ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೨೩

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ

ಪೂರ್ಣ ಸರಣಿ

<< ಹಿಂದಿನ ಲೇಖನವನ್ನು

ಈ ಶ್ಲೋಕದಲ್ಲಿ ಹೇಳಿದಂತೆ;

ಅಥತಸ್ಯ ಗುರು : ಶ್ರೀಮಾನ್ ಮತ್ವಾದಮ್ ದಿವ್ಯ ತೇಜಸ೦
ಅಭಿರಾಮವರಾಧೀಶ ಇತಿ ನಾಮ ಸಮಾಧಿಸತ್

ಮಗುವಿನ ತಂದೆ ಅಣ್ಣರ್ ಮತ್ತು ಶ್ರೀಮಾನ್ (ಎಂಪೆರುಮಾನ್‌ಗೆ ಕೈಂಕರ್ಯವನ್ನು ನಡೆಸುವವರು ) ಆ ಮಗುವಿಗೆ ದೈವಿಕ ತೇಜಸ್ಸನ್ನು ಹೊಂದಿರುವಂತೆ ಪರಿಗಣಿಸಿ, ಮಗುವಿಗೆ ಅಳಗಿಯ ಮನವಾಳ ಪೆರುಮಾಳ್ ಎಂಬ ದಿವ್ಯವಾದ ಹೆಸರನ್ನುಇಟ್ಟರು.
ಬಹಳ ಸಮಯದವರೆಗೆ ಹರಡಿದ ಹೊದಿಕೆಗಳೊಂದಿಗೆ ಆದಿಶೇಷನ ಹಾಸಿಗೆಯ ಮೇಲೆ ಮಲಗಿರುವ ಅಳಗಿಯ ಮನವಾಳ ಪೆರುಮಾಳ್ ಅವರ ದಿವ್ಯವಾದ ಹೆಸರನ್ನೇ ನೀಡಲಾಯಿತು. ಕೃಷ್ಣನ ಬಗ್ಗೆ ಪೆರಿಯಾಳ್ವಾರ್ ; ಪೆರಿಯಾಳ್ವಾರ್ ತಿರುಮೊಳಿ 1.1.7 ರಲ್ಲಿ ಹೇಳಿರುವಂತೆ ” ಆಯರ್ ಪುತ್ತಿರನ್ ಅಲ್ಲನ್ ಅರುಮ್ ದೈವಮ್” (ಅವನು ಸಾಧಾರಣ ಮೇವು ಕಾಯುವ ಹುಡುಗನಲ್ಲ, ಅವನು ದೈವಿಕ ಅಸ್ತಿತ್ವ) ಮತ್ತು ಪೆರಿಯಾಳ್ವಾರ್ ತಿರುಮೊಳಿ 2.5.1 “ಎನ್ನೈಯುಮ್ ಎಂಗಳ್ ಕುಡಿ ಮುಯುದಾಟ್ಕೊಂಡ ಮನ್ನನ್” (ನನ್ನನ್ನು ಮತ್ತು ನಮ್ಮ ಇಡೀ ಕುಲವನ್ನು ಗೆದ್ದವನು)ಎಂದು ಹೀಗೆಲ್ಲಾ ವರ್ಣಿಸಿದರು. ತಂದೆ-ತಾಯಿ ಮಗುವನ್ನು ಸಿಕ್ಕಲ್ ಕಿಡಾರಂಗೆ ಕರೆದುಕೊಂಡು ಹೋದರು, ಅದು ಅಣ್ಣರ್ ಅವರ ತಂದೆಯ ಸ್ಥಳವಾಗಿತ್ತು, ಅಲ್ಲಿ ಅವರನ್ನು ಪೋಷಿಸಿದರು.

