ಯತೀಂದ್ರ ಪ್ರವಣ ಪ್ರಭಾವಂ – ಭಾಗ ೧

ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ

ಪೂರ್ಣ ಸರಣಿ

<< ಹಿಂದಿನ ಲೇಖನವನ್ನು

ಶ್ರೀಮಹಾಲಕ್ಷ್ಮಿಯವರ ಪತಿಯಾದ ಶ್ರೀಯ:ಪತಿಯವರು ಕರುಣಾ ಪೂರ್ವಕವಾಗಿ ಆಳ್ವಾರರುಗಳಾದ ಪರಾಂಕುಶ (ನಮ್ಮಾಳ್ವಾರ್), ಪರಕಾಲ (ತಿರುಮಂಗೈ ಆಳ್ವಾರ್), ಭಟ್ಟನಾಥ (ಪೆರಿಯಾಳ್ವಾರ್) ಮೊದಲಾದವರನ್ನು ಕರುಣೆಯಿಂದ ಸೃಷ್ಟಿಸಿದರು. (ಪ್ರಸ್ತುತ ಯುಗ).ತರುವಾಯ, ಅವರು ದಯಾಪೂರ್ವಕವಾಗಿ ನಾಥಮುನಿ, ಆಳವಂದಾರ್ ಮತ್ತು ಇತರ ಆಚಾರ್ಯರನ್ನು (ಗುರುಗಳು) ಸೃಷ್ಟಿಸಿದರು ಮತ್ತು ಅವರ ಮೂಲಕ ಜಗತ್ತನ್ನು ರಕ್ಷಿಸಿದರು. ಆಳ್ವಾರರು ಮತ್ತು ಆಚಾರ್ಯರ ಹಿರಿಮೆಯನ್ನು ಗುರುಪರಂಪರೆ ಪ್ರಭಾವದ ಮೂಲಕ (ಆಳ್ವಾರರು ಮತ್ತು ಪೀಠಾಧಿಪತಿಗಳ ಪರಂಪರೆಯ ಹಿರಿಮೆ) ( ಪಿನ್ಬ್ ಅಳಗಿಯ ಪೆರುಮಾಳ್ ಜೀಯರ್ ಅವರಿಂದ) ಹಾಗು ಗುರುಪರಂಪರೆಯಿಂದ ಲೋಕಕ್ಕೆ ಬಂದವರನ್ನು ಸೇರಿದಂತೆ ಜನರಿಗೆ ತಿಳಿಸಲಾಯಿತು. ಅಷ್ಟಕ್ಕೇ ನಿಲ್ಲದೆ, ಚಿತ್ (ಸಂವೇದನಾಶೀಲ) ಮತ್ತು ಅಚಿತ್ (ಅಪ್ರಜ್ಞಾಪೂರ್ವಕ) ಎರಡಕ್ಕೂ ಶೇಷಿ( ಸ್ವಾಮಿ) ಆಗಿರುವ ಶ್ರೀಯ:ಪತಿಯು ಕರುಣಾಪೂರ್ವಕವಾಗಿ ಯತೀಂದ್ರ ಪ್ರವಣರನ್ನು (ತಪಸ್ವಿಗಳ ಮುಖ್ಯಸ್ಥರಾದ ಶ್ರೀ ರಾಮಾನುಜರನ್ನು ;ಮಣವಾಳ ಮಾಮುನಿಗಳನ್ನು ಉಲ್ಲೇಖಿಸುತ್ತದೆ ) ನಿಯಮಿಸುತ್ತಾ ; ಜೀಯರ್ ಅವರ (ಮಣವಾಳ ಮಾಮುನಿಗಳ) ಕ್ರಿಯೆಗಳು ಮತ್ತು ಕೆಲಸಗಳು ಮೂಲಕ ಎಲ್ಲಾ ಚೇತನಗಳನ್ನು ರಕ್ಷಿಸುವ ಸಲುವಾಗಿ ಈ ಜಗತ್ತಿಗೆ ಬಂದರು . ಪಿಳ್ಳೈ ಲೋಕಂ ಜೀಯರ್ ಅವರು ತಮ್ಮ ಆಚಾರ್ಯರ (ಹಾಗೆಯೇ ತಂದೆಯೂ ಆದ, ಶ್ರೀಶಟಕೋಪಾಚಾರ್ಯರ) ಅನುಗ್ರಹದಿಂದ ಮತ್ತು ಕಂದಾಡೈ ನಾಯನ (ಮುದಲಿಆಂಡಾನ್ ವಂಶದಲ್ಲಿ ಬಂದ ಕೋಯಿಲ್ ಕಂದಾಡೈ ಅವರ ದೈವಿಕ ಪುತ್ರ) ಅವರ ಅನುಗ್ರಹದಿಂದ , ಮಣವಾಳ ಮಾಮುನಿಗಳ ಶ್ರೇಷ್ಠತೆಯನ್ನು ಯತೀಂದ್ರ ಪ್ರವಣ ಪ್ರಭಾವಂ ಎನ್ನುವ ಅವರ ಕೃತಿಯಲ್ಲಿ ಹೊರತಂದರು.ಈ ಪ್ರಬಂಧವು ಪೂರ್ವಾಚಾರ್ಯರ ಮೇಲೆ ಹಿಂದೆ ರಚಿಸಲಾದ ಪ್ರಬಂಧಗಳ ಮುಂದುವರಿಕೆಯಾಗಿದೆ [ಉದಾಹರಣೆಗೆ ಗುರುಪರಂಪರ ಪ್ರಭಾವ ಇತ್ಯಾದಿ]. ಪಿಳ್ಳೈ ಲೋಕಂ ಜೀಯರ್ ಅವರು , ಅದರಲ್ಲಿರುವ ಎಲ್ಲಾ ವೈಭವ ಹಿರಿಮೆಯ [ಮಣವಾಳ ಮಾಮುನಿಗಳ] ಬಗ್ಗೆ ತಕ್ಷಣವೇ ಮಾತನಾಡುವ ಬದಲು, ಸತ್ಸಂಪ್ರದಾಯದ (ಸಂಪೂರ್ಣವಾಗಿ ಉತ್ತಮವಾದ, ಸಾಂಪ್ರದಾಯಿಕ ತತ್ತ್ವಶಾಸ್ತ್ರ) ಅರ್ಥಗಳನ್ನು , ಮಣವಾಳ ಮಾಮುನಿಗಳಿಗೆ ಹೇಗೆ ತಲುಪಿದವು ಎಂಬುದರ ಕುರಿತು ಆರಂಭದಲ್ಲಿ ಮಾತನಾಡುತ್ತಾರೆ. ಅವರು ಈ ಕೆಳಗಿನ ಶ್ಲೋಕವನ್ನು ಉಲ್ಲೇಖಿಸಿದ್ದಾರೆ.

