ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ
ಇಲೈಯಾಳ್ವಾರ್ ಪಿಳ್ಳೈ ಮತ್ತು ರಾಮಾನುಜ ಧಾಸರ್ ತೀರ್ಥಯಾತ್ರೆ ಕೈಗೊಳ್ಳುತ್ತಾರೆ
ಚಕ್ರವರ್ತಿತ್ತಿರುಮಗನ್ (ಶ್ರೀ ರಾಮ) ತಮ್ಮ ಪಾದುಕೆಗಳನ್ನು ಭರತಾಳ್ವಾರರಿಗೆ ನೀಡಿದಾಗ, ಇಳೈಯಪೆರುಮಾಳ್ (ಲಕ್ಷ್ಮಣ) ಅವುಗಳನ್ನು ಪಡೆಯಲು ಸಾಧ್ಯವಾಗಲಿಲ್ಲ. ಇಳೈಯಪೆರುಮಾಳ್ ಎಂಬ ದಿವ್ಯ ನಾಮವನ್ನು ಹೊಂದಿರುವ ಇಳೈಯಾಳ್ವಾರ್ ಪಿಳ್ಳೈ, ಜೀಯರ್ ಪಾದುಕೆಗಳನ್ನು ಪಡೆದಾಗ ಅವರು ಜನರಿಗೆ ಸಂತೋಷದ ಹಬ್ಬವನ್ನು ಉಂಟುಮಾಡಿದರು. ರಾಮಾನುಜ ದಾಸರಿಗೆ ದಿವ್ಯ ಉತ್ತರೀಯಂ (ಮೇಲಿನ ಬಟ್ಟೆ) ನೀಡಿದಂತೆಯೇ, ಇಳೈಯಾಳ್ವಾರ್ ಪಿಳ್ಳೈ ಅವರಿಗೆ ಜೀಯರ್ ಅವರ ಪಾದುಕೆಗಳನ್ನು ಅವರ ಪ್ರತಿನಿಧಿಯಾಗಿ ನೀಡಲಾಯಿತು. ಇಳೈಯಾಳ್ವಾರ್ ಕೂಡ ಪಾದುಕೆಗಳನ್ನು ಪಡೆದ ನಂತರ, ಆಳವಂದಾರರು ತಮ್ಮ ಸ್ತೋತ್ರ ರತ್ನದಲ್ಲಿ “ಧನಮಧೀಯಂ ತವ ಪಾದ ಪಂಕಜಂ” (ನಿಮ್ಮ ದಿವ್ಯ ಕಮಲದಂತಹ ಪಾದಗಳು ನನಗೆ ನಿಧಿಯಂತೆ) ಹೇಳಿದಂತೆ, ಅವರು ಒಂದು ದೊಡ್ಡ ನಿಧಿಯನ್ನು ಪಡೆದಂತೆ ಭಾವಿಸಿದರು. “ಮಧ್ಯಯಂ ಮೂರ್ಧಾನಂ ಅಲಂಕಾರಿಷ್ಯತಿ” (ಅವು ನನ್ನ ಹಣೆಯನ್ನು ಅಲಂಕರಿಸುತ್ತವೆ) ಎಂದು ಹೇಳಿರುವಂತೆ, ಅವನು ತನ್ನ ದಿವ್ಯ ತಲೆಯ ಮೇಲೆ ಪಾದುಕೆಗಳನ್ನು ಇಟ್ಟುಕೊಂಡನು ಮತ್ತು ಯಾವುದೇ ಮಿತಿಯನ್ನು ಮೀರಿ ಸಂತೋಷಪಟ್ಟರು . ನಾಚ್ಚಿಯಾರ್ ತಿರುಮೊಳಿಯಲ್ಲಿ “ಪೆರುಮಾಳ್ ಅರೈಯಲ್ಲಿ ಪೀದಗವಾಡೈ ಕೊಂಡು ಎನ್ನೈ ವಾಟ್ಟಂ ತಣಿಯ ವೀಸೀರ್” (ನನ್ನ ದಣಿವು ಮಾಯವಾಗುವಂತೆ ಎಂಪೆರುಮಾನ್ ತನ್ನ ಸೊಂಟಕ್ಕೆ ಧರಿಸಿರುವ ದಿವ್ಯ ಹಳದಿ ವಸ್ತ್ರದಿಂದ ನನಗೆ ಗಾಳಿ ಬೀಸಿ ).
