ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ
ಜೀಯರ್ ಅವರ ಅಗಲಿಕೆಯಿಂದಾಗಿ ಶಿಷ್ಯರು ಅನುಭವಿಸುತ್ತಿರುವ ವೇದನೆ
ನಂತರ, “ಕಧಿರವನ್ ಪೋಯ್ ಗುಣಪಾಲ್ ಸೆರ್ನ್ದ ಮಹಿಮೈ ಪೋಲ್” (ಸೂರ್ಯನ ಪೂರ್ವ ದಿಕ್ಕನ್ನು ತಲುಪುವ ಹಿರಿಮೆಯಂತೆ) ನಲ್ಲಿ ಹೇಳಿರುವಂತೆ, ಒಂದು ಸೂರ್ಯ ಪೂರ್ವ ದಿಕ್ಕಿಗೆ ಹೊಂದಿಸಲ್ಪಟ್ಟನು. ಶಿಷ್ಯರಾದ ಜೀಯರ್ ನಾಯನಾರ್, ಕಂದಾಡೈ ಅಣ್ಣನ್ ಮತ್ತು ಇತರರು ಪಾಸುರಂನಿಂದ ಹೊರಬಂದಂತೆ ಅತ್ಯಂತ ದುಃಖವನ್ನು ಅನುಭವಿಸಿದರು.
ಸೀಯರ್ ಏழுನ್ದಅರುಳಿವಿಟ್ಟಾರ್ ಸೇಗಮುழுಡುಂ
ಪೋಯಿರುಲ್ ಮಿಳಪ್ ಪುಗುಂದದೇ ತೀಯ
ವಿನೈ ನೈಯ ವೆಂಬಲನಾಲ್ ಇಡழி೦ದು ಮಾಯ್ವೋರ್
ಅನೈವಾರ್ಕ್ಕುಂ ಎದೋ ಅರನ್
(ಜೀಯರ್ ದಯೆಯಿಂದ [ಶ್ರೀವೈಕುಂಠಕ್ಕೆ] ಏರಿದ್ದಾರೆ. ಪ್ರಪಂಚದಾದ್ಯಂತ ಕತ್ತಲೆ ಆವರಿಸಿದೆ. ತಮ್ಮ ಕೆಟ್ಟ ಕಾರ್ಯಗಳಿಂದ ಬಳಲುತ್ತಿರುವವರಿಗೆ ಮತ್ತು ತಮ್ಮ ಇಂದ್ರಿಯಗಳ ಹಾದಿಯಲ್ಲಿ ತಮ್ಮನ್ನು ತಾವು ಕಳೆದುಕೊಳ್ಳುವವರಿಗೆ ರಕ್ಷಣೆ ಯಾವುದು?) ತಮ್ಮ ಸೇವಾವೃತ್ತಿಗೆ ಅನುಗುಣವಾಗಿ, ಅವರು ತಲೆ ಬೋಳಿಸಿಕೊಂಡು, ಸ್ನಾನ ಮಾಡಿ ಮಠವನ್ನು ಪುನಃ ಪ್ರವೇಶಿಸಿದರು. ‘ಜೀಯರ್’ ಅವರ ಅನುಪಸ್ಥಿತಿಯಿಂದ ಮಠದಲ್ಲಿದ್ದ ಶೂನ್ಯತೆಯನ್ನು ಕಂಡು ಅವರು ತೀವ್ರವಾಗಿ ವ್ಯಥೆಪಟ್ಟರು. ಕಂಠವು ಗದ್ಗದಿತವಾಗುತ್ತಿರಲು ಮತ್ತು ಕಣ್ಣುಗಳಿಂದ ಧಾರಾಕಾರವಾಗಿ ಕಣ್ಣೀರು ಸುರಿಯುತ್ತಿರಲು, ಅವರು ಪರಸ್ಪರ ವಿವಿಧ ‘ಪಾಸುರ’ಗಳನ್ನು (ದಿವ್ಯ ಪ್ರಬಂಧದ ಪದ್ಯಗಳನ್ನು) ಹಾಡುತ್ತಾ ಸಾಂತ್ವನ ಪಡೆದುಕೊಂಡರು. ‘ಜೀಯರ್’ ಅವರ ಮಹಿಮೆಗೆ ಅನುಗುಣವಾಗಿ, ನಿಗದಿತ ಪದ್ಧತಿಗಳ ಪ್ರಕಾರ ಪವಿತ್ರ ಜಲ ಹಾಗೂ ನೈವೇದ್ಯವನ್ನು ಅರ್ಪಿಸುತ್ತಾ, ಅವರ ‘ತಿರುವಧ್ಯಯನಂ’ (ಶ್ರೀವೈಕುಂಠ ಪ್ರಾಪ್ತಿಯ ದಿನದಿಂದ ಹದಿಮೂರು ದಿನಗಳವರೆಗೆ ನಡೆಸಲಾಗುವ ವಿವಿಧ ಧಾರ್ಮಿಕ ವಿಧಿಗಳು) ಕಾರ್ಯಕ್ರಮವನ್ನು ನೆರವೇರಿಸಿದರು. ತದನಂತರ, [ಜೀಯರ್ ಅವರಿಂದ] ತಮಗೆ ನಿರ್ದೇಶಿಸಲ್ಪಟ್ಟಿದ್ದ ಕೈಂಕರ್ಯಗಳನ್ನು ಅವರು ನೆರವೇರಿಸಿದರು.
