾಗಿದೆ; ತನಿಯನ್ ಅರ್ಥ: ಕೊಟ್ಟೂರು ಅಳಗಿಯ ಮಣವಾಳ ಪೆರುಮಾಳ್ ಪಿಳ್ಳೈ ಕರುಣೆಯಿಂದ ಯಾವುದೇ ಕೊರತೆಯಿಲ್ಲದೆ ಎಲ್ಲಾ ಶಾಸ್ತ್ರಗಳನ್ನು ಕಲಿತು ಅಭಿವೃದ್ಧಿ ಹೊಂದಿ, ಜ್ಞಾನದ ಭಂಡಾರ ಹೊಂದಿರುವ ತಿರುನಾವೀರುಡೈಯ ಪಿರಾನ್ ತಾದರಣ್ಣರನ್ನು ನಾನು ಧ್ಯಾನಿಸುತ್ತೇನೆ).
ವಾಜ್ಹಿ ತಿರುನಾವೀರುಡೈಯ ಪಿರಾನ್ ತಾದರಣ್ಣರ್ ಅರುಳ್
ವಾಜ್ಹಿಯವನ್ ಮಾಮೈ ವಾಕ್ ಇನ್ಬನ್ – ವಾಜ್ಹಿಯವನ್
ವೀರನ್ ಮಣವಾಳನ್ ವಿರೈಮಲರ್ ತಾಳ್ ಶೂಡಿ
ಭಾರಮದೈ ತೀರ್ತಳಿತ್ತ ಪಣ್ಬು
(ತಿರುನಾವೀರುಡೈಯ ಪಿರಾನ್ ತಾದರಣ್ಣರ ಕರುಣೆಗೆ ; ಅವರ ಸುಂದರ ಪದಗಳ ಮಾಧುರ್ಯಕ್ಕೆ ; ಅಪೂರ್ವವಾದ ವೈಭವವನ್ನು ಹೊಂದಿದ ಅಳಗಿಯ ಮಣವಾಳನ (ಶ್ರೀ ರಂಗನಾಥನ) ದೈವಿಕ ಪಾದಗಳನ್ನು ಅಲಂಕರಿಸಿದ ಮತ್ತು ಎಲ್ಲಾ ಅಡೆತಡೆಗಳನ್ನು ಕಡಿಮೆ ಮಾಡುವ ಗುಣಕ್ಕೆ , ಎಲ್ಲಾ ಕೀರ್ತಿಗಳು ಸೇರುತ್ತವೆ.)
ಸ್ವಲ್ಪ ಸಮಯದ ನಂತರ, ಅಣ್ಣರ್ ಅವರು ದೈವಿಕ ನಿವಾಸಕ್ಕೆ (ಪರಮಪದಂ) ತೆರಳಿದರು. ಅಳಗಿಯ ಮಣವಾಳ ಪೆರುಮಾಳ್ ನಾಯಣಾರ್ ಅವರು ಅಣ್ಣರ್ ಗೆ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದರು. ಈ ಮಧ್ಯೆ, ಆಳ್ವಾರ್ ತಿರುನಗರಿಯಲ್ಲಿ, ದರ್ಶನವನ್ನು ಮುನ್ನಡೆಸುತ್ತಿದ್ದ ತಿರುಮಲೈ ಆಳ್ವಾರರು ಇನ್ನು ಮುಂದೆ ದರ್ಶನವನ್ನು ಯಾರು ಮುನ್ನಡೆಸುತ್ತಾರೆ ಎಂದು ಯೋಚಿಸುತ್ತಿದ್ದರು. ನಿಲತ್ತೇವರೆಂದು (ಭೂಮಿಯ ಮೇಲೆ ನಿತ್ಯಸೂರಿಗಳಂತೆ) ಪರಿಗಣಿತರಾದ ಶ್ರೀವೈಷ್ಣವರಿಗೆ ಭಕ್ತಿಯ ಅಮೃತವಾದ ತಿರುವಾಯ್ಮೊಳಿ ಪದಗಳ ಮಾಲೆಯ ಮೇಲೆ ಅವರು ನಿರಂತರವಾಗಿ ಧ್ಯಾನ ಮಾಡುವುದನ್ನು ಮುಂದುವರೆಸಿದರು. ಅದರ ಪದಗಳು, ಅರ್ಥಗಳು ಮತ್ತು ಭಾವನೆಗಳ ವಿವಿಧ ಸೌಂದರ್ಯಶಾಸ್ತ್ರದಲ್ಲಿ ತೊಡಗಿದ್ದರು. ಅವರು ತಿರುವಾಯ್ಮೊಳಿ ಯೊಂದಿಗೆ ಮಾತ್ರ ಆಳವಾಗಿ ತೊಡಗಿಸಿಕೊಂಡಿದ್ದರು ಮತ್ತು ಇತರ ಎಲ್ಲಾ ಪಠ್ಯಗಳನ್ನು