ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೭೨

ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ

ಪೂರ್ಣ ಸರಣಿ

<< ಹಿಂದಿನ ಲೇಖನವನ್ನು

ಆಚಾರ್ಯ ಸ್ಥಾನಗಳಲ್ಲಿ ಪ್ರಧಾನ ಶಿಷ್ಯರಿಗೆ ಜೀಯರ್ ದೈವಿಕ ಪಟ್ಟಾಭಿಷೇಕವನ್ನು ನೆರವೇರಿಸುತ್ತಾರೆ.

ಒಂದು ದಿನ, ಜೀಯರ್ ಪ್ರತಿವಾಧಿ ಭಯಂಕರಮ್ ಅಣ್ಣಾ ಅವರನ್ನು ಕರೆದು, ಶ್ರೀಭಾಷ್ಯ೦ (ವ್ಯಾಸ ಮಹರ್ಷಿಗಳ ಬ್ರಹ್ಮಸೂತ್ರಕ್ಕೆ ರಾಮಾನುಜರು ಬರೆದ ವ್ಯಾಖ್ಯಾನ) ಅನ್ನು ಕಂದಾಡೈ ಅಣ್ಣನ್, ಪೋರೇಟ್ರು ನಾಯನಾರ್, ಅನಂತಯ್ಯನಪ್ಪಯ್ಯ , ಎಂಪೆರುಮಾನಾರ್ ಜೀಯರ್ ನಾಯನಾರ್ ಹಾಗು ಕಂದಾಡೈ ನಾಯನ್ ಅವರಿಗೆ ಕರುಣೆಯಿಂದ ಕಲಿಸಲು ಹೇಳಿದರು.

ಇನ್ನೊಂದು ದಿನ, ಅವರು ಕಂದಾಡೈ ಅಣ್ಣನವರನ್ನು ಕರೆದು, ಪೆರಿಯ ಕಂದಾಡೈ ಅಪ್ಪನ್, ತಿರುಕ್ಕೋಪುರತ್ತು ನಾಯನಾರ್ ಭಟ್ಟರು, ಶುದ್ಧಸತ್ವಮಣ್ಣನ್, ಅಂದ ಪೆರುಮಾಳ್ ಮತ್ತು ಅಯ್ಯನಪ್ಪರಿಗೆ ಭಗವತ್ ವಿಷಯವನ್ನು ಕಲಿಸಲು ಹೇಳಿದರು.
ನಂತರ ಅವರು ಕಂದಾಡೈ ಅಣ್ಣನವರಿಗೆ ಭಗವದ್ಸಂಬಂಧ ಆಚಾರ್ಯರ ಎಂಬ ದಿವ್ಯ ಬಿರುದನ್ನು ನೀಡಿ, ಅವರನ್ನು ಆಚಾರ್ಯ ಸಿಂಹಾಸನದ ಮೇಲೆ ಕೂರಿಸಿದರು ಮತ್ತು ಅವರಿಗೆ ಅಭಿಷೇಕವನ್ನು ಮಾಡಿದರು. ಭಾಷ್ಯ ಬರೆಯುವ ಶುದ್ಧಸತ್ವಮಣ್ಣನ್ ಅವರ ಸಾಮರ್ಥ್ಯವನ್ನು ನೋಡಿ ಅವರಿಗೆ ತುಂಬಾ ಸಂತೋಷವಾಯಿತು.ಅವರಿಗೆ ತಿರುವಾಯ್ಮೋಳಿ ಆಚಾರ್ಯರೆಂಬ ಬಿರುದು ನೀಡಿ, ಅವರನ್ನು ಭಗವತ್ ವಿಷಯ ಸಿಂಹಾಸನದ ಮೇಲೆ ಕೂರಿಸಿದರು ಮತ್ತು ಅವರಿಗೆ ಅಭಿಷೇಕವನ್ನು ಮಾಡಿದರು. ಒಂದು ರಾತ್ರಿ, ಕಂದಾಡೈ ನಾಯನ್ ಮತ್ತು ಜೀಯರ್ ನಾಯನಾರ್ ಭಗವತ್ ವಿಷಯದ ಅರ್ಥಗಳ ಬಗ್ಗೆ ಚರ್ಚಿಸುವುದನ್ನು ಅವರು ಕೇಳಿದರು.ಭಗವತ್ ವಿಷಯದ ಅರ್ಥಗಳ ಕುರಿತು ಸಮಸ್ಕೃತದಲ್ಲಿ ಕಂದಾಡೈ ನಾಯನ್ ಅವರು ಪ್ರವಚನ ನೀಡುವುದನ್ನು ಅವರು ಕೇಳಿದರು. ಸಂಸ್ಕೃತದಲ್ಲಿ ಭಗವತ್ ವಿಷಯಕ್ಕಾಗಿ ಅರುಂಪದವಿಲಕ್ಕಂ (ವಿವರಣಾತ್ಮಕ ಅರ್ಥಗಳು) ಬರೆಯಲು ಅವರು , ನಾಯನ್ ಅವರನ್ನು ನೇಮಿಸಿದರು.

ಜೀಯರ್ ಎರುಂಬಿಯಪ್ಪಾನನ್ನು ಕೋಯಿಲ್‌ಗೆ ಕರೆಯುತ್ತಾರೆ

ಅವರ ದಿವ್ಯ ಮನಸ್ಸು ಎರುಂಬಿಯಪ್ಪ ಕಡೆಗೆ ಹೋಯಿತು. ಅವರು ತಕ್ಷಣ ಕೋಯಿಲ್‌ಗೆ ಹೊರಡುವಂತೆ ಅಪ್ಪಾಗೆ ಸಂದೇಶ ಕಳುಹಿಸಿದರು. ಅಪ್ಪಾ ತಕ್ಷಣವೇ ಮಾಮುನಿಗಳ್ ನ ಧಾರ್ಶನನ್ನು ಹೊಂದಲು ಬಯಸಿತು ಮತ್ತು ಶ್ಲೋಕವನ್ನು ರಚಿಸಿತದರು

ಜೀಯರ್ ಅವರ ದಯಾಳು ಸನ್ನಿಧಿಯನ್ನು ಬಿಟ್ಟು ಎರುಂಬಿಯನ್ನು ತಲುಪಿದ ನಂತರ [ಜೀಯರ್ ಪೆರುಮಾಳ್ ಕೊಯಿಲ್‌ಗೆ ಪ್ರಯಾಣದ ಸಮಯದಲ್ಲಿ, ಉಲ್ಲೇಖ ಭಾಗ 66], ಎರುಂಬಿಯಪ್ಪ ಆ ಅಗಲಿಕೆಯನ್ನು ಸಹಿಸಲಾರದೆ ದುಃಖಿತರಾದರು. ಅವರು ಜೀಯರ್ ಅವರ ದಿನಚರಿಯ (ದೈನಂದಿನ ಚಟುವಟಿಕೆಗಳ) ಬಗ್ಗೆ ಧ್ಯಾನಿಸುತ್ತಲೇ ಇದ್ದರು.ಆ ಅನುಭವದ ಅತಿಯಾದ ಹರಿವಿಗೆ ಒಂದು ಮಾರ್ಗವಾಗಿ, ಅವರು ಪ್ರಬಂಧಂ ಧೀನಾಚಾರ್ಯವನ್ನು ರಚಿಸಿ ಶ್ರೀವೈಷ್ಣವರ ಮೂಲಕ ಜೀಯರ್‌ಗೆ ಕಳುಹಿಸಿದರು. ಅದನ್ನು ಓದಿದ ಜೀಯರ್‌ಗೆ ತುಂಬಾ ಸಂತೋಷವಾಯಿತು, ಎರುಂಬಿಯಪ್ಪನ ಮೇಲೆ ಕರುಣೆ ತೋರಿದರು ಮತ್ತು “ಒಬ್ಬರು ಅಭಿಮಾನದಲ್ಲಿ (ಪೂಜ್ಯಭಾವನೆಯಲ್ಲಿ) ಆಳವಾಗಿ ತೊಡಗಿಸಿಕೊಂಡಿದ್ದರೆ, ಅವರು ಹೀಗಿರಬೇಕಲ್ಲವೇ?” ಎಂದು ಆಶ್ಚರ್ಯಪಟ್ಟರು.ಅವರ ದಿವ್ಯ ಮನಸ್ಸು ಎರುಂಬಿಯಪ್ಪ ಕಡೆಗೆ ಹೋಯಿತು. ಅವರು ತಕ್ಷಣ ಕೋಯಿಲ್‌ಗೆ ಹೊರಡುವಂತೆ ಅಪ್ಪಾಗೆ ಸಂದೇಶ ಕಳುಹಿಸಿದರು. ಅಪ್ಪಾ ತಕ್ಷಣವೇ ಮಾಮುನಿಗಳ್ ನ ಧಾರ್ಶನನ್ನು ಹೊಂದಲು ಬಯಸಿತು ಮತ್ತು ಶ್ಲೋಕವನ್ನು ರಚಿಸಿತದರು