ಶ್ರೀವತ್ಸಚಿನ್ನ ಭವತಾ: ಚರಣಾರವಿಂದ ಸೇವಾಮೃತೈಕ ರಸಿಕಾನ್ ಕರುಣಾಸುಪೂರ್ಣನ್ |
ಭಟ್ಟಾರ್ಯವರ್ಯ ನಿಗಮಾಂತ ಮುನೀಂದ್ರ ಲೋಕಗುರವಾಧಿ ದೇಸಿಕವರಾನ್ ಶರಣಂ ಪ್ರಪಧ್ಯೆ ||

(ಓ ಕುರತ್ಥಾಳ್ವಾನ್! ಸಾಂಪ್ರದಾಯಿಕ ತತ್ತ್ವಶಾಸ್ತ್ರದ ತತ್ವಗಳು ನಂಜೀಯರ್ ಮತ್ತು ನಂಪಿಳ್ಳೈಗಳಲ್ಲಿ ಆಳವಾಗಿ ಬೇರೂರಿವೆ ಎಂದು ತೋರಿಸಲು, ಭಟ್ಟರು (ಕುರತ್ಥಾಳ್ವಾನ್ ಅವರ ಮಗ ಪರಾಂಕುಶ ಭಟ್ಟರು), ನಂಜೀಯರ್, ನಂಪಿಳ್ಳೈ ಮುಂತಾದ ಮಹಾನ್ ಆಚಾರ್ಯರಿಗೆ ನಾನು ಶರಣಾಗುತ್ತೇನೆ, ಅವರು ಕರುಣೆಯಿಂದ ತುಂಬಿದ್ದವರು ಮತ್ತು ನಿಮ್ಮ ದೈವಿಕ ಪಾದ ಕಮಲಗಳಿಗೆ ಕೈಂಕರ್ಯವನ್ನು ಪ್ರಾಪ್ತಿಯನ್ನು ಬಯಸಿದ್ದರು). ನಂಪಿಳ್ಳೈ ಅವರನ್ನು ಅನುಸರಿಸುವ ಆಚಾರ್ಯರಲ್ಲಿ, ಪಿಳ್ಳೈ ಲೋಕಂ ಜೀಯರ್ ಅವರು ಸಾಂಪ್ರದಾಯಿಕ ತತ್ತ್ವಶಾಸ್ತ್ರದ ತತ್ವಗಳು ಮಣವಾಳ ಮಾಮುನಿಗಳನ್ನು ಹೇಗೆ ತಲುಪಿದವು ಎಂಬುದನ್ನು ತೋರಿಸಲು ಮೊದಲು ಪಿಳ್ಳೈ ಲೋಕಾಚಾರ್ಯರ ನಿರೂಪಣೆಯನ್ನು ತೆಗೆದುಕೊಳ್ಳುತ್ತಾರೆ. ಇದನ್ನು ಈ ಕೆಳಗಿನ ಪಾಶುರಗಳ ಮೂಲಕ ಸಾಧಿಸಲಾಗುತ್ತದೆ:

ಕೋದಿಲ್ ಉಲಗಾಸಿರಿಯನ್ ಕೂರಕುಲೋತಮ ಥಾಧರ್
ತಿದಿಲ್ ತಿರುಮಲೈಯ ಆಳ್ವಾರ್ ಸೆழுಮ್ ಕುರವೈ ಮಣವಾಳರ್
ಒಧರಿಯಪುಗಲ್ ತಿರುನಾವೀರುಡೈಯ ಪಿರಾನ್ ತಾಧರುಡನ್
ಪೋಧ ಮಣವಾಳಮಾಮುನಿ ಪೊನ್ನಡಿಗಳ್ ಪೊಟ್ರುವನೇ

(1) ದೋಷರಹಿತ ಪಿಳ್ಳೈ ಲೋಕಾಚಾರ್ಯರ (2) ಕೂರಕುಲೋತಮ ದಾಸರ್, (3) ತಿರುಮಲೈಯಾಳ್ವಾರ್, ತಿರುವಾಯ್ಮೋழி ಪ್ಪಿಳ್ಳೈ ಎಂದೂ ಕರೆಯಲ್ಪಡುವ, ಯಾವುದೇ ಕೊರತೆಯಿಲ್ಲದ, (4) ಕುರುವೈ ನಗರದಲ್ಲಿ ಜನಿಸಿದ ಕೊಟ್ಟೂರು ಅழಗಿಯ ಮಣವಾಳರ್ (5) ತಿಗಳಕ್ಕಿದಂಡಾನ್ ತಿರುನಾವೀರುಡೈಯ ಪಿರಾನ್ ದಾಸರನ್ನು ಪಠಿಸಬಹುದಾದ ಮಹಾನ್ ಖ್ಯಾತಿಯನ್ನು ಹೊಂದಿದ್ದ ಮತ್ತು (6) ದಿವ್ಯ ಕಮಲ ಪಾದಕಮಲಗಳನ್ನು ಹೊಂದಿರುವ ಮಣವಾಳ ಮಾಮುನಿಗಳು ದೈವಿಕ ಪಾದಗಳನ್ನು ನಾವು ಸ್ತುತಿಸುತ್ತೇವೆ. [ಈ ಪಾಸುರಂ ಅನ್ನು ಶ್ರೀವಚನ ಭೂಷಣಂ ಕೊನೆಯಲ್ಲಿ ಪಠಿಸಲಾಗಿದೆ; ಮೇಲೆ ಪಟ್ಟಿ ಮಾಡಲಾದ ಆರು ಮಹಾನ್ ಆಚಾರ್ಯರಲ್ಲಿ, ಕೊಟ್ಟೂರು ಅழಗಿಯ ಮಣವಾಳರ್ ಅವರು ಮಣವಾಳ ಮಾಮುನಿಗಳ ತಾಯಿಯ ಅಜ್ಜ ಮತ್ತು ತಿಗಳಕ್ಕಿದಂಡಾನ್ ತಿರುನಾವೀರುಡೈಯ ಪಿರಾನ್ ದಾಸರ್ ಅವರು ಮಾಮುನಿಗಳ ತಂದೆ].

ಅನುವಾದ – ಅಡಿಯೇನ್ ಸುಭದ್ರಾ ರಾಮಾನುಜ ದಾಸಿ
ಪುರಾವೆ ಓದುವಿಕೆ -ಅಡಿಯೇನ್ ಕೊದೈ ರಾಮಾನುಜ ದಾಸಿ

ಮೂಲ : https://granthams.koyil.org/2021/07/16/yathindhra-pravana-prabhavam-1-english/

ಆರ್ಕೈವ್ ಮಾಡಲಾಗಿದೆ – https://granthams.koyil.org

ಪ್ರಮೇಯಂ (ಗುರಿ) – https://koyil.org
ಪ್ರಮಾಣ೦ (ಗ್ರಂಥಗಳು) – https://granthams.koyil.org
ಪ್ರಮಾತಾ (ಬೋಧಕರು) – https://acharyas.koyil.org
ಶ್ರೀವೈಷ್ಣವ ಎಜುಕೇಶನ್ / ಮಕ್ಕಳ ಸಾಹಿತ್ಯ – https://pillai.koyil.org

1 thought on “ಯತೀಂದ್ರ ಪ್ರವಣ ಪ್ರಭಾವಂ – ಭಾಗ ೧”

Leave a Comment