ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೨೬

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ

ಪೂರ್ಣ ಸರಣಿ

<< ಹಿಂದಿನ ಲೇಖನವನ್ನು

ತಿರುವಾಯ್ಮೊಳಿ ಪಿಳ್ಳೈಯವರು ನಾಯನಾರನ್ನು ಉಡೈಯವರ (ರಾಮಾನುಜರ) ದೈವಿಕ ಪಾದಗಳೊಂದಿಗೆ ತೊಡಗಿಸಿಕೊಂಡರು.

ಪಿಳ್ಳೈಯವರು (ಇನ್ನು ಮುಂದೆ, ಪಿಳ್ಳೈ ಎಂಬ ಪದವು ತಿರುವಾಯ್ಮೊಳಿ ಪಿಳ್ಳೈಯನ್ನು ಸೂಚಿಸುತ್ತದೆ ಮತ್ತು ನಾಯನಾರ್ ಎಂಬ ಪದವು ಅಳಗಿಯ ಮನವಾಳ ಪೆರುಮಾಳ್ ನಾಯನಾರನ್ನು ಸೂಚಿಸುತ್ತದೆ. ಅಂದರೆ ಅವರು ಪೂರ್ವಾಶ್ರಮದಲ್ಲಿರುವ ಮಾಮುನಿಗಳು) ಸಂತೋಷದಿಂದ ಉಡೈಯವರ ದಿವ್ಯ ಪಾದಗಳನ್ನು ನಾಯನಾರರಿಗೆ ತೋರಿಸಿದರು. ಇರಾಮಾನುಜ ನೂಟ್ರಂದಾದಿ ಪಾಸುರದಲ್ಲಿ ಉಲ್ಲೇಖಿಸಿದಂತೆ ಪರಮಪುರುಷಾರ್ಥವು (ಉತ್ತಮ ಪ್ರಯೋಜನ) ” ಉನ್ ಪದಯುಗಮೇ ಕೊಂಡ ವೀಟ್ಟೈ ಏಳಿಧಿನಿಲ್ ಎಯ್ಧುವನ್ “(ನಿಮ್ಮ ದೈವಿಕ ಪಾದಗಳ ದಿವ್ಯವಾದ ನಿವಾಸವನ್ನು ನಾನು ಸುಲಭವಾಗಿ ಪಡೆಯುತ್ತೇನೆ). ಪಿಳ್ಳೈ ಕೂಡ, ರಾಮಾನುಜರ ಕಮಲದಂತಹ ದಿವ್ಯ ಪಾದಗಳಿಗೆ ಕೈಂಕರ್ಯದಲ್ಲಿ ತೊಡಗಲು ಬಯಸಿದರು, ಅವರು ಸ್ವತಃ ನಮ್ಮಾಳ್ವಾರ್ ಅವರ ದಿವ್ಯ ಪಾದಗಳನ್ನು ಆಳವಾದ ವಾತ್ಸಲ್ಯದಿಂದ ತಮ್ಮ ಧಾರಕ ಇತ್ಯಾದಿಯಾಗಿ ಇಟ್ಟುಕೊಂಡು(ಪೋಷಣೆ ಮತ್ತು ಆನಂದದ ಮೂಲ) ತೊಡಗಿಸಿಕೊಂಡಿದ್ದರು. ಅವರು ಉಡೈಯವರಿಗಾಗಿ ಪ್ರತ್ಯೇಕ ದೇವಾಲಯವನ್ನು ನಿರ್ಮಿಸಿದರು, ದೇವಾಲಯದ ಸುತ್ತಲೂ ನಾಲ್ಕು ಬೀದಿಗಳನ್ನು ನಿರ್ಮಿಸಿದರು, ಆ ಸ್ಥಳವನ್ನು ರಾಮಾನುಜ ಚತುರ್ವೇದಿ ಮಂಗಲಂ ಎಂದು ಕರೆದರು, ಆ ಬೀದಿಗಳಲ್ಲಿ ವಿದ್ಯಾವಂತರು ವಾಸಿಸುವಂತೆ ಮಾಡಿದರು, ಇದರಿಂದಾಗಿ ಅವರು ನಿರಂತರವಾಗಿ ರಾಮಾನುಜರನ್ನು ಪೂಜಿಸುತ್ತಾ ಸುಖವಾಗಿ ಬದುಕುತ್ತಿದ್ದರು.

