ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ
ಎರುಂಬಿಯಪ್ಪನ ತುಡಿತ
ನಂತರ, ಎರುಂಬಿಯಪ್ಪ ಸಹ ಜೀಯರ್ ಅವರ ದೈವಿಕ ಆರೋಹಣದ ಬಗ್ಗೆ ಮತ್ತು ಶ್ಲೋಕದಿಂದ ಹೊರತಂದಿರುವ ಬಗ್ಗೆ ಕೇಳಿದರು.
ವರವರಮುನಿ ಪತಿರ್ಮೇ ತದ್ಪಾದಯುಗಮೇವ ಶರಣಾಮಾನುರೂಪಂ
ತಸ್ಯೈವ ಚರಣಯುಗಳೇ ಪರಿಚರಣಂ ಪ್ರಾಪ್ಯಮಿತಿ ನನುಪ್ರಾಪ್ತಾಮ್
ಮಣವಾಳ ಮಾಮುನಿಗಳು ನನ್ನ ಸ್ವಾಮಿ; ಅವರ ದಿವ್ಯವಾದ ಕಮಲದಂತಹ ಪಾದಗಳೇ ಪರಮ ಪುರುಷಾರ್ಥವನ್ನು (ಶ್ರೀವೈಕುಂಠವನ್ನು) ಪಡೆಯಲು ಸಾಧನವಾಗಿವೆ; ಆ ಪಾದಕಮಲಗಳಿಗೆ ಸಲ್ಲಿಸುವ ಕೈಂಕರ್ಯವೇ ಪರಮ ಪುರುಷಾರ್ಥವಾಗಿದ್ದು, ಅದನ್ನು ನಾನು ಪಡೆದಿದ್ದೇನೆ. ಇದು ನನ್ನ ದೃಢವಾದ ನಂಬಿಕೆಯೂ ಹೌದು; ಅವರು ತಮ್ಮ ಆಚಾರ್ಯರಲ್ಲಿ ಗಾಢವಾದ ಭಕ್ತಿಯನ್ನು ಹೊಂದಿದ್ದರು. ಆಚಾರ್ಯರಿಂದ ಅಗಲಿಕೆಯನ್ನು ಅವರಿಗೆ ಸಹಿಸಲು ಸಾಧ್ಯವಾಗಲಿಲ್ಲ. ಆ ಅಗಲಿಕೆಯೇ ಅವರನ್ನು ‘ಪಾಸುರ’ಗಳನ್ನು ರಚಿಸುವಂತೆ ಪ್ರೇರೇಪಿಸಿತು.
ವಪುರವಿ: ಸಪದಿಮದೀಯಂ ವರವರಮುನಿವರ್ಯ ಮೊಚನೀಯಮಿತಂ
ಪರಿಚರತಿ ನಹಿಭವಂತಂ ಭಗವನಿನಹಿ ಭಗವದಭಿಮತ ನಪಿವಾ
(ಓ ಸಮಸ್ತ ಕಲ್ಯಾಣ ಗುಣಪರಿಪೂರ್ಣರಾದ ಮಣವಾಳ ಮಾಮುನಿಗಳೇ! ತಮ್ಮ ದಿವ್ಯ ಕೃಪೆಯಿಂದ ಬಿಡುಗಡೆ ಹೊಂದಲು ಈ ನನ್ನ ಶರೀರವು ಅರ್ಹವಾಗಿದೆ; ಈ ಶರೀರದಿಂದ ತಮಗೆ ಕೈಂಕರ್ಯವನ್ನು ನೆರವೇರಿಸುವ ಭಾಗ್ಯ ನನಗೆ ಲಭಿಸಲಿಲ್ಲ; ಹಾಗೆಯೇ ಎಂಪೆರುಮಾನಾರರ ಅನುಯಾಯಿಗಳಿಗೂ ಇದರಿಂದ ಕೈಂಕರ್ಯವನ್ನು ಸಲ್ಲಿಸಲು ನನಗೆ ಸಾಧ್ಯವಾಗಲಿಲ್ಲ.)
