ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೩೧

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ

ಪೂರ್ಣ ಸರಣಿ

<< ಹಿಂದಿನ ಲೇಖನವನ್ನು

ನಂತರ ನಾಯನಾರ್ ಇತರರೊಂದಿಗೆ, ಶ್ರೀ ಮಹಾಲಕ್ಷ್ಮಿಯ ಪತಿಯಾದ ತೆನ್ನರಂಗನ (ಶ್ರೀರಂಗನಾಥನ್) ಕಮಲದಂತಹ ಪಾದಗಳಿಗೆ ರಕ್ಷಣಾತ್ಮಕ ಪಾದುಕೆ ಎಂದು ಪರಿಗಣಿಸಲಾದ ಶಟಕೋಪರ್ (ನಮ್ಮಾಳ್ವಾರ್) ಸನ್ನಿಧಿಗೆ ಹೋದರು. ನಾಯನಾರ್ ಶ್ರೀರಂಗನಾಥನನ್ನು ಪೂಜಿಸಿ, ಪ್ರದಕ್ಷಿಣೆ ಹಾಕಿ, ಇರಾಮಾನುಜ ನೂಟ್ರಂದಾದಿಯಲ್ಲಿ ‘ಅಂಗಯಲ್ ಪಾಯ್ ವಯಲ್ ತೆನ್ನರಂಗಮ್ ಅಣಿಯಾಗ ಮನ್ನುಮ್ ಪಂಗಯಮಾಮಲರ್ ಪಾವೈ’ (ದೊಡ್ಡ ಕಮಲದ ಹೂವಿನ ಮೇಲೆ ಕುಳಿತಿರುವ ಶ್ರೀರಂಗನಾಚ್ಚಿಯಾರ್, ಸುಂದರವಾದ ಮೀನುಗಳನ್ನು ಹೊಂದಿರುವ ಹೊಲಗಳಿಂದ ಸುತ್ತುವರೆದಿರುವ ಶ್ರೀರಂಗದ ದಕ್ಷಿಣದ ನಿವಾಸಕ್ಕೆ ದೈವಿಕ ಆಭರಣವಾಗಿ ಹೊಳೆಯುತ್ತಾರೆ) ಎಂದು ಸ್ತುತಿಸುವ ಶ್ರೀರಂಗನಾಚ್ಚಿಯಾರ್ ಅವರ ಸನ್ನಿಧಿಯನ್ನು ತಲುಪಿದರು, “ಶ್ರೀರಂಗರಾಜ ಮಹಿಷಿಂ ಶ್ರೀಯಾಮಾಶ್ರಯಾಮ:” ( ಶ್ರೀರಂಗದ ಸಂಪತ್ತು, ಶ್ರೀರಂಗರಾಜನ ದಿವ್ಯ ಪತ್ನಿಯಾದ ಶ್ರೀರಂಗನಾಚ್ಚಿಯಾರ್ ಅವರ ದಿವ್ಯ ಪಾದಗಳನ್ನು ನಾವು ಪಡೆದುಕೊಂಡಿದ್ದೇವೆ) ಎಂದು ಹೇಳುತ್ತಾ ಅವರ ದಿವ್ಯ ಪಾದಗಳನ್ನು ಪೂಜಿಸಿದರು ಮತ್ತು ಅವರ ದಿವ್ಯ ಅನುಗ್ರಹವನ್ನು ಪಡೆದರು. ನಂತರ ಅವರು ದೇವಾಲಯದ ಒಳಗೆ ಹೋಗಿ, ದೈವಿಕ ಮಂಟಪಗಳ ಮೂಲಕ ಹೋಗಿ, ಬಲಿಪೀಠದ ಮುಂದೆ (ನಿರ್ದಿಷ್ಟ ಸಮಯದಲ್ಲಿ ದೈವಿಕ ಆಹಾರವನ್ನು ಅರ್ಪಿಸುವ ಎತ್ತರದ ರಚನೆ) ಸಾಷ್ಟಾಂಗ ನಮಸ್ಕಾರ ಮಾಡಿದರು. ನಂತರ ಶ್ರೀರಂಗನಾಥನ ಮುಖ್ಯ ಸನ್ನಿಧಿಯೊಳಗೆ ಹೋಗಿ, ಅದನ್ನು ಪ್ರದಕ್ಷಿಣೆ ಹಾಕಿ, ಪ್ರಣವಾಕಾರ ವಿಮಾನವನ್ನು (ಶ್ರೀರಂಗನಾಥನ ಗರ್ಭಗುಡಿಯ ಮೇಲಿರುವ ಮುಖ್ಯ ಗೋಪುರ, ಇದು ಪ್ರಣವಂ ರೂಪದಲ್ಲಿದ್ದು, ಇದನ್ನು ಬ್ರಹ್ಮನು [ಸತ್ಯಲೋಕದಲ್ಲಿ] ಪೂಜಿಸುತ್ತಾರೆ) ಮತ್ತು ಸೇನೈ ಮುದಲಿಯಾರ್ ಸನ್ನಿಧಿಯನ್ನು (ವಿಷ್ವಕ್ಸೇನರ್) ನಮಸ್ಕರಿಸಿದರು ,ಅೞಗಿಯ ಮಣವಾಳನ್ (ಶ್ರೀ ರಂಗನಾಥನ್) ನ ಮುಖ್ಯ ದಿವ್ಯ ಮಂಟಪ (ಸಭಾಂಗಣ ಅಥವಾ ಮಂಟಪದಂತಹ ರಚನೆ) ವನ್ನು ಪ್ರವೇಶಿಸಿ, ಅಲ್ಲಿ ಸಾಷ್ಟಾಂಗ ನಮಸ್ಕಾರ ಮಾಡಿ “ ಆೞಿವಣ್ಣ ! ನಿನ್ ಅಡಿಯಿನೈ ಅಡೈನ್ಧೇನ್ ಅಣಿಪೊೞಿಲ್ ತಿರುವರಂಗತ್ತಮ್ಮಾನೇ!” (ಓ ಸಾಗರದ ಬಣ್ಣ ಹೊಂದಿರುವವನೇ! ಓ ಕಾವೇರಿಯಿಂದ ಸುತ್ತುವರೆದಿರುವ ತಿರುವರಂಗದಲ್ಲಿ ವಾಸಿಸುವವನೇ! ನಾನು ನಿನ್ನ ದಿವ್ಯ ಪಾದಗಳನ್ನು ಪಡೆದುಕೊಂಡಿದ್ದೇನೆ) ಎಂದು ಹೇಳಿದರು. ಅವನು ಪೆರಿಯ ತಿರುವಡಿಯನ್ನು (ಗರುಡ) ನಮಸ್ಕರಿಸಿದರು, ದ್ವಾರಪಾಲಕರನ್ನು (ದ್ವಾರವನ್ನು ರಕ್ಷಿಸುವ ಕಾವಲುಗಾರರ ವಿಗ್ರಹದಿಂದ) ಅನುಮತಿ ಪಡೆದರು, ತಿರುಮಣತ್ತೂಣ್ (ಗರ್ಭಗುಡಿಯ ಹೊರಗೆ ಪೆರಿಯ ಪೆರುಮಾಳಿನ ಮುಂದೆ ಇರುವ ಎರಡು ಬೃಹತ್ ಕಂಬಗಳು) ಬಳಿ ಎಂಪೆರುಮಾನ್’ನನ್ನು ಹೃತ್ಪೂರ್ವಕವಾಗಿ ಸ್ತುತಿಸುತ್ತಾ ಮುಖ್ಯ ಸನ್ನಿಧಿಯನ್ನು ಪ್ರವೇಶಿಸಿದರು. ಅರುಳಿಚ್ಚೆಯಲ್ ಪಾಸುರಂಗಳಲ್ಲಿ ಉಲ್ಲೇಖಿಸಿರುವಂತೆ ಪೆರುಮಾಳ್ ತಿರುಮೊಳಿ “ಅರಂಗಮಾಕೋಯಿಲ್ ಕೊಂಡ ಕರುಂಬಿನೈ ಕಂಡು ಕಣ್ಣಿನೈ ಕಳಿತ್ತು” (ಶ್ರೀರಂಗದ ಬೃಹತ್ ದೇವಾಲಯದಲ್ಲಿ ನೆಲೆಸಿರುವ ಕಬ್ಬನ್ನು ಎರಡೂ ಕಣ್ಣುಗಳಿಂದ ಸಂತೋಷದಿಂದ ಪೂಜಿಸುತ್ತಾ), ಅವರು ತಮ್ಮ ಎರಡೂ ಕಣ್ಣುಗಳಿಂದ ದಿವ್ಯ ಪಾದಗಳನ್ನು ಆನಂದದಿಂದ ಅನುಭವಿಸುತ್ತಾ ಪೆರುಮಾಳ್ಗೆ ಮಂಗಳಾಶಾಸನವನ್ನು ಮಾಡಿದರು. ಅಮಲನಾದಿಪೀರಾನಲ್ಲಿ ತಿರುಪ್ಪಾಣಾಳ್ವಾರ್ ಪಠಿಸಿದಂತೆ, ಪೆರುಮಾಳನ್ನು ಅವರ ದಿವ್ಯ ಪಾದಗಳಿಂದ ದಿವ್ಯ ಕಿರೀಟದವರೆಗೆ ಆನಂದಿಸಿದರು, ಮೊದಲ ತಿರುವಂದಾದಿಯಲ್ಲಿ ಉಲ್ಲೇಖಿಸಿರುವಂತೆ ಆತನನ್ನು ಪೂಜಿಸದೆ ಕಳೆದುಹೋದ ದಿನಗಳಿಗಾಗಿ ದುಃಖಿತನಾಗಿದ್ದೇನೆ (ಆರಾಧನೆ ಮಾಡದೆ ಹಲವು ದಿನಗಳನ್ನು ಕಳೆದಿದ್ದೇನೆ) “ಪಡುತ್ತ ಪೈಂನಾಗನೈ ಪಳ್ಳಿಕೊಂಡಾನುಕ್ಕು ಪಲ್ಲಾಂಡು ಕೂರುದುಮೇ” (ಆದಿಶೇಷನ ಹಾಸಿಗೆಯ ಮೇಲೆ ಮಲಗಿರುವ ಆತನನ್ನು ಸ್ತುತಿಸೋಣ ಎಂದೆಂದಿಗೂ).ಅವರು ಎಂಪೆರುಮಾನನ ವ್ಯೂಹ ಸೌಹಾರ್ದಾದಿ (ತನ್ನ ಶ್ರೇಷ್ಠ ಸ್ವಭಾವ, ದಯಾಳು ಹೃದಯ ಇತ್ಯಾದಿಗಳನ್ನು ಪ್ರದರ್ಶಿಸುವ ಶುಭ ಗುಣಗಳು) ಗುಣಗಳನ್ನು ಅನುಭವಿಸಿದರು ಮತ್ತು ನಂತರ ಸೇರಪಾಂಡಿಯನ (ಅವರ ಸಿಂಹಾಸನದ ಹೆಸರು) ಸಿಂಹಾಸನದ ಮೇಲೆ (ರಾಜ ಸಿಂಹಾಸನ) ದಯೆಯಿಂದ ಕುಳಿತಿದ್ದ ನಂಪೆರುಮಾಳರನ್ನು ಪೂಜಿಸಿದರು. ಶ್ರೀರಂಗರಾಜಸ್ತವಂ ಪೂರ್ವಶತಕಂ 74 ರಲ್ಲಿ ಉಲ್ಲೇಖಿಸಿರುವ ರೀತಿಯಲ್ಲಿ ಅವರು ನಂಪೆರುಮಾಳರನ್ನು ಪೂಜಿಸಿದರು.