ನಾಯನಾರ್ ಯತಿರಾಜ ವಿಂಶತಿಯನ್ನು ರಚಿಸಿದರು

ನಾಯನಾರ್, ಪಿಳ್ಳೈ ಅವರು ಕರುಣೆಯಿಂದ ತೋರಿಸಿದಂತೆ, ರಾಮಾನುಜರ ದೈವಿಕ ಪಾದಗಳಿಗೆ ಎಷ್ಟು ಸಮರ್ಪಿತರಾದರು ಎಂದರೆ ಅವರನ್ನು ಯತೀ೦ದ್ರ ಪ್ರವಣರ್ ಎಂದು ಕರೆಯಲಾಯಿತು (ರಾಮಾನುಜರ ಬಗ್ಗೆ ಆಳವಾದ ಪ್ರೀತಿಯುಳ್ಳವರು). ಆ ವಾತ್ಸಲ್ಯದ ಫಲವಾಗಿ ಅವರು ರಾಮಾನುಜರನ್ನು ಕುರಿತು ಯತಿರಾಜ ವಿಂಶತಿಯನ್ನು ರಚಿಸಿದರು.
ಪಾಶುರದಲ್ಲಿ ಹೇಳಿರುವಂತೆ ನಂತರದ ವರ್ಷಗಳಲ್ಲಿ ಬಂದವರಿಗೂ ಅನುಕೂಲವಾಗುವ ಈ ಉಪಕಾರದ ಕಾರ್ಯಕ್ಕಾಗಿ ಅವರನ್ನು ಪ್ರಶಂಸಿಸಲಾಯಿತು.

ವಲ್ಲಾರ್ಗಳ್ ವಾಳ್ತುಮ್ ಕುರುಕೇಸರ್ ತಮ್ಮೈ ಮನತ್ತು ವೈತ್ತು
ಸೊಲ್ಲಾರ ವಾಳ್ತುಮ್ ಮನವಾಳ ಮಾಮುನಿ ತೊಂಡರ್ ಕುಳಾಮ್
ಎಲ್ಲಾಮ್ ತಳೈಕ್ಕ ಯತಿರಾಜವಿಂಶತಿ ಇನ್ರಳಿತ್ತೋನ್
ಪುಲ್ಲಾರವಿಂದ ತಿರುತ್ತಾಳ್ ಇರಂಡೈಯುಮ್ ಪೊಟ್ರು ನೆಂಜೇ

(ಮನವಾಳ ಮಾಮುನಿಯು ವಿದ್ವಾಂಸರಿಂದ ಸ್ತುತಿಸಲ್ಪಡುವ ನಮ್ಮಾಳ್ವಾರನ್ನು ಮನಸ್ಸಿನಲ್ಲಿಟ್ಟುಕೊಂಡು ತನ್ನ ಮಾತಿನ ಮೂಲಕ ಸ್ತುತಿಸಿದರು. ಅಂತಹ ಮನವಾಳ ಮಾಮುನಿಯು ಭಕ್ತ ಸಮೂಹಗಳ ಶ್ರೇಯೋಭಿವೃದ್ಧಿಗಾಗಿ ಇಪ್ಪತ್ತು ಶ್ಲೋಕಗಳಿಂದ ಕೂಡಿದ ಯತಿರಾಜ ವಿಂಶತಿಯನ್ನು ರಚಿಸಿದರು. ” ಓ ನನ್ನ ಹೃದಯವೇ! ಅಂತಹ ಮನವಾಳ ಮಾಮುನಿಯ ದಿವ್ಯ ಪಾದಕಮಲಗಳನ್ನು ಸ್ತುತಿಸು”.)

