ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೮೧

ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ

ಪೂರ್ಣ ಸರಣಿ

<< ಹಿಂದಿನ ಲೇಖನವನ್ನು

ಇಳೈ ಯಾಳ್ವಾರ್ ಪಿಳ್ಳೈಯವರು ಶ್ರೀಶೈಲೇಶ ದಯಾಪಾತ್ರಂ ಪಠಣವನ್ನು ಕೇಳಿದ ನಂತರ ರಾಮಾನುಜ ಅಯ್ಯಂಗಾರ್ ಮತ್ತು ಇತರರು ಆಶ್ಚರ್ಯಚಕಿತರಾದರು.

ಜಗ್ಗ್ಯೆ ಮುನಾಸ್ವಪ್ನ ನಿವೇದಿತಂ ಹೀಯತ್ ಕಥಮ್ ಬಧರ್ಯಾಶ್ರಮ ನಿತ್ಯ ವಾಸಿನಾ
ಪ್ರಾಕಾಶಿ ಮಂತ್ರಾತಂ ಇಧಂ ಮುರಧ್ವಿಷೇಧ್ಯಯೋಧ್ಯ ರಾಮಾನುಜ ಆವಿ ಸಿಷ್ಮಯೇ

(ಭದ್ರಿಕಾಶ್ರಮದಲ್ಲಿ ಶಾಶ್ವತವಾಗಿ ವಾಸಿಸುವ ಮತ್ತು ತಿರುಮಂತ್ರದ ಎಲ್ಲಾ ಅರ್ಥಗಳನ್ನು ಒಳಗೊಂಡಿರುವ ಈ ಮುರಾರಿ ಭಗವಾನ್ (ಮುರಾ ರಾಕ್ಷಸನನ್ನು ನಾಶಮಾಡಿದ ಕೃಷ್ಣ) ತನ್ನ ಕನಸಿನಲ್ಲಿ ದಯೆಯಿಂದ ಹೇಳಿದ ಈ ತನಿಯನ್ ಅನ್ನು ಈ ಜನರು ಹೇಗೆ ಪಠಿಸಿದರು ಎಂದು ಅಯೋಧ್ಯ ರಾಮಾನುಜ ಅಯ್ಯಂಗಾರ್ ಆಶ್ಚರ್ಯ ಪಡುತ್ತಿದ್ದರು).ರಾಮಾನುಜ ಅಯ್ಯಂಗಾರ್ ಅವರಿಗೆ ಹೇಳಿದರು, “ಈ ತನಿಯನ್ನನ್ನು ಶ್ರೀ ಭದ್ರಿಕಾಶ್ರಾಮ ಪೆರುಮಾಳರು ನಮ್ಮ ಕನಸಿನಲ್ಲಿ ದಯೆಯಿಂದ ನಮಗೆ ಕೊಟ್ಟರು. ಈ ತನಿಯನ್ ನಿಮ್ಮಗೆ ಹೇಗೆ ತಲುಪಿತು?” ಅವರು ಅವರಿಗೆ ಹೀಗೆ ಹೇಳಿದರು:

“ಆಚಿನೋತಿಹಿಶಾಸ್ತ್ರಾರ್ಥಾತ್ ” (ಶಾಸ್ತ್ರಗಳ ಅರ್ಥಗಳನ್ನು ಬಹಿರಂಗಪಡಿಸುವವರು ಆಚಾರ್ಯ) ಎಂಬ ಶ್ಲೋಕದಿಂದ ತಿಳಿಸಲ್ಪಟ್ಟಿರುವಂತೆ, ಶ್ರೀರಂಗದಲ್ಲಿ ಈ ತನಿಯನನ್ನು ಪಠಿಸಿದವನು ಪೆರುಮಾಳನೇ, ಈ ಧಾಮದಲ್ಲಿಯೂ (ಭದ್ರಿಕಾಶ್ರಮ) ಅವರು ನರನಾರಾಯಣನ ಪ್ಪೆರುಮಾಳ್ ರೂಪದಲ್ಲಿ ಪೆರಿಯ ತಿರುಮಂತ್ರವನ್ನು (ಪ್ರಣವಂ) ಪಠಿಸಿದ್ದರು. ತಿರುಮಂತ್ರದ ಸಾರಾಂಶವಾದ ದಿವ್ಯಪ್ರಬಂಧದ ಪೂರ್ಣ ಅರ್ಥಗಳನ್ನು ಬಹಿರಂಗಪಡಿಸಲು, ಪೆರುಮಾಳ್ ತಮ್ಮ ದಿವ್ಯ ಮನಸ್ಸಿನಲ್ಲಿ ಆದಿಶೇಷನನ್ನು “ಯಥೋಚಿತಂ ಶೇಷ ಇತಿರಿತೇ” (ದಾಸ್ಯವನ್ನು ಪೂರೈಸುವ ಸಾಧನವಾಗಿ ಕಾಲಾನುಸಾರವಾಗಿ ಅವರು ಅನೇಕ ರೂಪಗಳನ್ನು ತೆಗೆದುಕೊಳ್ಳುವುದರಿಂದ ಅವರನ್ನು ಶೇಷ ಎಂದು ಕರೆಯಲಾಗುತ್ತದೆ) ಎಂಬ ಸ್ತೋತ್ರ ರತ್ನ ಶ್ಲೋಕಕ್ಕೆ ಅನುಗುಣವಾಗಿ ಮಣವಾಳ ಮಾಮುನಿಗಳಾಗಿ ಪುನರ್ಜನ್ಮ ಪಡೆಯಲು ಕೇಳಿಕೊಳ್ಳಲು ನಿರ್ಧರಿಸಿದ್ದರು. ಆದಿಶೇಷರು ಕೂಡ ಆ ದಾಸತ್ವಕ್ಕೆ ಅನುಗುಣವಾಗಿ ಅವತರಿಸಿ ದಿವ್ಯಪ್ರಬಂಧಕ್ಕೆ ಭಾಷ್ಯವನ್ನು ಅತ್ಯಂತ ಕೌಶಲ್ಯಪೂರ್ಣ ವ್ಯಕ್ತಿಯಾಗಿ ನಿರ್ವಹಿಸಿದರು . ತಮ್ಮ ವೈಭವಗಳು ಪ್ರಜ್ವಲಿಸುವಂತೆ ಮಾಡಲು, ಭಗವಾನ್ ಜೀಯರ್ ಅವರನ್ನು ಈಡು (ತಿರುವಾಯ್ಮೋಳಿ ವ್ಯಾಖ್ಯಾನ) ದ ಪ್ರವಚನಗಳನ್ನು ನೀಡುವಂತೆ ಕೇಳಿಕೊಂಡರು. ಜೀಯರ್ ಕೂಡ ಇದನ್ನು ಒಂದು ದೊಡ್ಡ ಕೈಂಕರ್ಯವೆಂದು ಪರಿಗಣಿಸಿ ಈಡುವಿಗೆ ಉಪನ್ಯಾಸ (ಪ್ರವಚನ) ನಡೆಸಿದರು. ಆಚಾರ್ಯ ಸಂಭಾವನೈ (ಆಚಾರ್ಯರನ್ನು ಗೌರವಿಸುವುದು) ಅರ್ಪಿಸುವ ವಿಷಯ ಬಂದಾಗ, ಪೆರುಮಾಳರು ರಂಗನಾಯಗಂ (ಅರ್ಚಕರ ಮಗ) ಎಂಬ ಐದು ವರ್ಷದ ಬಾಲಕನಲ್ಲಿ ವ್ಯಾಪಿಸಿ ತನಿಯನ್ ಪಠಿಸಿದರು. ನಂತರ, ಅಪ್ಪಿಳ್ಳೈ ಮೂಲಕ, ಅವರು ಮಣವಾಳ ಮಾಮುನಿಗಳಿಗೆ ವಾಳಿ ತಿರುನಾಮವನ್ನು [ದೈವಿಕ ನಾಮಗಳನ್ನು ಸ್ತುತಿಸುತ್ತಾ] ಹೊರತಂದರು, ಆದ್ದರಿಂದ ದಿವ್ಯಪ್ರಬಂಧವನ್ನು ಪಠಿಸುವ ಪ್ರಾರಂಭದಲ್ಲಿ, ಒಬ್ಬರು ತನಿಯನ್ ಶ್ರೀಶೈಲೇಶ ದಯಾಪಾತ್ರಂ ದಿಂದ ಪ್ರಾರಂಭಿಸುತ್ತಾರೆ ಮತ್ತು ದಿವ್ಯಪ್ರಬಂಧದ ಕೊನೆಯಲ್ಲಿ (ದಿವ್ಯಪ್ರಬಂಧಗಳ ಅಂತ್ಯ) ಪಠಿಸಬೇಕು. ಪೆರುಮಾಳರು ವಿಶ್ವಕ್ಸೇನಾರ್ ಅವರ ಸಂದೇಶದ ಮೂಲಕ, ಶ್ಲೋಕವು ಹೊರತಂದಿರುವಂತೆ ತಿರುಮಲೈ, ಪೆರುಮಾಳ ಕೊಯಿಲ್ ಇತ್ಯಾದಿಗಳಿಂದ ಪ್ರಾರಂಭಿಸಿ ಎಲ್ಲಾ ದಿವ್ಯ ದೇಶಗಳಿಗೆ ಕಳುಹಿಸಿದರು.