ಪಾರಾವಾರಪ್ಲವನಚತುರ: ಕುಂಜರೆವಾನರಾಣಾಮ್ ಪದ್ಮಾಭರ್ತು: ಪ್ರಿಯಸಹಚರ ಬದ್ರಿನಾಮೀಶ್ವರೋವಾ
ವಾಯುರ್ಭುತ್ವಸಪತಿಯತಿವಾ ಮಾರ್ಗ ಮುಲ್ಲನ್ಗ್ಯ ದುರ್ಗಂ ಕಾಲೇಕಾಲೇ ಕಾಮಯೇ ವೀಕ್ಷಿತುಂ ತ್ವಾಮ್

(ಓ ಮಣವಾಳ ಮಾಮುನಿಗಳೇ! ನಾನು ದೇವರಿರನ್ನು ತಕ್ಷಣ, ಶಾಶ್ವತವಾಗಿ ನೋಡಿ ಆನಂದಿಸಲು ಬಯಸುತ್ತೇನೆ. ವಾನರರಲ್ಲಿ ಶ್ರೇಷ್ಠ ಮತ್ತು ಬೃಹತ್ ಸಾಗರವನ್ನು ದಾಟುವುದರಲ್ಲಿ ನಿಪುಣನಾದ ಆಂಜನೇಯನಾಗಿ ಅಥವಾ ಪೆರಿಯ ತಿರುವಡಿ ಎಂದೂ ಕರೆಯಲ್ಪಡುವ ಪಕ್ಷಿರಾಜನಾಗಿ ರೂಪಾಂತರಗೊಂಡು ಈ ದುಸ್ತರ ಮಾರ್ಗವನ್ನು ದಾಟಿ, ಕಮಲನ ದೈವಿಕ ಸಂಗಾತಿಯಾದ ಎಂಪೆರುಮಾನನಿಗೆ ಪ್ರಿಯನಾದ ಮತ್ತು ಅವನಿಗೆ ಶಾಶ್ವತ ಕೈಂಕರ್ಯವನ್ನು ಮಾಡುವವನಾಗಿ ರೂಪಾಂತರಗೊಳ್ಳಲು ಬಯಸುತ್ತೇನೆ). ಉಕ್ಕಿ ಹರಿಯುವ ಪ್ರೀತಿಯಿಂದ, ಅವನು ಆ ಸಂದೇಶವನ್ನು ತನ್ನ ತಲೆಯ ಮೇಲೆ ಹೊತ್ತುಕೊಂಡು ಶ್ಲೋಕವನ್ನು ಪಠಿಸಿದರು .

ದೇವ: ಸ್ವಾಮೀ ಸ್ವಯಮೀಹಭವನ್ ಸೌಮ್ಯಜಾಮಾತೃಯೋಗಿ
ಭೋಗೀಶ ತ್ವದ್ವಿಮುಖಾಮಪಿಮಾಂ ಭೂಯಾಸಾಬಾಷ್ ಯಸೀತ್ವಂ ?
ಅರ್ಥಔಧರ್ಯತಪಿಚ ವಚಸಾಮಗ್ಯಾಸಾ ಸನ್ನೀವೇಶ
ತಾವಿರ್ ಭಾಷ್ಪೈರಮಲಮಪಿಡಿರ್ ನಿತ್ಯಂ ಆರಾಧನೀಯಂ
ಆಶಾಸಾನೈರ್ ವರವರಮುನೇ ನಿತ್ಯಮುಕ್ತತೈರ್ಲಭ್ಯಮ್ ಮರ್ಥಯೋಲಬ್ದುಂ
ಪ್ರಭಾವಧಿಕತಂ ಮಧ್ವಿತ: ಶ್ರೀಮುಖಂತೇ
ಸಾರಾಸಾರಪ್ರಮಿತಿ ರಹಿತಸ್ ಸರ್ವಧಾಶಾಸನಂತೆ
ಸತ್ಯಶ್ರೀಮಾನ್ ಕಪಿಕರಕೃತಮಾಲಿಕಾಮೇವ ಕುರ್ಯಾಂ