ಯತಿರಾಜ ವಿಂಶತಿಯನ್ನು ಕೇಳಿದ ನಂತರ, ಪಿಳ್ಳೈ ಅವರು ತುಂಬಾ ಸಂತೋಷಪಟ್ಟರು ಮತ್ತು ತಿರುಪ್ಪುಳಿಯಾಳ್ವಾರ್ (ನಮ್ಮಾಳ್ವಾರ್ ಅವರು ತಮ್ಮ ಜೀವನದ ಉದ್ದಕ್ಕೂ ನೆಲೆಸಿದ್ದ ದೈವಿಕ ಹುಣಸೆ ಮರ) ಬಳಿ ಅವರು ಕಂಡುಕೊಂಡ ಉಡೈಯವರ್ ಅವರ ದೈವಿಕ ವಿಗ್ರಹವನ್ನು ಕರುಣೆಯಿಂದ ಅವರಿಗೆ ನೀಡಿದರು. ಚತುರ್ವೇದಿ ಮಂಗಲದಲ್ಲಿ ಭವಿಷ್ಯದಾಚಾರ್ಯ ಸನ್ನಿಧಿಯಲ್ಲಿ ಸ್ಥಾಪಿಸಲಾದ ಉಡೈಯವರ್ ಅವರ ಉತ್ಸವ ಮೂರ್ತಿಬಗ್ಗೆ ಒಂದು ನಿರೂಪಣೆ ಇದೆ, ಇದು ತಲೆಮಾರುಗಳಿಂದ ಗಣ್ಯ ವ್ಯಕ್ತಿಗಳಿಂದ ಕೇಳಿಬರುತ್ತಿದೆ. ಮಧುರಕವಿ ಆಳ್ವಾರರು (ನಮ್ಮಾಳ್ವಾರ್ ಅವರ ವಿಗ್ರಹವನ್ನು ಹೊಂದಲು ಬಯಸುತ್ತಾರೆ) ತಮ್ಮ ಕನಸಿನಲ್ಲಿ ನಮ್ಮಾಳ್ವಾರ್ ಅವರಿಂದ ದೀಕ್ಷೆ ಪಡೆದಂತೆ, ತಾಮರಭರಣಿಯ ನೀರನ್ನು ಕುದಿಸಿದರು. ಆರಂಭದಲ್ಲಿ, ಉಡೈಯವರ್ ಅವರ ವಿಗ್ರಹವು ಪ್ರಕಟವಾಯಿತು, ಮಧುರಕವಿ ಆಳ್ವಾರರು ತಮ್ಮ ದಿವ್ಯ ಮನಸ್ಸಿನ ಮೂಲಕ ಆಳ್ವಾರರಿಗೆ “ಈ ವಿಗ್ರಹವು ನಿಮ್ಮ ದೈವಿಕ ರೂಪವಲ್ಲ” ಎಂದು ಹೇಳಿದರು. ಆಳ್ವಾರರು ಅವರಿಗೆ ಹೇಳಿದರು “ಇದು ತಿರುವಾಯ್ಮೊಳಿ 4.3.1 ರ “ಪೊಲಿಗ ಪೋಲಿಗ” ಪಾಸುರಂಗೆ ಸಂಬಂಧಿಸಿರುವ ಭವಿಷ್ಯದಾಚಾರ್ಯರ ವಿಗ್ರಹ. ಪಾಸುರ “ಕಲಿಯುಂ ಕೆಡುಂ ಕಂಡುಕೊಣ್ಮಿನ್ “ನಲ್ಲಿ ಹೇಳಿರುವಂತೆ ಕಲಿಪುರುಷನೂ ಓಡಿಹೋಗುವ ಹಾಗೆ ಅವತರಿಸಲಿದ್ದಾರೆ. ಅವರನ್ನು ಪೂಜಿಸಿ, ತಾಮರಭರಣಿಯ ನೀರನ್ನು ಮತ್ತೆ ಕುದಿಸಿ, ನಾವು ಅರ್ಚಾವಿಗ್ರಹವಾಗಿ ಕಾಣಿಸಿಕೊಳ್ಳುತ್ತೇವೆ. ಮಧುರಕವಿ ಆಳ್ವಾರರು ನಮ್ಮಾಳ್ವಾರ್ ಅವರು ಹೇಳಿದಂತೆ ಮಾಡಿದರು ಮತ್ತು ಆಳ್ವಾರ್ ತಿರುನಗರಿ ದೇವಸ್ಥಾನದಲ್ಲಿ ಕಂಡುಬರುವ ಉಪದೇಶ ಮುದ್ರೆಯೊಂದಿಗೆ (ಇತರರಿಗೆ ಸೂಚನೆ ನೀಡುವ ಸಂಕೇತ) ನಮ್ಮಾಳ್ವಾರ್ ಅವರ ದೈವಿಕ ರೂಪವು ಸ್ವತಃ ಪ್ರಕಟವಾಯಿತು ಎಂದು ಗಣ್ಯರು ಹೇಳುತ್ತಾರೆ. ಐತಿಹ್ಯಗಳ ಪ್ರಕಾರ, ಧಾಳಿಕೋರರು ಬಂದಾಗ ಆಳ್ವಾರರು ದೇವಾಲಯದಿಂದ ವಲಸೆ ಹೋಗಬೇಕಾಗಿ ಬಂದು, ಉಡೈಯವರ್ ವಿಗ್ರಹವನ್ನು ತಿರುನಗರಿ ದೇವಸ್ಥಾನದ ಹುಣಸೆ ಮರದ ಬಳಿ ಹೂಳಲಾಯಿತು. ಈ ವಿಗ್ರಹವನ್ನು ಆಳ್ವಾರರೊಂದಿಗೆ ಅವರ ಸನ್ನಿಧಿಯಲ್ಲಿ ಪೂಜಿಸಬೇಕು ಎಂದು ಗಣ್ಯರು ಹೇಳಿದ್ದಾರೆ. ಈ ನಂತರ ದೇವಾಲಯದ ಶುಚಿಗೊಳಿಸುವಿಕೆಯ ಸಮಯದಲ್ಲಿ ಉಡೈಯವರ್ ವಿಗ್ರಹವು ತಿರುವಾಯ್ಮೊಳಿ ಪಿಳ್ಳೈ ಅವರಿಗೆ ಕಂಡುಬಂದಿದೆ.