ಇತಿಪುನರೇಶ ವಿತನ್ನಭಿತುರಿ ತರದಿಧುರನಿಮ್ನಪತರೂಢ:
ವರವರಮುನಿವರ ಕರುಣಾಮ್ ನಿಗ್ನನ್ ಪದನೃಪಸುರಸ್ನುತೇ ನಿಯಮಾನ್
(ಜ್ಞಾನವಿದ್ದರೂ, ಜನರು “ಅವನು ಮಾನವ ರೂಪದಲ್ಲಿರುವ ಪ್ರಾಣಿ” ಎಂದು ಹೇಳುವ ಪಾಪಕೃತ್ಯಗಳಲ್ಲಿ ನಾನು ಆಸಕ್ತನಾಗಿದ್ದೆ; ಅಡಿಯೇನ್ ಅತ್ಯಂತ ದೀನ ಸ್ಥಿತಿಯಲ್ಲಿದ್ದನು, ಮಣವಾಲ ಮಾಮುನಿಗಳು ಅಡಿಯೇನ್ ಮೇಲೆ ಸುರಿಸಿದ ಕರುಣೆಯನ್ನು ನಾಶಮಾಡಿದನು ಮತ್ತು ಅಂತಹ ಪಾಪಕೃತ್ಯಗಳ ಫಲಿತಾಂಶಗಳನ್ನು ಅನುಭವಿಸಿದನು).
ಆಯುರಾಪಹರತಿ ಜಗತಾಮ್ ಅಯಮುದಯಂ ವಿಲಯಮಪಿಭಜನ್ ಭಾನು:
ಮಯಿಪುನರಿತಮ ನೃಶಂಸೋ ವರವರಮುನಿವರ್ಯ ವರ್ತಯತ್ಯೇವ
ಓ ಮಣವಾಳ ಮಾಮುನಿಗಳೇ! ಈ ಸೂರ್ಯನು ಸೂರ್ಯೋದಯ ಮತ್ತು ಸೂರ್ಯಾಸ್ತಗಳನ್ನು ಉಂಟುಮಾಡುವ ಮೂಲಕ ಜಗತ್ತಿನ ಜೀವಿಗಳ ಆಯಸ್ಸನ್ನು ಕಸಿದುಕೊಳ್ಳುತ್ತಿದ್ದಾನೆ; ಆದರೆ ನನ್ನ ವಿಷಯದಲ್ಲಿ ಮಾತ್ರ, ಈ ಲೋಕದಲ್ಲಿ ನನ್ನ ಆಯಸ್ಸನ್ನು ಹೆಚ್ಚಿಸುವ ಮೂಲಕ ಅವನು ಕ್ರೂರವಾದ ಕೆಲಸವನ್ನು ಮಾಡುತ್ತಿದ್ದಾನೆ.
ತದ್ಧಿತ: ಪರಮಾನುರೂಪಂ ನವಿಳಂಬಿತುಮಿತಿ ಚಿಂತಯಂತಯಯಾ
ಮಳಭಜನಾದಿತೋಮಾಂ ವರವರಮುನಿವರ್ಯ ಮೋಚಯಾಧ್ವರಿತಂ
(ಆದುದರಿಂದ, ಓ ಮಣವಾಳ ಮಾಮುನಿಗಳೇ! ನನ್ನ ವಿಷಯದಲ್ಲಿ ಇನ್ನು ವಿಳಂಬ ಮಾಡುವುದು ಉಚಿತವಲ್ಲ; ದೇವರೀರ್’ರ ದಿವ್ಯ ಹೃದಯದಲ್ಲಿ ಕರುಣೆಯನ್ನಿಟ್ಟು, ದಯವಿಟ್ಟು ನನ್ನನ್ನು ಈ ಅಸಹ್ಯಕರವಾದ ಶರೀರದಿಂದ ಬಿಡುಗಡೆಗೊಳಿಸಿರಿ). ಅವರಲ್ಲಿ ತೀವ್ರವಾದ ಹಂಬಲವಿತ್ತು; ಜೀಯರ್ ಅವರ ಶ್ರೇಷ್ಠ ಗುಣಗಳನ್ನು ಸವಿಯುವುದರ ಮೇಲೆಯೇ ಸಂಪೂರ್ಣವಾಗಿ ಅವಲಂಬಿತರಾಗಿದ್ದು, ಅವರಿಗೆ ಕೈಂಕರ್ಯವನ್ನು ನೆರವೇರಿಸುವ ಪ್ರಬಲ ಬಯಕೆಯನ್ನು ಹೊಂದಿದ್ದ ಎರುಂಬಿಯಪ್ಪಾ ಅವರಿಗೆ, ಜೀಯರ್ ಅವರಿಂದ ದೂರವಾಗಿ ಸಂಸಾರದಲ್ಲಿ ಉಳಿಯಬೇಕಾದ ಪರಿಸ್ಥಿತಿಯು, ಶ್ರೀರಾಮನಿಂದ ಅಗಲಿ ರಾವಣನ ಅಶೋಕವನದಲ್ಲಿದ್ದಾಗ ಸೀತಾಪಿರಾಟಿಯು ಅನುಭವಿಸಿದ ವೇದನೆಗೆ ಸಮಾನವಾಗಿತ್ತು.”