ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೨೦

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ

ಪೂರ್ಣ ಸರಣಿ

<< ಹಿಂದಿನ ಲೇಖನವನ್ನು

ತಿರುಮಲೈ ಆಳ್ವಾರರು ನಾಳುರಾಚ್ಚಾನ್  ಪಿಳ್ಳೈಯವರ ದೈವಿಕ ಪಾದಗಳಿಗೆ ಸಾಷ್ಟಾಂಗ ನಮಸ್ಕಾರ ಮಾಡಿ, ಪಿಳ್ಳೈ ಅವರಿಗೆ ಶರಣಾದರು. ನಾಳುರಾಚ್ಚಾನ್  ಪಿಳ್ಳೈ ಅವರನ್ನು ಸ್ವೀಕರಿಸಿದರು ಮತ್ತು ಅವರಿಗೆ ಈಡು ಕಲಿಸಲು ಪ್ರಾರಂಭಿಸಿದರು (ನಂಪಿಳ್ಳೈ ಅವರ ಕಾಲಕ್ಷೇಪಂ ಅನ್ನು ಆಧರಿಸಿ ವಡಕ್ಕು ತಿರುವೀದಿ ಪಿಳ್ಳೈ ಅವರು ಬರೆದಿರುವ ತಿರುವಾಯ್ಮೋಳಿ ಕುರಿತಾದ ವ್ಯಾಖ್ಯಾನ). ನಾಳುರಾಚ್ಚಾನ್  ಪಿಳ್ಳೈಯವರು ತಿರುಮಲೈ ಆಳ್ವಾರರಿಗೆ ಈಡು ವ್ಯಾಖ್ಯಾನವನ್ನು ಹೇಳಿಕೊಡುವುದನ್ನು ಅರಿತು , ಆಚಾರ್ಯರುಗಳಾದ ಜನನ್ಯಾಚಾರ್ (ತಿರುನಾರಾಯಣಪುರತ್ತು ಆಯಿ), ಎಂಪೆರುಮಾನಿಂದ(ಭಗವದ್ ರಾಮಾನುಜರ್) ನಾಳುರಾಚ್ಚಾನ್  ಪಿಳ್ಳೈಗೆ ಸಂದೇಶವನ್ನು ಕಳುಹಿಸಿದರು .ಅದನ್ನು ನೋಡಿದ ನಾಳುರಾಚ್ಚಾನ್  ಪಿಳ್ಳೈ ಅವರು ತಿರುಮಲೈ ಆಳ್ವಾರರೊಂದಿಗೆ ತಿರುನಾರಾಯಣಪುರಕ್ಕೆ ಹೊರಟರು.

ಈ ಕೆಳಗಿನ ಶ್ಲೋಕದಲ್ಲಿ ಹೇಳಿರುವಂತೆಯೇ

ಆರುಹ್ಯಆಮಲ ಯಾಧವಾದ್ರಿ ಸಿಕರಂ ಕಲ್ಯಾಣಿತೀರ್ಥಂ ತಥಾ :
ಸ್ನಾಥ್ವಾಲಕ್ಷಣಯೋಗಿನಾ : ಪದಯುಗಂ ನಾಥವಾತುಗತ್ವಅಂಥಾಥ :
ಶ್ರೀನಾರಾಯನಾಮೆಯಥಾತ್ರ ಧರಣಿ ಪದ್ಮಾಲಾ ಮಧ್ಯಖಂ
ಪಸ್ಯೆಯಂ ಯಧಿಕಿಮ್ ತಾಪ : ಪಲಮಥ : ಸಂಪತ್ಕುಮಾರಂ ಹರಿಮ್

