ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೯೪

ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ

ಪೂರ್ಣ ಸರಣಿ

<< ಹಿಂದಿನ ಲೇಖನವನ್ನು

ಅಂತಹ ಶಿಷ್ಯರಿಂದ ಪೂಜಿಸಲ್ಪಡುತ್ತಿದ್ದ ಪೆರಿಯ ಜೀಯರ್ [ಮಹಾನ್ ಜೀಯರ್], ಜಗತ್ತಿನ ಎಲ್ಲ ಜನರನ್ನು ಅರ್ಥ ಪಂಚಕದಲ್ಲಿ (ತನ್ನನ್ನು ತಿಳಿದುಕೊಳ್ಳುವುದು, ಎಂಪೆರುಮಾನನ ಬಗ್ಗೆ ತಿಳಿದುಕೊಳ್ಳುವುದು, ಎಂಪೆರುಮಾನನನ್ನು ಪಡೆಯುವ ವಿಧಾನಗಳ ಬಗ್ಗೆ ತಿಳಿದುಕೊಳ್ಳುವುದು, ಶ್ರೇಷ್ಠ ಪ್ರಯೋಜನದ ಬಗ್ಗೆ ತಿಳಿದುಕೊಳ್ಳುವುದು ಮತ್ತು ಎಂಪೆರುಮಾನನನ್ನು ತಲುಪುವಲ್ಲಿನ ಅಡೆತಡೆಗಳ ಬಗ್ಗೆ ತಿಳಿದುಕೊಳ್ಳುವುದು) ತೊಡಗಿಸಿಕೊಳ್ಳುವಂತೆ ಮಾಡುತ್ತಿದ್ದರು. ಅವರು ಅಂತಿಮ ವಿಧಾನಗಳೊಂದಿಗೆ (ಆಚಾರ್ಯರನ್ನು ಹಿಡಿದಿಟ್ಟುಕೊಳ್ಳುವ) ತೊಡಗಿಸಿಕೊಳ್ಳುವ ಮೂಲಕ ಅವರನ್ನು ಮೇಲಕ್ಕೆತ್ತಿದರು. ಅವರು ತಿರುವಾಯ್ಮೋಳಿ ಈಡು ಮತ್ತು ಶ್ರೀಭಾಷ್ಯಂ ಅನ್ನು ನಾಯನರಿಗೆ ಕಲಿಸಲು ಕಂದಾಡೈ ಅಣ್ಣನ್ ಮತ್ತು ಪ್ರತಿವಾದಿ ಭಯಂಕರಂ ಅಣ್ಣಾ ಅವರನ್ನು ನೇಮಿಸಿದರು.

ಅವರು ಈ ರೀತಿ ಬದುಕುತ್ತಿದ್ದಾಗ, ಎಲ್ಲರನ್ನೂ ಉದ್ಧರಿಸುತ್ತಾ ಮತ್ತು ಅವರು ಮೋಕ್ಷವನ್ನು ನೀಡಿದ ಹುಣಸೆ ಮರದಂತಹ ಸ್ಥಾವರಗಳನ್ನು (ಸಸ್ಯ ಘಟಕಗಳು) ಸಹ ಕಾರಣವಿಲ್ಲದ ಕರುಣೆಯಿಂದ ಕೃಪೆ ತೋರುತ್ತಿದ್ದಾಗ, ಜೀಯರ್ ತಮ್ಮ ಗುಣಗಳನ್ನು ಹೊರತಂದ ಪಾಸುರವನ್ನು ಪಠಿಸಿದರು:

ತೆನ್ನರಂಗರ್ ಸೀರರುಳುಕ್ಕು ಇಲಕ್ಕಾಗ ಪ್ಪೆಟ್ರೋಮ್
ತಿರುವರಂಗ ತ್ತಿರುಪ್ಪಡಿಯೇ ಇರುಪ್ಪಾಕ ಪ್ಪೆಟ್ರೋಮ್
ಮನ್ನಿಯ ಸೀರ್ ಮಾರನ್ ಕಲೈ ಉನವಾಗಪ್ಪೆಟ್ರೋಮ್
ಮಧುರಕವಿ ಸೊರ್ಪಡಿಯೇ ನಿಲೈಯಾಗ ಪ್ಪೆಟ್ರೋಮ್
ಮುನ್ನವರಾಂ ನಂ ಕುರವರ್ ಮೊழிಗಲ್ ಉಳ್ಳಾಪ್ಪೆಟ್ರೋಮ್
ಮುழுದುಂ ನಮಕ್ಕಿವೈ ಪೋழுದುಪುಕ್ಕಗ ಪ್ಪೆಟ್ರೋಮ್
ಪಿನ್ನೈ ಒನ್ರುದನಿಲ್ ನೆಂಜಮ್ ಪೊರಾಮ ಪ್ಪೆಟ್ರೋಮ್
ಪಿರರ್ಮಿನುಕ್ಕಂ ಪೊರಾಮೈ ಇಲ್ಲಾ ಪ್ಪೇರುಮೈಯುಂ ಪ್ಪೆಟ್ರೋಮೇ