ಅಬ್ಜನ್ಯಸ್ತ ಪದಾಬ್ಜಮ್ ಅಂಜಿತಗದೀಸ೦ವಾಧಿಕೌಶೇಯಕಂ
ಕಿಂಚಿತ್ ಧಾಂದವಗಂಧಿಸಂಹನನಕಂ ನಿರ್ವ್ಯಾಜಮಂದಸ್ಮಿತಮ್
ಚುಡಾಸುಂಬಿಮುಖಾ೦ಬುಜಮ್ ನಿಜಭುಜಾವಿಶ್ರಾಂತಿ ದಿವ್ಯಾಯುಧಮ್
ಶ್ರೀರಂಗೇ ಶರಧಸ್ಸಥಮ್ ತಥಾಯಿತಃ ಪಾಶ್ಯೇಮ ಲಕ್ಷ್ಮೀಶಕಮ್

(ತಿರುವರಂಗದಲ್ಲಿ ಇನ್ನೂ ನೂರು ವರ್ಷಗಳ ಕಾಲ ಪೂಜಿಸೋಣ, ಶ್ರೀರಂಗನಾಥ, ಯಾರು ತನ್ನ ದೈವಿಕ ಕಮಲದಂತಹ ಪಾದಗಳನ್ನು ಕಮಲದ ಆಸನದಲ್ಲಿ ದೃಢವಾಗಿ ನೆಟ್ಟಿದ್ದಾರೆ, ತನ್ನ ದಿವ್ಯ ಸೊಂಟಕ್ಕೆ ಸೂಕ್ತವಾದ ದಿವ್ಯ ರೇಷ್ಮೆ ನಿಲುವಂಗಿಯನ್ನು ಧರಿಸಿರುವ, ನರ್ತಿಸುತ್ತಿರುವಂತೆ ದೈವಿಕ ರೂಪ ಹೊಂದಿರುವ, ನೈಸರ್ಗಿಕ ನಗುವನ್ನು ಹೊಂದಿರುವ,ದೈವಿಕ ಕಮಲದಂತಹ ಮುಖವನ್ನು ಹೊಂದಿರುವವನು ತನ್ನ ದೈವಿಕ ಕಿರೀಟವನ್ನು ಆಲಂಗಿಸಿಕೊಂಡಿದ್ದಾನೆ, ಯಾರು ವಿಶ್ರಾಂತಿ ಪಡೆಯುತ್ತಿರುವ ದೈವಿಕ ಆಯುಧಗಳನ್ನು ಹೊಂದಿದ್ದಾರೆ ಮತ್ತು ಶ್ರೀ ಮಹಾಲಕ್ಷ್ಮಿಗೆ ಪ್ರಿಯನಾದವನು).
ನಂತರ ಅವರು ಮುಮುಕ್ಷುಪ್ಪಡಿ ಧ್ವಯ ಪ್ರಕಾರನಾಮ ಸೂತ್ರಂ 21 ಅನ್ನು ಪಠಿಸಿದರು “ತಿರುಕ್ಕೈಯಿಲೇ ಪಿಡಿತ್ತ ದಿವ್ಯಾಯುಧನ್ಗಳುಮ್ ವೈತ್ತು ಅಂಜಲ್ ಎಂಡ್ರ ಕೈಯುಮ್ ಕವಿತ್ತ ಮುಡಿಯುಮ್ ಮುಖಮುಂ ಮುರುವಲುಮ್ ಆಸನಪದ್ಮತ್ಥಿಲೇ ಅಜ್ಹುಂದಿಯ ತಿರುವಡಿಗಳುಮಾಯ್ ನಿರ್ಕಿರ ನಿಲೈಯೇ ನಮಕ್ಕು ತಂಜಮ್ ” (ನಂಪೆರುಮಾಳ್ ತಮ್ಮ ದಿವ್ಯ ಕೈಗಳಲ್ಲಿ ದಿವ್ಯ ಆಯುಧಗಳನ್ನು ಹಿಡಿದು , ಯಾವುದಕ್ಕೂ ಭಯಪಡಬೇಡಿ ಎಂದು ಹೇಳುವ ರೀತಿಯಲ್ಲಿ , ಅವರ ದಿವ್ಯ ಮುಖವನ್ನು ಅಲಂಕರಿಸಿರುವ ಕಿರೀಟ, ದಿವ್ಯ ಮುಖ ಮತ್ತು ನಗು ಮತ್ತು ಅವರು ದಿವ್ಯ ಕಮಲದಂತಹ ಆಸನದ ಮೇಲೆ ತಮ್ಮ ದಿವ್ಯ ಪಾದಗಳನ್ನು