ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೭೧

ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ

ಪೂರ್ಣ ಸರಣಿ

<< ಹಿಂದಿನ ಲೇಖನವನ್ನು

ತಿರುಮಂಗೈ ಆಳ್ವಾರರಿಗೆ ಮಂಗಳಾಶಾಸನವನ್ನು ಮಾಡಿದ ನಂತರ, ಜೀಯರ್ ಅವರು ತಿರುಮಂಗೈ ಆಳ್ವಾರರಿಗೆ ತುಂಬಾ ಪ್ರಿಯರಾದ ವಯಲಾಲಿ ಮಣವಾಳನ್ (ತಿರುವಾಳಿತ್ತಿರುನಗರಿಯಲ್ಲಿ ಎಂಪೆರುಮಾನ್) ಅವರನ್ನು ಪೂಜಿಸಿದರು. ನಂತರ ಅವರು ಕರುಣೆಯಿಂದ ತಿರುಮಣನ್ಗೋಲ್ಲೈಗೆ ಹೋದರು (ಪೆರುಮಾಳ್ ತಿರುಮಂಗೈ ಆಳ್ವಾರರಿಗೆ ತಿರುಮಂತ್ರವನ್ನು (ಅಷ್ಟಾಕ್ಷರಿ) ಕಲಿಸಿದ ಸ್ಥಳ) ಮತ್ತು ಕೆಳಗಿನ ಪಾಸುರಂವನ್ನು ರಚಿಸಿದರು:

ಇದೋ ತಿರುವರಸು? ಇದೋ ಮಣನ್ಗೋಲ್ಲೈ ?
ಇದೋ ಎழிಲಾಲಿ ಎನ್ನುಂಊರ್ ? – ಇದೋಧಾನ್
ವೆಟ್ಟುನ್ಗಲಿಯನ್ ವೇಲೈ ವೆಟ್ಟಿ ನೆಡುಮಾಲ್
ಎಟ್ಟೆழுತ್ತು೦ ಪರಿತ್ತವಿಡಂ

(ಇದು ದೈವಿಕ ಅರಳಿ ಮರ ( ಅಶ್ವತ್ಥ ಮರ ) ಮರವೇ? ಇದು ತಿರುಮಣನ್ಗೋಲ್ಲೈ? ಇದು ಸುಂದರವಾದ ತಿರುವಾಳಿ ಎಂದು ಕರೆಯಲ್ಪಡುವ ಸ್ಥಳವೇ? ಜನರನ್ನು ಬೆದರಿಸುವ ತಿರುಮಂಗೈ ಆಳ್ವಾರ್ ತಮ್ಮ ಈಟ್ಟಿಯನ್ನು ತೋರಿಸಿ ತಿರುಮಾಳ್ (ಸರ್ವೇಶ್ವರ) ನಿಂದ ತಿರುಮಂತ್ರ (ಅಷ್ಟಾಕ್ಷರಿ) ಯನ್ನು ಕಸಿದುಕೊಂಡ ಸ್ಥಳವೇ ಇದು).