ನಂತರ, ಇಕ್ಷ್ವಾಕು ವಂಶದ ನಿಧಿಯೆಂದೇ ಕರೆಯಲ್ಪಡುವ ‘ಪೆರಿಯ ಪೆರುಮಾಳ್’, ತಮ್ಮ ವಂಶದ ನಿಧಿಯಾದ ‘ಶ್ರೀ ರಂಗರಾಜ’ರನ್ನೂ ಹಾಗೂ ಹಿಂದೆ ‘ಜೀಯರ್’ ಅವರಿಗೆ ನೀಡಲಾಗಿ, ಅವರು ಪುನಃ ಪೆರುಮಾಳ್‌ಗೆ ಸಮರ್ಪಿಸಿದ್ದ ಮಠವನ್ನೂ ‘ಜೀಯರ್ ನಾಯನಾರ್’ (ಮಾಮುನಿಗಳ ಮೊಮ್ಮಗ) ಅವರಿಗೆ ಅನುಗ್ರಹಿಸಿದರು.ಇವುಗಳ ಜೊತೆಗೆ, ಪೆರುಮಾಳ್ ಜೀಯರ್ ನಾಯನಾರ್‌ಗೆ ಪವಿತ್ರ ತೀರ್ಥ, ದಿವ್ಯ ಮಾಲೆ, ದಿವ್ಯ ವಸ್ತ್ರ, ಶ್ರೀ ಶಠಕೋಪನ್ ಮುಂತಾದವುಗಳನ್ನು ನೀಡಿ ಅನುಗ್ರಹಿಸಿದರು. ಇದನ್ನು ಕಂಡು, ಜೀಯರ್ ಅವರಲ್ಲಿ ಅಪಾರ ಗೌರವವಿದ್ದವರೆಲ್ಲರೂ ಅತ್ಯಂತ ಸಂತೋಷಗೊಂಡರು ಹಾಗೂ ಜೀಯರ್ ನಾಯನಾರ್ ಅವರನ್ನೇ ಸ್ವತಃ ಜೀಯರ್ ಎಂದು ಭಾವಿಸಿ ನಿರಂತರವಾಗಿ ಆರಾಧಿಸಿದರು.
ಜೀಯರ್ ನಾಯನಾರ್ ಅವರು ಶ್ರೀ ಭಾಷ್ಯ ಮತ್ತು ತಿರುವಾಯ್ಮೋಳಿ ಈಡು ಕಲಿಯುತ್ತಾರೆ
ಕಂದಾಡೈ ಅಣ್ಣನ್ , ಜೀಯರ್ ಅವರ ಆದೇಶಗಳಿಗೆ ಅನುಗುಣವಾಗಿ, ಅವರ ಮೊಮ್ಮಗ, ಜೀಯರ್ ನಾಯನಾರ್, ತಿರುವಾಯ್ಮೋಳಿ ಈಡು (ತಿರುವಾಯ್ಮೋಳಿಗೆ ವ್ಯಾಖ್ಯಾನ) ಸೂಚನೆ ನೀಡಿದರು. ಪ್ರಾಥಿವಾಧಿ ಭಯಂಕರಂ ಅಣ್ಣಾ ಕೂಡ, ನಂತರ, ಶ್ರೀಭಾಷ್ಯಮ್ (ವೇಧವ್ಯಾಸರ ಬ್ರಹ್ಮ ಸೂತ್ರಕ್ಕೆ ರಾಮಾನುಜರು ಬರೆದ ವ್ಯಾಖ್ಯಾನ) ಜೀಯರ್ ನಾಯನಾರ್ ಮತ್ತು ಕಂದಾಡೈ ನಾಯನರಿಗೆ, ಜಿಯಾರ್ ಅವರ ಆದೇಶಗಳಿಗೆ ಅನುಗುಣವಾಗಿ ಸೂಚಿಸಿದರು. ಹಾಗೆ ಮಾಡುವ ಮೂಲಕ, ಶ್ಲೋಕದಲ್ಲಿ ಉಲ್ಲೇಖಿಸಿದಂತೆ ಅವರು ಕರುಣೆಯಿಂದ ತಮ್ಮ ಕರ್ತವ್ಯವನ್ನು ನಿರ್ವಹಿಸಿದರು.
ಶ್ರೀಮಾನ್ ಸುಂಧರಾಜಾಮಾತೃ ಮುನೀ: ಪರ್ಯಾಯ ಭಾಷ್ಯಕೃತ್
ಭಾಷ್ಯಮ್ ವ್ಯಾಕುರುತೇ ತಸ್ಯ ಸ್ರೋತೃಕೊಡವು ಮಮಾನ್ವಯ:
ಭಾಷ್ಯಕಾರರ (ರಾಮಾನುಜರ) ಅವತಾರವಾಗಿದ್ದು, ಕೈಂಕರ್ಯವೆಂಬ ಸಂಪತ್ತನ್ನು ಹೊಂದಿರುವ ಮಾಮುನಿಗಳೇ ಸ್ವತಃ ಶ್ರೀಭಾಷ್ಯದ ಅರ್ಥಗಳನ್ನು ವಿವರಿಸುತ್ತಿದ್ದಾರೆ. ಶ್ರೀಭಾಷ್ಯವನ್ನು ಅಧ್ಯಯನ ಮಾಡುವವರ ಕೂಟದೊಂದಿಗೆ ನನಗೆ ಸಂಬಂಧವಿದೆ. ತರುವಾಯ, ತಿರುಪತ್ತಿಯನ್ನೇ ತಮ್ಮ ಏಕೈಕ ವಾಸಸ್ಥಾನವನ್ನಾಗಿ ಮಾಡಿಕೊಂಡಿದ್ದ ಪೋಲಿಪ್ಪಾಕ್ಕಂ ಪೋರೇಟ್ರು ನಾಯನಾರ್ ಮುಂತಾದವರಿಗೆ ಅವರು ಶ್ರೀಭಾಷ್ಯವನ್ನು ಬೋಧಿಸಿದರು. ಭಟ್ಟರ ಜೀಯರ್ ಅವರ ಕುಲದಲ್ಲಿ ಪ್ರಖ್ಯಾತರಾದ ಪರವಸ್ತು ಶ್ರೀನಿವಾಸಾಚಾರ್ಯರಿಗೆ ಹಾಗೂ ಅವರ ಸಬ್ರಹ್ಮಾಚಾರ್ಯರಿಗೆ (ಸಹಪಾಠಿ) ಪರವಸ್ತು ಅಳಗಿಯ ಮಣವಾಳ ಜೀಯರ್‌ಗೆ ಅವರು ತಿರುವಾಯ್ಮೋಳಿ ಈಡುವನ್ನು ಕಲಿಸಿದರು,
ಹೀಗೆ, ತಾವೇ ನಿಜವಾಗಿಯೂ ‘ತಿರುವಾಯ್ಮೋಳಿ ನಾಯನಾರ್’ ಎಂಬುದನ್ನು ಅವರು ಪ್ರಕಟಪಡಿಸಿದರು. ತಮ್ಮ ತತ್ವವನ್ನು ಒಪ್ಪದವರಿಗೆ ಸಿಂಹಸ್ವಪ್ನದಂತಿದ್ದ ‘ಪ್ರತಿವಾದಿ ಭಯಂಕರ’ ಎಂಬ ಖ್ಯಾತಿಯನ್ನು ಮೆರೆಸುವ ಮೂಲಕ ಅವರು ರಾಮಾನುಜ ಸಿದ್ಧಾಂತವನ್ನು ರಕ್ಷಿಸಿದರು.
ಅನುವಾದ – ಅಡಿಯೇನ್ ಸುಭದ್ರಾ ರಾಮಾನುಜ ದಾಸಿ
ಮೂಲ : https://granthams.koyil.org/2021/10/26/yathindhra-pravana-prabhavam-100-english/
ಆರ್ಕೈವ್ ಮಾಡಲಾಗಿದೆ – https://granthams.koyil.org
ಪ್ರಮೇಯಂ (ಗುರಿ) – https://koyil.org
ಪ್ರಮಾಣ೦ (ಗ್ರಂಥಗಳು) – https://granthams.koyil.org
ಪ್ರಮಾತಾ (ಬೋಧಕರು) – https://acharyas.koyil.org
ಶ್ರೀವೈಷ್ಣವ ಎಜುಕೇಶನ್ / ಮಕ್ಕಳ ಸಾಹಿತ್ಯ – https://pillai.koyil.org