ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ
ಜೀಯರ್ ಅಂತಹ ಸ್ಥಿತಿಯಲ್ಲಿದ್ದಾಗ, ಮೇಲ್ನಾಟ್ಟು ತೋழಪ್ಪರ್ ಮತ್ತು ಅವರ ಹಿರಿಯ ಸಹೋದರ, ಅಳಗಿಯ ಮನವಾಳ ಪ್ಪೆರುಮಾಳ್ ನಾಯನಾರ್ ಅವರು ಪೆರುಮಾಳ್ ಅವರನ್ನು ಪೂಜಿಸಲು ಕರುಣೆಯಿಂದ ಶ್ರೀರಂಗಕ್ಕೆ ಬಂದರು. ಭಟ್ಟರ್ ಪಿರಾನ್ ಜೀಯರ್ [ಮಾಮುನಿಗಳ ಅಷ್ಟಾಧಿಕ್ ಗಜಂಗಲಗಳಲ್ಲಿ ಒಬ್ಬರು] ಅವರನ್ನು ಅಂದಿನ ಮಾಡ ವೀಧಿಯಲ್ಲಿ (ಇಂದಿನ ದಕ್ಷಿಣ ದಿಂದ ಉತ್ತರ ವೀಧಿಗೆ ಹೋಗುವ ದಾರಿ ), ಭೇಟಿಯಾಗಿ “ನೀವು ಎಲ್ಲಿಂದ ಬರುತ್ತಿದ್ದೀರಿ? ಎಲ್ಲಿಗೆ ಹೋಗುತ್ತಿದ್ದೀರಿ?” ಎಂದು ಕೇಳಿದರು.ಅವರು ಸಂಪೂರ್ಣ ಮನಶುದ್ಧಿ ಮತ್ತು ವಿನಯದಿಂದ ಜೀಯರ್ ಅವರ ಮುಂದೆ ಸಾಷ್ಟಾಂಗ ನಮಸ್ಕಾರಗೈದು, ಪೆರುಮಾಳನ್ನು ಆರಾಧಿಸುವ ತಮ್ಮ ಬಯಕೆಯನ್ನು ಅವರಿಗೆ ತಿಳಿಸಿದರು. ಆಗ ಜೀಯರ್ ಅವರಿಗೆ ಹೀಗೆಂದರು: “ಇಂತಹ ಜ್ಞಾನ ಮತ್ತು ಭಕ್ತಿಯನ್ನು ಹೊಂದಿದ್ದು, ಸದ್ವಿಷಯಗಳ (ಪೆರುಮಾಳಿಗೆ ಸಂಬಂಧಿಸಿದ ವಿಷಯಗಳ) ಬಗ್ಗೆ ಒಲವುಳ್ಳವರಾಗಿರುವ ನೀವು, ರಾಮಾನುಜರ ಅವತಾರವೇ ಆಗಿರುವ ನಮ್ಮ ಪೆರಿಯ ಜೀಯರ್ ಅವರನ್ನು ಆರಾಧಿಸಬಾರದೇ?” ಅಳಗಿಯ ಮನವಾಳ ಪ್ಪೆರುಮಾಳ್ ನಾಯನಾರ್ [ಇಬ್ಬರು ಅತಿಥಿಗಳ ಹಿರಿಯ] ಪಾಸುರವನ್ನು ಪಠಿಸಿದರು
ಪೋಧ ಚ್ಚಿವಂದು ಪರಿಮಳಂ ವಿಂಜುಂ ಪುದುಕ್ಕಣಿತ್ತ
ಸೀದಾ ಕ್ಕಮಲತ್ತೈ ನೀರೇರವೊಟ್ಟಿ ಚ್ಚಿರಂದ ಅಡಿಯೇನ್
ಎದತ್ತೈ ಮಾಟ್ರುಂ ಮನವಾಳ ಯೋಗಿ ಇನಿಮೈ ತರುಂ
ಪಾದ ಕ್ಕಮಲಂಗಲ್ ಕಂಡೇನೆನಕ್ಕು ಪ್ಪಯಂ ಇಲ್ಲೈಯೇ