ಪರಭಕ್ತಿ ಪರಜ್ಞಾನಂ ಪರಮಭಕ್ತಿದ್ಯಪಿ
ವಪುಷಾವರ್ತಮಾನೇನ ತತಸ್ಯ ವವೃತೇತ್ರಯಮ್

[ಪರಭಕ್ತಿ ಎಂದರೆ ಎಂಪೆರುಮಾನ್‌ ಬಗ್ಗೆ ತಿಳಿದುಕೊಳ್ಳುವ ಸ್ಥಿತಿ, ಪರಜ್ಞಾನಂ ಎಂದರೆ ವ್ಯಕ್ತಿಯು ಎಂಪೆರುಮಾನ್‌ನನ್ನು ನೇರವಾಗಿ ನೋಡುವಂತೆ ದೃಶ್ಯೀಕರಿಸುವ ಸ್ಥಿತಿ, ಪರಮಭಕ್ತಿ ಎಂದರೆ ಎಂಪೆರುಮಾನ್‌ನನ್ನು ಪಡೆಯುವ ಮೊದಲು ಅವನ ಅನುಪಸ್ಥಿತಿಯಲ್ಲಿ ಉಳಿಸಿಕೊಳ್ಳಲು ಸಾಧ್ಯವಾಗದ ಸ್ಥಿತಿ). ಅವರ ಭೌತಿಕ ರೂಪದೊಂದಿಗೆ ಅವರ ದೈವಿಕ ಗುಣಗಳು ಸಹ ಬೆಳೆದವು . ಅವರ ತಂದೆ, ಅಣ್ಣರ್ ಕೂಡ ಬ್ರಾಹ್ಮಣರ ವರ್ಣದಲ್ಲಿ ಜನಿಸಿದವನಿಗೆ ವಿಧಿಸಲಾದ ಎಲ್ಲಾ ಆಚರಣೆಗಳನ್ನು ನಡೆಸುತ್ತಿದ್ದರು. ಕೆಳಗಿನ ಶ್ಲೋಕದಲ್ಲಿ ಹೇಳಿದಂತೆ :

ಪ್ರಾಪ್ತಾನ್ ಪ್ರಾಥಮಿವಿಕೇವರ್ಣೆ ಕಲ್ಪಗ್ಯಾ: ಕಲ್ಪಯಂತಿ ಯಾನ್
ಕಾಲೇ ಕಾಲೇ ಚ ಸಂಸ್ಕಾರಾನ್ ತಸ್ಯ ಚಕ್ರೇ ಕ್ರಮೇಣ ಸ:

ಕಲ್ಪಸೂತ್ರಗಳನ್ನು ತಿಳಿದ ಮೊದಲ ವರ್ಣದ ಜನರು ಯಾವ ವಿಧಿವಿಧಾನಗಳನ್ನು ಮಾಡುತ್ತಾರೆಯೋ ಅದನ್ನು ಅವರು (ಅಣ್ಣರ್) ತಮ್ಮ ಮಗನಿಗಾಗಿ ಮಾಡಿದರು. ಹೇಳಿದ ಹಾಗೆ ಮಗನೂ ಬೆಳೆದ

ಆಥಾಮ್ಪರಪಾದಂ ಆಜಾನು ಭುಜಂ ಅಂಬುಜಲೋಚನಂ
ಆಕಾರಮಸ್ಯ ಸಂಪಶ್ಯನ್ ಮುಕ್ತೋಪಿ ಮುಮುನೇ ಜನ:

(ಬುದ್ಧಿವಂತಿಕೆಯ ಕೊರತೆಯಿರುವ ಜನಸಾಮಾನ್ಯರೂ ಕೂಡ ಕೆಂಪನೆಯ ಕಮಲದಂತಿರುವ ಕೆಂಪಾದ ದಿವ್ಯ ಪಾದಗಳನ್ನು, ದಿವ್ಯ ಮೊಣಕಾಲಿಗೆ ಚಾಚಿರುವ ದಿವ್ಯ ಹಸ್ತಗಳನ್ನು, ಕೆಂಪಗಿದ್ದ ಕಮಲದಂತಿದ್ದ ದಿವ್ಯ ನೇತ್ರಗಳನ್ನು ಹೊಂದಿರುವ ಆತನ ದಿವ್ಯ ರೂಪವನ್ನು ನೋಡಿ ಬಹಳ ಸಂತೋಷಪಟ್ಟರು) ಮತ್ತು ಶ್ಲೋಕದಲ್ಲಿ ಹೇಳಿದಂತೆ