(ಶ್ರೀ ರಂಗನಾಥನ ಮಹಾ ಕರುಣೆಗೆ ಗುರಿಯಾಗಲು ನಾವು ಅದೃಷ್ಟಶಾಲಿಗಳು; ಶ್ರೀರಂಗಂನ ದೈವಿಕ ವಾಸಸ್ಥಾನವನ್ನು ನಮ್ಮ ವಾಸಸ್ಥಾನವಾಗಿ ಹೊಂದಲು ನಾವು ಅದೃಷ್ಟಶಾಲಿಗಳು; ನಮ್ಮ ಹಬ್ಬವಾಗಿ ಮಹಾನ್ ನಮ್ಮಾಳ್ವಾರ್ ರಚಿಸಿದ ತಿರುವಾಯ್ಮೋಳಿಯನ್ನು ಹೊಂದಲು ನಾವು ಅದೃಷ್ಟಶಾಲಿಗಳು; ಮಧುರಕವಿ ಆಳ್ವಾರ್ ಅವರ ಬೋಧನೆಗಳಿಗೆ ಅನುಗುಣವಾಗಿ ನಮ್ಮ ಆಚಾರ್ಯರೊಂದಿಗೆ ಆಳವಾಗಿ ತೊಡಗಿಸಿಕೊಂಡಿದ್ದೇವೆ; ನಮ್ಮ ಗುರುಗಳ ಬೋಧನೆಗಳನ್ನು ನಾವು ಸ್ವೀಕರಿಸುವ ಅದೃಷ್ಟವಂತರು; ಉದ್ದೇಶಪೂರ್ವಕವಾಗಿ ಸಮಯ ಕಳೆಯಲು ಇವು ನಮ್ಮ ಸಹಾಯಕವಾಗಿದ್ದವು; ಬೇರೆ ಯಾವುದರಲ್ಲೂ ಆಸಕ್ತಿ ಇಲ್ಲದಿದ್ದ ನಮ್ಮ ಮನಸ್ಸಿನಲ್ಲಿ ನಾವು ಅದೃಷ್ಟವಂತರು; ಇತರರ ಶ್ರೇಷ್ಠತೆಯ ಬಗ್ಗೆ ಅಸೂಯೆಪಡದಿರುವ ಶ್ರೇಷ್ಠತೆಯನ್ನು ಹೊಂದುವಲ್ಲಿ ನಾವು ಅದೃಷ್ಟವಂತರು).

ಯಮ್ಯಮ್ ಸ್ಪೃಶತಿ ಪಾಣಿಭ್ಯಂ (ಅವನು ತನ್ನ ದಿವ್ಯ ಕೈಗಳಿಂದ ಯಾರನ್ನು ಮುಟ್ಟಿದನೋ) ಎಂದು ಶ್ಲೋಕದಲ್ಲಿ ಉಲ್ಲೇಖಿಸಿರುವಂತೆ, ಅವರ ದೈವಿಕ ಸ್ಪರ್ಶದಿಂದಾಗಿ ಸಸ್ಯಗಳು ಸಹ ಉನ್ನತಿಗೊಂಡವು, ಆದರೆ ಅವನ ಉನ್ನತಿ ಮಾಡುವ ಜನರ ಬಗ್ಗೆ ಮಾತನಾಡಬೇಕೇ? ಮಣವಾಳ ಮಾಮುನಿಗಳಿಂದ ಜನರು ಪಡೆದ ಪ್ರಯೋಜನಗಳನ್ನು ಈ ಕೆಳಗಿನ ಶ್ಲೋಕಗಳು ಎತ್ತಿ ತೋರಿಸುತ್ತವೆ:

ತತ್ ಪಾದಪದ್ಮ ಸಂಸ್ಪರ್ಶಪಾವನಂ ಸಲಿವಂ ಜನಾ:
ಸ್ವೀಕುರ್ವಂಥ: ಸುಖೇನೈವ ಸ್ವರೂಪಂ ಪ್ರತಿಭೇಧಿರೇ
ಆಲೋಕೈರ್ ಅನುಕಂಪಾಧ್ಯಾಯಿರ್ ಆಲಾಪೈರ್ ಅಮೃತಚ್ಯುಥೈ:
ಅನ್ವಹಂ ಪಾನಿಪಾದಸ್ಯಸ್ಪರ್ಶಅನ್ಯಾಸೈಶ್ಚ ಪಾವನೈ:
ಮಂತ್ರ ರತ್ನ ಪ್ರಧಾನ ತದರ್ಥ ಪ್ರತಿಪಾಧನಾಥ
ಆತ್ಮಾರ್ಪಣೆನ ಕಧೀಚಿತ್ ಅಗ್ಯಾಪನೇ ನಚ
ಕೇಚಿತ್ ಕ್ಷೇಮಂ ಯುಯುಸ್ತಸ್ಯ ಪಾಧಪದ್ಯಸ್ಯ ಸಂಶ್ರಯಾನ್
ಅನ್ಯೇ ತದ್ರೂಪನೀನಾಥಜ್ಞಯೇ ತನ್ನಾಮ ಕೀರ್ತನಾಥ
ಶ್ರುತ್ವ ತಸ್ಯಗುಣನ್ ಧಿವ್ಯಾನ ಸ್ತುವಾತಾನೇವ ಕೇಚನ
ನಥ್ವಾತಾಮ್ ಧಿಸಮುದ್ಧಿಶ್ಯ ಸ್ಮೃತ್ವ ತದ್ ವೈಭವಂ ಪರೇ
ಅಪತಿಶ್ಯಗಮಪ್ಯೇನಮನ್ಯೇ ಪ್ರತೀತ ವೈಭವಂ
ಅನ್ಯೇ ತದ್ ಬೃಥ್ಯ ಬೃತ್ಯಾನಾಮಲೋಕ ಸ್ಪರ್ಶನಾಥಪಿ
ಅನ್ಯೇ ತದ್ ಪಾಧಸಂಸ್ಪರ್ಶ ತನ್ಯೇಸಂಭೂಯ ಭೂತಲೇ
ಅಭವನ್ ಭೂಯಸಾ ತಸ್ಯ ಮುನೇ: ಪಾತ್ರಂ ಕೃಪಧೃಶಂ
ಏವಂ ಸರ್ವೇ ಮುನೀಂಧರೇಣ ಭಭುವುಸ್ ಸ್ರಸ್ತ ಬಂಧನಾ:

(ಮಣವಾಳ ಮಾಮುನಿಗಳ ದಿವ್ಯ ಪಾದ ಕಮಲಗಳ ಸಂಪರ್ಕದಿಂದಾಗಿ, ಅವರ ಶಿಷ್ಯರು, ಶ್ರೀಪಾದತೀರ್ಥವನ್ನು ಸೇವಿಸುವ ಮೂಲಕ (ಅವರ ದಿವ್ಯ ಪಾದಗಳಿಂದ ತೀರ್ಥ ) ಅವರ ಸ್ವಭಾವವನ್ನು (ಅದು ದಾಸ್ಯ) ಸುಲಭವಾಗಿ ಅರ್ಥಮಾಡಿಕೊಂಡರು; ಕೆಲವರು ಅವರ ದಿವ್ಯ ನೋಟದ ಮೂಲಕ, ಅಮೃತದಂತೆ ಹರಿಯುತ್ತಿದ್ದ ಅವರ ಕ್ಷೀಣಿಸದ ಕರುಣೆಯ ಮೂಲಕ, ಅವರ ದಿವ್ಯ ಪಾದಗಳ ಸಂಪರ್ಕದ ಮೂಲಕ ತಮ್ಮನ್ನು ತಾವು ಮೇಲಕ್ಕೆತ್ತಿಕೊಂಡರು, ಆ ದೈವಿಕ ಪಾದಗಳಿಗೆ ವಿಧೇಯರಾಗುವ ಮೂಲಕ, ಮಂತ್ರರತ್ನವೆಂದು ಪರಿಗಣಿಸಲಾದ ದ್ವಯ ಮಹಾಮಂತ್ರವನ್ನು ಪಡೆದು ಅದರ ಅರ್ಥಗಳನ್ನು ಅವರಿಂದ ಕಲಿಯುವ ಮೂಲಕ; ಕೆಲವರು ಅವರಿಗೆ ಶರಣಾಗುವ ಮೂಲಕ, ಅವರ ಅಜ್ಞಾನದ ಬಗ್ಗೆ ಅವರಿಗೆ ಮನವಿ ಮಾಡುವ ಮೂಲಕ ಉನ್ನತಿ ಪಡೆದರು; ಕೆಲವರು ಆ ಮಹಾನ್ ಮುನಿಯ ದಿವ್ಯ ರೂಪವನ್ನು ತಮ್ಮ ಧ್ಯಾನದ ವಸ್ತುವನ್ನಾಗಿ ಮಾಡಿಕೊಂಡರು, ಕೆಲವರು ಅವನ ದಿವ್ಯ ನಾಮಗಳನ್ನು ಪಠಿಸಿದರು, ಕೆಲವರು ಅವನ ದೈವಿಕ ಶುಭ ಗುಣಗಳ ಬಗ್ಗೆ ಕೇಳಿ ಆ ಗುಣಗಳ ಮೂಲಕ ಅವನನ್ನು ಸ್ತುತಿಸಿದರು; ಕೆಲವರು ಅವನು ಕರುಣಾಮಯಿಯಾಗಿ ವಾಸಿಸುತ್ತಿದ್ದ ದಿಕ್ಕಿನಲ್ಲಿ ಪೂಜಿಸಿ ನಮಸ್ಕರಿಸಿದರು; ಕೆಲವರು ಅವರ ಶ್ರೇಷ್ಠತೆಯ ಬಗ್ಗೆ ಯೋಚಿಸುತ್ತಲೇ ಇದ್ದರು ಮತ್ತು ಸಂತೋಷಪಟ್ಟರು; ಕೆಲವರು, ಅಂತಹ ಮಹಿಮೆಗಳನ್ನು ಹೊಂದಿದ್ದ ಮಣವಾಳ ಮಾಮುನಿಗಳ ದಾಸದಾಸರ (ಅವರ ಶಿಷ್ಯರ ಶಿಷ್ಯರು) ದಿವ್ಯ ನೋಟದ ಮೂಲಕ ಮತ್ತು ಅವರ ಸ್ಪರ್ಶದಿಂದ ಶುದ್ಧೀಕರಿಸಲ್ಪಟ್ಟ ಈ ಭೂಮಿಯಲ್ಲಿ ಜನಿಸಿದ ಮೂಲಕ ಅವರ ದಾಸದಾಸರು ಅವರ ದಿವ್ಯ ನೋಟದ ವಸ್ತುಗಳಾಗಿ ಮತ್ತು ಉನ್ನತಿ ಪಡೆದರು;ಹೀಗೆ ಎಲ್ಲರೂ ಆ ಮುನಿಂದ್ರರ (ತಪಸ್ವಿಗಳ ರಾಜ) ಮಣವಾಳ ಮಾಮುನಿಯ ಕರುಣೆಯಿಂದ ತಮ್ಮ ಮೋಹಗಳಿಂದ ಮುಕ್ತರಾದರು.ಹೀಗೆ, ಅವರ ಶ್ರೀಪಾದತೀರ್ಥವನ್ನು (ಅವರ ಪಾದಗಳಿಂದ ದೈವಿಕ ಜಲವನ್ನು) ತೆಗೆದುಕೊಂಡವರಿಂದ ಪ್ರಾರಂಭಿಸಿ, ಅವರ ನೋಟದ ವಸ್ತುವಾಗುವ ಭಾಗ್ಯವನ್ನು ಪಡೆದವರು, ತನ್ನನ್ನು ಧ್ಯಾನಿಸುತ್ತಿದ್ದ, ತನ್ನ ಸಂಪರ್ಕದಲ್ಲಿದ್ದ, ತನ್ನ ಹತ್ತಿರ ಇದ್ದವರು, ದೂರ ಇದ್ದವರು, ಮುಂದಿನ ವರ್ಷಗಳಲ್ಲಿ ಈ ಭೂಮಿಗೆ ಬರಲಿರುವವರು ಎಂಬ ಭೇದವಿಲ್ಲದೆ, ಎಲ್ಲರನ್ನೂ ಸಂಸಾರದಿಂದ ಬಂಧನದಿಂದ ದೂರವಿಟ್ಟನು, ಸಂಸಾರ ಅಥವಾ ಪರಮಪದ ಎಂಬ ಭೇದವಿಲ್ಲದೆ ಎಲ್ಲಾ ಲೋಕಗಳನ್ನು ಚಿನ್ನದ ಬಣ್ಣದಿಂದ ಅಲಂಕರಿಸಿದನು, ಎಷ್ಟರ ಮಟ್ಟಿಗೆ ಎಂದರೆ ಅವುಗಳನ್ನು ಸರಿಪಡಿಸಲು ಜನರನ್ನು ಹುಡುಕಬೇಕಾಗಿತ್ತು.