(ಓ ತಿರುವನಂಥಾಳ್ವಾನ್ (ಆದಿಶೇಷನ್)! ನೀವು ನಮ್ಮ ಸ್ವಾಮಿ (ಪ್ರಭು) ಆಗಿರುವ ಮಣವಾಳ ಮಾಮುನಿಗಳಾಗಿ ಸ್ವಯಂ ಅವತರಿಸಿದ್ದೀರಿ. ನಾನು ನಿಮ್ಮನ್ನು ದ್ವೇಷಿಸಿದ್ದರೂ ಸಹ, ನೀವು ನನಗೆ ವಿಶಿಷ್ಟ ರೀತಿಯಲ್ಲಿ ಆಶೀರ್ವಾದ ಮಾಡಿದ್ದೀರಿ.) ಓ ಮಣವಾಳ ಮಾಮುನಿಗಳೇ! ನಿಮ್ಮ ದೈವಿಕ ಶ್ರೀಸೂಕ್ತಿಗಳು (ಸಂಯೋಜನೆಗಳು) ಅವುಗಳ ಜೋಡಣೆ ಮತ್ತು ಅರ್ಥಗಳ ಶ್ರೇಷ್ಠತೆಯಿಂದ, ಶುದ್ಧ ಮನಸ್ಸಿನವರು, ಆನಂದದ ಕಣ್ಣೀರಿನೊಂದಿಗೆ ಪೂಜಿಸಲು ಯೋಗ್ಯವಾಗಿದ್ದರೆ, ನಿತ್ಯಮುಕ್ತರು (ಶ್ರೀವೈಕುಂಠದ ಶಾಶ್ವತ ನಿವಾಸಿಗಳು ಮತ್ತು ಸಂಸಾರದಿಂದ ಮುಕ್ತರಾಗಿ ಶ್ರೀವೈಕುಂಠವನ್ನು ತಲುಪಿದವರು) ನಿಮ್ಮನ್ನು ನಿರಂತರವಾಗಿ ಪಲ್ಲಾಂಡು ಹಾಡುತ್ತಲೇ ಇರುವಾಗ (ಎಂಪೆರುಮಾನನನ್ನು ಸ್ತುತಿಸುವುದು) ನಿಮ್ಮನ್ನು ತಲುಪುವುದು ಕಷ್ಟಕರವಾದಾಗ, ನಮ್ಮಂತಹ ಜನರು ನಿಮ್ಮಿಂದ ಸಂದೇಶವನ್ನು ಸ್ವೀಕರಿಸಲು ಹೇಗೆ ಅರ್ಹರಾಗುತ್ತಾರೆ? ಒಳ್ಳೆಯದು ಮತ್ತು ಕೆಟ್ಟದ್ದರ ನಡುವೆ ವ್ಯತ್ಯಾಸವನ್ನು ಗುರುತಿಸುವ ಜ್ಞಾನವಿಲ್ಲದ ಆದಿಯೇನ್ (ಈ ಸೇವಕ), ದೇವರೀರ್ ಕಳುಹಿಸಿದ ದೈವಿಕ ಸಂದೇಶವನ್ನು ಕೋತಿಯು ಹಾರವನ್ನು ಹರಿದು ಹಾಕುವಂತೆ ಹರಿದು ಹಾಕುತ್ತಾನೆ. ಮಣವಾಳ ಮಾಮುನಿಗಳ ಆ ದಿವ್ಯ ಸಂದೇಶದಲ್ಲಿ ಅವನು ಸಂಪೂರ್ಣವಾಗಿ ಮಗ್ನನಾಗಿ, ಬಹಳ ಆಸೆಯಿಂದ ಶ್ರೀರಂಗಕ್ಕೆ ತಕ್ಷಣವೇ ಹೊರಟರು . ಅವರು ಮಠವನ್ನು ಪ್ರವೇಶಿಸಿದರು ಮತ್ತು ದಾರಿಯಲ್ಲಿ [ಎರುಂಬಿಯಿಂದ] ಅನುಭವಿಸಿದ ಹಂಬಲವನ್ನು ಮತ್ತು ದೀರ್ಘಕಾಲದಿಂದ ಜೀಯರ್‌ಗೆ ನಮಸ್ಕರಿಸದಿರುವ ಹಂಬಲವನ್ನು ತಣಿಸಿಕೊಳ್ಳಲು, ಶ್ಲೋಕಂ ಸುಧಾನಿಧಿಮ್ ಇವ ಸ್ವೈರ ಸ್ವೀಕೃತೋಥಾಗ್ರ ವಿಗ್ರಹಂ (ಅಮೃತ ಸಾಗರದಂತೆ, ಜೀಯರ್ ತನ್ನ ಇಚ್ಛೆಯಿಂದ ದೈವಿಕ ರೂಪವನ್ನು ಸ್ವೀಕರಿಸಿದರು ) ನಲ್ಲಿ ಉಲ್ಲೇಖಿಸಿರುವಂತೆ ವರವರಮುನಿ [ಮಣವಾಳ ಮಾಮುನಿಗಳು] ನ ದೈವಿಕ ರೂಪವನ್ನು ಆನಂದಿಸಿದರು , ಮಣವಾಳ ಮಾಮುನಿಗಳ ದಿವ್ಯ ಕಮಲದಂತಹ ಪಾದಗಳನ್ನು ತೆಗೆದುಕೊಂಡು ತನ್ನ ಎದೆ ಮತ್ತು ಕಣ್ಣುಗಳ ಮೇಲೆ ನಿಧಾನವಾಗಿ ಒತ್ತಿ ಅವರ ಮುಂದೆ ನಮಸ್ಕರಿಸಿದರು . ಪಾಸುರಗಳಲ್ಲಿ ಉಲ್ಲೇಖಿಸಿರುವಂತೆ :