ನಂತರ ಅವರು ತಮ್ಮ ದಿವ್ಯ ಮನಸ್ಸಿನಲ್ಲಿ ತಿರುಕ್ಕಣ್ಣಪುರಕ್ಕೆ ಹೋಗಬೇಕೆಂದು ನಿರ್ಧರಿಸಿದರು, ಇದನ್ನು ತಿರುಮಂಗೈ ಆಳ್ವಾರರು ತಮ್ಮ ಪೆರಿಯ ತಿರುಮೊಳಿಯಲ್ಲಿ ವಿವರಿಸಿದ್ದಾರೆ “ನೀನಿಲಾ ಮುಟ್ರತ್ತು ನಿನ್ರವಳ್ ನೊಕ್ಕಿನಲ್ ಕಾಣುಮೋ ಕಣ್ಣಪುರಂ ಎನ್ರು ಕಾಟ್ಟಿನಾಳ್” (ಪರಕಾಲ ನಾಯಕಿ (ತಿರುಮಂಗೈ ಆಳ್ವಾರ್ ಸ್ತ್ರೀಯಾಂಗಣದಲ್ಲಿ)) ಮಹಡಿಯಲ್ಲಿ ಮತ್ತು ದೂರದಲ್ಲಿ ತಿರುಕ್ಕಣ್ಣಪುರಂನ ದೇವಾಲಯವನ್ನು ನೋಡಿದಳು ಮತ್ತು ಅದು ನಿಜವಾಗಿಯೂ ತಿರುಕ್ಕಣ್ಣಪುರಂ ಎಂದು ಉದ್ಗರಿಸಿದಳು, ಅದನ್ನು ತನ್ನ ಸ್ನೇಹಿತರಿಗೆ ತೋರಿಸಿದಳು). ತಕ್ಷಣವೇ ಅವರು ಬಹಳ ಉತ್ಸುಕತೆಯಿಂದ ಹೊರಟು ಕರುಣೆಯಿಂದ ತಿರುಕ್ಕಣ್ಣಪುರಂ ತಲುಪಿದನು. ಕಪ್ಪು ಪರ್ವತದಂತೆ ಕಾಣುವ ಮತ್ತು ಪ್ರತಿಯೊಂದು ಅಂಗವೂ ಸುಂದರವಾಗಿ ಕಾಣುವ ಸೌರೀರಾಜನನ್ನು [ತಿರುಕ್ಕಣ್ಣಪುರಂನಲ್ಲಿ ಉತ್ಸವ ಪೆರುಮಾಳ ಹೆಸರು] ಪೂಜಿಸಿದರು . ಅವರು ದಯಾಪರತೆಯಿಂದ ತಿರುಮಂಗೈ ಆಳ್ವಾರರ ವಿಗ್ರಹವನ್ನು ಅಲ್ಲಿ ಪ್ರತಿಷ್ಠಾಪಿಸಿದರು, ಅವರಿಗೆ ಕಣ್ಣಪುರತ್ತಾನ್ (ತಿರುಕ್ಕಣ್ಣಪುರಂನಲ್ಲಿರುವ ಪೆರುಮಾಳ್) ಸೇವಕರಾಗಿರುವುದು ಗುರುತಾಗಿದೆ. ನಂತರ ಅವರು ದಯಾಪರತೆಯಿಂದ ತಿರುನರೈಯುರ್‌ಗೆ ಹೋಗಿ ನಂಬಿ (ಎಂಪೆರುಮಾನ್ ತಿರುನರೈಯುರ್‌ ನಂಬಿ, ಎಲ್ಲಾ ಅಂಶಗಳಲ್ಲಿಯೂ ಸಂಪೂರ್ಣ) ಮತ್ತು ನಾಚ್ಚಿಯಾರ್ ಅವರನ್ನು ಪೂಜಿಸಿದರು .ಅವರು ತಿರುಕ್ಕುಡನ್ದೈ (ಇಂದಿನ ಕುಂಭಕೋಣಂ) ಅನ್ನು ತಲುಪಿದರು, ಅಲ್ಲಿ ಬೃಹತ್ ಕೆಂಪು ರತ್ನಗಳು ಸಂಗ್ರಹಿಸುತ್ತವೆ. ಅವರು ಆರಾವಮುದಾಳ್ವಾರ್ (ಅಲ್ಲಿನ ಎಂಪೆರುಮಾನ್) ಎರಾರ್ ಕೋಲತ್ತಿರುವುರುವು (ಸುಂದರವಾದ ದೈವಿಕ ರೂಪ) ವನ್ನು ಪೂಜಿಸಿದರು. ಆ ಸ್ಥಳವನ್ನು ಬಿಟ್ಟು, ಅವರು ತೆನ್ತಿರುಪ್ಪೇರ್ [ದಕ್ಷಿಣ ಭಾಗದಲ್ಲಿ ತಿರುಪ್ಪೇರ್] ತಲುಪಿದರು, ಇದನ್ನು ತಿರುಮಾಳ್ ಸೆನ್ಡ್ರು ಸೇರ್ವಿಡಂ (ಎಂಪೆರುಮಾನ್ ತಲುಪಿದ ದೈವಿಕ ಸ್ಥಳ) ಎಂದು ಹಾಡಲಾಗುತ್ತದೆ ಮತ್ತು ತಿರುಪ್ಪೇರ್ ನಗರಾನ್ ಅವರ ದಿವ್ಯ ಪಾದಗಳನ್ನು ಪೂಜಿಸಿದರು. ಅದರ ನಂತರ, ಶ್ಲೋಕದಲ್ಲಿ ಹೇಳಿರುವಂತೆ.