(ಪವಿತ್ರವಾದ ಯಾದವಾದ್ರಿಯ ಮೇಲೆ ಹತ್ತಿ , ಕಲ್ಯಾಣಿ ತೀರ್ಥದಲ್ಲಿ ಪವಿತ್ರ ಸ್ನಾನ ಮಾಡಿ , ಇಳೈಯಾಳ್ವರ (ರಾಮಾನುಜರ) ದೈವಿಕ ಪಾದಗಳನ್ನು ಪೂಜಿಸುತ್ತಾ, ಮುಂದೆ ತಿರುನಾರಾಯಣನ ಬಳಿಗೆ ಬಂದು , ನಾನು ಸಾಧ್ಯವಾದರೆ ಶ್ರೀದೇವಿ ಭೂದೇವಿ ಮಧ್ಯೆ ಇರುವ ಸಂಪತ್ಕುಮಾರ ನ್ನು (ಶೆಲ್ವಪಿಳ್ಳೈ ಉತ್ಸವ ಮೂರ್ತಿ ) ಆರಾಧಿಸಿ , ಬೇರೆ ಯಾವ ಥಾಪಗಳು ( ತಪಸ್ಸು) ಇದಕ್ಕಿಂತ ಶ್ರೇಷ್ಠವಾಗಿರಬಹುದೇ?)

ಅವರು ಸರಿಯಾದ [ಸಾಂಪ್ರದಾಯಿಕ] ಕ್ರಮದಲ್ಲಿ ಭಾರಿ ವಿಶ್ವಾಸದಿಂದ ಹೋದರು, ತಮ್ಮ ರಕ್ಷಣೆಯಾಗಿ ತಿರುನಾರಾಯಣ ದಿವ್ಯ ಪಾದಗಳನ್ನು ಹಿಡಿದುಕೊಂಡರು; ಅವರು ಎಂಪೆರುಮಾನರನ್ನು (ರಾಮಾನುಜರ್) ಪೂಜಿಸಿದರು ಮತ್ತು ಅವರ ಪುರುಷಕಾರಮ್ (ಶಿಫಾರಸು ಮಾಡುವ ಪಾತ್ರ) ಯೊಂದಿಗೆ ಯಧುಗಿರಿ ನಾಚ್ಚಿಯಾರ್ (ಶ್ರೀ ಮಹಾಲಕ್ಷ್ಮಿ), ಶೆಲ್ವಪಿಳ್ಳೈ (ಉತ್ಸವ ವಿಗ್ರಹಂ) ಮತ್ತು ತಿರುನಾರಾಯಣನ್ (ಮೂಲ ವಿಗ್ರಹಂ) ರನ್ನು ಪೂಜಿಸಿದರು. ಅವರು ಅಲ್ಲಿಯೇ ನೆಲೆಸಿ ಎಂಪೆರುಮಾನಾರ್ ಅವರ ಸನ್ನಿಧಿಯಲ್ಲಿ, ಎಂಪೆರುಮಾಣಾರ್ ಗೆ ಸಂತೋಷವಾಗುವಂತೆ [ಇರಾಮಾನುಸ ನುಟ್ರ್ ಅಂದಾದಿ ಪಾಸುರಂ 19 