ಅವರಿಬ್ಬರೂ ತಿರುವಾರಾಧನ ಪ್ಪರುಮಾಳ್ (ದೈವಿಕ ಪೂಜೆಗೆ ವಿಗ್ರಹ) ದಂತಹ ಎರಡು ನಿಧಿಯ ತುಣುಕುಗಳನ್ನು ಹೊತ್ತುಕೊಂಡು ಬಹಳ ಆತುರದಿಂದ ಗಂಗಾ ನದಿಯ ದಡವನ್ನು ತಲುಪಿದರು.ಶಾಸ್ತ್ರಗಳಲ್ಲಿ ಹೇಳಿದಂತೆ ಅವರು ನದಿಯಲ್ಲಿ ಬಹಳ ಕಾಲ ಜೀಯರ್‌ನ ದೈವಿಕ ಪಾದುಕೆಗಳಿಗೆ ದೈವಿಕ ಸ್ನಾನ ಮಾಡಿದರು. ಅವರು ಸ್ವತಃ ಜೀಯರ್ ಅಲ್ಲಿ ಸ್ನಾನ ಮಾಡುತ್ತಿದ್ದಾರೆಂದು ಊಹಿಸಿ ಅದೇ ನೀರಿನಿಂದ ಸ್ನಾನ ಮಾಡಿದರು. ಆ ಸ್ಥಳದ ಹತ್ತಿರದ ಎಲ್ಲಾ ಸ್ಥಳಗಳಿಗೆ ಪೂಜೆ ಸಲ್ಲಿಸಿದರು.
ಕ್ರಮೇಣ ತೀರ್ಥಾನಿ ಶರೀರ ಭಾಜಾ೦ ಪಾಪಾಪಹಾನ್ಯುರ್ಜಿತ ಸೌಖ್ಯಥಾನಿ
ಪರಿಕ್ರಮಂಧಾವತೀತಿಂ ಧ್ರುಸೋಸ್ತೌ ವಿನಿನ್ಯಾಸು: ಶ್ರೀಭಧರ್ನಿವಾಸಂ
ವಿಚಿತ್ರಾಧೇಹಸಮ್ಪತ್ತೀರೀಶ್ವರಯಾ ನಿವೇಧಿತುಮ್
(ಅವರಿಬ್ಬರು (ರಾಮಾನುಜದಾಸರು ಮತ್ತು ಇಳೈಯಾಳ್ವಾರ್ ಪಿಳ್ಳೈ) ಪಾಪಗಳನ್ನು ಹೋಗಲಾಡಿಸುವ ಮತ್ತು ಪರಮ ಸಾಂತ್ವನ ನೀಡುವ ಸಾಮರ್ಥ್ಯವಿರುವ ವಿವಿಧ ದೈವಿಕ ಜಲರಾಶಿಗಳಲ್ಲಿ ಸರಿಯಾದ ಕ್ರಮದಲ್ಲಿ ಸ್ನಾನ ಮಾಡಿ ನಂತರ ಬದ್ರಿಯನ್ನು ತಲುಪಿದರು, ಶ್ರೀ ಬಧ್ರಿಕಾಶ್ರಮ ಪ್ಪೇರುಮಾಳರನ್ನು ಅವರ ಕಣ್ಣಿಗೆ ಹಬ್ಬವನ್ನಾಗಿ ಮಾಡಿದರು)(ಭಗವಂತನಿಗೆ ಕೈಂಕರ್ಯವನ್ನು ಮಾಡಲು, ಅನೇಕ ರೀತಿಯ ಶಕ್ತಿಗಳನ್ನು ಹೊಂದಿರುವ ಉತ್ತಮ ಆರೋಗ್ಯ ಮತ್ತು ಅದರ ಅಂಗಗಳನ್ನು ಸೃಷ್ಟಿಸಲಾಗಿದೆ). ಈ ಶ್ಲೋಕಗಳಲ್ಲಿ ಹೇಳಿರುವಂತೆ, ಯಾರಿಗೆ ಶರೀರ ಪೋಷಣೆಯು ಭಾಗವತಾರ್ಥಕ್ಕಾಗಿ ಮಾತ್ರ (ಭಗವಾನ್ ಉದ್ದೇಶಕ್ಕಾಗಿ – ಅಂದರೆ ಕೈಂಕರ್ಯವನ್ನು ಕೈಗೊಳ್ಳಲು) ಆಗಿದೆಯೋ ಅವರಿಗೆ ದಿವ್ಯದೇಶಗಳು (ಸರ್ವೇಶ್ವರನ ದೈವಿಕ ನಿವಾಸಗಳು) ಅವುಗಳೊಂದಿಗಿನ ಸಂಪರ್ಕದಿಂದಾಗಿ (ಅಂದರೆ ದಿವ್ಯದೇಶಗಳು) ಎಲ್ಲಾ ಅಡೆತಡೆಗಳನ್ನು ತೆಗೆದುಹಾಕಿ ಶ್ರೇಷ್ಠ ಪುರುಷಾರ್ಥವನ್ನು (ಪ್ರಯೋಜನವನ್ನು) ನೀಡುತ್ತವೆ.ರಾಮಾನುಜ ದಾಸರು ಮತ್ತು ಇಳೈಯಾಳ್ವಾರ್ ಪಿಳ್ಳೈ ಅವರು ದಾರಿಯಲ್ಲಿ ಅಂತಹ ಎಲ್ಲಾ ದಿವ್ಯದೇಶಗಳಿಗೆ ಹೋಗಿ ಬದ್ರಿಕಾಶ್ರಮ ನಾರಾಯಣನನ್ನು ತಲುಪಿದರು. ಅವರ ದಿವ್ಯ ಕಣ್ಣುಗಳಿಗೆ, ಅವರಿಗೆ ಎಲ್ಲಾ ರೀತಿಯಲ್ಲೂ ವಾತ್ಸಲ್ಯಪೂರ್ಣ ದರ್ಶನವನ್ನು ಪಡೆದರು . ಶ್ಲೋಕದಲ್ಲಿ ಹೇಳಿರುವಂತೆ, ಬದ್ರಿಯಲ್ಲಿ ನರ ನಾರಾಯಣ ಪೆರುಮಾಳರಿಗೆ ಮಂಗಳಾಶಾಸನ ಮಾಡಿದಂತೆಯೇ.
ಅಯೋಧ್ಯಾ ರಾಮಾನುಜಾಧಾಸನಾಮಾ ಸಥಾ ಮುತಾ ಪೂಜಯತಿ ಪ್ರಸನ್ನ:
ವಾಶೀನಿಜಶ್ರೀಕುಲಶೇಕರಸ್ಸನ್ ಹರಿಂ ಬಧರ್ಯಾಶ್ರಮ ವಾಸಿನಮಥಮ್
(ಅಯೋಧ್ಯ ರಾಮಾನುಜ ದಾಸರೆಂಬ ಹೆಸರಿನ ವ್ಯಕ್ತಿ, ಎಲ್ಲರ ಮೇಲೆ ನಿಯಂತ್ರಣ ಹೊಂದಿದ್ದು, ತನ್ನ ಶ್ರೀವೈಷ್ಣವ ಕುಲದ ಕಿರೀಟದಲ್ಲಿ ರತ್ನವಾಗಿದ್ದು, ಯಾವಾಗಲೂ ಪ್ರಸಿದ್ಧರಾಗಿರುವ ಬಧರಿಕಾಶ್ರಮ ಪೆರುಮಾಳರನ್ನು ಸಂತೋಷದಿಂದ ಪೋಷಿಸಿದರು), ಅಯೋಧ್ಯ ರಾಮಾನುಜ ದಾಸರು ತಮ್ಮ ಕುಲದ ನಾಯಕರಾಗಿ, ಎಲ್ಲಾ ಜನರಿಗೆ ಸ್ವೀಕಾರಾರ್ಹರಾಗಿ, ಉತ್ತಮ ನಡವಳಿಕೆಯನ್ನು ಹೊಂದಿ, ಎಲ್ಲಾ ಸಮಯದಲ್ಲೂ ವಧಾರಿಯಾಚ್ಚಿರಾಮ ಪೆರುಮಾಳರನ್ನು (ಬಧರಿಯಾಶ್ರಮ ಪೆರುಮಾಳರು) ಸಂತೋಷದಿಂದ ಪೋಷಿಸುತ್ತಿದ್ದರು. ಶ್ಲೋಕದಲ್ಲಿ ಹೇಳಿರುವಂತೆ
ಸಲಕ್ಷ್ಮಣಂ ವೀಕ್ಷ್ಯಪವಿತ್ರರೂಪಂ ಸಮೇಧ್ಯ ರಾಮಾನುಜಧಾಸಮೇನಂ
ಸಮರ್ಚಯಿತ್ವಾ ವಿವಿಧೋಪಚಾರೈಸ್ಸ ಧರ್ಶಯಾಮಾಸ ರಾಮಾಸಹಾಯಂ
(ಆ ಅಯೋಧ್ಯಾ ರಾಮಾನುಜಾದಾಸರ್, ಸುದ್ಧಸ್ವರೂಪರು (ಸಂಪೂರ್ಣವಾಗಿ ಉತ್ತಮ ರೂಪವುಳ್ಳವರು) ಮತ್ತು ಇಳೈಯಾಳ್ವಾರ್ ಪಿಳ್ಳೈಯವರೊಂದಿಗೆ ಬಂದ ರಾಮಾನುಜಾದಾಸರ್ ಅವರನ್ನು ಸಂಪರ್ಕಿಸಿದರು, (ಅವರನ್ನು ಹಲವು ವಿಧಗಳಲ್ಲಿ ಸನ್ಮಾನಿಸಿದರು, ಹೊಗಳಿದರು ಮತ್ತು ಅವರಿಗೆ ಭದ್ರಿಕಾಶ್ರಮ ಪೆರುಮಾಳರ ಉತ್ತಮ ದರ್ಶನವನ್ನು ನೀಡಿದರು) ರಾಮಾನುಜ ಅಯ್ಯಂಗಾರ್ (ಅಯೋಧ್ಯಾ ರಾಮಾನುಜ ದಾಸರ್ ) ಶ್ರೀರಂಗದಿಂದ ಬಂದ ರಾಮಾನುಜದಾಸರ್ ಅವರಿಗೆ ನಮಸ್ಕಾರಗಳನ್ನು ಅರ್ಪಿಸಿ, ಅವರಿಗೆ ನರ ನಾರಾಯಣ ಪೆರುಮಾಳ್ ದರ್ಶನವನ್ನು ಮಾಡಿಸಿದರು. ಅವರು ನರನಾರಾಯಣ ಪೆರುಮಾಳರಿಗೆ ವಿವಿಧ ರೀತಿಯ ಆಹಾರವನ್ನು ಸಿದ್ಧಪಡಿಸಿ, ಪೆರುಮಾಳರಿಗೆ ಅರ್ಪಿಸಿದರು. ನಂತರ ಶ್ಲೋಕದಲ್ಲಿ ಹೊರತಂದಿರುವ ದಿವ್ಯ ಪ್ರಬಂಧವನ್ನು ಪಠಿಸಲು ಕೇಳಿಕೊಂಡರು.
