ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ
ನಂಪಿಳ್ಳೈ ಅವರು ತಮ್ಮ ಶಿಷ್ಯರಾದ ಪೆರಿಯವಾಚ್ಚನ್ ಪಿಳ್ಳೈ ಅವರಿಗೆ ಕೆಲವು ವಿಶಿಷ್ಟ ಅರ್ಥಗಳೊಂದಿಗೆ ಒನ್ಬದು ಆಯಿರಪಡಿಯನ್ನು ಕಲಿಸಲು ಪ್ರಾರಂಭಿಸಿದರು. ಪೆರಿಯವಾಚ್ಚನ್ ಪಿಳ್ಳೈ ಅವರು ಪ್ರತಿದಿನ ಈ ಅರ್ಥಗಳೊಂದಿಗೆ ಪಟ್ಟೋಲೈ (ತಾಳೆ ಎಲೆಗಳಲ್ಲಿ ಮೊದಲ ಪ್ರತಿ) ತಯಾರಿಸಲು ಪ್ರಾರಂಭಿಸಿದರು. ಪ್ರವಚನದ ಕೊನೆಯಲ್ಲಿ, ಅವರು ಎಲ್ಲಾ ಹಸ್ತಪ್ರತಿಗಳನ್ನು ನಂಪಿಳ್ಳೈ ಅವರಿಗೆ ತಂದು ಅವರ ದೈವಿಕ ಪಾದಗಳಿಗೆ ಸಲ್ಲಿಸಿದರು. ಅದರಿಂದ ನಂಪಿಳ್ಳೈ ಬಹಳ ಸಂತೋಷಪಟ್ಟರು; ಅವರು ಹಸ್ತಪ್ರತಿಗಳ ಮೇಲೆ ತಮ್ಮ ಕರುಣೆಯನ್ನು ಸುರಿಸಿದರು ಮತ್ತು ಪೆರಿಯವಾಚ್ಚನ್ ಪಿಳ್ಳೈ ಅವರನ್ನು ಅನೇಕ ಪ್ರತಿಗಳನ್ನು ಮಾಡಲು ಮತ್ತು ಅವುಗಳನ್ನು ವ್ಯಾಪಕವಾಗಿ ಹರಡಲು ಹೇಳಿದರು, ಇದರಿಂದಾಗಿ ಅನೇಕ ಜನರಿಗೆ ತಿಳಿಯುತ್ತದೆ. ನಡುವಿಲ್ ತಿರುವೀದಿಪ್ಪಿಳ್ಳೈ ಮತ್ತು ವಡಕ್ಕು ತಿರುವೀದಿಪ್ಪಿಳ್ಳೈ ಅವರ ಸ್ವಂತ ಉಲ್ಲಂಘನೆಯ ಮೇಲೆ ಮೂಲಪ್ರತಿ ತಯಾರಿಸಿದರು, ಆದರೆ ನಂಪಿಳ್ಳೈ ಅವರ ನಿರ್ದೇಶದನ ಮೇಲೆ ಪೆರಿಯವಾಚ್ಚನ್ ಪಿಳ್ಳೈ ತಿರುವಾಯ್ಮೊಳಿಯ ವ್ಯಾಖ್ಯಾನವನ್ನು ರಚಿಸಿದ್ದಾರೆ ಎಂಬುದನ್ನು ಇಲ್ಲಿ ಗಮನಿಸುವುದು ಸೂಕ್ತವಾಗಿದೆ. ಮನವಾಳ ಮಾಮುನಿಗಲ್, ತಮ್ಮ ಪ್ರಬಂಧಂ ಉಪದೇಶ ರತ್ತಿನ ಮಾಲೈ ಈ ವೈಶಿಷ್ಟ್ಯವನ್ನು ೪೩ ನೇ ಪಾಸುರಂ “ನಂಪಿಳ್ಳೈ ತಮ್ಮುಡೈ ನಲ್ ಅರುಳಾಲ್ ಎವಿಯಿಡ ಪಿನ್ ಪೆರಿಯವಾಚ್ಚನ್ ಪಿಳ್ಳೈ ಅದನಾಲ್ ಇನ್ಬಾವರುಬತ್ತೀ ಮಾರನ್ ಮಾರೈ ಪೊರುಲೈಚೊಣ್ಣದ್ದು ಇರುಬತ್ತೀ ನಾಲಾಯಿರಂ (ನಂಪಿಳ್ಳೈ ಅವರು ತಮ್ಮ ದೈವಿಕ ಅನುಗ್ರಹದಿಂದ ಅವರನ್ನು ನೇಮಿಸಿದ ನಂತರ, ಪೆರಿಯವಾಚ್ಚನ್ ಪಿಳ್ಳೈ ಅವರು ಇರುಬತ್ತೀ ನಾಲಾಯಿರ ಪಡಿಯನ್ನು ರಚಿಸಿದರು, ಇದು ತಿರುವಾಯ್ಮೊಳಿಯ ವ್ಯಾಖ್ಯಾನವಾಗಿದೆ, ತಿರುವಾಯ್ಮೊಳಿಯನ್ನು ನಮ್ಆಲ್ವಾರ್ ಎಂಪೆರುಮಾನ್ ಅವರ ಕರುಣೆ,ಭಕ್ತಿ ಮತ್ತು ಸಂತೋಷದಿಂದ ರಚಿಸಿದರು.)
ಒಂದು ದಿನ ನಂಪಿಳ್ಳೈ ವಡಕ್ಕು ತಿರುವೀದಿಪ್ಪಿಳ್ಳೈ ಮತ್ತು ಸಿರಿಯಾಳ್ವಾನ್ ಪಿಳ್ಳೈ (ಈಯುಣ್ಣಿ ಮಾಧವರ್) ಅವರನ್ನು ಕರೆದು ಅವರಿಗೆ ಒನ್ಬದುಆಯಿರ ಪಡಿಯನ್ನು ಓದಲು ಹೇಳಿದರು. ಪೆರಿಯವಾಚ್ಚನ್ ಪಿಳ್ಳೈ ಅವರು ಅದನ್ನು ಓದುವುದರಲ್ಲಿ ಅವರೊಂದಿಗೆ ಸೇರಿಕೊಳ್ಳುವ ಬಯಕೆಯನ್ನು ವ್ಯಕ್ತಪಡಿಸಿದರು. ನಂಪಿಳ್ಳೈ ಅವರು ಸಂತೋಷದಿಂದ ಒಪ್ಪಿಕೊಂಡರು ಮತ್ತು ಅರ್ಥಗಳನ್ನು ಹೇಳಿದರು. ವಡಕ್ಕು ತಿರುವೀದಿಪ್ಪಿಳ್ಳೈ ಅವರು ತಮ್ಮ ಮನೆಯಲ್ಲಿ ಪ್ರತಿದಿನ ನಂಪಿಳ್ಳೈ ಅವರ ಪ್ರವಚನಗಳ ಟಿಪ್ಪಣಿಗಳನ್ನು ಹೇಳಲು ಪ್ರಾರಂಭಿಸಿದರು. ಒಂದು ದಿನ, ಅವರು ನಂಪಿಳ್ಳೈ ಅವರನ್ನು ತಮ್ಮ ಮನೆಗೆ ಊಟಕ್ಕೆ ಕರೆದರು. ವಡಕ್ಕು ತಿರುವೀದಿಪ್ಪಿಳ್ಳೈ ಅವರ ಮನೆಯಲ್ಲಿ ಊಟ ಮಾಡುವ ಮೊದಲು ತಿರುವಾರಾಧನೆಯನ್ನು ನೆರವೇರಿಸುವುದಾಗಿ ನಂಪಿಳ್ಳೈ ಹೇಳಿದರು. ಅವರು ತಿರುವಾರಾಧನೆಗಾಗಿ ಕೋಯಿಲಾಳ್ವಾರ್ ಅನ್ನು ತೆರೆದಾಗ, ಅಲ್ಲಿ ಅವರು ತಾಳೆಗರಿ ಹಸ್ತಪ್ರತಿಗಳ ಕಂತನ್ನು ಕಂಡುಕೊಂಡರು. ಅವರು ವಡಕ್ಕು ತಿರುವೀದಿಪ್ಪಿಳ್ಳೈ ಅವರನ್ನು ಅದರ ಬಗ್ಗೆ ಕೇಳಿದರು. ವಡಕ್ಕು ತಿರುವೀದಿಪಿಳ್ಳೈ , ನಂಪಿಳ್ಳೈ ಅವರಿಗೆ ಹೇಳಿದ ತಿರುವಾಯ್ಮೋಳಿಯ ಪಾಶುರಂಗಳ ಅರ್ಥಗಳನ್ನು ಮರೆಯದಂತೆ ಟಿಪ್ಪಣಿಗಳನ್ನು ತೆಗೆದುಕೊಂಡಿದ್ದೇನೆ ಎಂದು ಹೇಳಿದರು. ನಂಪಿಳ್ಳೈ ವಡಕ್ಕು ತಿರುವೀದಿಪ್ಪಿಳ್ಳೈ ಅವರನ್ನು ತಿರುವಾರಾಧನೆಯನ್ನು ಸ್ವತಃ ನಡೆಸುವಂತೆ ಹೇಳಿದರು ಮತ್ತು ಹಸ್ತಪ್ರತಿಗಳನ್ನು ದೀರ್ಘಕಾಲದವರೆಗೆ ಪರಿಶೀಲಿಸಲು ಪ್ರಾರಂಭಿಸಿದರು.ಅವರು ತಮ್ಮ ಆಹಾರವನ್ನು ಸೇವಿಸಲು ಹೋದಾಗ ಹಸ್ತಪ್ರತಿಗಳನ್ನು ಪರೀಕ್ಷಿಸಲು ಪೆರಿಯವಾಚ್ಚನ್ ಪಿಳ್ಳೈ ಮತ್ತು ಈಯುಣ್ಣಿ ಮಾಧವರ್ ಅವರಿಗೆ ಹೇಳಿದರು. ಅವರು ಅವರೊಂದಿಗೆ ಸೇರಿಕೊಂಡರು ಮತ್ತು ಅವರನ್ನು ಮತ್ತಷ್ಟು ಪರೀಕ್ಷಿಸಿದರು. ಅವರು ಭಾಷ್ಯವನ್ನು ಬರೆದಿರುವ ಅದ್ಭುತವಾದ ಮಾರ್ಗವನ್ನು ಶ್ಲಾಘಿಸುತ್ತಿರುವಾಗ, ನಂಪಿಳ್ಳೈ ವಡಕ್ಕು ತಿರುವೀದಿಪ್ಪಿಳ್ಳೈ ಅವರನ್ನು ಕರೆದು ಕೇಳಿದರು, “ನೀನು ಯಾಕೆ ಹೀಗೆ ಮಾಡಿದೆ? ಪೆರಿಯವಾಚ್ಚನ್ ಪಿಳ್ಳೈ ಮಾತ್ರ ವ್ಯಾಖಾನ ಬರೆಯಬೇಕೆ? ನಾವು ಮಾಡಬಾರದೇ?’ ಇದೇನಾ ನೀವು ಯೋಚಿಸುತ್ತಿದ್ದೀರಿ?” ಈ ಮಾತುಗಳನ್ನು ಕೇಳಿದ ವಡಕ್ಕು ತಿರುವೀದಿಪ್ಪಿಳ್ಳೈ ಭಯದಿಂದ ನಡುಗಿದರು ಮತ್ತು ಮೂರ್ಛೆ ಹೋದರು. ಪ್ರಜ್ಞೆ ಬಂದ ಮೇಲೆ ಅವರು ನಂಪಿಳ್ಳೈಗೆ ಹೇಳಿದರು “ಓ ಜೀಯರ್! ನಾನು ಹಾಗೆ ಯೋಚಿಸಲಿಲ್ಲ. ಅರ್ಥಗಳು ಮರೆತಾಗ ಅದನ್ನು ಉಲ್ಲೇಖಿಸಲು ಮಾತ್ರ ಬರೆದೆ” ಎಂದು ಉದ್ಧಟತನದಿಂದ ಅವರ ಕಾಲಿಗೆ ಬಿದ್ದರು. ನಂಪಿಳ್ಳೈ ಅವರಿಗೆ “ನಾನು