ರಲ್ಲಿ ಬರೆದಿರುವಂತೆ” ಉರುಪೇರುಮ್ ಸೆಲ್ವಮ್ಮ್ ” ( ತಿರುವಾಯ್ಮೋಲಿಯೇ ಸಮರ್ಥನೀಯ ನಿಧಿ )] ನಾಳುರಾಚ್ಚಾನ್  ಪಿಳ್ಳೈ ಯಿಂದ ಈಡನ್ನು ಕಲಿತರು . ಉಪದೇಶ ರತ್ತಿನಮಾಲೈ ಪಾಸುರಂ 49 “ಮೇಲೋರ್ಕ್ಕಿಂದಾರ್…” (ಉನ್ನತ ಜನರಿಗೆ [ಅರ್ಥಗಳನ್ನು] ಕೊಟ್ಟರು) ನಲ್ಲಿ ಹೇಳಿರುವಂತೆಯೇ ನಾಳುರಾಚ್ಚಾನ್  ಪಿಳ್ಳೈ ಕೂಡ ಕರುಣೆಯಿಂದ ಅವರಿಗೆ ಪೂರ್ಣ ಅರ್ಥಗಳನ್ನು ಹೇಳಿದರು. ತಿರುಮಲೈ ಆಳ್ವಾರರು ಪಿಳ್ಳೈ ಅವರ ದಿವ್ಯ ಪಾದಗಳಿಗೆ ಸಾಷ್ಟಾಂಗ ನಮಸ್ಕಾರ ಮಾಡಿದರು ಮತ್ತು ಆಳ್ವಾರರ ದಿವ್ಯ ಪ್ರಬಂಧಗಳ ಅರ್ಥವನ್ನು ಕರುಣೆಯಿಂದ ಹಂಚಿಕೊಳ್ಳುವಂತೆ ಹೇಳಿದರು. ನಾಳುರಾಚ್ಚಾನ್  ಪಿಳ್ಳೈ ಕೂಡ ತಿರುಮಲೈ ಆಳ್ವಾರರಲ್ಲಿ ಜ್ಞಾನ ಭಕ್ತಿ ವೈರಾಗ್ಯ ಮತ್ತು ಪ್ರಾಪಂಚಿಕ ಅನ್ವೇಷಣೆಗಳಲ್ಲಿ ಆಳವಾದ ನಿರ್ಲಿಪ್ತತೆ ಗುಣಗಳನ್ನು ಕಂಡು, ಅವರ ಬಗ್ಗೆ ವಿಶೇಷ ಗೌರವವನ್ನು ಬೆಳೆಸಿ ಕೊಂಡಿದರು . ಅವರು ತಿರುಮಲೈ ಆಳ್ವಾರರಿಗೆ ತಿರುವಾರಾಧನೆ ಪೆರುಮಾಳ್ (ಪ್ರತಿದಿನದ ಪೂಜಾ ಮಾಡುವ ವಿಗ್ರಹವನ್ನು) “ಇನಯವರ ತಲೈವನ್ ” ನನ್ನು (ದನ ಮೇಯಿಸುವವರು, ಅಂದರೆ ಕೃಷ್ಣಾ) ಆರಾಧಿಸಲು ಹೇಳಿದರು.