ಪೊನ್ನಿಧಾನಿಲ್ ಕುಳಿತ್ತು ಆಂಗು ಅಂಧನಿಲ್ ಪುಗುದಪ್ಪೆಟ್ರೋಮ್
ಪೊರುವರಂ ಸೀರ್ ನ೦ಪೆರುಮಾಳ್ ಪದ೦ ಪುಗುழಪ್ಪೆಟ್ರೋಮ್
ಮನ್ನಿಯ ಸೀರ್ ಮಣವಾಳ ಮಾಮುನಿವನ್ ಎನ್ನೈಯನ್
ವಾழನ್ದಿರುಕ್ಕುಮ್ ಮಡಮ್ ತನಿಲ್ ವಂಧಿರುಕ್ಕಪ್ಪೆಟ್ರೋಮ್
ಸೆನ್ನಿಧನಿಲ್ ಅವನ್ ಅಡಿಯಾರ್ ಪದ೦ ಸುಡಪ್ಪೆಟ್ರೋಮ್
ತಿರುಮಲೈಯழ்ವಾರಿಲ್ ಎನ್ರುಮ್ ಸಿರಂಧಿರುಕ್ಕಪ್ಪೆಟ್ರೋಮ್
ಪಿನ್ನೈ ಅವರಕ್ಕು ಅಂಧರಂಗಪ ಪೊರುಳುಂ ಪ್ಪೆಟ್ರೋಮ್
ಪೆರುಮ್ ತೀವತ್ತಿಲ್ ಇನ್ಬಮ್ ಇಂಗೇ ಪೇರುಗವುಮ್ ಪ್ಪೆಟ್ರೋಮೇ

