ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೮೨

ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ

ಪೂರ್ಣ ಸರಣಿ

<< ಹಿಂದಿನ ಲೇಖನವನ್ನು

ತನಿಯನ್ನನ ಅವತಾರದ ತಿಂಗಳು, ವರ್ಷ ಇತ್ಯಾದಿಗಳನ್ನು ವಿವರಿಸುತ್ತಾ

ಆಯೋಧ್ಯ ರಾಮಾನುಜ ಅಯ್ಯಂಗಾರ್ ನಂತರ ಇಳೈಯಾಳ್ವಾರ್ ಪಿಳ್ಳೈ ಅವರನ್ನು ತನಿಯನ್ ಮತ್ತು ವಾಳಿ ತಿರುನಾಮ ಯಾವಾಗ ಅಸ್ತಿತ್ವಕ್ಕೆ ಬಂದಿತು ಎಂದು ಕೇಳಿದರು. ಇಳೈಯಾಳ್ವಾರ್ ಪಿಳ್ಳೈ ಈ ಕೆಳಗಿನ ಪಾಸುರಗಳನ್ನು ಪಠಿಸಿದರು.

ನಲ್ಲಧೋರ್ ಪರಿತಾಬಿ ವರುದಂಧನ್ನಿಲ್ ನಲಮಾನ ಅವಣಿಯಿನ್ ಮುಪ್ಪತ್ತ್ತೊಂರಿಲ್
ಸೊಲ್ಲರಿಯ ಸೋಧಿಯುಡನ್ ವಿಳಂಗುವೆಳ್ಳಿತ್ ತೋಲ್ಕಿழಮೈ ವಳರ್ಪಕ್ಕ ನಳನಳಿಲ್
ಸೆಲ್ವಮಿಗೂ ಪೇರಿಯ ತಿರುಮಂಡಪತ್ತಿಲ್ ಸೆழுಮ್ ತಿರುವಾಯ್ಮೋಳಿ ಪೊರುಳೈ ಚ್ಚೆಪ್ಪುಮೆನ್ರು

(ಈಡು ಕಾಲಕ್ಷೇಪಂ ಪರಿಥಾಪಿ ವರ್ಷ , ಆವನಿ ಮಾಸಂ (ಕನ್ನಿ ಮಾಸಂ), 31 ನೇ ದಿನ, ಸ್ವಾತಿ ನಕ್ಷತ್ರ, ಶುಕ್ರವಾರ, ಶುಕ್ಲ ಪಕ್ಷ ಚತುರ್ಥಿಯಲ್ಲಿ ಪ್ರಾರಂಭವಾಯಿತು.)

ಆನಂಧ ವರುದತ್ತಿಲ್ ಕೀழಮೈ ಆಂಡಿಳ್ ಅழಗಾನ ಆನಿದನಿನ್ ಮೂಲ ನಾಳಿಲ್
ಬಾನುವಾರಂಗೊಂಡ ಪೆಗಳಿಲ್ ಸೆಯ್ಯ ಪೌರ್ಣಮಿಯಿನಾಳಿಯಿಟ್ಟು ಪೊರುಂದಿ ವೈತ್ತೇ
ಆನಂಧಮಯಮಾನ ಮಂದಬತ್ತಿಲ್ ಅழಗಾಗ ಮನವಳಾರಿದು ಸಾತ್ತಾ
ವಾನವರುಮ್ ನೀರಿಟ್ಟ ವழಕ್ಕೆ ಎನ್ನ ಮನವಾಳ ಮಾಮುನಿಗಳ್ ಕಳಿತ್ತಿಟ್ಟಾರೇ