ಹುಲ್ಲಿಗೆ ಸಮಾನವೆಂದು ಪರಿಗಣಿಸಿದರು. ಆದ್ದರಿಂದ ಅವರು ಪ್ರಸಿದ್ಧವಾಗಿ ತಿರುವಾಯ್ಮೊಳಿ ಪಿಳ್ಳೈ ಎಂದು ಕರೆಯಲ್ಪಟ್ಟರು. ತಿರುವಾಯ್ಮೊಳಿಯೊಂದಿಗಿನ ಸಂಪರ್ಕವನ್ನು ಅವರ ಗುರುತಾಗಿ ಮಾಡಿಕೊಂಡರು. ಅವರು ಆಳ್ವಾರರ ದೈವಿಕ ಪಾದಗಳಿಗೆ ಸೇವೆಗಳನ್ನು ಮುಂದುವರೆಸಿದರು. ಅಳಗಿಯ ಮಣವಾಳ ಪೆರುಮಾಳ್ ನಾಯಣಾರ್ ಅವರು ತಿರುವಾಯ್ಮೊಳಿ ಪಿಳ್ಳೈ ಅವರ ದೈವಿಕ ಅನುಗ್ರಹಕ್ಕೆ ಪಾತ್ರರಾದರು. “ತಿರುವನಂತಾಳ್ವಾನ್ ಸಖನ್ ತನ್ನೈ ತಿರುತ್ತ ಮರುವಿಯ ಕುರುಗೂರ್ ವಳನಗರ್ ವನ್ದು” ಎಂದು ಹೇಳಿರುವಂತೆಯೇ, (ಜಗತ್ತನ್ನು ಸರಿಪಡಿಸುವ ಸಲುವಾಗಿ ಆದಿಶೇಷನು ತಿರುಕ್ಕುರುಗೂರಿನ ಭವ್ಯವಾದ ನಿವಾಸವನ್ನು ತಲುಪಿದನು). ಅಳಗಿಯ ಮಣವಾಳ ಪೆರುಮಾಳ್ ನಾಯಣಾರ್ ಅವರು ಸಿಕ್ಕಲ್ ಕಿಡಾರಂನಲ್ಲಿರುವ ತಮ್ಮ ತಾಯಿಯ ತಂದೆಯ ಮನೆಯನ್ನು ತೊರೆದು ಕರುಣೆಯಿಂದ ತಮ್ಮ ಜನ್ಮಸ್ಥಳವಾದ ಆಳ್ವಾರ್ ತಿರುನಗರಿ ತಲುಪಿದರು. “ಪೊರುಣರ್ ಸಂಗಣಿತ್ತುರೈಯಿಲೇ ಸಂಗುಗಳ್ ಸೇರು೦ಪೋಲೇ” (ಸಂಗಣಿ ತುರೈಯ ದಿವ್ಯ ಸ್ಥಳದ ಸಮೀಪವಿರುವ ತಾಮರೈಭರಣಿಯಲ್ಲಿ ಸೇರುವ ಶಂಖಗಳಂತೆಯೇ), ಶಂಖದ ಮೈಬಣ್ಣವುಳ್ಳ (ಆದಿಶೇಷನ) ಮತ್ತು ಸದ್ಭಾವನೆಯನ್ನು ಹೊಂದಿರುವವನ ಅವತಾರವಾಗಿದೆ ಎಂಬ ಗಾದೆ ಹೇಳುವಂತೆ. ಅಳಗಿಯ ಮಣವಾಳ ಪೆರುಮಾಳ್ ಅವರು ಸತ್ಯವಾದ ಜ್ಞಾನದ ಮಾರ್ಗವಾದ ತಿರುವಾಯ್ಮೊಳಿ ಪಿಳ್ಳೈ ಅವರ ದಿವ್ಯ ಪಾದಗಳನ್ನು ತಲುಪಿದರು. ಅವರು “ಅಸಿಶ್ರೀಯತಯಮ್ ಭೂಯ: ಶ್ರೀ ಶೈಲಾಧೀಶ ದೇಶಿಕಂ” (ಅಳಗಿಯ ಮಣವಾಳ ಪೆರುಮಾಳ್ ಅವರು ತಿರುವಾಯ್ಮೊಳಿ ಪಿಳ್ಳೈ ಅಡಿಯಲ್ಲಿ ಆಶ್ರಯ ಪಡೆದರು) ಮತ್ತು ಈ ಶ್ಲೋಕದಲ್ಲಿ ಹೇಳಿರುವಂತೆ “ದೇಶಂ ತಿಗಳುಂ ತಿರುವಾಯ್ಮೊಳಿ ಪಿಳ್ಳೈ ವಾಸಮಲರ್ ತಾಳ್ ಅಡೈ೦ದು” (ಪ್ರಪಂಚದಾದ್ಯಂತ ಪ್ರಸಿದ್ಧರಾಗಿದ್ದ ತಿರುವಾಯ್ಮೊಳಿ ಪಿಳ್ಳೈ ಅವರ ದಿವ್ಯ, ಪರಿಮಳಯುಕ್ತ ಪಾದಗಳನ್ನು ತಲುಪುವುದು).