(ನಾನು ಮಣವಾಳ ಮಾಮುನಿಗಳ ದಿವ್ಯ, ಕಮಲದಂತಹ ಪಾದಗಳನ್ನು ನೋಡಿದ್ದೇನೆ, ಅವು ಕೆಂಪು ಬಣ್ಣದ್ದಾಗಿದ್ದು, ಹೂವಿನಂತೆ, ಬಹಳ ಪರಿಮಳಯುಕ್ತವಾಗಿದ್ದು, ನಿರ್ಮಲ ಮತ್ತು ತಂಪಾಗಿವೆ. ಅವು ನನ್ನ ದೋಷಗಳನ್ನು ನಿವಾರಿಸಲು ಸಮರ್ಥವಾಗಿವೆ. “ಆ ದಿವ್ಯ ಪಾದಗಳನ್ನು ಕಂಡ ಮೇಲೆ ನನಗೀಗ ಯಾವುದೇ ಭಯವಿಲ್ಲ” ಎಂದು ಹೇಳುತ್ತಾ ಅವರು ಜೀಯರ್ ಅವರ ದಿವ್ಯ ಪಾದಗಳಿಗೆ ಸಾಷ್ಟಾಂಗ ನಮಸ್ಕಾರ ಮಾಡಿದರು. ಜೀಯರ್ ಅವರು ತಾವು ನಿರೀಕ್ಷಿಸಿದಂತೆಯೇ ತಮ್ಮ ದಿವ್ಯ ದೃಷ್ಟಿಯಿಂದ ಅವರನ್ನು ನೋಡಿದರು ಮತ್ತು ರಾಮಾನುಜರ ದಿವ್ಯ ಮನಸ್ಸಿನಲ್ಲಿ ಸದಾ ನೆಲೆಸಿದ್ದ ತಿರುನಾರಾಯಣಪುರದ ಕುರಿತು ಚಿಂತಿಸಿದರು. ಅವರು ತಮ್ಮ ಅಂತಿಮ ದಿನಗಳಲ್ಲಿ ರಾಮಾನುಜರು ರಚಿಸಿದ ಶ್ಲೋಕವನ್ನು ನೆನಪಿಸಿಕೊಂಡರು.)
ಗಚ್ಛನ್ ಪದಾಂ ಪರಮುವಾಚ ವಾಚಾಮಸಿ ಯಾನಿ ರಾಮಾನುಜಾರ್ಯ ಇಹತೇಷು ಚತುರ್ಥಸಿದ್ದಾ೦
ಶ್ರೀಯಾದವಾದ್ರಿ ವಸತಿಂ ಸತತಂ ಭಜಂತ ಸ್ಸಂತೋ ಭವಂತೀ ಮಮಸಂಧತೀ ಮೂಲನಾಥ:
(ತಿರುನಾರಾಯಣಪುರದಲ್ಲಿ ಶಾಶ್ವತವಾಗಿ ವಾಸಿಸುವವರು ಮಹಾನರು (ಶ್ರೇಷ್ಠ ಜನರು), ನಮ್ಮ ಶರಣಾದ ಜನರ ಕುಲದ ಮುಖ್ಯಸ್ಥರಾದ ಎಂಪೆರುಮಾನಾರ್ಜೀಯರ್, “ನಮ್ಮ ಶಿಷ್ಯರಲ್ಲಿ ತಿರುನಾರಾಯಣಪುರದಲ್ಲಿ ಶಾಶ್ವತವಾಗಿ ವಾಸಿಸುವವರು ಯಾರೂ ಇಲ್ಲವೇ?” ಎಂದು ಕೇಳಿದರು. ಆಗ ತೋಳಪ್ಪರ್ (ಇಬ್ಬರು ಸಹೋದರರಲ್ಲಿ ಕಿರಿಯವರು) ತಮ್ಮ ವಸ್ತ್ರವನ್ನು ತಲೆಗೆ ಕಟ್ಟಿಕೊಂಡು, “ಈ ಕೈಂಕರ್ಯವನ್ನು [ತಿರುನಾರಾಯಣಪುರದಲ್ಲಿ ಶಾಶ್ವತವಾಗಿ ನೆಲೆಸುವ ಸೇವೆಯನ್ನು] ಕೈಗೊಳ್ಳಲು ಈ ದಾಸನು ಬಯಸುತ್ತಾನೆ” ಎಂದು ಹೇಳಿ ಜೀಯರ್ ಅವರಲ್ಲಿ ಅನುಮತಿ ಕೋರಿದರು.