ಈ ವಿಗ್ರಹವನ್ನು ಸ್ವೀಕರಿಸಿದ ನಂತರ ನಾಯನಾರ್ ತುಂಬಾ ಭಾವಪರವಶರಾಗಿದ್ದರು ಮತ್ತು ಅವರು ಯತಿರಾಜ ವಿಂಶತಿ 19 ರಲ್ಲಿ ಹೇಳಿದಂತೆ “ಶ್ರೀಮನ್ ಯತೀ೦ದ್ರ ! ತವದಿವ್ಯ ಪಾದಾಬ್ಜ ಸೇವಾ೦ ಶ್ರೀಶೈಲನಾಥ ಕರುಣಾ ಪರಿಣಾಮ ಧತ್ಥಾ೦ ” (ಓ ಪ್ರಖ್ಯಾತ ರಾಮಾನುಜಾ! ನಿಮ್ಮ ದಿವ್ಯ ಕಮಲದಂತಹ ಪಾದಗಳ ಸೇವೆಯು ಶ್ರೀ ಶೈಲನಾಥರ (ತಿರುವಾಯ್ಮೊಳಿ ಪಿಳ್ಳೈ) ಅವರ ದೈವಿಕ ಕರುಣೆಯಿಂದಾಗಿ ; ಮತ್ತು ಈ ಮುಂದಿನ ಶ್ಲೋಕದಲ್ಲಿ ಉಲ್ಲೇಖಿಸಿದಂತೆ “ಯತೀ೦ದ್ರಮೇವ ನಿರಂತರಮ್ ನಿಷೇವೇ ದೈವದಂ ಪರಂ” (ಸದಾ ಉಡೈಯವರಿಗೆ ಸೇವೆಯನ್ನು ನಡೆಸುತ್ತಿದ್ದು, ಎಂಪೆರುಮಾನರೇ (ರಾಮಾನುಜರ್) ಅವರ ಸರ್ವೋಚ್ಚ ಅಸ್ತಿತ್ವವೆಂದು ದೃಢವಾಗಿ ಪರಿಗಣಿಸುತ್ತಿದರು. ನಮ್ಮಾಳ್ವಾರ್ ಮತ್ತು ಎಂಪೆರುಮಾನಾರಿಗೆ ಸೇವೆ ಸಲ್ಲಿಸುವುದು ಅತ್ಯುನ್ನತ ಕೈಂಕರ್ಯವೆಂದು ಪರಿಗಣಿಸಿದ ಪಿಳ್ಳೈ, ನಾಯನಾರವರ ಜ್ಞಾನಭಕ್ತ್ಯಾದಿಯನ್ನು ನೋಡುತ್ತಲೇ ಇದ್ದರು ಮತ್ತು ಇವುಗಳನ್ನು ತಮ್ಮ ಅಪೇಕ್ಷಿತ ವಿಷಯಗಳಾಗಿ ಪರಿಗಣಿಸಿ ತುಂಬಾ ಬೆಂಬಲ ನೀಡಿದರು.

ಅನುವಾದ – ಅಡಿಯೇನ್ ಸುಭದ್ರಾ ರಾಮಾನುಜ ದಾಸಿ
ಪುರಾವೆ ಓದುವಿಕೆ -ಅಡಿಯೇನ್ ಕೊದೈ ರಾಮಾನುಜ ದಾಸಿ

ಮೂಲ : https://granthams.koyil.org/2021/08/10/yathindhra-pravana-prabhavam-26-english/

ಆರ್ಕೈವ್ ಮಾಡಲಾಗಿದೆ – https://granthams.koyil.org

ಪ್ರಮೇಯಮ್ (ಗುರಿ) – https://koyil.org
ಪ್ರಮಾಣಮ್ (ಗ್ರಂಥಗಳು) – https://granthams.koyil.org
ಪ್ರಮಾತಾ (ಬೋಧಕರು) – https://acharyas.koyil.org
ಶ್ರೀವೈಷ್ಣವ ಎಜುಕೇಶನ್ / ಮಕ್ಕಳ ಸಾಹಿತ್ಯ – https://pillai.koyil.org

Leave a Comment