ನಿನ್ನನ್ನು ಕ್ಷಮಿಸುತ್ತೇನೆ. ನಿಮ್ಮದು ವಿಶಿಷ್ಟವಾದ ಜನ್ಮವೆಂದು ತೋರುತ್ತದೆ. ನಂಜೀಯರ್ ಅವರ ವಿವರಣೆಯಿಂದ ನಾನು ಪ್ರಸ್ತಾಪಿಸಿದ್ದಕ್ಕೆ ನೀವು ಪೂರ್ಣವಿರಾಮ ಅಥವಾ ಅಲ್ಪವಿರಾಮವನ್ನು ಸಹ ಕಳೆದುಕೊಂಡಿಲ್ಲ .ನಿನ್ನ ಸಾಮರ್ಥ್ಯವನ್ನು ನಾನು ಹೇಗೆ ಹೊಗಳಲ್ಲಿ !” .ಈ ವ್ಯಾಖ್ಯಾನವನ್ನು ಹರಡಲು ಅವರು ತಮ್ಮ ಆಚಾರ್ಯ, ನಂಜೀಯರ್ (ಅವರು ಸನ್ಯಾಸವನ್ನು ಅಳವಡಿಸಿಕೊಳ್ಳುವ ಮೊದಲು ನಂಜೀಯರ್ ಅವರ ಹೆಸರು ಮಾಧವರ್) ರೊಂದಿಗೆ ದೈವಿಕ ಹೆಸರನ್ನು ಹಂಚಿಕೊಂಡ ಮಾಧವರ್ ( ಈಯುಣ್ಣಿ ಮಾಧವ ಪೆರುಮಾಳ್ , ಅವರ ಶಿಷ್ಯ) ಬಯಸಿದ್ದರು ಎಂದು ಅವರು ಹೇಳಿದರು. ವಡಕ್ಕುತ್ ತಿರುವೀದಿಪ್ಪಿಳ್ಳೈ ಘಟನೆಗಳ ತಿರುವಿನಿಂದ ಸಂತೋಷಪಟ್ಟರು. ನಂಪಿಳ್ಳೈ ಅವರು ಹಸ್ತಪ್ರತಿಗಳ ಕಂತನ್ನು ಈಯುಣ್ಣಿ ಮಾಧವ ಪೆರುಮಾಳ್ ಅವರಿಗೆ ನೀಡಿದರು, ಅವರಿಗೆ “ಮೂಲದ ನಾಲ್ಕೈದು ಪ್ರತಿಗಳನ್ನು ಮಾಡಿ ಮತ್ತು ಅವುಗಳನ್ನು ಅನೇಕ ರಂಗಗಳಲ್ಲಿ ಹರಡಿ” ಎಂದು ಹೇಳಿದರು. ಮಾಧವರ್ ಹಿಂಜರಿಯುತ್ತಾ, “ನಾನು ಅದನ್ನು ಮಾಡಲು ಸಮರ್ಥನೇ? ನಾನು ಅನುಮೋದನೆಯನ್ನು ಪಡೆಯುತ್ತೇನೆಯೇ? ” ನಂಪಿಳ್ಳೈ ಅವರಿಗೆ “ ನಂಜೀಯರ್ ರವರ ಕೃಪೆಯಿರುವಾಗ ಅವರ ಹೆಸರನ್ನು ಹೊತ್ತುಕೊಳ್ಳುವುದು ನಿಮಗೆ ದೊಡ್ಡ ಕಾರ್ಯವೇ? ಪೌರಾಣಿಕ ಕಥೆ ಇದೆ.ಇದನ್ನು ಕೇಳಿ, ಪೇರುಅರುಳಾಳ ಪೆರುಮಾಲ್ (ಕಾಂಚಿ ವರದರ್) ತುನ್ನು ಪುಗಜ್ಹ್ ಕಡೈನ್ಡ್ ತೋಜ್ಹಪ್ಪರ್ ಅವರ ಕನಸಿನಲ್ಲಿ ಬಂದು ಹೇಳಿದರು ,
ಜಗತ್ ರಕ್ಷಕ ಪರೋನಂದೋ ಜನಿಷ್ಯತ್ಯ ಪರೋಮುನಿ: l