ತರುವಾಯ, ಈ ಕೆಳಗಿನ ಶ್ಲೋಕದಲ್ಲಿ ಹೇಳಿದಂತೆ:
ತದಶ್ರುತಿ ತರಸ್ಸೋಯಂ ತಸ್ಮಾದ್ ತಸ್ಯ ಪ್ರಸಾಧನ:
ಅಶೇಷನಸೃನೋದಿವ್ಯಾನ್ ಪ್ರಬಂಧಂ ಬಂಧನಚ್ಚಿದ:
ನಂತರ, ಅವರು ವೇದಗಳನ್ನು ಅದರ ಅಂಗಗಳೊಂದಿಗೆ (ಪೂರಕಗಳು ) ಕಲಿತರು ಮತ್ತು ತಿರುವಾಯ್ಮೊಳಿ ಪಿಳ್ಳೈ ಅವರ ಕೃಪೆಯಿಂದ, ಅಳಗಿಯ ಮಣವಾಳ ಪೆರುಮಾಳ್ ಎಲ್ಲಾ ಅರುಳಿಚ್ಚೆಯಲ್ (ನಾಲಾಯಿರ ದಿವ್ಯ ಪ್ರಬಂಧಂ) ಅರ್ಥಗಳನ್ನು ಕಲಿತರು, ಇದು ಸಂಸಾರ (ಭೌತಿಕ ವಾಸ್ತವ) ದೊಂದಿಗಿನ ಸಂಪರ್ಕವನ್ನು ಕಡಿದುಹಾಕುತ್ತದೆ. ಅವರು ತಿರುವಾಯ್ಮೊಳಿ ಪಿಳ್ಳೈ ಅವರ ಸೂಚನೆಗಳ ಮೂಲಕ ದ್ರಾವಿಡ ವೇದ (ನಾಲಾಯಿರ ದಿವ್ಯ ಪ್ರಬಂಧಂ) ವನ್ನು ಮತ್ತು ಅದರ ಅಂಗಗಳನ್ನು ಮತ್ತು ಉಪಅಂಗಗಳೊಂದಿಗೆ ಅವುಗಳ ಎಲ್ಲಾ ಅರ್ಥಗಳೊಂದಿಗೆ ಕಲಿತರು. ಅವರು ಚರಮ ಪರ್ವನಿಷ್ಟೆದಲ್ಲಿ ದೃಢವಾಗಿ ಬೇರೂರಿದ್ದರು, ತಿರುವಾಯ್ಮೊಳಿ ಪಿಳ್ಳೈಯನ್ನು ಶೇಷಿ (ಅಧಿಪತಿ), ಶರಣ್ಯನ್ (ಆಶ್ರಯ ನೀಡುವವರು) ಮತ್ತು ಪ್ರಾಪ್ಯನ್ (ಉಪಾಯ) ಎಂಬ ಮೂರು ಉದ್ದೇಶಗಳೊಂದಿಗೆ ಧೀರ್ಘವಾಗಿ ಧ್ಯಾನಿಸ ತೊಡಗಿದರು. “ಮಿಕ್ಕ ವೇದಿಯರ್ ವೇದತ್ತಿನ್ ಉತ್ಪೊರುಳ್” (ವೇದದ ಆಂತರಿಕ ಅರ್ಥ) ನಲ್ಲಿ ಹೇಳಿರುವಂತೆ ಇದು ಎಲ್ಲಾ ವೇದಗಳ ಸಾರವಾಗಿದೆ.
ಅನುವಾದ – ಅಡಿಯೇನ್ ಸುಭದ್ರಾ ರಾಮಾನುಜ ದಾಸಿ
ಪುರಾವೆ ಓದುವಿಕೆ -ಅಡಿಯೇನ್ ಕೊದೈ ರಾಮಾನುಜ ದಾಸಿ
ಮೂಲ : https://granthams.koyil.org/2021/08/09/yathindhra-pravana-prabhavam-25-english/
ಆರ್ಕೈವ್ ಮಾಡಲಾಗಿದೆ – https://granthams.koyil.org
ಪ್ರಮೇಯಮ್ (ಗುರಿ) – https://koyil.org
ಪ್ರಮಾಣಮ್ (ಗ್ರಂಥಗಳು) – https://granthams.koyil.org
ಪ್ರಮಾತಾ (ಬೋಧಕರು) – https://acharyas.koyil.org
ಶ್ರೀವೈಷ್ಣವ ಎಜುಕೇಶನ್ / ಮಕ್ಕಳ ಸಾಹಿತ್ಯ – https://pillai.koyil.org