ಸೌಶೀಲ್ಯೇನ ಸುಹೃತ್ವೇನ ಗಾಂಭೀರ್ಯೇನ ಗರೀಯಸಾ
ರಾಜ್ಞನೇನಪ್ರಜಾನಾಂಚ ರಾಮೋಯಮಿತಿ ಮೇನಿರೇ

(ಕೆಳವರ್ಗದ ಜನರೊಂದಿಗೆ ಸಹ ಚೆನ್ನಾಗಿ ಬೆರೆಯುವ ಅವರ ಸ್ವಭಾವವನ್ನು ಕಂಡು, ಎಲ್ಲರನ್ನೂ ಪ್ರೀತಿಸುವ, ಅವರ ಘನತೆಯ ಸ್ಥಿಮಿತ ಮತ್ತು ಜನರನ್ನು ಸಂತೋಷಪಡಿಸುವ ಅವರ ರೀತಿಯನ್ನು ಕಂಡು ಜನರು ಆತನನ್ನು ಶ್ರೀರಾಮನಂತೆ ನೋಡಿದರು,) ಅವರನ್ನು ನೋಡುವ ಎಲ್ಲರಿಗೂ ಸಂತೋಷವಾಯಿತು. ಚಂದ್ರನು ತನ್ನ ಕಿರಣಗಳನ್ನು ಹೆಚ್ಚಿಸಿಕೊಳ್ಳುತ್ತಾ ದಿನೇ ದಿನೇ ಬೆಳೆದಂತೆ, ಅಳಗಿಯ ಮನವಾಳರೂ ಬೆಳೆದರು.

ಕಾಲೇನ ಸಕಲಾನಾಮ್ಚ ಕಲಾನಾಮೇಗಮಾಸ್ಪತಂ
ಸುಸುಪೇ ಸತ್ತಂ ಪೂರ್ಣ: ಸುಧಾಮ್ಶುರೀವ ನಿರ್ಮಲ:

(ಸಕಲ ಕಲೆಗಳ ವಿಶಿಷ್ಠ ಭಂಡಾರವಾದ ಅಳಗಿಯ ಮನವಾಳರು, ಯಾವುದೇ ದೋಷವಿಲ್ಲದೆ ಚಂದ್ರನಂತೆ ಹೊಳೆಯುತ್ತಿದ್ದರು), ಸಂಪೂರ್ಣ ಜ್ಞಾನದ ಕಾರಣದಿಂದಾಗಿ ಅನುಪಯುಕ್ತ ಶ್ರೇಷ್ಠತೆಯನ್ನು ಹೊಂದಿದರು.

ಅನುವಾದ – ಅಡಿಯೇನ್ ಸುಭದ್ರಾ ರಾಮಾನುಜ ದಾಸಿ
ಪುರಾವೆ ಓದುವಿಕೆ -ಅಡಿಯೇನ್ ಕೊದೈ ರಾಮಾನುಜ ದಾಸಿ

ಮೂಲ : https://granthams.koyil.org/2021/08/07/yathindhra-pravana-prabhavam-23-english/

ಆರ್ಕೈವ್ ಮಾಡಲಾಗಿದೆ – https://granthams.koyil.org

ಪ್ರಮೇಯಮ್ (ಗುರಿ) – https://koyil.org
ಪ್ರಮಾಣಮ್ (ಗ್ರಂಥಗಳು) – https://granthams.koyil.org
ಪ್ರಮಾತಾ (ಬೋಧಕರು) – https://acharyas.koyil.org
ಶ್ರೀವೈಷ್ಣವ ಎಜುಕೇಶನ್ / ಮಕ್ಕಳ ಸಾಹಿತ್ಯ – https://pillai.koyil.org

1 thought on “ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೨೩”

Leave a Comment