ಅವರು ತಮ್ಮ ದಿವ್ಯ ವಾಸಸ್ಥಾನವಾದ ಶ್ರೀವೈಕುಂಠವನ್ನು ಏರಿದ ಸಮಯದಲ್ಲಿ ಹೇಳಿದ (ಆರು) ಪದಗಳಲ್ಲಿ ನಾಲ್ಕನೆಯದಾಗಿ ಉಲ್ಲೇಖಿಸಿದ್ದಾರೆ). ಇದನ್ನು ಕೇಳಿ ಜೀಯರ್ ಅತ್ಯಂತ ಸಂತೋಷಗೊಂಡು, “ಅಲ್ಲಿನ ದೇವರಿಗೆ (ಎಂಪೆರುಮಾನ್) ‘ಯತಿರಾಜ ಸಂಪತ್ಕುಮಾರ’ ಎಂಬ ಹೆಸರಿನಿಂದ ಮಂಗಳಾಶಾಸನವನ್ನು ನೆರವೇರಿಸುತ್ತಾ ತಿರುನಾರಾಯಣಪುರದಲ್ಲೇ ಶಾಶ್ವತವಾಗಿ ನೆಲೆಸಿರಿ; ಇದು ಎಂಪೆರುಮಾನಾರ್‌ಗೂ ಹಾಗೂ ನಮಗೂ ಅತ್ಯಂತ ಪ್ರಿಯವಾದ ಕಾರ್ಯವಾಗಿದೆ” ಎಂದು ಅವರಿಗೆ ಆಜ್ಞಾಪಿಸಿದರು.
ಭಟ್ಟರ್ ಪಿರಾನ್ ಜೀಯರ್ ಅಡಿಯಲ್ಲಿ ಆಶ್ರಯ ಪಡೆಯಲು ಅಣ್ಣಾರಾಯರ್ ಅವರನ್ನು ಮಾಡುವುದು
ಆ ಸಮಯದಲ್ಲಿ, ರಾಮಾನುಜರಿಂದ ಪ್ರಶಂಸಿಸಲ್ಪಟ್ಟಿದ್ದ ‘ತಿರುಮಲೈ ನಲ್ಲಾನ್’ ವಂಶಕ್ಕೆ ಸೇರಿದ ಅಣ್ಣರಾಯ ಚಕ್ರವರ್ತಿಯು, ಶ್ರೀರಂಗದ ಪೆರುಮಾಳನ್ನು ಆರಾಧಿಸಲು ತನ್ನ ಕುಟುಂಬದವರೊಂದಿಗೆ ಶ್ರೀರಂಗಕ್ಕೆ ಬಂದನು.
ಅಂತಿಮ ಹಂತದಲ್ಲಿದ್ದ ಜೀಯರನ್ನು ದರ್ಶಿಸಲು ಹೋಗುತ್ತಿದ್ದ ಭಕ್ತರ ಗುಂಪುಗಳನ್ನು (ಇವರು ಪೆರುಮಾಳನ್ನು ಪೂಜಿಸಲು ದೇವಾಲಯಕ್ಕೆ ಬಂದಿದ್ದರು) ಅಣ್ಣರಾಯರ ತಾಯಿ ಕಂಡರು. ಅವರು ಅಣ್ಣರಾಯರಲ್ಲಿ, “ನಾವು ಕೂಡ ಹೋಗಿ ಜೀಯರನ್ನು ದರ್ಶಿಸಬಾರದೇ?” ಎಂದು ಕೇಳಿದರು.ಅಣ್ಣರಾಯರು ತಮ್ಮ ಕುಟುಂಬದೊಂದಿಗೆ ಜೀಯರ್ ಮಠಕ್ಕೆ ತೆರಳಿ, ಭಟ್ಟರ್‍ಪಿರಾನ್ ಜೀಯರ್ ಅವರ ಶಿಫಾರಸಿನೊಂದಿಗೆ (ಪುರುಷಕಾರದೊಂದಿಗೆ), ಬೇರು ಕಡಿದು ಬಿದ್ದ ಮರದಂತೆ ಜೀಯರ್ ಅವರ ದಿವ್ಯ ಪಾದಗಳಿಗೆ ಸಾಷ್ಟಾಂಗ ನಮಸ್ಕರಿಸಿದರು. ಬಹಳ ಕಾಲದಿಂದ ತಮ್ಮನ್ನು ಸಮರ್ಥಿಸುವ ಅಥವಾ ಒಪ್ಪುವ ಯಾರನ್ನೂ ಕಾಣದೆ ಮುದುಡಿಕೊಂಡಿದ್ದ ಜೀಯರ್ ಅವರ ದಿವ್ಯ ಪಾದಗಳು, ಈಗ ಚಾಚಿಕೊಂಡವು ಎಂದು ಶ್ಲೋಕದಲ್ಲಿ ವರ್ಣಿಸಲಾಗಿದೆ.
