ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ
ಆ ದಿನಗಳಲ್ಲಿ, ಶ್ರೀರಂಗದಲ್ಲಿ ವಾಸಿಸುತ್ತಿದ್ದ ಮಹಾತ್ಮರು (ಮಹಾನ್ ವ್ಯಕ್ತಿಗಳು) ಪ್ರತಿದಿನ ಈ ಶ್ಲೋಕವನ್ನು ಪಠಿಸುತ್ತಿದ್ದರು : “ಶ್ರೀಮನ್ ಶ್ರೀರಂಗಶ್ರೀಯಮ್ ಅನುಪಧ್ರವಾಮ್ ಅನುಧಿನಂ ಸಂವರ್ಧಯ ” (ಯಾವುದೇ ಅಡೆತಡೆಯಿಲ್ಲದೆ ಶ್ರೀರಂಗದ ಸಂಪತ್ತು (ದಾಸ್ಯ) ಪ್ರತಿದಿನವೂ ಹೆಚ್ಚಲಿ) ಜೊತೆಗೆ ಪೆರಿಯಾಳ್ವಾರ್ ಅವರ ” ತಿರುಪ್ಪಲ್ಲಾಂಡು ” (ಪೆರಿಯ ಪೆರುಮಾಳ್ ಎಂದೆಂದಿಗೂ ಚಿರವಾಗಿರಲಿ), ತಿರುಮಂಗೈ ಆಳ್ವಾರ್ ಅವರ ಶ್ರೀರಂಗದ ಬಗ್ಗೆ ಪಾಶುರಮ್ ” ಏಳೈ ಏದಲನ್” (ಕೆಳಜಾತಿಯ ಈ ಬಡವ…), ನಮ್ಮಾಳ್ವಾರ್ ಅವರ ೭ .೪ .೧ ಪಾಶುರಮ್ ” ಆಳಿ ಎಳ ಸಂಗುಮ್ ” (ದಿವ್ಯವಾದ ಶಂಖು ಚಕ್ರಗಳು ಏಳಲಿ)
ಹೀಗೆಲ್ಲಾ ಮಂಗಳಾಶಾಸನವನ್ನು ನಡೆಸುತ್ತಾ (ಎಂಪೆರುಮಾನ್‌ನನ್ನು ಸ್ತುತಿಸುವುದು) ಮತ್ತು ಅವರಿಗೆ ಶರಣಾಗಿದ್ದರು. ಅವರು ಮಾಡಿದ ಮಂಗಳಾಶಾಸನವು ರಾಜನಾಗಿ ಫಲವನ್ನು ನೀಡಿತು, ಸೆಂಜಿಯಿಂದ (ತಿರುವಣ್ಣಾಮಲೈ) ಆಳ್ವಿಕೆ ನಡೆಸುತ್ತಿದ್ದ ಗೋಪಣಾರ್ಯನು ತಿರುಪತಿಗೆ ಹೋಗಿ, ಅಲ್ಲಿ ನಮ್ ಪೆರುಮಾಳ್ಗೆ ಪೂಜೆ ಸಲ್ಲಿಸಿ, ಹಿಂದಿರುಗುವಾಗ, ಕರುಣಾಪೂರ್ವಕವಾಗಿ ನಮ್ ಪೆರುಮಾಳರನ್ನು ತನ್ನ ಪಟ್ಟಣವಾದ ಸೆಂಜಿ ಬಳಿಯ ಸಿಂಗರಾಯಪುರಂಗೆ ಕರೆತಂದನು. ಅವನು ಸಂಪೂರ್ಣ ಭಕ್ತಿಯಿಂದ ನಮ್ಪೆರುಮಾಳರನ್ನು ಆರಾಧಿಸುತ್ತಿದ್ದನು, ಶ್ರೀರಂಗಂನಲ್ಲಿ ಬೇರೂರಿರುವ ಆಕ್ರಮಣಕಾರಿ ಪಡೆಗಳ ಮೇಲೆ ಧಾಳಿ ಮಾಡಲು ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದನು. ತಿರುಮಣತ್ತೂಣ್ ನಂಬಿ ಧಾಳಿಗೆ ಸರಿಯಾದ ಸಮಯಕ್ಕೆ ಸಂಕೇತ ನೀಡಿದರು. ಗೋಪಣಾರ್ಯನು ಅಪ್ರತಿಮ ಸೈನ್ಯಬಲದಿಂದ ಹೋಗಿ ಆಕ್ರಮಣಕಾರರ ಕಪಿಮುಷ್ಠಿಯಿಂದ ಶ್ರೀರಂಗವನ್ನು ಬಿಡಿಸಿದನು, ಈ ಶ್ಲೋಕದಲ್ಲಿ ಹೇಳಿರುವಂತೆಯೇ ಪೆರಿಯ ಪೆರುಮಾಳ್ ಸನ್ನಿಧಿಯಲ್ಲಿ ಶ್ರೀದೇವಿ ಮತ್ತು ಭೂದೇವಿಯೊಂದಿಗೆ ನಮ್ ಪೆರುಮಾಳರನ್ನು ಸ್ಥಾಪಿಸಿದನು.
ಆನೀಯಾನೀಲ ಶೃಂಗತ್ಯುಧಿರಚಿತ ಜಗದ್ರಂಜನಾಥಾನ್ಚನಾಥ್ರೇಸ್ ಸೆಂಜ್ಯಾಮ್
ಆರಾಧ್ಯ ಕಂಚಿತ್ ಸಮಯಮಥ ನಿಹಧ್ಧ್ಯೋತ್ತನುಷ್ಠಾನ್ ತುರುಷ್ಕಾನ್
ಲಕ್ಷ್ಮೀ ಕ್ಷಮಾಪ್ಯಾಮುಪಾಪ್ಯಮ್ ಸಹ ನಿಜನಿಲಯೇ ಸ್ಥಾಪಯೇತ್ ರಂಗನಾಥಮ್
ಸಮ್ಯಕ್ಚರ್ಯಾಮ್ ಸಪರ್ಯಾಮಕೃತ ನಿಜಯಸೋ ದರ್ಪಣೋ ಗೋಪಣಾರ್ಯ :
(ಕನ್ನಡಿಯಂತೆ ಹೊಳೆಯುವ ಖ್ಯಾತಿಯನ್ನು ಹೊಂದಿರುವ ಗೋಪಣಾರ್ಯನು, ತಿರುವೆಂಗಡಂನಿಂದ ನಮ್ ಪೆರುಮಾಳರನ್ನು ಕರುಣಾಮಯವಾಗಿ ಕರೆತಂದನು. ತಿರುವೆಂಗಡವನ್ನು ಅಂಜನಾಚಲಂ ಎಂದೂ ಕರೆಯುತ್ತಾರೆ, ಏಕೆಂದರೆ ಅದು ತನ್ನ ಸಂಪೂರ್ಣ ಕಪ್ಪು ಮೇಲ್ಭಾಗದ ಹೊಳಪಿನಿಂದಾಗಿ ಜಗತ್ತಿಗೆ ಸಂತೋಷವನ್ನು ನೀಡುತ್ತಿತು . ಗೋಪಣಾರ್ಯನು ತನ್ನ ಸ್ಥಳವಾದ ಸೆಂಜಿಗೆ ಕೆಲವು ದಿನಗಳವರೆಗೆ ಹೋಗಿ ಅಲ್ಲಿ ಎಂಪೆರುಮಾನನ್ನು ಪೂಜಿಸಿ, ಅವನು ತನ್ನ ಬಿಲ್ಲು ಮತ್ತು ಬಾಣಗಳಿಂದ ತುರ್ಕರನ್ನು (ದಾಳಿಕೋರರನ್ನು) ಕೊಂದು, ತನ್ನ ಮೂಲ ನೆಲೆಯಾದ ಶ್ರೀರಂಗಂನಲ್ಲಿ ಶ್ರೀದೇವಿ ಮತ್ತು ಭೂದೇವಿಯೊಂದಿಗೆ ರಂಗನಾಥನನ್ನು ಸ್ಥಾಪಿಸಿದನು ಮತ್ತು ದೈವಿಕ ಆರಾಧನೆಯನ್ನು ಸೂಕ್ತವಾಗಿ ನೆರವೇರಿಸಿದನು.