ದಿವ್ಯಾನಿ ತತ್ರನಗರಾಣಿ ಧಿಗಂತರಾಳೆರ್ ದೇವೇನಯಾನಿ ಹರಿಣಾ ವಿಷಯೀಕೃತಾನಿ
ಸತ್ಯಂ ತ್ವಧೀಕ್ಷಣಾ ಸಮರ್ಥ ಮಹೋತ್ಸವಾನಿ ಧನ್ಯಾನಿ ತಾನಿ ಜಗತಾಶ್ಶಮಯಮ್ತ್ವಕಾನಿ

(ಎಂಪೆರುಮಾನ್ ಯಾವ ದೈವಿಕ ನಿವಾಸಗಳನ್ನು ತಲುಪಿದ್ದಾರೋ, ನಿಮ್ಮ ನೋಟದಿಂದಾಗಿ, ಆ ದೈವಿಕ ನಿವಾಸಗಳು ಉತ್ಸವಗಳನ್ನು (ಉತ್ಸವಗಳು) ಪ್ರತ್ಯೇಕಿಸಿವೆ ಮತ್ತು ಆ ದೈವಿಕ ನಿವಾಸಗಳು ಪ್ರಪಂಚದ ಎಲ್ಲಾ ಪಾಪಗಳನ್ನು ನಿವಾರಿಸುತ್ತವೆ), ಅವನು ಕರುಣೆಯಿಂದ ಇತರ ವಿವಿಧ ದೈವಿಕ ನಿವಾಸಗಳಿಗೆ ಹೋಗಿ ಮಂಗಳಾಶಾಸನವನ್ನು ಮಾಡಿದನು. ನಂತರ ಅವನು ಕರುಣೆಯಿಂದ ಶ್ರೀರಂಗಕ್ಕೆ ಹೊರಟನು, “ಏಷಬ್ರಹ್ಮ ಪ್ರವಿಷ್ಟೋಸ್ಮಿ ಗೃಹ್ಮೇ ಸೀತಾಮಿಲಹೃತಂ” (ಬೇಸಿಗೆಯಲ್ಲಿ ಕೊಳದಲ್ಲಿ ಮುಳುಗುವಂತೆ ನಾನು ಪರಬ್ರಹ್ಮದಲ್ಲಿ (ಪರಮ ಅಸ್ತಿತ್ವ) ಮುಳುಗಿದ್ದೇನೆ) ಎಂದು ಉಲ್ಲೇಖಿಸಲಾಗಿದೆ.

ಪೆರುಮಾಳ್ ಕೋಯಿಲ್‌ಗೆ ಅಪ್ಪಾಚ್ಚಿಯಾರಣ್ಣನನ್ನು ಆದೇಶಿಸುಲಾಗುತ್ತದೆ

ನಂತರ ಅವರು ತಮ್ಮ ವಾಸಸ್ಥಳವಾದ ಶ್ರೀರಂಗವನ್ನು ತಲುಪಿ ಪೆರುಮಾಳರನ್ನು ಪೂಜಿಸಿದರು. ಶ್ಲೋಕದಲ್ಲಿ ಉಲ್ಲೇಖಿಸಿರುವಂತೆ:

ಚಿತ್ರಾಣಿ ಧೀಪ್ತರ ರತ್ನವಿಭೂಷಣಾನಿ ಛತ್ರಾಣಿ ಚಾಮರಯುಗಂ ವ್ಯಜನಾಸನಾನಿ ತನ್ನಾಮಲಾನ್ಚಗನಯ್ತಾನಿ ತತಔ ತಧೈವ ರಂಗಾಧಿಪಾಯ ಧಯಿತಾ ಸಹಿತಾಯಥಾಸ್ಮೈ

(ಅವನು ಪೆರಿಯ ಪಿರಾಟ್ಟಿಯ ಜೊತೆಗಿದ್ದ ಆ ಅழಗೀಯ ಮಣವಾಳನಿಗೆ ತಕ್ಷಣವೇ ಸಲ್ಲಿಸಿದರು : ಅದ್ಭುತವಾದ, ಕಾಂತಿಯುತವಾದ, ರತ್ನಖಚಿತವಾದ ದೈವಿಕ ಆಭರಣಗಳು ಅழಗೀಯ ಮಣವಾಳನ್ ಎಂಬ ದಿವ್ಯ ನಾಮದೊಂದಿಗೆ ದೈವಿಕ ಚಕ್ರ ಮತ್ತು ದೈವಿಕ ಶಂಖದ ಚಿಹ್ನೆಗಳು; ದೈವಿಕ ಬಿಳಿ, ರಾಜ ಛತ್ರಿಗಳು; ಅಲಂಕಾರಿಕ ಸಿಂಹಾಸನಗಳು), ಅವರು ಪೆರುಮಾಳಿಗೆ ದಯೆಯಿಂದ ತನ್ನೊಂದಿಗೆ ಕೊಂಡೊಯ್ದ ವಸ್ತುಗಳನ್ನು – ದೈವಿಕ ಆಭರಣಗಳು, ದೈವಿಕ ಬಿಳಿ ರಾಜ ಛತ್ರಿಗಳು, ದೈವಿಕ ನೊಣ ಪೊರಕೆ (ಬಿಳಿ ನಾರಿನ ವಸ್ತುವಿನಿಂದ ಮಾಡಿದ ಕೈಯಿಂದ ಮಾಡಿದ ಗಾಳಿ ಯಂತ್ರ), ದೈವಿಕ ಬಟ್ಟೆಯ ಗಾಳಿ ಯಂತ್ರ , ಮಾಣಿಕ್ಯದಿಂದ ಮಾಡಿದ ಜಮಖಾನೆ , ದೈವಿಕ ಮೆತ್ತೆಗಳು ಇತ್ಯಾದಿಗಳನ್ನು ಅರ್ಪಿಸಿದರು . ಅವರು ಪೆರುಮಾಳರಿಗೆ ಮಂಗಳಾಶಾಸನ ಮಾಡಿ ಕರುಣೆಯಿಂದ ನಿಂತರು. ಪೆರುಮಾಳರು ಅವರಿಗೆ ಪವಿತ್ರ ನೀರು, ಶ್ರೀ ಶಟಕೋಪನ್ ಇತ್ಯಾದಿಗಳನ್ನು ಅರ್ಪಿಸಿ, ಉತ್ತಮ ನಂಬಿಗೆ (ಮುಖ್ಯ ಅರ್ಚಕ) ಮಣವಾಳ ಮಾಮುನಿಗಳ ಜೊತೆ ದೇವಾಲಯದ ನೌಕರರೊಂದಿಗೆ ಹೋಗಿ ಅವರನ್ನು ತಮ್ಮ ಮಠದಲ್ಲಿ ಬಿಡಲು ಹೇಳಿದರು. ಅವರು ನಂಬಿಯನ್ನು ಅಷ್ಟಾದಶವಾಧ್ಯಗಳೊಂದಿಗೆ (ಹದಿನೆಂಟು ವಿಭಿನ್ನ ರೀತಿಯ ಸಂಗೀತ ವಾದ್ಯಗಳು) ಮತ್ತು ಮಹಾೋತ್ಸವ ಮೆರವಣಿಗೆಯಾಗಿ ಹೋಗಲು ಕೇಳಿಕೊಂಡರು. ಜೀಯರ್ ತಮ್ಮ ಮಠವನ್ನು ತಲುಪಿದ ನಂತರ, ಅಪಿಳ್ಳೈ ತಿರುವಾಳಿ ಆಳ್ವಾರ್ ಪಿಳ್ಳೈ ಮತ್ತು ಅಲ್ಲಿನ ಇತರ ಗಣ್ಯ ವ್ಯಕ್ತಿಗಳ ಮೇಲೆ ಹಾಗೂ ಶ್ರೀವೈಷ್ಣವ ಕೈಂಕರ್ಯಪರರ ಮೇಲೆ (ಮಠಕ್ಕೆ ಸೇವೆ ಸಲ್ಲಿಸುವಲ್ಲಿ ತೊಡಗಿರುವವರು) ಕೃಪೆ ತೋರಿದರು. ಅವರು ವಿವಿಧ ದೈವಿಕ ನಿವಾಸಗಳಿಂದ ತಂದಿದ್ದ ತೀರ್ಥ ಪ್ರಸಾದವನ್ನು ಅವರಿಗೆ ದಯೆಯಿಂದ ಅರ್ಪಿಸಿದರು.

ನಂತರ ಅವರು ಅಪ್ಪಾಚ್ಚಿಯರಣ್ಣಾ ಅವರನ್ನು ಕರೆದು, ಅವರು ಮೊದಲೇ ಹೇಳಿದಂತೆ, ಪೆರುಮಾಳ್ ಕೊಯಿಲ್ (ಕಾಂಚಿಪುರಂ) ನಲ್ಲಿ ಕೆಲಸವನ್ನು ಕೈಗೆತ್ತಿಕೊಳ್ಳಲು ಹೇಳಿದರು. ಅಪ್ಪಾಚ್ಚಿಯರಣ್ಣಾ ಅವರು ಗಾಬರಿಗೊಂಡು, ಜೀಯರ್ ಅವರನ್ನು “ಈ ಸೇವೆ ಮತ್ತು ಈ ಸಭೆಯನ್ನು ಬಿಡಲು ಸಾಧ್ಯವೇ?” ಎಂದು ಕೇಳಿದರು. ಜೀಯರ್ ಅವರ ಕೈ ಹಿಡಿದು, ಅವರ ಸನ್ನಿಧಿಯೊಳಗೆ ಹೋಗಿ, ಅವರಿಗೆ ಒಂದು ತಾಮ್ರದ ಬಿಂದಿಗೆಯನ್ನು ನೀಡಿದರು, ಅದನ್ನು ಅವರು ರಾಮಾನುಸನ್ ಎಂದು ಹೆಸರಿಸಿದ್ದರು, ಅದು ಸವೆದುಹೋಗಿತ್ತು ಮತ್ತು ಜೀಯರ್ ಮೊದಲು ಬಳಸುತ್ತಿದ್ದ ಕಾರಣ ವಾನಮಾಮಲೈ ಜೀಯರ್ ತಮ್ಮ ಬುಟ್ಟಿಯಲ್ಲಿ ಇಡುತ್ತಿದ್ದರು.ರಾಮಾನುಸನ್ ಎಂಬ ಹೆಸರು ಹಾಗೂ ಪಾತ್ರೆಯ ಮೇಲೆ ಕೆತ್ತಲಾಗಿದ್ದ ಚಕ್ರ ಮತ್ತು ಶಂಖದ ದೈವಿಕ ಚಿಹ್ನೆಗಳು ಸ್ವಲ್ಪ ಸಮಯದ ನಂತರ ಸವೆದುಹೋಗಿದ್ದವು. ಅವರು ಅಪ್ಪಾಚ್ಚಿಯರಣ್ಣಾನಿಗೆ “ನಮ್ಮನ್ನು ಹೋಲುವ ಎರಡು ವಿಗ್ರಹಗಳನ್ನು ಮಾಡಲು ಇದನ್ನು ಬಳಸಿ. ಒಂದನ್ನು ನಿಮ್ಮ ಆಚಾರ್ಯರಿಗೆ ಒಪ್ಪಿಸಿ ಮತ್ತು ಒಂದನ್ನು ನಿಮ್ಮ ಬಳಿ ಇಟ್ಟುಕೊಳ್ಳಿ” ಎಂದು ಹೇಳಿದರು. ಅವರು ತಮ್ಮ ಕೋಯಿಲಾಳ್ವಾರ್ (ತಿರುವಾರದಾನಪ್ಪೆರುಮಾಳ್ ವಿಗ್ರಹಗಳನ್ನು ಇರಿಸಲಾಗಿರುವ ಸ್ಥಳ) ದಿಂದ ಎನ್ನೈ ತಿಮನಂ ಕೆಡುತ್ತಾರ ವಿಗ್ರಹವನ್ನು ಸಹ ಅಣ್ಣಾಗೆ ಹಸ್ತಾಂತರಿಸಿದರು ಮತ್ತು ಅವರಿಗೆ ಹೇಳಿದರು “ಈ ವಿಗ್ರಹವು ಮೊದಲು ಅತ್ಕೋಂಡವಿಲ್ಲಿ ಜೀಯರ್’ಗಾಗಿ ತಿರುವಾರಾಧನೆ ಪೆರುಮಾಳ್ ಆಗಿತ್ತು.ಕಂದಾಡೈಯಾಂಡಾನ ದಿವ್ಯ ಕುಲಕ್ಕೆ ಸೇರಿದವನಾಗಿ, ಈ ಪೆರುಮಾಳರಿಗೆ ತಿರುವಾರಾಧನೆ ಮಾಡಲು ನೀವು ಸಂಪೂರ್ಣವಾಗಿ ಅರ್ಹರು”. ನಂತರ ಅವರು [ತಿರುಮಲೈಆಳ್ವಾರರಲ್ಲಿ ಶ್ರೀವೈಷ್ಣವರ] ಸಭೆಗೆ ಹೋಗಿ ಶ್ಲೋಕವನ್ನು ಪಠಿಸಿದರು.