ತಥಾ: ಸ್ಥಿಮಿತಮುದ್ಕ್ಷಿಪ್ಯ ಚರಣಂ ಚಕ್ರ]ಲಾಂಚಿತಂ
ಕೃಪಯಾ ಮೂರ್ಧ್ನಿ ವಿನ್ಯಸ್ಯ ಸನಿನಾಯ ಕುರುಶ್ರಮಂ
(ನಂತರ, ಆ ಮಣವಾಳ ಮಾಮುನಿಗಳು ದಯೆಯಿಂದ ಚಕ್ರದ (ದೈವಿಕ ಚಕ್ರ) ಮುದ್ರೆಯನ್ನು ಹೊಂದಿದ್ದ ತಮ್ಮ ದಿವ್ಯ ಪಾದಗಳನ್ನು ಎತ್ತಿ, ಕರುಣೆಯಿಂದ ಅವುಗಳನ್ನು ತಮ್ಮ ದಿವ್ಯ ತಲೆಯ ಮೇಲೆ ಒತ್ತಿ ತಮ್ಮ ಮಹಾ ಇಚ್ಛೆಯನ್ನು ಪೂರೈಸಿಕೊಂಡರು).ಜೀಯರ್ ತಮ್ಮ ದಿವ್ಯ ಪಾದಗಳನ್ನು ಅಣ್ಣರಾಯರ ದಿವ್ಯ ಶಿರಸ್ಸಿನ ಮೇಲೆ ಇರಿಸಿ ಕೃಪೆ ತೋರಿದರು. ಇದನ್ನು ಕಂಡ ಶಿಷ್ಯರು ಅಣ್ಣರಾಯರ ಭಾಗ್ಯವನ್ನು ಕೊಂಡಾಡಿದರು. ಜೀಯರ್ ಅಣ್ಣರಾಯರನ್ನು ಕುರಿತು, “ತಿರುವೇಂಗಡದ ದ್ರೋಹಿಗಳು ಹಾನಿ ಮಾಡದಂತೆ ತಿರುವೇಂಗಡದಲ್ಲಿ ನಮ್ಮ ಎಂಪೆರುಮಾನಾರ್ ಜೀಯರನ್ನು ರಕ್ಷಿಸಿದವರು ಹಾಗೂ ನಮ್ಮ ದರ್ಶನಕ್ಕೆ (ಸಂಪ್ರದಾಯಕ್ಕೆ) ಅನುಕೂಲಕರವಾದ ಅನೇಕ ಕಾರ್ಯಗಳನ್ನು ನೆರವೇರಿಸಿದವರು ನೀವೇ ಅಲ್ಲವೇ?” ಎಂದು ನುಡಿದರು. ಅವರು ಮುಂದುವರಿಸಿ, “ನಿಮ್ಮ ಘನತೆಗೆ ತಕ್ಕುದಾದದ್ದು ಇಲ್ಲಿ ಏನೂ ಇಲ್ಲ; ನೀವು ಇನ್ನೂ ಸ್ವಲ್ಪ ಮುಂಚಿತವಾಗಿಯೇ ಇಲ್ಲಿಗೆ ಬರಬೇಕಿತ್ತು,” ಎಂದರು. ನಂತರ ಅವರು ಭಟ್ಟರ್-ಪಿರಾನ್ ಜೀಯರ್ ಅವರನ್ನು, “ಓ ಗೋವಿಂದಪ್ಪ ದಾಸರೇ! ಬನ್ನಿ. ‘ರಾಮಸ್ಯ ದಕ್ಷಿಣೋ ಬಾಹುಃ’ (ಲಕ್ಷ್ಮಣನನ್ನು ಶ್ರೀರಾಮನ ಬಲಗೈ ಎಂದು ಕರೆಯಲಾಗುತ್ತದೆ) ಎಂದು ಹೇಳುವಂತೆ, ನೀವು ನಮ್ಮ ಬಲಗೈಯಲ್ಲವೇ?” ಎಂದು ಕರೆದರು. ಆದುದರಿಂದ ಇದು ನಮ್ಮಿಂದ ನಡೆಸಲ್ಪಟ್ಟಿದೆ ಎಂದು ಪರಿಗಣಿಸಿ, ಇದನ್ನು ಅಪೇಕ್ಷಿಸುವ ಜನರಿಗೆ ಪಂಚಸಂಸ್ಕಾರವನ್ನು ಮಾಡಿರಿ” ಎಂದು ಅಣ್ಣಾರಾಯ ಚಕ್ರವರ್ತಿ, ತೋಳಪ್ಪರು ಮತ್ತು ಅಳಗಿಯ ಮಾನವಾಳ ಪ್ಪೆರುಮಾಳ್ ನಾಯನರಿಗೆ ಸೂಚಿಸಿ, ಭಟ್ಟರ್-ಪಿರಾನ್ ಜೀಯರ್ ಅವರನ್ನುದರ್ಶನ ಪ್ರವರ್ತಕರನ್ನಾಗಿ ಮಾಡಲು ಹೇಳಿದರು.