ಥಾಧಾರಸ್ಯಾಸ್ ಸಧಾಚಾರಾ ಸಾತ್ವಿಕಾಸ್ ತತ್ವ ದರ್ಶಿನಃ ll
(ತಿರುವನಂಥ ಆಳ್ವಾನ್, ಜಗತ್ತನ್ನು ರಕ್ಷಿಸುವಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾನೆ (ರಾಮಾನುಜ ಮುನಿಯ ಅವತಾರವನ್ನು ಹೊರತುಪಡಿಸಿ) ಇನ್ನೊಬ್ಬ ಮುನಿಯಾಗಿ (ಎಲ್ಲರ ಒಳಿತಿಗಾಗಿ ಧ್ಯಾನ ಮಾಡುವವನು) ಅವತರಿಸಲಿದ್ದಾನೆ; ಅವನ ಅಡಿಯಲ್ಲಿ (ಆ ಸಮಯದಲ್ಲಿ) ಆಶ್ರಯ ಪಡೆದವರು ಸಂಪೂರ್ಣವಾಗಿ ಉತ್ತಮ ನಡವಳಿಕೆ ಮತ್ತು ಉತ್ತಮ ಗುಣಗಳನ್ನು ಹೊಂದಿರಿತ್ತಾರೆ ).ಅಲ್ಲಿಯವರೆಗೆ, ನೀವು ಇದರ ಆಧಾರದ ಮೇಲೆ ಪ್ರವಚನವನ್ನು ನಡೆಸುತ್ತಿರಿ”. ಮಾಧವರ್ ಕೂಡ ಆ ಹಸ್ತಪ್ರತಿಗಳ ಐದು ಪ್ರತಿಗಳನ್ನು ತಯಾರಿಸಿದರು ಮತ್ತು ಅವರ ಮಗನಾದ ಈಯುಣ್ಣಿ ಪದ್ಮನಾಭ ಪೆರುಮಾಳ್ ಅವರಿಗೆ ಕಲಿಸಿದರು.
ಅನುವಾದ – ಅಡಿಯೇನ್ ಸುಭದ್ರಾ ರಾಮಾನುಜ ದಾಸಿ
ಪುರಾವೆ ಓದುವಿಕೆ -ಅಡಿಯೇನ್ ಕೊದೈ ರಾಮಾನುಜ ದಾಸಿ
ಮೂಲ : https://granthams.koyil.org/2021/07/20/yathindhra-pravana-prabhavam-5-english/
ಆರ್ಕೈವ್ ಮಾಡಲಾಗಿದೆ – https://granthams.koyil.org
ಪ್ರಮೇಯಮ್ (ಗುರಿ) – https://koyil.org
ಪ್ರಮಾಣಮ್ (ಗ್ರಂಥಗಳು) – https://granthams.koyil.org
ಪ್ರಮಾತಾ (ಬೋಧಕರು) – https://acharyas.koyil.org
ಶ್ರೀವೈಷ್ಣವ ಎಜುಕೇಶನ್ / ಮಕ್ಕಳ ಸಾಹಿತ್ಯ – https://pillai.koyil.org
2 thoughts on “ಯತೀಂದ್ರ ಪ್ರವಣ ಪ್ರಭಾವಂ – ಭಾಗ ೫”