ಶ್ರೀತೀರ್ಥ ದೇವರಾಜಾರ್ಯ ತನಯಾಂಭೇದಿ ವಿಶ್ರುತಾ
ತಸ್ಯಾತ್ಸನುಜೊೋ ವರಧ: ಕಂಚೀನಾಗರ ಭೂಷಣ:

(ಆಚ್ಚಿಯ ಮಗನಾದ ವರ್ಧಾಚಾರ್ಯರು (ಅಪ್ಪಾಚ್ಚಿಯಾರಣ್ಣಾ ), ಅವರು ತಿರುಮಂಜನಂ ಅಪ್ಪನ ಮಗಳು ಅಂಬಾ , ದೇವರಾಜಾರ್ಯರು ಎಂದೂ ಕರೆಯುತ್ತಾರೆ, ಕಾಂಚೀಪುರಂಗೆ ಆಭರಣವಾಗಿದ್ದಾರೆ). ಬಹಳ ಪ್ರೀತಿಯಿಂದ, ಪೇರರುಳಾಳರ್ (ದೇವರಾಜಪ್ಪೆರುಮಾಳ್) ಆಚ್ಚಿಯ ಮಗನಾಗಿ ಅವತರಿಸಿದ್ದಾರೆ ಎಂದು ಕರುಣೆಯಿಂದ ಹೇಳಿದರು. ನಂತರ ಅವರು ಅಣ್ಣನಿಗೆ “ಕೊಯಿಲಿನಲ್ಲಿ ಶಾಶ್ವತವಾಗಿ ವಾಸಿಸಿ ಕೈಂಕರ್ಯವನ್ನು ಕೈಗೊಳ್ಳಿ” ಎಂದು ಹೇಳಿದರು.

ಮೂಲ : https://granthams.koyil.org/2021/09/27/yathindhra-pravana-prabhavam-71-english/

ಅನುವಾದ – ಅಡಿಯೇನ್ ಸುಭದ್ರಾ ರಾಮಾನುಜ ದಾಸಿ

ಆರ್ಕೈವ್ ಮಾಡಲಾಗಿದೆ – https://granthams.koyil.org

ಪ್ರಮೇಯಂ (ಗುರಿ) – https://koyil.org
ಪ್ರಮಾಣ೦ (ಗ್ರಂಥಗಳು) – https://granthams.koyil.org
ಪ್ರಮಾತಾ (ಬೋಧಕರು) – https://acharyas.koyil.org
ಶ್ರೀವೈಷ್ಣವ ಎಜುಕೇಶನ್ / ಮಕ್ಕಳ ಸಾಹಿತ್ಯ – https://pillai.koyil.org

Leave a Comment