ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ
ಒಂದು ದಿನ ತಿರುವಾಯ್ಮೊಳಿ ಪ್ಪಿಳ್ಳೈ ಅವರು ತಮ್ಮ ತೋಟದಲ್ಲಿ ಬೆಳೆದ ತಾಜಾ ತರಕಾರಿಗಳನ್ನು ನಾಯನಾರ್ ತಿರುಮಾಳಿಗೆಗೆ (ಗೌರವಾನ್ವಿತ ನಿವಾಸ) ಕಳುಹಿಸಿದರು. ನಾಯನಾರರು ತುಂಬಾ ಭಾವುಕರಾಗಿ “ಇವುಗಳನ್ನು ಆಳ್ವಾರರ ಮಡಪ್ಪಳ್ಳಿಗೆ (ಅಡುಗೆಮನೆಗೆ) ಅವರ ಸಂತೋಷಕ್ಕಾಗಿ ಕಳುಹಿಸುವ ಬದಲು ಅಡಿಯೇನ್ ಗೃಹಕ್ಕೆ (ಮನೆಗೆ) ಕಳುಹಿಸುವುದೇಕೆ?” ಎಂದು ಕೇಳಿದರು. ಪಿಳ್ಳೈ ಹೇಳಿದರು ” ಅಡಿಯೇನ್ಗೆ ದೇವರೀರ್ ನಂತಹ ವ್ಯಕ್ತಿ ಸಿಗಲಿಲ್ಲವಾದ್ದರಿಂದ, ಅಡಿಯೇನ್ ಅರ್ಚೈನಲ್ಲಿ (ವಿಗ್ರಹಾರಾಧನೆ) ಮಗ್ನನಾಗಿದ್ದೆ” ಎಂದು ನಾಯನಾರ್ ಗೆ ತನ್ನ ಆಂತರಿಕ ಮನಸ್ಸನ್ನು ಬಹಿರಂಗಪಡಿಸಿದರು. ಆ ದಿನದಿಂದ ಅವರು ಪ್ರತಿದಿನ ತಾಜಾ ತರಕಾರಿಗಳನ್ನು ನಾಯನಾರ್‌ಗೆ ಕಳುಹಿಸುತ್ತಿದ್ದರು ಮತ್ತು ಅವರ ಅಗತ್ಯಗಳನ್ನು ಎಲ್ಲಾ ರೀತಿಯಲ್ಲಿ ನೋಡಿಕೊಂಡರು. ಊಟದ ಸಮಯದಲ್ಲಿ ಅವರು ನಾಯನಾರ್ ಜೊತೆ ಕುಳಿತು ಊಟ ಮಾಡುತ್ತಿದ್ದರು. ಇವೆಲ್ಲವನ್ನೂ ನೋಡಿ ಪಿಳ್ಳೈಯವರ ಕೆಲವು ಶಿಷ್ಯರು ನಾಯನಾರ್ ಮೇಲೆ ಅಸೂಯೆ ಪಟ್ಟರು. ಸರ್ವಜ್ಞನಾಗಿದ್ದ ಪಿಳ್ಳೈ ಇದನ್ನು ಪತ್ತೆಹಚ್ಚಿದರು ಮತ್ತು ಅವರುಗಳು ನಾಯನಾರ್‌ಗೆ ಹೆಚ್ಚಿನ ಅಪರಾಧಗಳನ್ನು ಮಾಡದಂತೆ ಪ್ರಾರಂಭದಲ್ಲಿಯೇ ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದರು. ನಾಯನಾರ್ ಯಾವುದೇ ಸಾಮಾನ್ಯ ವ್ಯಕ್ತಿಯಲ್ಲ ಮತ್ತು ಅವರು ಗೌರವಾನ್ವಿತ ವ್ಯಕ್ತಿ ಎಂದು ಅವರು ಹೇಳಿದರು. ಸೂಕ್ಷ್ಮ ಸುಳಿವುಗಳ ಮೂಲಕ ಅವರು ನಾಯನಾರರ ವಿಶಿಷ್ಟ ಸಾಮರ್ಥ್ಯಗಳ ಮೂಲಕ ನಾಯನಾರರು ಆದಿಶೇಷನ ಅವತಾರ ಎಂದು ಅವರಿಗೆ ಅರಿವಾಗುವಂತೆ ಮಾಡಿದರು ಇದರಿಂದ ಅವರು ನಾಯನಾರರ ಬಗ್ಗೆ ವಿಶೇಷ ಗೌರವವನ್ನು ಬೆಳೆಸಿಕೊಂಡರು. ನಾಯನಾರರು ಕೂಡ ಪಿಳ್ಳೈಯವರ ದಿವ್ಯ ಮನಸ್ಸನ್ನು ಮರುಪರಿಶೀಲಿಸಿ ಅವರ ಕಡೆಗೆ ವಿನಮ್ರರಾಗಿದ್ದರು. ಈ ಸಮಯದಲ್ಲಿ ನಾಯನಾರರು ಈಡು ಮುಪ್ಪತ್ತಾರಾಯಿರಂ ( ತಿರುವಾಯ್ಮೊಳಿ ಗೆ ವ್ಯಾಖ್ಯಾನ) ಮತ್ತು ಇತರ ವ್ಯಾಖ್ಯಾನ೦ಗಳನ್ನು ಕಲಿತರು.