ವರಯೋಗಿವರಾಗತಚೈಲತೌ ನರನಾರಾಯಣ ಸನ್ನಿದೌ ಪುರಸ್ತಾತ್
ದ್ರಮಿದೋಪನಿಷನ್ಮಹಾಪ್ರಬಂಧಪ್ರಥ ಮೋಧಾಹರಣೆ ನ್ಯಯುಂಗ್ತವಿಧ್ವಾನ್
(ಅಯೋಧ್ಯಾ ರಾಮಾನುಜ ಅಯ್ಯಂಗಾರ್ ಒಬ್ಬ ವಿಧ್ವಾನ್, ಮಣವಾಲ ಮಾಮುನಿಗಳ ಸನ್ನಿಧಿಯಿಂದ ಬಂದ ಈ ಇಬ್ಬರನ್ನು ನರ ನಾರಾಯಣ ಪೆರುಮಾಳ್ ಸನ್ನಿಧಿಯಲ್ಲಿ ದಿವ್ಯಪ್ರಬಂಧವನ್ನು ಹೇಳಲು ಪ್ರಾರಂಭಿಸಿದರು). ಇಳೈ ಯಾಳ್ವಾರ್ ಪಿಳ್ಳೈ, ರಾಮಾನುಜ ಅಯ್ಯಂಗಾರ್ ಅವರ ನಿಯಮಕ್ಕೆ ಅನುಗುಣವಾಗಿ, ಮತ್ತು ಶ್ಲೋಕದಲ್ಲಿ ಹೇಳಿದಂತೆ
ತಥಾ ವಿಧಿಗ್ಯೋವಿದಿವತ್ ಪ್ರಸಾಧಾತ್ವರೋಪಯಂತುರ್ ಧುರಿರಂಗಧಾಮ್ನಾ
ನಿವೇದಿತಂ ಪದ್ಯವರಂ ದ್ವಿಕಂಠಮ್ ಪತಂಜಕೌ ದ್ರಾವಿಡವೇದಮೇಶ:
(ರಾಮಾನುಜ ಅಯ್ಯಂಗಾರ್ ಅವರ ಆದೇಶದಂತೆ ಸರಿಯಾದ ಕ್ರಮವನ್ನು ತಿಳಿದಿರುವ ಇಳೈ ಆಳ್ವಾರ್ ಪಿಳ್ಳೈ, ಶ್ರೀಶೈಲೇಶ ತನಿಯನ್ನನ್ನು ಪಠಿಸಲು ಪ್ರಾರಂಭಿಸಿದರು. ಇದನ್ನು ಶ್ರೀ ರಂಗನಾಥನು, ಮಣವಾಳ ಮಾಮುನಿಗಳ ಮುಂದೆ ಕರುಣೆಯಿಂದ ಮನಸ್ಸಿನ ಸ್ಪಷ್ಟತೆಯೊಂದಿಗೆ ಪಠಿಸಿದರು . ಇದು ಎರಡು ಭಾಗಗಳನ್ನು ಒಳಗೊಂಡಿದೆ, ಮತ್ತು ನಂತರ ದಿವ್ಯ ಪ್ರಬಂಧವನ್ನು ಪಠಿಸಿದರು ), ಮೊದಲು ಪೂರ್ವಗಾಮಿಯಾಗಿ ತನಿಯನ್ ಶ್ರೀಶೈಲೇಶ ದಯಾ ಪಾತ್ರವನ್ನು ಪಠಿಸಲು ಪ್ರಾರಂಭಿಸಿದರು , ನಂತರ ಇತರ ತನಿಯನ್ಗಳನ್ನು ಸಹಾ , ಸರಿಯಾದ ಕ್ರಮದಲ್ಲಿ ಪಠಿಸಿದರು ಮತ್ತು ನಂತರ ದಿವ್ಯ ಪ್ರಬಂಧ ಪಾಸುರಗಳನ್ನು ಪಠಿಸಿದರು .
ಮೂಲ : https://granthams.koyil.org/2021/10/06/yathindhra-pravana-prabhavam-80-english/
ಅನುವಾದ – ಅಡಿಯೇನ್ ಸುಭದ್ರಾ ರಾಮಾನುಜ ದಾಸಿ
ಆರ್ಕೈವ್ ಮಾಡಲಾಗಿದೆ – https://granthams.koyil.org
ಪ್ರಮೇಯಮ್ (ಗುರಿ) – https://koyil.org
ಪ್ರಮಾಣಮ್ (ಗ್ರಂಥಗಳು) – https://granthams.koyil.org
ಪ್ರಮಾತಾ (ಬೋಧಕರು) – https://acharyas.koyil.org
ಶ್ರೀವೈಷ್ಣವ ಎಜುಕೇಶನ್ / ಮಕ್ಕಳ ಸಾಹಿತ್ಯ – https://pillai.koyil.org