ಪಾಸುರದಲ್ಲಿ ಹೇಳಿರುವಂತೆ: “ಕೊಂಗುಮ್ ಕುಡಂಧೈಯುಮ್ ಕೊಟ್ಟಿಯೂರುಮ್ ಪೇರುಮ್ಎಂಗುಮ್ ತಿರಿನ್ದು ವಿಳೈಯಾಡುಮ್ ” (ಕೊಂಗು ನಾಡು [ತಮಿಳು ನಾಡಿನ ಪಶ್ಚಿಮ ಪ್ರದೇಶ], ತಿರುಕ್ಕೋಟ್ಟಿಯೂರ್ , ತಿರುಪ್ಪೇರ್ ಮುಂತಾದ ಕಡೆ ಆಡುವುದು) ಮತ್ತು “ಮಯಲ್ಮಿಗು ಪೊಳಿಲ್ ಶೂಳ್ ಮಾಲಿರುನ್ಶೋಲೈ “. (ಉತ್ತಮ ಸಮ್ಮೋಹನಗೊಳಿಸುವ ಸಾಮರ್ಥ್ಯಗಳನ್ನು ಹೊಂದಿರುವ ತೋಟಗಳಿಂದ ಆವೃತವಾದ ತಿರುಮಲಿರುಂಜೋಲೈಯಲ್ಲಿ) “ವಿರೈಯಾರ್ ಪೊಳಿಲ್ ವೇನ್ಗಡಂ” (ಸುಗಂಧಭರಿತ ಉದ್ಯಾನಗಳಿಂದ ತುಂಬಿರುವ ತಿರುಮಲೈ) ನಮ್ಪೆರುಮಾಳ್ ಈ ಎಲ್ಲಾ ಸ್ಥಳಗಳಿಗೆ ಹೋಗಿ ನಂತರ ಶತ್ರುಗಳನ್ನು ಸಂಹಾರ ಮಾಡಿ ಶ್ರೀರಂಗಕ್ಕೆ ಹಿಂದಿರುಗಿದರು. ಪಾಶುರದಲ್ಲಿ ಹೇಳಿರುವಂತೆ “ಕೋಯಿಲ್ ಪಿಳ್ಳಾಯ್ ಇಂಗೇ ಪೋಧರಾಯೇ” (ಓ, ದೇವಾಲಯದ ನಿವಾಸಿಯೇ, ಇಲ್ಲಿಗೆ ಬಾ!)
ಸಕಾಪ್ತಮ್ 1293 ರಲ್ಲಿ,ಪರಿತಾಪಿ ಸಂವತ್ಸರ (ವರ್ಷ), ವೈಖಾಸಿ ತಿಂಗಳ (ಋಷಭ ಮಾಸ) 17ನೇ ದಿನದಿಂದು ಇಡೀ ಶ್ರೀರಂಗದ ಜನರೆಲ್ಲಾ. “ರಾಮಸ್ಸೀತಾಮನುಪ್ರಾಪ್ಯ ರಾಜ್ಯಮ್ ಪುನರವಾಪ್ತವಾನ್ ” (ಶ್ರೀರಾಮನು ಸೀತೆಯನ್ನು ಮರಳಿ ಗೆದ್ದು ತನ್ನ ರಾಜ್ಯಕ್ಕೆ ಮರಳಿದನು) ಹೇಗೆ ಅಯೋಧ್ಯಾದಲ್ಲಿ ಶ್ರೀ ರಾಮಾರ ಆಗಮನವನ್ನು ಈ ಶ್ಲೋಕದಲ್ಲಿ ಹೇಳಿದಂತೆ ಕೊಂಡಾಡಿದರೋ ಹಾಗೆ ಕೊಂಡಾಡಿದರು. “ತಿರುಮಗಳೋಡು ಇನಿದು ಅಮರ್ನ್ದ ಸೆಲ್ವನ್” (ಎಂಪೆರುಮಾನ್, ಶ್ರೀ ಮಹಾಲಕ್ಷ್ಮಿ ಜೊತೆಯಲ್ಲಿ ಉಲ್ಲಾಸವಾಗಿ ಕುಳಿತಿದ್ದಾನೆ) ಈ ಪಾಶುರದಲ್ಲಿ ಹೇಳಿರುವಂತೆಯೇ ಇದು ನೋಡಲು ಒಂದು ಮೋಡಿಮಾಡುವ ದೃಶ್ಯವಾಗಿತ್ತು, ” “ವೀಟ್ರಿರುನ್ದ ಮಣವಾಳರ್ ಮನ್ನು ಕೋಯಿಲ್” (ಅಳಗಿಯ ಮಣವಾಳನ್ (ನಂಪೆರುಮಾಳ್) ಪುನರ್ಜೀವನಗೊಂಡ ದೇವಾಲಯವಾಗಿತ್ತು)” ಎಂದು ಹೇಳಿರುವಂತೆಯೇ, ಅಳಗಿಯ ಮನಾವಾಳನು ತನ್ನ ನಾಚ್ಚಿಮಾರುಗಳೊಂದಿಗೆ (ಶ್ರೀದೇವಿ ಮತ್ತು ಭೂದೇವಿ) ಸೇರಪಾಂಡಿಯನ್ (ನಂಪೆರುಮಾಳ್ ತನ್ನ ಉಭಯನಾಚ್ಚಿಮಾರ್ಗಳೊಂದಿಗೆ ಕುಳಿತುಕೊಂಡಿರುವ ದೈವಿಕ ಸಿಂಹಾಸನ) ಮೇಲೆ ಕುಳಿತುಕೊಂಡು, ತನ್ನ ಶ್ರೀರಂಗಂನಲ್ಲಿ ತನ್ನ ಆಳ್ವಿಕೆಯನ್ನು ವ್ಯಕ್ತಪಡಿಸುತ್ತಾನೆ. ದೂರದ ಊರುಗಳಲ್ಲಿ ನೆಲೆಸಿರುವ ಶ್ರೀ ವೈಷ್ಣವರು ಈ ಘಟನೆಯನ್ನು ಕೇಳಿದೊಡನೆಯೇ ಈ ಕೆಳಗಿನ ವಚನದಲ್ಲಿ ಹೇಳಿದಂತೆಯೇ ಭಾವಪರವಶರಾದರು.
