ಕೃಷ್ಣ ಲೀಲೆಗಳ ಸಾರಾಂಶ – 60 – ಉಪಸಂಹಾರ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀವಾನಾಚಲ ಮಹಾಮುನಯೇ ನಮಃ

ಕೃಷ್ಣ ಲೀಲೆಗಳ ಸಾರಾಂಶ

<< ಪರಮಪದಕ್ಕೆ ಮರಳುವುದು

 ನಮ್ಮಾಳ್ವಾರ್ ತಮ್ಮ ತಿರುವಾಯ್ಮೊಳಿಯಲ್ಲಿ  “ಕಣ್ಣನ್ ಕಳಲ್ ಇಣೈ  ನಣ್ಣುಮ್ ಮನಮುಡೈಯೀರ್ ಎಣ್ಣುಮ್ ತಿರುನಾಮಮ್ ತಿಣ್ಣಮ್ ನಾರಣಮೇ”. ಅಂದರೆ, ಕೃಷ್ಣನ ದಿವ್ಯ ಪಾದಾರವಿಂದಗಳನ್ನು ಸೇರಲು ಬಯಸುವವರು “ನಾರಾಯಣ” ಎಂಬ ದಿವ್ಯ ನಾಮವನ್ನು ಧ್ಯಾನಿಸಬೇಕು.

ನಮ್ಮ ಶ್ರೀವೈಷ್ಣವ ಸಂಪ್ರದಾಯದಲ್ಲಿ, ನಾರಾಯಣ ನಾಮಕ್ಕೆ ಮತ್ತು ಈ ನಾಮವನ್ನು ಒಳಗೊಂಡಿರುವ ಅಷ್ಟಾಕ್ಷರ ಮಂತ್ರಕ್ಕೆ ಬಹಳ ಪ್ರಾಮುಖ್ಯತೆ ಇದೆ. ಈ ಅಷ್ಟಾಕ್ಷರ ಮಂತ್ರವನ್ನು ‘ತಿರುಮಂತ್ರ’ ಎಂದು ಕೊಂಡಾಡಲಾಗುತ್ತದೆ. ಒಬ್ಬ ಆಚಾರ್ಯರು, ಒಬ್ಬರನ್ನು ತಮ್ಮ ಶಿಷ್ಯನನ್ನಾಗಿ ಸ್ವೀಕರಿಸುವಾಗ, ಈ ಮಂತ್ರವನ್ನು ಉಪದೇಶಿಸುತ್ತಾರೆ. ವೇದಗಳು, ಋಷಿಗಳು, ಆಳ್ವಾರರು ಮತ್ತು ಆಚಾರ್ಯರು ಈ ತಿರುಮಂತ್ರವನ್ನು ಬಹಳವಾಗಿ ವೈಭವೀಕರಿಸಿದ್ದಾರೆ.

ನಮ್ಮ ಆಧ್ಯಾತ್ಮಿಕ ಜೀವನಕ್ಕೆ ಅಗತ್ಯವಾದ ‘ಅರ್ಥ ಪಂಚಕ’ವನ್ನು (ಐದು ತತ್ವಗಳನ್ನು) ನಾವು ಇದರ ಮೂಲಕ ಅರ್ಥಮಾಡಿಕೊಳ್ಳುತ್ತೇವೆ. ಅರ್ಥ ಪಂಚಕವು ಇವುಗಳನ್ನು ಒಳಗೊಂಡಿದೆ: ಜೀವಾತ್ಮ ಸ್ವರೂಪ (ನಮ್ಮ ಸ್ವರೂಪ), ಪರಮಾತ್ಮ ಸ್ವರೂಪ (ಭಗವಂತನ ಸ್ವರೂಪ), ಉಪಾಯ ಸ್ವರೂಪ (ಅವನನ್ನು ಪಡೆಯುವ ದಾರಿ), ಉಪೇಯ ಸ್ವರೂಪ (ಅವನನ್ನು ಸೇರಿದ ನಂತರದ ಗುರಿ), ವಿರೋಧಿ ಸ್ವರೂಪ (ನಾವು ಅವನನ್ನು ಸೇರುವುದನ್ನು ತಡೆಯುವ ಅಡೆತಡೆಗಳು).

ಈ ಲೋಕದಲ್ಲಿ, ನಾವು ಈ ಉನ್ನತ ತತ್ವಗಳನ್ನು ಕಲಿಯಬೇಕು ಮತ್ತು ನಮ್ಮ ಪೂರ್ವಾಚಾರ್ಯರು ತೋರಿಸಿದ ಮಾರ್ಗದಲ್ಲಿ ನಡೆಯಬೇಕು. ತದನಂತರ, ನಾವು ಭಗವಂತನನ್ನು ಸೇರಿ ಅವನಿಗೆ ನಿರಂತರವಾಗಿ ಕೈಂಕರ್ಯ ಮಾಡಬೇಕು.

ನಾವು ಭಗವಂತನ ಕಲ್ಯಾಣ ಗುಣಗಳು ಮತ್ತು ಲೀಲೆಗಳನ್ನು ಸದಾ ಅನುಭವಿಸುತ್ತಿದ್ದರೆ, ಪೂರ್ವಾಚಾರ್ಯರು ತೋರಿಸಿದ ಮಾರ್ಗದಲ್ಲಿ ಬದುಕುವುದು ನಮಗೆ ಸುಲಭವಾಗುತ್ತದೆ. ಅದರಂತೆ, ಇಲ್ಲಿ ನಾವು ಕೃಷ್ಣನ ಲೀಲೆಗಳನ್ನು ಮತ್ತು ಅವುಗಳ ಸಾರಾಂಶವನ್ನು ಸ್ವಲ್ಪ ಮಟ್ಟಿಗೆ ಅನುಭವಿಸಿದ್ದೇವೆ.

ಆಳ್ವಾರ್ ಎಂಬೆರುಮಾನಾರ್ ಜೀಯರ್ ತಿರುವಡಿಗಳೇ ಶರಣಂ ಜೀಯರ್ ತಿರುವಡಿಗಳೇ ಶರಣಂ

ಅನುವಾದ – ಅಡಿಯೇನ್ ಕಸ್ತೂರಿರಂಗನ್ ರಾಮಾನುಜ ದಾಸನ್
ಪುರಾವೆ ಓದುವಿಕೆ – ಅಡಿಯೇನ್ ಹೇಮಲತಾ ರಾಜನ್ ರಾಮಾನುಜ ದಾಸಿ

ಮೂಲ – https://granthams.koyil.org/2023/10/26/krishna-leela-50-english/

ಆರ್ಕೈವ್ ಮಾಡಲಾಗಿದೆ – https://granthams.koyil.org

ಪ್ರಮೇಯಮ್ (ಗುರಿ) – https://koyil.org
ಪ್ರಮಾಣಮ್ (ಗ್ರಂಥಗಳು) – https://granthams.koyil.org
ಪ್ರಮಾತಾ (ಬೋಧಕರು) – https://acharyas.koyil.org
ಶ್ರೀವೈಷ್ಣವ ಎಜುಕೇಶನ್ / ಮಕ್ಕಳ ಸಾಹಿತ್ಯ – https://pillai.koyil.org

Leave a Comment