ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೧೦೩

ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ

ಪೂರ್ಣ ಸರಣಿ

<< ಹಿಂದಿನ ಲೇಖನವನ್ನು

ಮಾಮುನಿಗಳಲ್ಲಿ ದೃಢವಾಗಿ ತೊಡಗಿಸಿಕೊಂಡಿರುವ ಶಿಷ್ಯರು

ಹೀಗೆ, ಜೀಯರ್ ಅವರ ದಿವ್ಯ ಪಾದಗಳ ಆಶ್ರಯವನ್ನು ಪಡೆದಿದ್ದ ಎಲ್ಲಾ ಶಿಷ್ಯರು, ‘ಆಚಾರ್ಯ ಅಭಿಮಾನ ನಿಷ್ಠೆ’ಯೊಂದಿಗೆ (ಆಚಾರ್ಯರ ವಿಷಯದಲ್ಲಿ ದೃಢವಾದ ಭಕ್ತಿ-ಗೌರವಗಳೊಂದಿಗೆ) ಜೀವಿಸಿದರು; ಜೊತೆಗೆ, ರಾಮಾನುಜರ ಮೇಲೆ ವಿಶೇಷ ವಾತ್ಸಲ್ಯವುಳ್ಳವರಾದ (ಯತೀಂದ್ರಪ್ರವಣರಾದ) ಜೀಯರ್ ಅವರ ದಿವ್ಯ ಪಾದಗಳೇ ಪರಮ ಆಶ್ರಯವೆಂದು ಭಾವಿಸುವಂತೆ ತಮ್ಮ ಶಿಷ್ಯರಿಗೂ ಕರುಣೆಯಿಂದ ಬೋಧಿಸಿದರು. ‘ಉತ್ತರ ದಿನಚರ್ಯೆ’ಯ ಶ್ಲೋಕದಲ್ಲಿ ತಿಳಿಸಿರುವಂತೆಯೇ ಅವರೂ ಸಹ ಜೀವನ ನಡೆಸಿದರು.

ಅಪಗತಮತಮಾನೈ: ಅಂತಿಮೋಪಾಯ ನಿಷ್ಟಯಿ: ಅತಿಗಥ ಪರಮಾರ್ಥಯಿ: ಅರ್ಥಕಾಮಾನಾಪೇಕ್ಷಯಿ:
ನಿಖಿಲಜನಸುಹೃದ್ಭಿರ್ ನಿರ್ಜಿತಕ್ರೋಧಲೋಭೈ: ವರವರಮುನಿಭೃತ್ಯೈ : ಅಸ್ತುಮೇ ನಿತ್ಯಯೋಗ:

ಅಹಂಕಾರ ಮತ್ತು ಸ್ವಾತಂತ್ರ್ಯ ಭಾವನೆಗಳಿಲ್ಲದ, ಕರ್ಮ-ಜ್ಞಾನ-ಭಕ್ತಿ-ಪ್ರಪತ್ತಿ-ಆಚಾರ್ಯಾಭಿಮಾನಗಳ ಪೈಕಿ ‘ಆಚಾರ್ಯಾಭಿಮಾನ’ವೇ (ಆಚಾರ್ಯರ ಮೇಲಿನ ಶ್ರದ್ಧಾಭಕ್ತಿ) ಪರಮೋಪಾಯವೆಂದು ದೃಢವಾಗಿ ನಂಬಿರುವ, ‘ಪುರುಷಾರ್ಥ’ದ (ಪರಮ ಪ್ರಯೋಜನದ) ಪರಮಾವಧಿಯೆಂದು ಪರಿಗಣಿಸಲ್ಪಟ್ಟ ಆಚಾರ್ಯ ಕೈಂಕರ್ಯದಲ್ಲಿ ನಿರತರಾಗಿರುವ, ಸಂಪತ್ತು ಹಾಗೂ ಅದರಿಂದ ಪಡೆಯುವ ಇಂದ್ರಿಯ ಸುಖಗಳ ಬಗ್ಗೆ ಯಾವುದೇ ಆಸೆಯಿಲ್ಲದ, ವೈರಿಗಳೊಂದಿಗೂ ಸೌಹಾರ್ದಯುತವಾಗಿ ವರ್ತಿಸುವ ಹಾಗೂ ಕೋಪ ಮತ್ತು ಲೋಭಗಳನ್ನು ಗೆದ್ದಿರುವ ಮಣವಾಳ ಮಾಮುನಿಗಳ ಶಿಷ್ಯರೊಂದಿಗೆ ನಾನು (ಅಡಿಯೇನ್) ಸಂಬಂಧವನ್ನು ಹೊಂದಿರಬೇಕು; ಅಲ್ಲದೆ, ಸಮಸ್ತ ಸಂಪತ್ತನ್ನೂ ಹುಲ್ಲಿಗೆ ಸಮಾನವೆಂದು ಭಾವಿಸಿ (ಅದರ ಬಗ್ಗೆ ನಿರ್ಲಿಪ್ತರಾಗಿ), ಆಚಾರ್ಯರಿಗೆ ಕೈಂಕರ್ಯ ಸಲ್ಲಿಸುವ ತೀವ್ರ ಬಯಕೆಯನ್ನು ಹೊಂದಿ, ಆಚಾರ್ಯರ ಮೇಲಿನ ಭಕ್ತಿಯೇ ಸಂಸಾರದಿಂದ ಮುಕ್ತಿ ಪಡೆಯಲು ಪರಮೋಪಾಯವೆಂದು ದೃಢವಾಗಿ ನಂಬಿ, ವಿಭೂತಿಗಳಾದ ಸಂಸಾರ ಮತ್ತು ಶ್ರೀವೈಕುಂಠ ಎರಡನ್ನೂ ಒಂದೇ ಎಂದು ಪರಿಗಣಿಸಿ ಅವುಗಳ ನಡುವಿನ ಗೋಡೆಯನ್ನು ತೊಡೆದುಹಾಕುವವರಾಗಿರಬೇಕು.

ಶ್ರೀ ಶಟಾರಿಗುರೋರ್ ದಿವ್ಯ ಶ್ರೀಪಾದಾಬ್ಜ ಮಧುವ್ರತಂ
ಶ್ರೀಮದ್ ಯತೀಂದ್ರಪ್ರವಣಂ ಶ್ರೀಲೋಕಾರ್ಯಮುನಿಂ ಭಜೇ


(ರಾಮಾನುಜರ ಮೇಲೆ ವಾತ್ಸಲ್ಯವುಳ್ಳವರೂ, ಯಾರ ದಿವ್ಯ ಪದ್ಮಪಾದಗಳಿಂದ ಮಕರಂದವು (ಜೇನು) ಸುರಿಯುತ್ತಿದೆಯೋ, ಅಂತಹ ದಿವ್ಯ ಆಚಾರ್ಯರಾದ ಶ್ರೀ ಪಿಳ್ಳೈ ಲೋಕಂ ಜೀಯರ್ ಅವರನ್ನು ನಾನು ಆರಾಧಿಸುತ್ತೇನೆ.)

ಅನುವಾದ – ಅಡಿಯೇನ್ ಸುಭದ್ರಾ ರಾಮಾನುಜ ದಾಸಿ

ಮೂಲ : https://granthams.koyil.org/2021/10/30/yathindhra-pravana-prabhavam-103-english/

ಆರ್ಕೈವ್ ಮಾಡಲಾಗಿದೆ – https://granthams.koyil.org

ಪ್ರಮೇಯಮ್ (ಗುರಿ) – https://koyil.org
ಪ್ರಮಾಣಮ್ (ಗ್ರಂಥಗಳು) – https://granthams.koyil.org
ಪ್ರಮಾತಾ (ಬೋಧಕರು) – https://acharyas.koyil.org
ಶ್ರೀವೈಷ್ಣವ ಎಜುಕೇಶನ್ / ಮಕ್ಕಳ ಸಾಹಿತ್ಯ – https://pillai.koyil.org

Leave a Comment