ಬಹೂನಿನಾಮ ವರ್ಷಾಣಿ ಗತಸ್ಯ ಸುಮತ್ವನಂ
ಶೃಣೋಮ್ಯಹಮ್ ಪ್ರೀತಿಕಾರಮ್ ಮಮನಾಥಸ್ಯ ಕೀರ್ತನಂ
(ನಂಪೆರುಮಾಳ್ ಬಹುಕಾಲದವರೆಗೆ ದೊಡ್ಡ ಕಾಡನ್ನು ತಲುಪಿ ಕರುಣಾಮಯಿಯಾಗಿ ಹಿಂದಿರುಗಿದ ಮಹೋನ್ನತ ಸುದ್ದಿಯನ್ನು ನಾನು ಕೇಳಿದೆ), ಇಷ್ಟು ಸಮಯದ ನಂತರ ನಂಪೆರುಮಾಳ್ ಹಿಂತಿರುಗಿರುವುದು ತಮ್ಮ ಅದೃಷ್ಟ ಎಂದು ಭಾವಿಸಿದೆ.
ತಕ್ಷಣವೇ, ಎಲ್ಲರೂ ಅಲ್ಲಿಗೆ ಬಂದು, ನಂಪೆರುಮಾಳ್ ಅವರ ದೈವಿಕ ಪಾದಗಳನ್ನು ಪೂಜಿಸಿದರು,
“ಪ್ರಹೃಷ್ಟಮ್ ಉಥಿಥೋಲೋಕ” (ಜನರು ತುಂಬಾ ಸಂತೋಷಪಟ್ಟರು) ಎಂಬಂತೆ ಎಲ್ಲರೂ ಅತ್ಯಂತ ಸಂತೋಷವನ್ನು ಅನುಭವಿಸಿದರು. ಶ್ರೀ ರಾಮಾಯಣ ಶ್ಲೋಕದಲ್ಲಿ ಹೇಳಿರುವಂತೆ “ವಿಜ್ವರ: ಪ್ರಮುಮೋತಃ ” (ಜ್ವರ ಮತ್ತು ಚಿಂತೆಯನ್ನು ತೊಡೆದುಹಾಕಿದ ನಂತರ ಸಂತೋಷವನ್ನು ಅನುಭವಿಸಿದರು) ಪೆರುಮಾಳ್ (ಎಂಪೆರುಮಾನ್) ಕೂಡ, ಪ್ರತಿಯೊಬ್ಬರನ್ನು ತಂಪಾಗಿ ನೋಡಿ ಅವರ ಮೇಲೆ ಕರುಣೆಯನ್ನು ಸುರಿಸಿದರು. ಅವರು ದಕ್ಷಿಣ ದಿಕ್ಕಿನತ್ತ ನೋಡಿ, ಅಳಗಿಯ ಮನವಾಳಪ್ಪೆರುಮಾಳ್ ನಾಯಣಾರರ ಮೇಲೆ ಕರುಣೆಯನ್ನು ಸುರಿಸಿದರು.
ಅನುವಾದ – ಅಡಿಯೇನ್ ಸುಭದ್ರಾ ರಾಮಾನುಜ ದಾಸಿ
ಪುರಾವೆ ಓದುವಿಕೆ -ಅಡಿಯೇನ್ ಕೊದೈ ರಾಮಾನುಜ ದಾಸಿ
ಮೂಲ : https://granthams.koyil.org/2021/08/08/yathindhra-pravana-prabhavam-24-english/
ಆರ್ಕೈವ್ ಮಾಡಲಾಗಿದೆ – https://granthams.koyil.org
ಪ್ರಮೇಯಮ್ (ಗುರಿ) – https://koyil.org
ಪ್ರಮಾಣಮ್ (ಗ್ರಂಥಗಳು) – https://granthams.koyil.org
ಪ್ರಮಾತಾ (ಬೋಧಕರು) – https://acharyas.koyil.org
ಶ್ರೀವೈಷ್ಣವ ಎಜುಕೇಶನ್ / ಮಕ್ಕಳ ಸಾಹಿತ್ಯ – https://pillai.koyil.org
1 thought on “ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೨೪”