ಈ ಶ್ಲೋಕದಲ್ಲಿ ಹೇಳಿರುವಂತೆ

ದೇವಾಧಿಪಾಥ್ಸಮಾಧಿಗಂಯ ಸಹಸ್ರಗಿಥೇರ್ ಭಾಷ್ಯಮ್ ನಿಕುಟಮಪಿಯ : ಪ್ರಧಾಯಾಮ್ ಚಕಾರ
ಕುಂತೀಪುರೋತ್ವಮುಮ್ ಶರಣಂ ಭಜೇಹಂ ಶ್ರೀ ಶೈಲನಾಥ ಗುರುಭಕ್ತಿ ಪೃಥಮ್ ಶಟಾರೌ

(ದೇವಾಧಿಪರ್ ಎಂದೂ ಕರೆಯಲ್ಪಡುವ ನಾಳುರಾಚ್ಚಾನ್  ಪಿಳ್ಳೈ ಅವರಿಂದ ನಿಗೂಢ ತಿರುವಾಯ್ಮೋಳಿ ಪಾಸುರಂಗಳಿಗೆ ಭಾಷ್ಯಂ (ವ್ಯಾಖ್ಯಾನ) ಈಡು ಮುಪ್ಪತ್ತಾರಾಯಿರಂ ಕಲಿತ ಆ ತಿರುಮಲೈ ಆಳ್ವಾರರಲ್ಲಿ ನಾನು ಆಶ್ರಯ ಪಡೆಯುತ್ತೇನೆ. ತಿರುಮಲೈ ಆಳ್ವಾರರು ನಂತರ ಆ ಅರ್ಥಗಳನ್ನು ಬಹಳ ಪ್ರಸಿದ್ಧಗೊಳಿಸಿದರು ಮತ್ತು ನಮ್ಮಾಳ್ವಾರ್ ಬಗ್ಗೆ ಆಳವಾದ ಭಕ್ತಿ ಹೊಂದಿದ್ದರು; ಅವರು ಕುಂತಿನಗರದಲ್ಲಿ ಜನಿಸಿದರು).ದೇವ ಪೆರುಮಾಳ್ (ಕಾಂಚಿಪುರಂ) ಕೃಪೆಗೆ ಪಾತ್ರರಾದ ತಿರುಮಲೈ ಆಳ್ವಾರರು ನಮ್ಮಾಳ್ವಾರ್ ಅವರ ದಿವ್ಯ ಪಾದಗಳ ಬಗ್ಗೆ ಅಪಾರವಾದ ಪ್ರೀತಿಯನ್ನು ಬೆಳೆಸಿಕೊಂಡರು. ಶ್ರೀ ರಾಮಾಯಣದಲ್ಲಿ “ಅಜಗಾಮ ಮುಹೂರ್ತೇನ” (ಕೆಲವೇ ಕ್ಷಣಗಳಲ್ಲಿ) ಹೇಳಿರುವಂತೆ, ಅವರು ನಮ್ಮಾಳ್ವಾರ್ ನೆಲೆಸಿದ್ದ ತಿರುಕ್ಕನಂಬಿಗೆ ಹೋದರು, ಆಳ್ವಾರರ ದಿವ್ಯ ಪಾದಗಳಿಗೆ ಸಾಷ್ಟಾಂಗ ನಮಸ್ಕಾರ ಮಾಡಿ, ಆಳ್ವಾರರ ಮೇಲಿನ ವಾತ್ಸಲ್ಯವನ್ನು ಸುರಿಸಲು ನಿರ್ಧರಿಸಿ, ಆಳ್ವಾರನ್ನು ತಿರುಕ್ಕನಂಬಿ ಯಿಂದ ಆಳ್ವಾರ ತಿರುನಗರಿ ಕರೆದು ಕೊಂಡು ಬಂದರು . ಅದಕ್ಕೆ ಅನುಗುಣವಾಗಿ, ಅವರು ಆರಂಭದಲ್ಲಿ ಆಳ್ವಾರ ತಿರುನಗರಿಗೆ ಹೋದರು, ಅಲ್ಲಿ ಬೆಳೆದ ಕಾಡು ಗಿಡಗಳನ್ನೆಲ್ಲ ತೆಗೆದುಹಾಕಿದರು, ಆಳ್ವಾರರ ಪಾಸುರಂ “ನಲ್ಲಾರ್ ಪಲರ್ ವಾಜ್ ಕುರುಗೂರ್” (ಅನೇಕ ಮಹಾನ್ ವ್ಯಕ್ತಿಗಳು ವಾಸಿಸುವ ಕುರುಗೂರು) ಎನ್ನುವ ಹಾಗೆ ಮತ್ತೆ ಅದನ್ನು ವಾಸಯೋಗ್ಯ ಸ್ಥಳವನ್ನಾಗಿ ಮಾಡಿದರು.ನಂತರ ಅವರು ನಮ್ಮಾಳ್ವಾರ್ ಅವರ ದೈವಿಕ ವಿಗ್ರಹವನ್ನು ತಮ್ಮ ಮೂಲ ಸ್ಥಳದಲ್ಲಿ ತುಂಬ ಶ್ರದ್ದೆಯಿಂದ ಕರುಣಾಮಯವಾಗಿ ಪ್ರತಿಷ್ಠಾಪಿಸಿದರು.