ಶ್ರೀಪನ್ನಕಾಧಿಶಾಮುನೇ: ಪದ್ಯಮ್ ರಂಗೇಶಭಾಷಿತಂ
ಅಷ್ಟೋತ್ತರ ಶತಾಸ್ಥಾನೇಶ್ವ ಅನುಷಧಾಮ್ ಆಚರೇತ್
ಇಥ್ಯಾಗ್ಗ್ಯಾ ಪತ್ರಿಕಾ ವಿಶ್ವಾಕ್ಸೆನೇ ಪ್ರತಿಪಾದಿತಾ
ತಧಾರಭ್ಯ ಮಹತ್ಭಿಶ್ಚ ಪಠ್ಯತೇ ಸನ್ನಿಧೇ: ಪುರಾ

(ಈ ಶ್ಲೋಕವನ್ನು ಶ್ರೀ ರಂಗನಾಥರು ಮಣವಾಳ ಮಾಮುನಿಗಳ ಮಾಮುನಿಗಳ ಬಗ್ಗೆ ಕರುಣೆಯಿಂದ ಪಠಿಸಿದ್ದಾರೆ. ಈ ತನಿಯನನ್ನು ಆರಂಭದಲ್ಲಿ ಪಠಿಸಬೇಕೆಂದು ಎಲ್ಲಾ ದಿವ್ಯ ದೇಶಗಳಿಗೆ ಶ್ರೀ ಸೇನೈ ಮುದಲಿಯಾರ್ (ವಿಶ್ವಕ್ಸೇನರ್) ಅವರು ಸಂದೇಶವನ್ನು ಕಳುಹಿಸಿದ್ದಾರೆ.ಅಂದಿನಿಂದ, ಇದನ್ನು ಪೆರುಮಾಳ್ ಸನ್ನಿಧಿಗಳಲ್ಲಿ ಆರಂಭದಲ್ಲಿ ಪಠಿಸಲಾಗುತ್ತಿದೆ). ತಿರುವೇಂಗಡಮುಡೈಯಾನ್ ವಿವಿಧ ದಿವ್ಯದೇಶಗಳಿಗೆ ತೀರ್ಥಯಾತ್ರೆ ಕೈಗೊಳ್ಳುತ್ತಿದ್ದ ಬ್ರಾಹ್ಮಣನಿಗೆ ಹೇಳಿದ್ದರು.