ನಂತರ ಅಯೋಧ್ಯ ರಾಮಾನುಜ ಅಯ್ಯಂಗಾರ್ ಅವರು ಬಧ್ರಿಕಾಶ್ರಮ ನಾರಾಯಣನು ತನ್ನ ಕನಸಿನಲ್ಲಿ ಬಂದು ಈ ತನಿಯನ್ನನ್ನು (ಶ್ರೀಶೈಲೇಶ ಧಯಾಪ್ರಾಂತ್ಯ) ಅಯ್ಯಂಗಾರ್ ಸಂಪೂರ್ಣವಾಗಿ ಕಲಿಯುವವರೆಗೂ ಹೇಗೆ ಪಠಿಸುತ್ತಿದ್ದರು ಮತ್ತು ಸಂಪ್ರದಾಯದ ಪ್ರಕಾರ ಪಾಸುರಗಳನ್ನು ಪಠಿಸುವಾಗಲೆಲ್ಲಾ ಪೆರುಮಾಳರು ಅದನ್ನು ಪಠಿಸಲು ಹೇಗೆ ಹೇಳಿದರು ಎಂಬುದನ್ನು ಬಹಿರಂಗಪಡಿಸಿದರು; ಇದನ್ನು ಹೇಳುವಾಗ ಅವರು ಆಶ್ಚರ್ಯಚಕಿತರಾದರು ಮತ್ತು ಪರಮಾನಂದಗೊಂಡರು. ಇಳೈಯಾಳ್ವಾರ್ ಮತ್ತು ಇತರರು ಸಹ “ಇದು ಭಗವಾನ್‌ನಿಂದ ಬಂದ ಪ್ರಸಾದವಲ್ಲವೇ!” ಎಂದು ಸಂತೋಷದಿಂದ ಹೇಳಿ ಆ ಕಾರ್ಯಕ್ರಮವನ್ನು ಆಚರಿಸಿದರು. ರಾಮಾನುಜ ಅಯ್ಯಂಗಾರ್ ಸ್ವಲ್ಪ ಸಮಯದ ನಂತರ ಚೇತರಿಸಿಕೊಂಡರು; ಅವರು ಇಳೈಯಾಳ್ವಾರರ ದಿವ್ಯ ಪಾದಗಳನ್ನು ಹಿಡಿದು ತಮ್ಮ ಮೇಲೆ ಕರುಣೆ ತೋರುವಂತೆ ಮತ್ತು ಮಣವಾಳ ಮಾಮುನಿಗಳ ಮಹಿಮೆಯನ್ನು ಹೇಳುವಂತೆ ಕೇಳಿಕೊಂಡರು. ಇಳೈಯಾಳ್ವಾರ್ ಕೂಡ ಇವುಗಳನ್ನು ಹೇಳಲು ಒಪ್ಪಿಕೊಂಡರು, ಆದರೆ ಮಠದಲ್ಲಿ . ನಂತರ ಅವರು ತಿರುಪ್ಪಾವೈ ಪಠಣವನ್ನು ಪೂರ್ಣಗೊಳಿಸಿದರು. ಇಳೈಯಾಳ್ವಾರ್ ಮತ್ತು ಇತರರಿಗೆ ಪವಿತ್ರ ನೀರು ಮತ್ತು ಇತರ ನೈವೇದ್ಯಗಳನ್ನು ನೀಡಲಾಯಿತು. ತರುವಾಯ, ಇಳೈಯಾಳ್ವಾರ್ ರಾಮಾನುಜ ಅಯ್ಯಂಗಾರರ ಮಠಗೆ ಹೋಗಿ ಮಣವಾಳ ಮಾಮುನಿಗಳ ಎಲ್ಲಾ ವೈಭವಗಳನ್ನು ಹೇಳಿ ಅವರನ್ನು ಸಂತೋಷಪಡಿಸಿದರು. ರಾಮಾನುಜ ಅಯ್ಯಂಗಾರ್ ಕೂಡ ಇವೆಲ್ಲವನ್ನೂ ಆಲಿಸಿ, ಇವುಗಳಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡರು ಮತ್ತು ಜೀಯರ್ ಅವರನ್ನು ನೇರವಾಗಿ ಪೂಜಿಸುವ ತಮ್ಮ ಆಳವಾದ ಬಯಕೆಯನ್ನು ವ್ಯಕ್ತಪಡಿಸಿದರು. ಅಯೋಧ್ಯಾ ರಾಮಾನುಜ ಅಯ್ಯಂಗಾರ್‌ರವರ ಮನಸ್ಸನ್ನು ಅರಿತು ಶ್ರೀರಂಗದಿಂದ ಇಳೈಯಾಳ್ವಾರ್ ಪಿಳ್ಳೈಯವರೊಂದಿಗೆ ಬಂದ ರಾಮಾನುಜ ಧಾಸರ್ ಅವರಿಗೆ ಹೇಳಿದರು: “ಅಡಿಯೇನ್ ಪೆರುಮಾಳ್‌ಗೆ ಬಧರಿಕಾಶ್ರಮ ಮತ್ತು ಇತರ ದಿವ್ಯದೇಶ ಪೆರುಮಾಳ್ ನಿಯಮಗಳ ಪ್ರಕಾರ ಕೈಂಕರ್ಯವನ್ನು ನಡೆಸುತ್ತಾರೆ; ದೇವರೀರ್ ಇಳೈಯಾಳ್ವಾರ್ ಪಿಳ್ಳೈ ಜೊತೆ ಶ್ರೀರಂಗಕ್ಕೆ ಜೀಯರ್ ಅವರ ದಿವ್ಯ ಪಾದಗಳನ್ನು ಪೂಜಿಸಲು ಹೋಗಬಹುದು; ಅಡಿಯೇನ್ ನಂತರ ಶ್ರೀರಂಗಕ್ಕೆ ಜೀಯರ್ ಅವರ ದಿವ್ಯ ಪಾದಗಳನ್ನು ಪೂಜಿಸಲು ಹೊರಡುತ್ತಾರೆ”. ಇದನ್ನು ಕೇಳಿ ಅಯೋಧ್ಯ ರಾಮಾನುಜ ಅಯ್ಯಂಗಾರ್ ತುಂಬಾ ಸಂತೋಷಪಟ್ಟರು ಮತ್ತು ರಾಮಾನುಜ ದಾಸರನ್ನು ಬಹಳ ಪ್ರೀತಿಯಿಂದ ಹೊಗಳಿದರು. ನಂತರ ಅವರು ದಯೆಯಿಂದ ಜೀಯರ್ ಅವರ ದೈವಿಕ ಪಾದುಕೆಗಳನ್ನು ಸರಿಯಾದ ರೀತಿಯಲ್ಲಿ ಇಟ್ಟುಕೊಂಡು ಇಳೈಯಾಳ್ವಾರ್ ಪಿಳ್ಳೈ ಅವರೊಂದಿಗೆ ಶ್ರೀರಂಗಕ್ಕೆ ಹೊರಟರು. ದಾರಿಯಲ್ಲಿ, ಅವರು ತಿರುಮಲೈಗೆ ಹೋಗಿ ತಿರುವೇಂಗಡಮುಡೈಯಾನ್ ಅವರನ್ನು ಪೂಜಿಸಿದರು. ಅಪ್ಪನ್ (ತಿರುವೇಂಗಡಮುಡೈಯಾನ್) ಅವರ ಮೇಲೆ ಕೃಪೆ ತೋರಿ, ಅಯೋಧ್ಯ ರಾಮಾನುಜ ಅಯ್ಯಂಗಾರ್‌ಗೆ ಕೆಲವು ಕೈಂಕರ್ಯಗಳನ್ನು ವಿಧಿಸಿದರು, ಇದರಿಂದಾಗಿ ಅವರು ತಿರುಮಲೈನಲ್ಲಿಯೇ ಇರಬೇಕಾಯಿತು. ತಿರುಮಲೈನಲ್ಲಿ ಕೈಂಕರ್ಯವನ್ನು ಮಾಡಲು ಸಾಧ್ಯವಾಯಿತು ಎಂದು ರಾಮಾನುಜ ಅಯ್ಯಂಗಾರ್‌ಗಳು ತುಂಬಾ ಸಂತೋಷಪಟ್ಟರು, ಆದರೆ ತಮ್ಮ ಇಚ್ಛೆಯಂತೆ ಜೀಯರ್ ಅವರನ್ನು ಪೂಜಿಸಲು ಸಾಧ್ಯವಾಗದ ಕಾರಣ ಅವರು ತುಂಬಾ ದುಃಖಿತರಾಗಿದ್ದರು.

ಮೂಲ : https://granthams.koyil.org/2021/10/09/yathindhra-pravana-prabhavam-82-english/

ಅನುವಾದ – ಅಡಿಯೇನ್ ಸುಭದ್ರಾ ರಾಮಾನುಜ ದಾಸಿ

ಆರ್ಕೈವ್ ಮಾಡಲಾಗಿದೆ – https://granthams.koyil.org

ಪ್ರಮೇಯಮ್ (ಗುರಿ) – https://koyil.org
ಪ್ರಮಾಣಮ್ (ಗ್ರಂಥಗಳು) – https://granthams.koyil.org
ಪ್ರಮಾತಾ (ಬೋಧಕರು) – https://acharyas.koyil.org
ಶ್ರೀವೈಷ್ಣವ ಎಜುಕೇಶನ್ / ಮಕ್ಕಳ ಸಾಹಿತ್ಯ – https://pillai.koyil.org

Leave a Comment