ದೃಢವಾಗಿ ನೆಟ್ಟಿರುವ ರೀತಿ ಅವರೇ ನಮಗೆ ಆಶ್ರಯ ಎಂದು ಸೂಚಿಸುತ್ತದೆ). ಬಡ ಮನುಷ್ಯನು ದೊಡ್ಡ ನಿಧಿಯನ್ನು ನೋಡುವಂತೆಯೇ ಅವರು ನಂಪೆರುಮಾಳರ ದಿವ್ಯ ಮುಖವನ್ನು ನೋಡಿದರು, ನಂಪೆರುಮಾಳರು ಗುರುಗಳ ಮಹಾ ನಿಧಿಯಾಗಿದ್ದರು, ಒಂದು ಕ್ಷಣವೂ ಕಣ್ಣು ಬಿಡದೆ ಕೆಂಪು ಬಣ್ಣದ ದಿವ್ಯ ಮುಖಭಾವ ಮತ್ತು ಕಸ್ತೂರಿ ತಿರುನಾಮ (ಹಣೆಯ ಮೇಲಿನ ದೈವಿಕ ಗುರುತು) ವನ್ನು ನೋಡಿದರು.ಅದೇ ಸಮಯದಲ್ಲಿ, ನಂಪೆರುಮಾಳರು ಅವನ ಮೇಲೆ ಕರುಣೆಯನ್ನು ತೋರಿಸಿದರು, ಪೋಷಕರು ತಮ್ಮ ಮಗನನ್ನು ದೀರ್ಘಕಾಲದಿಂದ ಬೇರೆಡೆ ವಾಸಿಸುತ್ತಿರುವುದನ್ನು ನೋಡಿ ಮನೆಗೆ ಹಿಂದಿರುಗುವಂತೆ, “ನಾವು ಬಯಸಿದವರನ್ನು ಹುಡುಕಿ ಪಡೆಯುತ್ತೇವೆ” ಎಂದು ಭಾವಿಸಿ, ರಾಮಾನುಜರನ್ನು ತಮ್ಮ ಗಮನಕ್ಕೆ ಅರ್ಹವಾದ ಅಸ್ತಿತ್ವವೆಂದು ಪರಿಗಣಿಸಿ ಅವರನ್ನು ನೋಡಿದರು.

ಅನುವಾದ – ಅಡಿಯೇನ್ ಸುಭದ್ರಾ ರಾಮಾನುಜ ದಾಸಿ
ಪುರಾವೆ ಓದುವಿಕೆ -ಅಡಿಯೇನ್ ಕೊದೈ ರಾಮಾನುಜ ದಾಸಿ

ಮೂಲ : https://granthams.koyil.org/2021/08/15/yathindhra-pravana-prabhavam-31-english/

ಆರ್ಕೈವ್ ಮಾಡಲಾಗಿದೆ – https://granthams.koyil.org

ಪ್ರಮೇಯಮ್ (ಗುರಿ) – https://koyil.org
ಪ್ರಮಾಣಮ್ (ಗ್ರಂಥಗಳು) – https://granthams.koyil.org
ಪ್ರಮಾತಾ (ಬೋಧಕರು) – https://acharyas.koyil.org
ಶ್ರೀವೈಷ್ಣವ ಎಜುಕೇಶನ್ / ಮಕ್ಕಳ ಸಾಹಿತ್ಯ – https://pillai.koyil.org

1 thought on “ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೩೧”

Leave a Comment