(ರಾಮಾನುಜರ ತತ್ವಶಾಸ್ತ್ರವನ್ನು ಹರಡಲು ಅವರಿಗೆ ಅನುವು ಮಾಡಿಕೊಡಿ).ಭಟ್ಟರ್ ಪಿರಾನ್ ಜಿಯಾರ್ ಕೂಡ ಕರುಣೆಯಿಂದ ಪೆರಿಯ ಜೀಯರ್ ಅವರ ಆದೇಶವನ್ನು ಅತ್ಯಂತ ವಿಶಿಷ್ಟ ರೀತಿಯಲ್ಲಿ ನೆರವೇರಿಸಿದರು. ತರುವಾಯ, ಅಪ್ಪಿಲ್ಲಾನ್ ಮತ್ತು ಜೀಯರ್ ನಾಯನಾರ್ (ಅವರ ಪೂರ್ವಾಶ್ರಮದಿಂದ ಪೆರಿಯ ಜೀಯರ್ ಅವರ ಮೊಮ್ಮಗ ಅವರು ಗೃಹಸ್ಥರಾಗಿದ್ದಾಗ, ಜೀಯರ್ ಅವರ ದಿವ್ಯ ಪಾದಗಳಿಗೆ ಸಾಷ್ಟಾಂಗ ನಮಸ್ಕಾರ ಮಾಡಿ, “ತಮ್ಮ ದಿವ್ಯ ವಿಗ್ರಹವೊಂದನ್ನು ನಮ್ಮ ಆಶ್ರಯಕ್ಕಾಗಿ ನಮಗೆ ಅನುಗ್ರಹಿಸಬೇಕು” ಎಂದು ಪ್ರಾರ್ಥಿಸಿದರು. ಜೀಯರ್ ಅವರು ತಮ್ಮ ತಾಮ್ರದ ಪಾತ್ರೆಯನ್ನು ಅವರಿಗೆ ನೀಡುವ ಮೂಲಕ ಅವರ ಕೋರಿಕೆಯನ್ನು ಈಡೇರಿಸಿದರು; ಆ ಪಾತ್ರೆಯನ್ನು ಬಳಸಿ ಎರಡು ವಿಗ್ರಹಗಳನ್ನು ತಯಾರಿಸಿ, ಪ್ರತಿಯೊಬ್ಬರೂ ಒಂದೊಂದು ವಿಗ್ರಹವನ್ನು ತಮ್ಮ ಬಳಿ ಇಟ್ಟುಕೊಳ್ಳುವಂತಾಗಲು ಇದು ಸಹಾಯಕವಾಯಿತು.
ಅನುವಾದ – ಅಡಿಯೇನ್ ಸುಭದ್ರಾ ರಾಮಾನುಜ ದಾಸಿ
ಮೂಲ : https://granthams.koyil.org/2021/10/23/yathindhra-pravana-prabhavam-97-english/
ಆರ್ಕೈವ್ ಮಾಡಲಾಗಿದೆ – https://granthams.koyil.org
ಪ್ರಮೇಯಂ (ಗುರಿ) – https://koyil.org
ಪ್ರಮಾಣ೦ (ಗ್ರಂಥಗಳು) – https://granthams.koyil.org
ಪ್ರಮಾತಾ (ಬೋಧಕರು) – https://acharyas.koyil.org
ಶ್ರೀವೈಷ್ಣವ ಎಜುಕೇಶನ್ / ಮಕ್ಕಳ ಸಾಹಿತ್ಯ – https://pillai.koyil.org