ನಾಯನಾರ್‌ಗೆ ಒಬ್ಬ ಮಗ ಜನಿಸಿದನು. ಅವರು ತಿರುವಾಯ್ಮೊಳಿ ಪ್ಪಿಳ್ಳೈ ಬಳಿಗೆ ಹೋಗಿ ಶಿಶುವಿಗೆ ಸೂಕ್ತವಾದ ಹೆಸರನ್ನು ಸೂಚಿಸುವಂತೆ ಕೇಳಿಕೊಂಡರು. ಪಿಳ್ಳೈ “ಒಮ್ಮೆ ಹೇಳುವ ಬದಲು, ನೂರೆಂಟು ಬಾರಿ ಹೇಳಲಿಲ್ಲವೇ!” (ಇರಾಮಾನುಸ ನೂಟ್ರುಅಂದಾದಿಯನ್ನು ಉಲ್ಲೇಖಿಸಿ). ನಾಯನಾರರು ತಮ್ಮ ಮಗನಿಗೆ ಎಮ್ಮೈಯನ್ ಇರಾಮಾನುಸನ್ (ನನ್ನ ಪ್ರಭು, ರಾಮಾನುಜ) ಎಂದು ಹೆಸರಿಟ್ಟರು. ತಿರುವಾಧಿರೈ ದಿನದಂದು, ಪಿಳ್ಳೈ ಮತ್ತು ಇತರ ಆಚಾರ್ಯರು ಊಟ ಮಾಡುತ್ತಿದ್ದಾಗ, ಪಿಳ್ಳೈ ಅವರು ಈ ಶ್ಲೋಕವನ್ನು ಪಠಿಸಿದರು :
“ಇನ್ರೋ ಯತಿರಾಸರ್ ಇವ್ವುಲಗಿಲ್ ತೋನ್ರಿಯ ನಾಳ್,
ಇನ್ರೋ ಕಲಿಯಿರುಳ್ ನೀನ್ಗುನಾಳ್ “
(ಇದು ಯತಿರಾಜ (ರಾಮಾನುಜರು) ಅವತರಿಸಿದ ದಿನವಲ್ಲವೇ? ಈ ದಿನವೇ ಕಾಳಿಯ ಅಂಧಕಾರವನ್ನು ಹೋಗಲಾಡಿಸಿದ ದಿನವಲ್ಲವೇ?) ಮತ್ತು ಮುಂದೆ ಮುಂದುವರಿಯದೆ ಈ ಎರಡು ಸಾಲುಗಳನ್ನು ಪುನರಾವರ್ತಿಸುತ್ತಿದ್ದರು. ನಾಯನಾರರು ಪಾಸುರವನ್ನು ಪೂರ್ಣಗೊಳಿಸುತ್ತ ಹೀಗೆ ಹೇಳಿದರು:
ಇನ್ರೋದಾನ್
ವೇದಿಯರ್ಗಳ್ ವಾಜ್ಹ ವಿರೈಮಗಿಳೋನ್ ತಾನ್ ವಾಜ್ಹ
ವಾದಿಯರ್ಗಳ್ ವಾಜ್ಹವದಂಗು ನಾಳ್
(ವೇದಮಾರ್ಗವನ್ನು ಅನುಸರಿಸುವವರಿಗೆ ಇದು ಸಂತೋಷವನ್ನುಂಟುಮಾಡುವ ದಿನವಾಗಿದೆ; ಇದು ಪರಿಮಳಯುಕ್ತ ಮಗಿಳೋನ್ (ನಮ್ಮಾಳ್ವಾರ್) ಮತ್ತು ವಾಗ್ವಾದಗಳಲ್ಲಿ ತೊಡಗಿರುವವರ (ವೇದಗಳನ್ನು ನಂಬದವರು) ಜೀವನವನ್ನು ಸಂತೋಷಪಡಿಸಿದ ದಿನವಾಗಿದೆ. (ವೇದಗಳಲ್ಲಿ ನಂಬಿಕೆಯಿಲ್ಲದವರು ಮತ್ತು ವೇದಗಳನ್ನು ತಪ್ಪಾಗಿ ಅರ್ಥೈಸುವವರು) ಕಡಿಮೆಯಾದರು). ಇದನ್ನು ಕೇಳಿದ ಪಿಳ್ಳೈ ಬಹಳ ಸಂತೋಷಪಟ್ಟರು ಮತ್ತು ತೃಪ್ತಿಯಿಂದ ಊಟ ಮಾಡಿದರು. ನಾಯನಾರ್ ಅವರು ಉಳಿದ ಆಹಾರದ ಭಾಗವನ್ನು ಸಂತೋಷದಿಂದ ಸೇವಿಸಿದರು.