ಉಪ ತಿಷ್ಟಮ್ ಮಯಾಸ್ವಪನೇ ದಿವ್ಯಮ್ ಪದ್ಯಮಿಧಂ ಶುಭಂ
ವರಯೋಗಿಸಮಾಶ್ರಿತ್ಯ ಭವತ: ಸ್ಯಾದ್ ಪರಂ ಪರಂ

(ಈ ಶ್ಲೋಕವು ಅತ್ಯಂತ ವಿಶಿಷ್ಟ ಮತ್ತು ಮಂಗಳಕರವಾಗಿದ್ದು, ಇದನ್ನು ನಿಮ್ಮ ಕನಸಿನಲ್ಲಿ ನಿಮಗೆ ಸೂಚಿಸಲಾಗಿದೆ. ನೀವು ಮಣವಾಳ ಮಾಮುನಿಗಳನ್ನು ಆಶ್ರಯಿಸಿದರೆ, ನೀವು ಪರಮಪದವನ್ನು (ಶ್ರೀವೈಕುಂಠಂ) ಪಡೆಯುತ್ತೀರಿ). ನಂತರ ಪೆರುಮಾಳರು ಶ್ಲೋಕದಿಂದ ಹೊರಬಂದಂತೆ ಬ್ರಾಹ್ಮಣರು ಜೀಯರ್‌ರ ದಿವ್ಯ ಪಾದಗಳ ಕೆಳಗೆ ಆಶ್ರಯ ಪಡೆಯಲು ಅನುವು ಮಾಡಿಕೊಟ್ಟರು.

ಇತ್ಯಕ್ತ್ವಾಧಂ ವೃಷಾದ್ರಿಶೋ ಶ್ರೀಪಾದಧ್ರೇನುಂವಚ
ತತ್ವಾ ಶುಪ್ರೇಷಯಾಮಾಸ ಗಚ್ಛ ಯೋಗಿವರಂ ಶುಚಿಮ್

(ಈ ರೀತಿ ಹೇಳುತ್ತಾ, ತಿರುವೇಂಗಡಮುಡೈಯಾನ್ ಅವರಿಗೆ ಪಾದಗಳಿಂದ ಬಂದ ದೈವಿಕ ಧೂಳನ್ನು ನೀಡಿ, ಅತ್ಯಂತ ಪವಿತ್ರವಾದ ಮಣವಾಳ ಮಾಮುನಿಗಳ ಬಳಿಗೆ ಹೋಗಲು ಹೇಳಿದರು), ಅವರಿಗೆ ಶ್ರೀಶಠಕೋಪನ ಮತ್ತು ಶ್ರೀಪಾದರೇಣುವನ್ನು ನೀಡಿದರು. ಆ ಬ್ರಾಹ್ಮಣನೂ ಮಾಮುನಿಗಳ್ ಅವರನ್ನು ತಲುಪಿ ಅವರ ಆಶ್ರಯ ಪಡೆದನು. ಅದೇ ರೀತಿ, ತಿರುಮಾಲಿರುಂಜೋಲೈ ಅಳಗರ್ ಜೀಯರ್ ಅವರ ದಿವ್ಯ ಪಾದಗಳೊಂದಿಗೆ ಸಂಪರ್ಕ ಹೊಂದಿದ್ದ ಸೇನೈ ಮುದಲಿಯಾರ್ ಎಂಬುವವರಿಗೆ ಈ ತನಿಯನನ್ನು ದಯೆಯಿಂದ ಬೋಧಿಸಿದರು. ಹೀಗೆ, ಇಳೈಯಾಳ್ವಾರ್ ಅವರು ತನಿಯನ್ ಅವರನ್ನು ಹೇಗೆ ತಲುಪಿದರು ಎಂಬುದನ್ನು ವಿವರಿಸಿದರು.

ಮೂಲ : https://granthams.koyil.org/2021/10/07/yathindhra-pravana-prabhavam-81-english/

ಅನುವಾದ – ಅಡಿಯೇನ್ ಸುಭದ್ರಾ ರಾಮಾನುಜ ದಾಸಿ


ಆರ್ಕೈವ್ ಮಾಡಲಾಗಿದೆ – https://granthams.koyil.org

ಪ್ರಮೇಯಮ್ (ಗುರಿ) – https://koyil.org
ಪ್ರಮಾಣಮ್ (ಗ್ರಂಥಗಳು) – https://granthams.koyil.org
ಪ್ರಮಾತಾ (ಬೋಧಕರು) – https://acharyas.koyil.org
ಶ್ರೀವೈಷ್ಣವ ಎಜುಕೇಶನ್ / ಮಕ್ಕಳ ಸಾಹಿತ್ಯ – https://pillai.koyil.org

Leave a Comment