ಸರ್ವಾವಸ್ಥಾ ಸಧೃಶವಿಭವಾ ಶೇಷಕೃತ್ವಮ್ ರಮಯಾಭರ್ತು:
ತ್ಯಕ್ತವಾ ತಧಾಪಿ ಪರಮಂ ಧಾಮತದ್ ಪ್ರೀತಿ ಹೇತೋ:
ಮಗ್ನನಗ್ನೌ ವರವರಮುನೇ ಮಾಧ್ರುಶಾನುನಿನೇಷನ್
ಮರ್ಥ್ಯಾವಾಸೆ ಭಾವಸಿ ಭಗವನ್ ಮಂಗಳಂ ರಂಗಧಾಮ್ನ:

(ಓ ಶುಭ ಗುಣಗಳಿಂದ ಪೂರ್ಣನಾದ ಮಣವಾಳ ಮಾನಿಯೇ! ಶ್ರೀ ಮಹಾಲಕ್ಷ್ಮಿಯ ಪತ್ನಿಯಾದ ಎಂಪೆರುಮಾನನಿಗೆ ದೇವರೀರ್ ಎಲ್ಲಾ ರಾಜ್ಯಗಳಲ್ಲಿಯೂ ಎಲ್ಲಾ ಅದ್ಭುತ ಸೇವೆಗಳನ್ನು ಮಾಡುತ್ತಾ ಬಂದಿದ್ದಾರೆ.) ಆ ಎಂಪೆರುಮಾನ್‌ನ ಮೇಲಿನ ಪ್ರೀತಿಯಿಂದಾಗಿ, ತಾವು ಆ ಪರಮಪದವನ್ನು (ಶ್ರೀವೈಕುಂಠವನ್ನು) ಬಿಟ್ಟು, ಸಂಸಾರವೆಂಬ ಬೆಂಕಿಯಲ್ಲಿ ಮುಳುಗಿರುವ ನನ್ನಂತಹವರನ್ನು ಉದ್ಧರಿಸಿದ್ದೀರಿ.ನೀವು ಈ ದಿವ್ಯಕ್ಷೇತ್ರವಾದ ತಿರುವರಂಗದಲ್ಲಿ ಒಂದು ಪ್ರಜ್ವಲಿಸುವ ದೀಪದಂತೆ ನೆಲೆಸಿದ್ದೀರಿ. ಇದಕ್ಕನುಗುಣವಾಗಿ, ತಾವು ಅವತರಿಸಿದ ಉದ್ದೇಶವನ್ನು ಪೂರೈಸಿದಿರಿ.

ಅನುವಾದ – ಅಡಿಯೇನ್ ಸುಭದ್ರಾ ರಾಮಾನುಜ ದಾಸಿ

ಮೂಲ : https://granthams.koyil.org/2021/10/20/yathindhra-pravana-prabhavam-94-english/

ಆರ್ಕೈವ್ ಮಾಡಲಾಗಿದೆ – https://granthams.koyil.org

ಪ್ರಮೇಯಂ (ಗುರಿ) – https://koyil.org
ಪ್ರಮಾಣ೦ (ಗ್ರಂಥಗಳು) – https://granthams.koyil.org
ಪ್ರಮಾತಾ (ಬೋಧಕರು) – https://acharyas.koyil.org
ಶ್ರೀವೈಷ್ಣವ ಎಜುಕೇಶನ್ / ಮಕ್ಕಳ ಸಾಹಿತ್ಯ – https://pillai.koyil.org

Leave a Comment