ಹೀಗೆ ಆಚಾರ್ಯರು (ಪಿಳ್ಳೈ) ಮತ್ತು ಶಿಷ್ಯ (ನಾಯನಾರ್) ನಡುವೆ ಕ್ರಮಬದ್ಧತೆ ಚೆನ್ನಾಗಿಯೇ ಸಾಗುತ್ತಿತ್ತು. ಎಂಪೆರುಮಾನಾರ್ ಪೆರಿಯ ನಂಬಿ ಆಶ್ರಯ ಪಡೆದ ನಂತರ ಹೇಗೆ ಭಿನ್ನತೆಯನ್ನು ಗಳಿಸಿದರೋ, ಪಿಳ್ಳೈ ಅವರ ಆಶ್ರಯವನ್ನು ಪಡೆದ ನಂತರ ನಾಯನಾರರು ಕೂಡ ಭಿನ್ನತೆಯನ್ನು ಗಳಿಸಿದರು. ಎಲ್ಲರೂ ಅವರನ್ನು ಉಡೈಯವರ ಅವರ ಪುನರ್ಜನ್ಮ ಎಂದು ಹೊಗಳತೊಡಗಿದರು. ನಾಯನಾರ್ ಅವರು ಪಿಳ್ಳೈಗಾಗಿ ಈ ಕೆಳಗಿನ ತನಿಯನ್‌ಗಳನ್ನು ರಚಿಸಿದ್ದಾರೆ:
ವಡಮಾಮಲೈಮುದಲ್ ಮಲ್ಲನಂಥಪುರಿಯೆಲ್ಲೈ ಮಲ್ಗಿ
ತಿಡಮಾಗ ವಾಳುಮ್ ತಿರುವುಡೈಯ ಮನ್ನರಿಲ್ ತೇಸುಡೈಯೋನ್
ತಿಡಮಾನ ಜ್ಞಾನ ವಿರಕ್ತಿ ಪರಂ ಇವೈ ಸೇರನಿನ್ರ
ಶಠಕೋಪತಾದರ್ ಕುರುಗೂರ್ ವಾಜ್ಹ್ ಪಿಳ್ಳೈಯೈ ಚ್ಛೇರು ನೆಂಜೆ
(ಓ ನನ್ನ ಹೃದಯವೇ! ತಿರುಕ್ಕುರುಗೂರಿನಲ್ಲಿ ವಾಸಿಸುವ ಶಠಕೋಪತಾದರ್ ಎಂದೂ ಕರೆಯಲ್ಪಡುವ ಪಿಳ್ಳೈ ಅವರ ದೈವಿಕ ಪಾದಗಳನ್ನು ತಲುಪಲು ಪ್ರಯತ್ನಿಸು; ಅವರು ಎಂಪೆರುಮಾನ್‌ಗೆ ಸಂಬಂಧಿಸಿದ ವಿಷಯಗಳಲ್ಲಿ ದೃಢವಾದ ಜ್ಞಾನವನ್ನು ಹೊಂದಿದ್ದಾರೆ ಮತ್ತು ಲೌಕಿಕ ವಿಷಯಗಳ ಬಗ್ಗೆ ನಿರ್ಲಿಪ್ತತೆಯನ್ನು ಹೊಂದಿದ್ದಾರೆ; ಉತ್ತರದಲ್ಲಿ ತಿರುಮಲೈ ಮತ್ತು ದಕ್ಷಿಣದಲ್ಲಿ ತಿರುವನಂತಪುರದಿಂದ ಸುತ್ತುವರಿದ ಪ್ರದೇಶದಲ್ಲಿ ಅವರು ಪ್ರಕಾಶಮಾನರಾಗಿದ್ದಾರೆ)
ಸೆನ್ತಮಿಳ್ ವೇದ ತಿರುಮಲೈ ಆಳ್ವಾರ್ ವಾಜ್ಹಿ
ಕುಂತಿನಗರ್ಕು ಅನ್ನಲ್ ಕೊಡೈ ವಾಜ್ಹಿ – ಉನ್ದಿಯ ಸೀರ್
ವಾಜ್ಹಿಯವನ್ ಅಮುದವಾಯ್ ಮೊಜ್ಹಿ ಕೇಟ್ಟು ಅಪ್ಪೊರುಳಿಲ್
ತಾಳುಮ್ ಮಟ್ರನ್ಬರ್ ತಿರುತ್ತಾಳ್