ಶತಕೋಪಮುನಿಮ್ ವಂದೇ ಶಠಾಣಾಮ್ ಬುದ್ಧಿ ಧೂಷಣಂ
ಅಜ್ಞಾನಾಮ್ ಜ್ಞಾನಜನಕಂ ತಿಂದ್ರಿಣೀ ಮೂಲ ಸಂಶ್ರಯಂ

(ಬಹಳ ಕರುಣೆಯಿಂದ ದಿವ್ಯವಾದ ಹುಣಿಸೆ ಮರದ ಕೆಳೆಗೆ ನೆಲೆಸಿರುವ ಶ್ರೀ ಶಠಕೋಪ ಮುನಿಯ ದಿವ್ಯ ಪಾದಗಲ್ಲಿಗೇ ಸಾಷ್ಟಾಂಗವಾಗಿ ನಮಸ್ಕರಿಸುತೇನೆ. ಅಜ್ಞಾನಿಗಳಿಗೆ ಎಂಪೆರುಮಾನ್ ಬಗ್ಗೆ ಜ್ಞಾನವನ್ನು ನೀಡಿ ಮತ್ತು ಸತ್ವ ಬುದ್ಧಿಯನ್ನು ಅವಲಂಬಿಸುವಂತೆ ಮಾಡಿದ ಶ್ರೀ ಶಠಕೋಪ ಮುನಿಗಳಿಗೆ ಪ್ರಣಾಮಗಳು) .ಅವರ ಉದ್ದೇಶವನ್ನು ಪೂರ್ಣಗೊಳಿಸಿದರು . ಆ ನಂತರ ನಮ್ಮಾಳ್ವಾರ್ ನ್ನು ಆರಾಧಿಸಿದರಿಂದ , ಅವರಿಗೆ ಸ್ವತಃ ನಮ್ಮಾಳ್ವಾರ್ ಅವರು ಶ್ರೀ ಶಠಕೋಪ ದಾಸರ್ (ನಮ್ಮಳ್ವಾರ್ ಅವರ ದೈವಿಕ ಸೇವಕ) ಎಂಬ ಬಿರುದನ್ನು ಅರ್ಚಕರ ಮೂಲಕ ನೀಡಿದರು. ಅವರು ಆಳ್ವಾರ್ ತಿರುನಗರಿಯಲ್ಲಿ ದೀರ್ಘಕಾಲ ಇದ್ದು, ಎಲ್ಲಾ ಸಮಯದಲ್ಲೂ ಎಲ್ಲಾ ಸೇವೆಗಳನ್ನು ನಡೆಸುತ್ತಿದ್ದರು, ಅದನ್ನು ತಮ್ಮ ನಿತ್ಯದ ದಿನಚರಿಯಂತೆ ಮಾಡಿಕೊಂಡಿದರು .

ಅನುವಾದ – ಅಡಿಯೇನ್ ಸುಭದ್ರಾ ರಾಮಾನುಜ ದಾಸಿ
ಪುರಾವೆ ಓದುವಿಕೆ -ಅಡಿಯೇನ್ ಕೊದೈ ರಾಮಾನುಜ ದಾಸಿ

ಮೂಲ : https://granthams.koyil.org/2021/08/04/yathindhra-pravana-prabhavam-20-english/

ಆರ್ಕೈವ್ ಮಾಡಲಾಗಿದೆ – https://granthams.koyil.org

ಪ್ರಮೇಯಮ್ (ಗುರಿ) – https://koyil.org
ಪ್ರಮಾಣಮ್ (ಗ್ರಂಥಗಳು) – https://granthams.koyil.org
ಪ್ರಮಾತಾ (ಬೋಧಕರು) – https://acharyas.koyil.org
ಶ್ರೀವೈಷ್ಣವ ಎಜುಕೇಶನ್ / ಮಕ್ಕಳ ಸಾಹಿತ್ಯ – https://pillai.koyil.org

2 thoughts on “ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೨೦”

Leave a Comment