ಪೊಯ್ನಿನ್ರ ಜ್ಞಾನಮುಂ ಪೊಲ್ಲಾ ಒಳುಕ್ಕುಂ ಅಳುಕ್ಕುಡಂಬುಂ ಇನ್ನಿನ್ರ ನೀರ್ಮೈ ಇನಿಯಾಮ್ ಉರಮೈ” (ಈ ಮಿಥ್ಯೆ ಜ್ಞಾನ, ಅನುಚಿತ ನಡವಳಿಕೆ ಮತ್ತು ಮಲಿನ ಶರೀರವನ್ನು ನಾನು ಸಹಿಸಲಾರೆ) ಎಂಬ ತಿರುವಿರುತ್ತಮ್‌ನ ಪಾಶುರದಲ್ಲಿ ಹೇಳಿರುವಂತೆ; ಹಾಗೂ “ಕೂವಿಕ್ ಕೊಳ್ಳುಮ್ ಕಾಲಮ್ ಇನ್ನಮ್ ಕುರುಗಾದೋ” (ನನ್ನನ್ನು ಕರೆಸಿಕೊಳ್ಳುವ ಸಮಯ ಹತ್ತಿರವಾಗುವುದಿಲ್ಲವೇ?), “ಆವಿಕ್ಕೋರ್ ಪಟ್ರುಕ್ಕೊಂಬು ನಿನ್ನಲಾಲರಿಗಿನ್ರಿಲೇನ್ ಯಾನ್” (ನಿನ್ನನ್ನು ಬಿಟ್ಟು ಆತ್ಮಕ್ಕೆ ಬೇರೆ ಆಧಾರವಿದೆಯೆಂದು ನನಗೆ ತಿಳಿಯದು) ಎಂಬ ತಿರುವಾಯ್ಮೋಳಿ ಪಾಶುರಗಳಲ್ಲಿ ವ್ಯಕ್ತವಾಗಿರುವ ಭಾವನೆಯಂತೆ, [ತಮ್ಮ ಆಚಾರ್ಯರ ದಿವ್ಯ ಪಾದಗಳನ್ನು ಸೇರುವವರೆಗೆ] ತಡೆಯಲಾರದಂತಹ ತೀವ್ರವಾದ ಹಂಬಲವನ್ನು ಅವರು ಹೊಂದಿದ್ದರು.ಒಂದು ದಿನವೂ ಸಹ ಸಾವಿರಾರು ಯುಗಗಳಿಗೆ ಸಮಾನವಾಗಿತ್ತು; ಅವರು ಆಗಾಗ್ಗೆ ಮತಿಭ್ರಮಣೆಗೊಂಡು ಪ್ರಜ್ಞೆ ತಪ್ಪುತ್ತಿದ್ದರೂ, ‘ಮಾಮುನಿಗಳ್’ ಅವರ ದಿವ್ಯನಾಮವನ್ನು ನಿರಂತರವಾಗಿ ಜಪಿಸುತ್ತಲೇ ಆ ಸ್ಥಿತಿಯಲ್ಲಿಯೇ ಇದ್ದರು.
ಅನುವಾದ – ಅಡಿಯೇನ್ ಸುಭದ್ರಾ ರಾಮಾನುಜ ದಾಸಿ
ಮೂಲ : https://granthams.koyil.org/2021/10/29/yathindhra-pravana-prabhavam-102-english/
ಆರ್ಕೈವ್ ಮಾಡಲಾಗಿದೆ – https://granthams.koyil.org
ಪ್ರಮೇಯಂ (ಗುರಿ) – https://koyil.org
ಪ್ರಮಾಣ೦ (ಗ್ರಂಥಗಳು) – https://granthams.koyil.org
ಪ್ರಮಾತಾ (ಬೋಧಕರು) – https://acharyas.koyil.org
ಶ್ರೀವೈಷ್ಣವ ಎಜುಕೇಶನ್ / ಮಕ್ಕಳ ಸಾಹಿತ್ಯ – https://pillai.koyil.org