(ದ್ರಾವಿಡ ವೇದಂ (ನಾಲಾಯಿರ ದಿವ್ಯ ಪ್ರಬಂಧಂ) ನಲ್ಲಿ ಶ್ರೇಷ್ಠ ವಿದ್ವಾಂಸರಾದ ತಿರುಮಲೈ ಆಳ್ವಾರರು ಚಿರಾಯುವಾಗಲಿ; ದೀರ್ಘ ಕಾಲ ಬಾಳಲಿ ಕುಂತಿನಗರದ ಅಧಿಪತಿಯು (ತಿರುವಾಯ್ಮೊಳಿಪ್ಪಿಳ್ಳೈ ಅವರ ಜನ್ಮಸ್ಥಳ) ; ಅವರ ದಿವ್ಯ ಬಾಯಿಯಿಂದ ಅಮೃತ ಪದಗಳನ್ನು ಕೇಳಿದವರು ಚಿರಾಯುವಾಗಲಿ ಮತ್ತು ಅವರ ಮಾತಿನಂತೆ ಬದುಕಿದವರ ದಿವ್ಯ ಪಾದಗಳು ಚಿರಾಯುವಾಗಲಿ). ಈ ಸಮಯದಲ್ಲಿ, ಅವರ ಶಿಷ್ಯರು ಪಿಳ್ಳೈ ಅವರ ಮಹಿಮೆಯ ಮೇಲೆ ಈ ಶ್ಲೋಕಗಳನ್ನು ರಚಿಸಿದರು:
ಅಪ್ಯರ್ಶಯ ನಂದತನಯಂ ಕರಪಂಕಜಾತ್ತ ವೇಣುಮ್ ತದೀಯಾಚರಣ ಪ್ರವಣಾರ್ತ್ರಚೇತಾಃ
ಗೋಧಾಬಿದ್ದುರ್ಗಹನ ಸೂಕ್ತಿನಿಬಂಧನಸ್ಯ ವ್ಯಾಖ್ಯಾಮ್ ವಯಧಾತ್ ದ್ರವಿಡ ವೇದಗುರು: ಪ್ರಸನ್ನಾಮ್
(ದನ ಮೇಯಿಸುವವರ ಒಡೆಯನನ್ನು ಪೂಜಿಸುವುದು ಮತ್ತು ತನ್ನ ಕೆಂಪು ಕಮಲದಂತಹ ಕೈಗಳಲ್ಲಿ ದಿವ್ಯ ಕೊಳಲನ್ನು ಹೊಂದಿರುವವನು, ತಿರುವಾಯ್ಮೊಳಿ ಪಿಳ್ಳೈ, ಅವರ ಮನಸ್ಸನ್ನು ಕೃಷ್ಣನ ದಿವ್ಯ ಪಾದಗಳೊಂದಿಗೆ ಪ್ರೀತಿಯಿಂದ ಆಳವಾಗಿ ತೊಡಿಗಿಸಿಕೊಂಡು ಪೆರಿಯಾಳ್ವಾರ್ ರಚಿಸಿದ ಪಾಸುರಗಳಿಗೆ ಸ್ಪಷ್ಟವಾದ ವ್ಯಾಖ್ಯಾನ (ವಿಶ್ಲೇಷಣೆ ) ರಚಿಸಿದರು .
ಅನುವಾದ – ಅಡಿಯೇನ್ ಸುಭದ್ರಾ ರಾಮಾನುಜ ದಾಸಿ
ಪುರಾವೆ ಓದುವಿಕೆ -ಅಡಿಯೇನ್ ಕೊದೈ ರಾಮಾನುಜ ದಾಸಿ
ಮೂಲ : https://granthams.koyil.org/2021/08/12/yathindhra-pravana-prabhavam-27-english/
ಆರ್ಕೈವ್ ಮಾಡಲಾಗಿದೆ – https://granthams.koyil.org
ಪ್ರಮೇಯಮ್ (ಗುರಿ) – https://koyil.org
ಪ್ರಮಾಣಮ್ (ಗ್ರಂಥಗಳು) – https://granthams.koyil.org
ಪ್ರಮಾತಾ (ಬೋಧಕರು) – https://acharyas.koyil.org
ಶ್ರೀವೈಷ್ಣವ ಎಜುಕೇಶನ್ / ಮಕ್ಕಳ ಸಾಹಿತ್ಯ – https://pillai.koyil.org
1 thought on “ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೨೭”