(ಕಾವೇರಿಯಲ್ಲಿ ಸ್ನಾನ ಮಾಡಿ ಶ್ರೀರಂಗಂ ಪ್ರವೇಶಿಸುವ ಅದೃಷ್ಟ ನಮ್ಮದು. ನಂಪೆರುಮಾಳರ ದಿವ್ಯ ಪಾದಗಳನ್ನು ಸ್ತುತಿಸುವ ಅದೃಷ್ಟ ನಮ್ಮದು. ಮಣವಾಳ ಮಾಮುನಿಗಳು ವಾಸಿಸುವ ಧಾಮದಲ್ಲಿ ವಾಸಿಸುವ ಅದೃಷ್ಟ ನಮ್ಮದು. ಅವರ ಅನುಯಾಯಿಗಳ ದಿವ್ಯ ಪಾದಗಳನ್ನು ಧರಿಸುವ ಅದೃಷ್ಟ ನಮ್ಮದು. ತಿರುಮಲೈಆಳ್ವಾರ್ (ಉಪನ್ಯಾಸ ಇತ್ಯಾದಿಗಳನ್ನು ತ್ಯಜಿಸಲು ಮಾಮುನಿಗಳು ನಿರ್ಮಿಸಿದ ಸಭಾಂಗಣ) ನಲ್ಲಿ ಯಾವಾಗಲೂ ಇರುವ ಅದೃಷ್ಟ ನಮ್ಮದು. ಅವರ ಆಪ್ತ ಮಿತ್ರರಾಗುವ ಅದೃಷ್ಟ ನಮ್ಮದು. ಈ ಜಗತ್ತಿನಲ್ಲಿ ನಮ್ಮ ಸಂತೋಷವು ಹೆಚ್ಚಾಗುವುದನ್ನು ನೋಡುವ ಅದೃಷ್ಟ ನಮ್ಮದು.)

ಮಣ್ಣಾದು ವಾழವನ್ಡಾನ್ ಮಣವಾಳ ಮಾಮುನಿವನ್ ವಣ್ಮೈ
ಕಣ್ಣರರುಳುಕ್ಕು ಇಳಕ್ಕಾಗ ನಲ್ವಾழವುಮ್ ಕಂಡವನ್ ತನ್
ತಿಣ್ಣರ್ ಅಡಿಗಳಿಲ್ ಕುಟ್ರೆವಲ್ ಸೆಯ್ಧು ತಿರಿಯವುಮ್ ನಾನ್
ಎಣ್ಣಧಿರುಕ್ಕ ನಡುವೇ ನಮಕ್ಕು ವಂದು ಏಯ್ಡಿಯದೇ

(ಈ ಭೂಮಿಯಲ್ಲಿ ಅವತರಿಸಿದ ಮಣವಾಳ ಮಾಮುನಿಗಳ್ ಅವರ ಮಹಾ ಕೃಪೆಗೆ ಗುರಿಯಾಗಿದ್ದವರಿಗೆ ಸೇವೆ ಸಲ್ಲಿಸುವ ಬಗ್ಗೆ ನಾನು ಎಂದಿಗೂ ಯೋಚಿಸಿರಲಿಲ್ಲ. ಆದರೂ ನಾನು ಎಷ್ಟು ಅದೃಷ್ಟಶಾಲಿ!)

ಮೂಲ : https://granthams.koyil.org/2021/09/28/yathindhra-pravana-prabhavam-72-english/

ಅನುವಾದ – ಅಡಿಯೇನ್ ಸುಭದ್ರಾ ರಾಮಾನುಜ ದಾಸಿ


ಆರ್ಕೈವ್ ಮಾಡಲಾಗಿದೆ – https://granthams.koyil.org

ಪ್ರಮೇಯಂ (ಗುರಿ) – https://koyil.org
ಪ್ರಮಾಣ೦ (ಗ್ರಂಥಗಳು) – https://granthams.koyil.org
ಪ್ರಮಾತಾ (ಬೋಧಕರು) – https://acharyas.koyil.org
ಶ್ರೀವೈಷ್ಣವ ಎಜುಕೇಶನ್ / ಮಕ್ಕಳ ಸಾಹಿತ್ಯ – https://pillai.koyil.org

Leave a Comment